ಲಾಸ್ ಏಂಜಲೀಸ್(ಯುಎಸ್‌ಎ): ಭಾರತದ ಖ್ಯಾತ ಸಿನಿಮಾ ನಿರ್ದೇಶಕ ಎಸ್.ಎಸ್.ರಾಜಮೌಳಿ ನಿರ್ದೇಶನದ ಆರ್‌ಆರ್‌ಆರ್ ಚಿತ್ರದ ನಾಟು ನಾಟು ಹಾಡು ಪ್ರತಿಷ್ಠಿತ ಗೋಲ್ಡನ್ ಗ್ಲೋಬ್ 2023ರ ಅತ್ಯುತ್ತಮ ಮೂಲ (ಸ್ವತಂತ್ರ ರಚನೆ) ಹಾಡು ಪ್ರಶಸ್ತಿ ಪಡೆದುಕೊಂಡಿದೆ. ಆರ್‌ಆರ್‌ಆರ್ 2022ರ ದಕ್ಷಿಣ ಚಿತ್ರರಂಗದ ಸೂಪರ್ ಹಿಟ್ ಸಿನಿಮಾ ಆಗಿತ್ತು. ಭಾರತ ಮಾತ್ರವಲ್ಲ, ವಿದೇಶದ ಥಿಯೇಟರ್ಗಳಲ್ಲಿಯೂ ಧೂಳೆಬ್ಬಿಸಿತ್ತು.
-
The winner for Best Song - Motion Picture is @mmkeeravaani for their song "Naatu Naatu" featured in @RRRMovie! Congratulations! 🎥✨🎵 #GoldenGlobes pic.twitter.com/ENCUQEtns3
— Golden Globe Awards (@goldenglobes) January 11, 2023 " class="align-text-top noRightClick twitterSection" data="
">The winner for Best Song - Motion Picture is @mmkeeravaani for their song "Naatu Naatu" featured in @RRRMovie! Congratulations! 🎥✨🎵 #GoldenGlobes pic.twitter.com/ENCUQEtns3
— Golden Globe Awards (@goldenglobes) January 11, 2023The winner for Best Song - Motion Picture is @mmkeeravaani for their song "Naatu Naatu" featured in @RRRMovie! Congratulations! 🎥✨🎵 #GoldenGlobes pic.twitter.com/ENCUQEtns3
— Golden Globe Awards (@goldenglobes) January 11, 2023
ದಕ್ಷಿಣ ಭಾರತದ ಸಿನಿಮೋದ್ಯಮದ ಜನಪ್ರಿಯ ತಾರೆಯರಾದ ರಾಮ್ ಚರಣ್ ಮತ್ತು ಜೂನಿಯರ್ ಎನ್ಟಿಆರ್ ಅತ್ಯದ್ಭುತ ಅಭಿನಯಕ್ಕೆ ಫ್ಯಾನ್ಸ್ ಫುಲ್ ಮಾರ್ಕ್ಸ್ ನೀಡಿದ್ದರು. 1,200 ಕೊಟಿ ರೂ.ಗೂ ಅಧಿಕ ಗಳಿಗೆ ಮಾಡಿರುವ ಈ ಸಿನಿಮಾ ಈಗಾಗಲೇ ಹಲವು ಪ್ರಶಸ್ತಿಗಳನ್ನು ಬಾಚಿಕೊಂಡಿದೆ. ಇದೀಗ ಗೋಲ್ಡನ್ ಗ್ಲೋಬ್ ಪ್ರಶಸ್ತಿ ಮುಡಿಗೇರಿಸಿಕೊಂಡಿದ್ದು, ಭಾರತೀಯ ಚಿತ್ರರಂಗದ ಹಿರಿಮೆ ಹೆಚ್ಚಿಸಿದೆ.
-
And the GOLDEN GLOBE AWARD FOR BEST ORIGINAL SONG Goes to #NaatuNaatu #GoldenGlobes #GoldenGlobes2023 #RRRMovie
— RRR Movie (@RRRMovie) January 11, 2023 " class="align-text-top noRightClick twitterSection" data="
pic.twitter.com/CGnzbRfEPk
">And the GOLDEN GLOBE AWARD FOR BEST ORIGINAL SONG Goes to #NaatuNaatu #GoldenGlobes #GoldenGlobes2023 #RRRMovie
— RRR Movie (@RRRMovie) January 11, 2023
pic.twitter.com/CGnzbRfEPkAnd the GOLDEN GLOBE AWARD FOR BEST ORIGINAL SONG Goes to #NaatuNaatu #GoldenGlobes #GoldenGlobes2023 #RRRMovie
— RRR Movie (@RRRMovie) January 11, 2023
pic.twitter.com/CGnzbRfEPk
ಅಂತಾರಾಷ್ಟ್ರೀಯ ಗಾಲಾಗೆ ಸ್ಟೈಲಿಶ್ ಎಂಟ್ರಿ: ಅಮೆರಿಕದ ಲಾಸ್ ಏಂಜಲೀಸ್‌ನಲ್ಲಿ ಬುಧವಾರ ವರ್ಣರಂಜಿತ ಗೋಲ್ಡನ್ ಗ್ಲೋಬ್ಸ್ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಿತು. ಈ ಕಾರ್ಯಕ್ರಮಕ್ಕೆ ರಾಜಮೌಳಿ, ರಾಮ್ಚರಣ್ ಮತ್ತು ಜೂನಿಯರ್ ಎನ್ಟಿಆರ್ ಸೇರಿದಂತೆ ಅವರ ಕುಟುಂಬಸ್ಥರು, ಚಿತ್ರತಂಡದ ಕೆಲವರು ಭಾಗಿಯಾಗಿದ್ದರು. ಚಿತ್ರದ ಮೂವರು ಪ್ರಮುಖರು ಅಂತಾರಾಷ್ಟ್ರೀಯ ಗಾಲಾಗೆ ಸ್ಟೈಲಿಶ್ ಎಂಟ್ರಿ ಕೊಟ್ಟಿದ್ದಾರೆ. ಚಿತ್ರದ ಪ್ರಮುಖರ ಫೋಟೋಗಳೀಗ ಸೋಶಿಯಲ್ ಮೀಡಿಯಾದಲ್ಲಿ ಸಖತ್ ಸದ್ದು ಮಾಡುತ್ತಿವೆ. ಅಭಿಮಾನಿಗಳು ಅಭಿನಂದನೆ ಸಲ್ಲಿಸುತ್ತಿದ್ದಾರೆ.
ಕುಟುಂಬಸ್ಥರೊಂದಿಗೆ ಆರ್‌ಆರ್‌ಆರ್ ತಂಡ: ನಿನ್ನೆ ರಾತ್ರಿ ಪ್ರಶಸ್ತಿ ಪ್ರದಾನ ಸಮಾರಂಭಕ್ಕೂ ಮುನ್ನ ಆರ್‌ಆರ್‌ಆರ್ ಅಧಿಕೃತ ಟ್ವಿಟರ್ ಖಾತೆಯು ಕೆಲವು ಸುಂದರ ಚಿತ್ರಗಳನ್ನು ಹಂಚಿಕೊಂಡಿದೆ. ರಾಜಮೌಳಿ ಅವರು ಸಾಂಪ್ರದಾಯಿಕ ಭಾರತೀಯ ಉಡುಗೆ ಧರಿಸಿದ್ದರು. ರಾಮ್ಚರಣ್ ಬಂಧ್ಗಾಲಾ ಸೂಟ್ ಧರಿಸಿದ್ದರೆ, ಜೂನಿಯರ್ ಎನ್ಟಿಆರ್ ಬ್ಲ್ಯಾಕ್ ಸೂಟ್‌ನಲ್ಲಿ ಮಿಂಚಿದ್ದಾರೆ. ಉಳಿದಂತೆ ಚಿತ್ರದಲ್ಲಿ ಉಪಾಸನಾ ಕಾಮಿನೇನಿ, ರಾಜಮೌಳಿ ಅವರ ಪತ್ನಿ ರಮಾ ರಾಜಮೌಳಿ ಮತ್ತು ಜೂನಿಯರ್ ಎನ್ಟಿಆರ್ ಅವರ ಪತ್ನಿ ಲಕ್ಷ್ಮೀ ಪ್ರಣತಿ ಅವರನ್ನೂ ಸಹ ಕಾಣಬಹುದು.
-
A very special accomplishment! Compliments to @mmkeeravaani, Prem Rakshith, Kaala Bhairava, Chandrabose, @Rahulsipligunj. I also congratulate @ssrajamouli, @tarak9999, @AlwaysRamCharan and the entire team of @RRRMovie. This prestigious honour has made every Indian very proud. https://t.co/zYRLCCeGdE
— Narendra Modi (@narendramodi) January 11, 2023 " class="align-text-top noRightClick twitterSection" data="
">A very special accomplishment! Compliments to @mmkeeravaani, Prem Rakshith, Kaala Bhairava, Chandrabose, @Rahulsipligunj. I also congratulate @ssrajamouli, @tarak9999, @AlwaysRamCharan and the entire team of @RRRMovie. This prestigious honour has made every Indian very proud. https://t.co/zYRLCCeGdE
— Narendra Modi (@narendramodi) January 11, 2023A very special accomplishment! Compliments to @mmkeeravaani, Prem Rakshith, Kaala Bhairava, Chandrabose, @Rahulsipligunj. I also congratulate @ssrajamouli, @tarak9999, @AlwaysRamCharan and the entire team of @RRRMovie. This prestigious honour has made every Indian very proud. https://t.co/zYRLCCeGdE
— Narendra Modi (@narendramodi) January 11, 2023
ಅಮೆರಿಕದ ಥಿಯೇಟರ್‌ಗಳಲ್ಲಿ ಆರ್‌ಆರ್‌ಆರ್ ಪ್ರದರ್ಶನ: ಆರ್‌ಆರ್‌ಆರ್ ಈ ವರ್ಷದ ಗೋಲ್ಡನ್ ಗ್ಲೋಬ್‌ನಲ್ಲಿ ವಿದೇಶಿ ಭಾಷೆಯ ಅತ್ಯುತ್ತಮ ಚಲನಚಿತ್ರ ಮತ್ತು ನಾಟು ನಾಟು ಹಾಡಿಗೆ ಅತ್ಯುತ್ತಮ ಮೂಲ ಗೀತೆಗಾಗಿ ನಾಮನಿರ್ದೇಶನಗೊಂಡಿತ್ತು. ಈ ಹಿನ್ನೆಲೆಯಲ್ಲಿ ದೊಡ್ಡ ಈವೆಂಟ್‌ಗೆ ಮುಂಚಿತವಾಗಿ ಅಂತಾರಾಷ್ಟ್ರೀಯ ಮೆಚ್ಚುಗೆ ಗಳಿಸಿರುವ ಚಲನಚಿತ್ರವನ್ನು LA ಥಿಯೇಟರ್‌ನಲ್ಲಿ ಪ್ರದರ್ಶಿಸಲಾಗಿತ್ತು.
ಪ್ರಧಾನಿ ನರೇಂದ್ರ ಮೋದಿ ಟ್ವೀಟ್: ಅಂತಾರಾಷ್ಟ್ರೀಯ ಮಟ್ಟದ ಗೌರವಕ್ಕೆ ಪಾತ್ರರಾಗಿರುವ ಆರ್‌ಆರ್‌ಆರ್ ಚಿತ್ರತಂಡಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರು ಟ್ವೀಟ್ ಮೂಲಕ ಅಭಿನಂದನೆ ಸಲ್ಲಿಸಿದ್ದಾರೆ.
ಇದನ್ನೂ ಓದಿ: ಗೋಲ್ಡನ್ ಗ್ಲೋಬ್ ಪ್ರಶಸ್ತಿಗೆ ಆರ್‌ಆರ್‌ಆರ್ ನಾಮ ನಿರ್ದೇಶನ.. ಧನ್ಯವಾದ ಅರ್ಪಿಸಿದ ರಾಜಮೌಳಿ
ಜಾಗತಿಕ ಮಟ್ಟದ ಖ್ಯಾತಿ ಗಳಿಸಿರುವ ಆರ್‌ಆರ್‌ಆರ್ ಅಮೆರಿಕದ ಥಿಯೇಟರ್‌ಗಳಲ್ಲಿ ಇತ್ತೀಚೆಗೆ ಪ್ರದರ್ಶನಗೊಂಡಿದೆ. ಸಿನಿಮಾವನ್ನು ಜನವರಿ 9ರಂದು ಪ್ರದರ್ಶಿಸಲಾಗಿದ್ದು, ಟಿಕೆಟ್ ಬುಕ್ಕಿಂಗ್ ಓಪನ್ ಆದ ಕೂಡಲೇ ಅಂದರೆ ಕೇವಲ 98 ಸೆಕೆಂಡ್ಸ್ನಲ್ಲಿ ಎಲ್ಲಾ ಟಿಕೆಟ್ಗಳು ಸೋಲ್ಡ್ ಔಟ್ ಆಗಿದ್ದವು. ಭಾರತದ ಸಿನಿಮಾವೊಂದು ವಿದೇಶದಲ್ಲಿ ಆ ಮಟ್ಟಿಗೆ ಸದ್ದು ಮಾಡಿ ವಿಶೇಷ ಗಮನ ಸೆಳೆಯಿತು.
ಇದನ್ನೂ ಓದಿ: ಅಮೆರಿಕದಲ್ಲಿ ಕೇವಲ 98 ಸೆಕೆಂಡ್ಗಳಲ್ಲಿ ಮಾರಾಟವಾಯ್ತು ಆರ್‌ಆರ್‌ಆರ್ ಸಿನಿಮಾ ಟಿಕೆಟ್ಗಳು!