ತಮ್ಮ ನಟನೆಯಿಂದ ಅಷ್ಟೇ ಅಲ್ಲದೇ ಗ್ಲಾಮರ್ನಿಂದಲೂ ಯುವಜನತೆಯನ್ನು ಆಕರ್ಷಿಸುವ ಬೆಡಗಿ ಮೃಣಾಲ್ ಠಾಕೂರ್. ‘ಸೀತಾರಾಮಂ’ ಚಿತ್ರದ ಮೂಲಕ ಟಾಲಿವುಡ್ಗೆ ಕಾಲಿಟ್ಟ ಚೆಲುವೆ, ಬಾಲಿವುಡ್ನಲ್ಲೂ ಮಿಂಚು ಹರಿಸುತ್ತಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ವಿಪರೀತ ಆಕ್ಟೀವ್ ಆಗಿರುವ ಬೆಡಗಿಗೆ ಇನ್ಸ್ಟಾದಲ್ಲಿ 9.5 ಮಿಲಿಯನ್ ಫಾಲೋವರ್ಸ್ ಇದ್ದಾರೆ. ಹೊಸ ಪೋಸ್ಟ್ಗಳನ್ನು ಹಂಚಿಕೊಳ್ಳುತ್ತಾ ಅಭಿಮಾನಿಗಳಿಗೆ ಸನಿಹವಾಗಿದ್ದಾರೆ. ಇವರು ಇತ್ತೀಚೆಗೆ ಶೇರ್ ಮಾಡಿರುವ ಫೋಟೋದಲ್ಲಿ ವಧುವಿನಂತೆ ಕಂಗೊಳಿಸಿದ್ದಾರೆ.
ಮೃಣಾಲ್ ಠಾಕೂರ್ ಕೆಂಪು ಬಣ್ಣದ ಲೆಹಂಗಾದಲ್ಲಿ ವಧುವಿನಂತೆ ಕಂಗೊಳಿಸಿದ್ದಾರೆ. ಈ ಫೋಟೋಗಳನ್ನು ಅವರು ಇನ್ಸ್ಟಾದಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಡ್ರೆಸ್ಗೆ ತಕ್ಕಂತೆ ಆಭರಣ ಧರಿಸಿ, ಮೆಹಂದಿ ಕೈಗಳಿಂದ ಮೋಹಕವಾಗಿ ಕಾಣುತ್ತಿದ್ದಾರೆ. ಅವರು ಫೋಟೋ ಹಂಚಿಕೊಂಡು, "ಬಿಗ್ ಡೇ" ಎಂದು ಶೀರ್ಷಿಕೆ ನೀಡಿದ್ದಾರೆ. ಇದು ಅಭಿಮಾನಿಗಳನ್ನು ಒಂದು ಕ್ಷಣ ಗೊಂದಲಕ್ಕೆ ದೂಡುವಂತೆ ಮಾಡಿತ್ತು. ನಟಿ ಮದುವೆಯಾಗುತ್ತಿದ್ದಾರೆ ಎಂದೇ ಅಂದುಕೊಂಡಿದ್ದರು. ಆದರೆ ಕ್ಯಾಪ್ಶನ್ ಮತ್ತಷ್ಟು ಓದಿದಾಗ ವಿಚಾರ ತಾವು ನಿರೀಕ್ಷಿಸಿದಂತೆ ಅಲ್ಲ ಎಂಬುದು ಗೊತ್ತಾಗಿದೆ.
ಮೃಣಾಲ್ ಅವರ ಈ ಫೋಟೋವು 'ಮೇಡ್ ಇನ್ ಹೆವನ್ ಸೀಸನ್ 2' ನಿಂದ ಹಂಚಿಕೊಳ್ಳಲಾಗಿದೆ. ಕೆಲವು ದಿನಗಳ ಹಿಂದೆ ಎರಡನೇ ಸೀಸನ್ನ ಪೋಸ್ಟರ್ ಬಿಡುಗಡೆಯಾಗಿತ್ತು. ಇದರಲ್ಲಿ ಶೋಭಿತಾ ಧೂಳಿಪಾಲ, ಜಿಮ್ ಸರ್ಭ್, ಅರ್ಜುನ್ ಮಾಥುರ್, ಕಲ್ಕಿ ಕೋಚ್ಲಿನ್, ಶಶಾಂಕ್ ಅರೋರಾ, ವಿಜಯ್ ರಾಜ್ ಮತ್ತು ಶಿವಾನಿ ರಘುವಂಶಿ ನಟಿಸಿದ್ದಾರೆ. ‘ಸೀತಾರಾಮಂ’ ನಟಿ ಹಂಚಿಕೊಂಡ ಫೋಟೋಗೆ, "ಬಿಗ್ ಡೇಯಿಂದ ನೋಡದ ಫೋಟೋಗಳು. 'ಮೇಡ್ ಇನ್ ಹೆವನ್ ಸೀಸನ್ 2' ಅಗಸ್ಟ್ 10 ರಂದು ಪ್ರೈಮ್ನಲ್ಲಿ ಮಾತ್ರ" ಎಂದು ಬರೆದಿದ್ದಾರೆ.
ಇದನ್ನೂ ಓದಿ: 'ಸೈಫ್ ಅಲಿ ಖಾನ್ ಅವರಲ್ಲಿ ರಾಜಮನೆತನದ ವರ್ಚಸ್ಸಿದೆ': ಆರ್ಆರ್ಆರ್ ಸ್ಟಾರ್ ರಾಮ್ ಚರಣ್ ಗುಣಗಾನ
ಮೃಣಾಲ್ ಅನ್ನು ಹೊರತುಪಡಿಸಿ, 'ಮೇಡ್ ಇನ್ ಹೆವನ್ ಸೀಸನ್ 2'ನಲ್ಲಿ ಇಶ್ವಾಕ್ ಸಿಂಗ್, ಮೋನಾ ಸಿಂಗ್ ಮತ್ತು ತ್ರಿನೇತ್ರ ಹಲ್ದಾರ್ ಅವರಂತಹ ಹೊಸ ಮುಖಗಳನ್ನು ಪರಿಚಯಿಸಿದ್ದಾರೆ. ಶೋ ತಯಾರಕರಾದ ಜೋಯಾ ಅಖ್ತರ್ ಮತ್ತು ರೀಮಾ ಕಾಗ್ತಿ ಹಂಚಿಕೊಂಡಂತೆ, ಮೇಡ್ ಇನ್ ಹೆವೆನ್ ಪ್ರಸ್ತುತ ಭಾರತದ ಜೀವನ ಶೈಲಿಯನ್ನು ಪ್ರತಿಬಿಂಬಿಸುತ್ತಿದೆ. ಇಬ್ಬರು ವಿವಾಹಿತರ ಮೂಲಕ ಕಥೆಯನ್ನು ನಿರೂಪಿಸಲಾಗಿದೆ. 'ಮೇಡ್ ಇನ್ ಹೆವನ್ ಸೀಸನ್ 2' ಆಗಸ್ಟ್ 10 ರಿಂದ ಪ್ರೈಮ್ ವಿಡಿಯೋದಲ್ಲಿ ಸ್ಟ್ರೀಮ್ ಆಗಲಿದೆ.
ಇನ್ನು ಮೃಣಾಲ್ ಠಾಕೂರ್ ಸಿನಿಮಾ ವಿಚಾರವಾಗಿ ನೋಡುವುದಾದರೆ, ಸದ್ಯ ಇವರ ಕೈಯಲ್ಲಿ ಸಾಲು ಸಾಲು ಸಿನಿಮಾಗಳಿವೆ. ತೆಲುಗಿನಲ್ಲಿ ನ್ಯಾಚುರಲ್ ಸ್ಟಾರ್ ನಾನಿ ಎದುರು 'ಹಾಯ್ ನಾನ್ನ' ಚಿತ್ರದಲ್ಲಿ ನಟಿಸಲಿದ್ದಾರೆ. ಇದಲ್ಲದೇ ನಿರ್ದೇಶಕ ಪರಶುರಾಮ್ ಹಾಗೂ ವಿಜಯ್ ದೇವರಕೊಂಡ ಸಿನಿಮಾದಲ್ಲಿ ಮೃಣಾಲ್ ನಾಯಕಿಯಾಗಿ ಕಾಣಿಸಿಕೊಳ್ಳಲಿದ್ದಾರೆ. ಸದ್ಯ ಈ ಚಿತ್ರಕ್ಕೆ VD13 ಎಂದು ಟೈಟಲ್ ಇಡಲಾಗಿದೆ.
ಇದನ್ನೂ ಓದಿ: LGM movie: ಧೋನಿ ಅಭಿಮಾನಿಗಳಿಗೆ ನಿರಾಸೆ; ಪ್ರೇಕ್ಷಕರನ್ನು ಮೆಚ್ಚಿಸುವಲ್ಲಿ ಸೋತ 'ಎಲ್ಜಿಎಂ'