ETV Bharat / entertainment

ಬಾಲಿವುಡ್​ ಕಿಲಾಡಿಯೊಂದಿಗೆ ಕೆಜಿಎಫ್​ ನಟಿ ಸ್ಟಂಟ್​....! - ಅಕ್ಷಯ್​ ಕುಮಾರ್ ಸ್ಟಂಟ್​ ವಿಡಿಯೋ​

ಎಂಟರ್‌ಟೈನರ್ ಟೂರ್‌ನಲ್ಲಿ ನಟಿ ಮೌನಿ ರಾಯ್​ ಮತ್ತು ನಟ ಅಕ್ಷಯ್​ ಕುಮಾರ್​ ಸ್ಟಂಟ್​ ಮಾಡಿ ಪ್ರೇಕ್ಷರನ್ನು ರಂಜಿಸಿದ್ದಾರೆ.

Mouni Roy and Akshay Kumar stunt video
ಅಕ್ಷಯ್​ ಕುಮಾರ್​ - ಕೆಜಿಎಫ್​ ನಟಿ ಮೌನಿ ರಾಯ್ ಸ್ಟಂಟ್​ ವಿಡಿಯೋ
author img

By

Published : Mar 12, 2023, 6:12 PM IST

ಯುಎಸ್‌ನಲ್ಲಿ ನಡೆದ ಎಂಟರ್‌ಟೈನರ್ ಟೂರ್‌ನಲ್ಲಿ (Entertainer's Tour) ಬಾಲಿವುಡ್ ನಟ ಅಕ್ಷಯ್ ಕುಮಾರ್ ಅವರೊಂದಿಗೆ ಮಾಡಿದ ಸ್ಟಂಟ್ ಪ್ರದರ್ಶನದ ಕಿರು ವಿಡಿಯೋವನ್ನು ನಟಿ ಮೌನಿ ರಾಯ್​ ಹಂಚಿಕೊಂಡಿದ್ದಾರೆ. ''ಸ್ಟೇಜ್, ಹುಚ್ಚು, ಸಂಗೀತ, ದೀಪಗಳು, ಎಲ್ಲವೂ ಮ್ಯಾಜಿಕ್, ನಾನು ಎಲ್ಲವನ್ನೂ ಪ್ರೀತಿಸುತ್ತೇನೆ, ಪ್ರೀತಿಗಾಗಿ ಒರ್ಲ್ಯಾಂಡೊಗೆ ಧನ್ಯವಾದಗಳು. ನನ್ನ ಮೇಲೆ ಇಟ್ಟಿರುವ ಪ್ರೀತಿ, ನಂಬಿಕೆ ಮತ್ತು ಕಠಿಣ ಪರಿಶ್ರಮಕ್ಕಾಗಿ ನನ್ನ ತಂಡಕ್ಕೆ ಯಾವಾಗಲೂ ಕೃತಜ್ಞರಾಗಿರುತ್ತೇನೆ. ಸದ್ಯ ಸ್ನೇಹಿತರಾಗುತ್ತಿರುವ ನನ್ನ ಸಹ ಕಲಾವಿದರಿಗೆ ಧನ್ಯವಾದಗಳು. ನಾನು ಈ ಸಮಯವನ್ನು ಎಂದಿಗೂ ಪ್ರೀತಿಸುತ್ತೇನೆ, ಪ್ರೀತಿ ಮಾತ್ರ" ಎಂದು ಮೌನಿ ರಾಯ್​ ಬರೆದುಕೊಂಡಿದ್ದಾರೆ.

ವಿಡಿಯೋ ಕ್ಲಿಪ್‌ನಲ್ಲಿ, ಅಕ್ಷಯ್​ ಕುಮಾರ್​ ತಲೆಕೆಳಗಾಗಿ ನೇತಾಡುತ್ತಿರುವುದನ್ನು ಕಾಣಬಹುದು. ಆದರೆ ಮೌನಿ ರಾಯ್​ ಪ್ರೇಕ್ಷಕರಿಂದ ಅಭಿಮಾನಿಗಳಿಂದ ಸುತ್ತುವರೆದಿದ್ದರು. ಅಕ್ಷಯ್ ಮೌನಿಯವರ ಕೈಗಳನ್ನು ಹಿಡಿದು ಗಾಳಿಯಲ್ಲಿ ಎಳೆದಿದ್ದಾರೆ. ನಟಿ ಅಕ್ಷಯ್‌ ಅವರನ್ನು ಸೇರಿಕೊಂಡರು, ನಂತರ ವೇದಿಕೆಗೆ ಬಂದಿಳಿದರು. ಅವರ ಸಾಹಸಕ್ಕೆ ಪ್ರೇಕ್ಷಕರು ಚಪ್ಪಾಳೆ ತಟ್ಟಿ ಪ್ರೋತ್ಸಾಹಿಸಿದರು. ಈ ಸ್ಟಂಟ್​ ವಿಡಿಯೋ ಎಂಥಹವರನ್ನೂ ದಿಗ್ಭ್ರಮೆಗೊಳಿಸುವಂತಿದೆ.

ನಾಗಿನ್ ನಟಿ ಹಂಚಿಕೊಂಡ ವಿಡಿಯೋ ತುಣುಕಿನಲ್ಲಿ, ಅಕ್ಷಯ್ ಬ್ಲ್ಯಾಕ್​ ಸ್ಲೀವ್​ ಲೆಸ್​​ ಟೀ ಶರ್ಟ್ ಮತ್ತು ಬ್ಲ್ಯಾಕ್​​ ಜೀನ್ಸ್‌ ಧರಿಸಿದ್ದಾರೆ. ಮತ್ತೊಂದೆಡೆ, ಬಹುಕಾಂತೀಯ ಬ್ಯೂಟಿ ಮೌನಿ ರಾಯ್​ ಗೋಲ್ಡನ್​ ಶೈನಿಂಗ್​ ಶಾರ್ಟ್ ಡ್ರೆಸ್​ ಧರಿಸಿ ಕಂಗೊಳಿಸುತ್ತಿದ್ದರು. ಗೋಲ್ಡನ್​ ಶೂ, ಕರ್ಲಿ ಹೇರ್ ನಟಿಯ ಅಂದವನ್ನು ಹೆಚ್ಚಿಸಿತು.

ನಟ ನಟಿಯ ಅಭಿಮಾನಿಗಳಿಗೆ ತಮ್ಮ ಉತ್ಸಾಹ ತಡೆಯಲು ಸಾಧ್ಯವಾಗಿಲ್ಲ, ನಟಿಯ ಈ ಪೋಸ್ಟ್​​ಗೆ ಕಾಮೆಂಟ್​ ಮೂಲಕ ತಮ್ಮ ಪ್ರೀತಿ ವ್ಯಕ್ತಪಡಿಸುತ್ತಿದ್ದಾರೆ. "ನೀವು ಬಾಲಿವುಡ್‌ನ ಫಿಟ್‌ ಹೀರೋಯಿನ್‌", "ನನ್ನ ನೆಚ್ಚಿನ ಮೋನಿ" ಎಂದೆಲ್ಲಾ ಕಾಮೆಂಟ್​ ಮಾಡುತ್ತಿದ್ದಾರೆ. ನಟಿಯ ಇನ್​ಸ್ಟಾ ಫೋಸ್ಟ್​ನ ಕಾಮೆಂಟ್​ ವಿಭಾಗ ಫೈಯರ್​, ರೆಡ್​ ಹಾರ್ಟ್ ಎಮೋಜಿಗಳಿಂದ ತುಂಬಿದೆ.

ಬಾಲಿವುಡ್​ ಕಿಲಾಡಿ ಅಕ್ಷಯ್​ ಕುಮಾರ್​ ಅವರು ಮೌನಿ ರಾಯ್ ಅಲ್ಲದೇ ಬಾಲಿವುಡ್​ ಬೋಲ್ಡ್​ ಬ್ಯೂಟಿ ದಿಶಾ ಪಟಾನಿ ಮತ್ತು ಸೋನಮ್​ ಬಾಜ್ವಾ ಅವರೊಂದಿಗೆ ಮಾರ್ಚ್​ 1ರಂದು ದಿ ಎಂಟರ್​ಟೈನರ್ಸ್​ ಕಾರ್ಯಕ್ರಮಕ್ಕಾಗಿ ಅಮೆರಿಕಕ್ಕೆ ಹಾರಿದ್ದಾರೆ. ಇವರೊಂದಿಗೆ ನೋರಾ ಫತೇಹಿ ಮತ್ತು ಅಪರಶಕ್ತಿ ಖುರಾನಾ ಸಹ ಇದ್ದಾರೆ.

ಇದನ್ನೂ ಓದಿ: 'ಮಾಹಿತಿಯಿಲ್ಲದೇ ಮಾತನಾಡಬಾರದು': ಮಿಥುನ್ ರೈಗೆ ಪರೋಕ್ಷ ಟಾಂಗ್​ ಕೊಟ್ಟ ರಕ್ಷಿತ್​ ಶೆಟ್ಟಿ

ಈ ಹಿಂದೆ ಅಕ್ಷಯ್​ ಕುಮಾರ್​ ಮತ್ತು ನೋರಾ ಫತೇಹಿ ಜೊತೆಯಾಗಿ ಡ್ಯಾನ್ಸ್​ ಮಾಡಿದ್ದ ದೃಶ್ಯವೂ ಸಿಕ್ಕಾಪಟ್ಟೆ ಸದ್ದು ಮಾಡಿತ್ತು. ನೋರಾ ರೆಡ್​ ಶೈನಿಂಗ್ ಡ್ರೆಸ್​ ಧರಿಸಿದ್ದು, ಅಕ್ಷಯ್​ ರೆಡ್​ ಲೆಹಂಗಾದಲ್ಲಿ ಕಾಣಿಸಿಕೊಂಡಿದ್ದರು. ಅಮೆರಿಕದಲ್ಲಿ ಅಕ್ಷಯ್​ ಕುಮಾರ್ ಅವರ​ ಮೊದಲ ಶೋ ಪ್ರೇಕ್ಷಕರನ್ನು ರೋಮಾಂಚನಗೊಳಿಸಿತಾದರೂ ಅವರ ವೇಷಭೂಷಣ ಸಾಮಾಜಿಕ ಜಾಲತಾಣ ಬಳಕೆದಾರರಿಂದ ಮಿಶ್ರ ಪ್ರತಿಕ್ರಿಯೆ ಪಡೆದಿತ್ತು..

ಇದನ್ನೂ ಓದಿ: ಲೆಹಂಗಾ ಧರಿಸಿ ಡ್ಯಾನ್ಸ್​ ಮಾಡಿದ ಬಾಲಿವುಡ್​ ಕಿಲಾಡಿ.. ಅಮೆರಿಕದ​ ಪ್ರೇಕ್ಷಕರು ಫಿದಾ!

ಸೌಂದರ್ಯದಿಂದಲೇ ಸುದ್ದಿ ಮಾಡಿರುವ ನಟಿ ಮೌನಿ ರಾಯ್. ಸಂಗೀತಕ್ಕೆ ತಕ್ಕಂತೆ ಮೈಬಳುಕಿಸುವ ತಾರೆ ಇವರು. ಸಿನಿಮಾಗಳಿಗಿಂತ ಹೆಚ್ಚಾಗಿ ಅಂದ ಚೆಂದದಿಂದಲೇ ಅಭಿಮಾನಿಗಳನ್ನು ಗಳಿಸಿರುವ ಈ ಬೋಲ್ಡ್ ಬ್ಯೂಟಿ ಅಮೆರಿಕದಲ್ಲಿ ಸದ್ದು ಮಾಡಿದ್ದು ಫ್ಯಾನ್ಸ್​ ಫಿದಾ ಆಗಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಈ ವಿಡಿಯೋ ಸದ್ದು ಮಾಡುತ್ತಿದ್ದು ನಟಿಗೆ ಮೆಚ್ಚುಗೆಯ ಮಹಾಪೂರವೇ ಹರಿದು ಬರುತ್ತಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.