ETV Bharat / entertainment

ಮೋಹನ್‌ಲಾಲ್ ಮಖ್ಯಭೂಮಿಕೆಯ 'ಮಲೈಕೋಟೈ ವಾಲಿಬನ್‌' ಟೀಸರ್ ನೋಡಿ - Mohanlal next movie

ಮೋಹನ್‌ಲಾಲ್ ಅಭಿನಯದ 'ಮಲೈಕೋಟೈ ವಾಲಿಬನ್‌' ಟೀಸರ್ ಅನಾವರಣಗೊಂಡಿದೆ.

Mohanlal's starrer Malaikottai Vaaliban
ಮೋಹನ್‌ಲಾಲ್ ಮಖ್ಯಭೂಮಿಕೆಯ 'ಮಲೈಕೋಟೈ ವಾಲಿಬನ್‌'
author img

By ETV Bharat Karnataka Team

Published : Dec 6, 2023, 7:52 PM IST

ದಕ್ಷಿಣ ಚಿತ್ರರಂಗದ ಜನಪ್ರಿಯ ನಟ ಮೋಹನ್‌ಲಾಲ್ ಅವರ ಮುಂದಿನ ಪ್ರಾಜೆಕ್ಟ್​​ 'ಮಲೈಕೋಟೈ ವಾಲಿಬನ್‌' (Malaikottai Vaaliban). ನಟನ ಮುಂದಿನ ಸಿನಿಮಾಗಳ ಮೇಲೆ ಕುತೂಹಲ ವ್ಯಕ್ತಪಡಿಸುತ್ತಿರುವ ಅಪಾರ ಸಂಖ್ಯೆಯ ಅಭಿಮಾನಿಗಳು ಅಪ್​ಡೇಟ್ಸ್​​ಗಾಗಿ ಕಾತರರಾಗಿದ್ದರು. ಚಿತ್ರ ತಯಾರಕರಿಂದು ಮಲೈಕೋಟೈ ವಾಲಿಬನ್‌ ಟೀಸರ್​ ಅನಾವರಣಗೊಳಿಸಿ ಅಭಿಮಾನಿಗಳ ಸಂತಸಕ್ಕೆ ಕಾರಣರಾಗಿದ್ದಾರೆ.

ಜ. 25ಕ್ಕೆ ಪಂಚಭಾಷೆಗಳಲ್ಲಿ ಬಿಡುಗಡೆ: ಮೋಹನ್‌ಲಾಲ್ ನಟನೆಯ ಮುಂಬರುವ ಚಿತ್ರಗಳ ಪೈಕಿ 'ಮಲೈಕೋಟೈ ವಾಲಿಬನ್‌' ಕೂಡ ಒಂದು. ಲಿಜೋ ಜೋಸ್ ಪೆಲ್ಲಿಸ್ಸೆರಿ ಆ್ಯಕ್ಷನ್​ ಕಟ್​​ ಹೇಳಿರುವ ಈ ಬಹು ನಿರೀಕ್ಷಿತ ಪೀರಿಯಾಡಿಕಲ್​​ ಆ್ಯಕ್ಷನ್ ಸಿನಿಮಾ ಮುಂದಿನ ಜನವರಿ 25 ರಂದು ಮಲಯಾಳಂ, ತೆಲುಗು, ತಮಿಳು, ಕನ್ನಡ ಮತ್ತು ಹಿಂದಿ ಭಾಷೆಗಳಲ್ಲಿ ಬಿಡುಗಡೆ ಆಗಲಿದೆ. ಟೀಸರ್ ಪ್ರೇಕ್ಷಕರ ಉತ್ಸಾಹ ಹೆಚ್ಚಿಸಿದೆ.

ಮಲೈಕೋಟೈ ವಾಲಿಬನ್ ಟೀಸರ್ 1 ನಿಮಿಷ ಮತ್ತು 30 ಸೆಕೆಂಡ್‌ಗಳಿದ್ದು, ಆಕರ್ಷಕ ಹಿನ್ನೆಲೆ ದನಿ ಟೀಸರ್​ನ ಮೆರುಗು ಹೆಚ್ಚಿಸಿದೆ. ಟೀಸರ್ ಬಹಿರಂಗಗೊಂಡರೂ ಕಥಾಹಂದರ ಮಾತ್ರ ನಿಗೂಢ. ಸತ್ಯವನ್ನು ಬಿಚ್ಚಿಡುವ ವಿಷಯದ ಸುತ್ತ ಕಥೆ ಹೆಣೆಯಲಾಗಿದೆ ಎಂದು ಟೀಸರ್​ ಸುಳಿವು ಬಿಟ್ಟುಕೊಟ್ಟಿದೆ.

  • " class="align-text-top noRightClick twitterSection" data="">

ಜನವರಿ 25 ರಂದು ತೆರೆಗಪ್ಪಳಿಸಲು ಸಜ್ಜಾಗಿರುವ ಚಿತ್ರದ ಚಿತ್ರೀಕರಣವನ್ನು ದೇಶದ ಹಲವೆಡೆ ನಡೆಸಲಾಗಿದೆ. ರಾಜಸ್ಥಾನ, ಚೆನ್ನೈ, ಮತ್ತು ಪಾಂಡಿಚೇರಿಯಂತಹ ವೈವಿಧ್ಯಮಯ ಸ್ಥಳಗಳಲ್ಲಿ ಶೂಟಿಂಗ್​​ ನಡೆದಿದೆ. 2023ರ ಜನವರಿಯಿಂದ ಜೂನ್​ವರೆಗೆ ಸುಮಾರು 130 ದಿನಗಳ ಕಾಲ ಚಿತ್ರೀಕರಿಸಲಾಗಿದೆ. ಮೋಹನ್‌ಲಾಲ್ ಜೊತೆಗೆ, ಸೋನಾಲಿ ಕುಲಕರ್ಣಿ, ಹರೀಶ್ ಪೆರಾಡಿ, ಡ್ಯಾನಿಶ್ ಸೇಟ್ ಸೇರಿದಂತೆ ಹಲವರು ನಟಿಸಿದ್ದಾರೆ. ಪ್ರಶಾಂತ್ ಪಿಳ್ಳೈ ಸಂಗೀತ ಒದಗಿಸಿದ್ದಾರೆ. ಪೀರಿಯಾಡಿಕಲ್​ ಡ್ರಾಮಾ ಆ್ಯಕ್ಷನ್​​ ದೃಶ್ಯಗಳನ್ನು ನೀಡುವ ಭರವಸೆ ನೀಡಿದೆ.

ಇದನ್ನೂ ಓದಿ: 500 ಕೋಟಿಯತ್ತ 'ಅನಿಮಲ್​​': ರಶ್ಮಿಕಾ, ರಣ್​ಬೀರ್​ಗೆ ದೊಡ್ಡ ಗೆಲುವು

ಫೈಟರ್ ಜೊತೆ ಬಾಕ್ಸ್ ಆಫೀಸ್​ ಫೈಟ್: ಮಲೈಕೋಟೈ ವಾಲಿಬನ್ ಚಿತ್ರೀಕರಣ ಪೂರ್ಣಗೊಂಡ ನಂತರ, ನಟ ಮೋಹನ್‌ಲಾಲ್ ಈ ಸಿನಿಮಾ ಪ್ರೇಕ್ಷಕರಿಗೆ ಅದ್ಭುತ ಸಿನಿಮೀಯ ಅನುಭ ನೀಡಲಿದೆ ಮತ್ತು ಭಾರತೀಯ ಚಿತ್ರರಂಗದಲ್ಲಿ ಹೊಸ ಅಲೆ ಎಬ್ಬಿಸಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದರು. ಚಿತ್ರವನ್ನು ಜಾನ್ ಮತ್ತು ಮೇರಿ, ಮ್ಯಾಕ್ಸ್ ಲ್ಯಾಬ್ ಸಿನಿಮಾಸ್ ಮತ್ತು ಸೆಂಚುರಿ ಫಿಲ್ಮ್ಸ್ ಸಹಯೋಗದೊಂದಿಗೆ ಜಂಟಿಯಾಗಿ ನಿರ್ಮಿಸಿದ್ದಾರೆ. ಹೃತಿಕ್ ರೋಷನ್ ಮತ್ತು ದೀಪಿಕಾ ಪಡುಕೋಣೆ ಅಭಿನಯದ ವೈಮಾನಿಕ ಆ್ಯಕ್ಷನ್ ಸಿನಿಮಾ ಫೈಟರ್ ಜೊತೆ ತೆರೆಕಾಣಲಿದೆ. ಫೈಟರ್​ ಕೂಡ ಜನವರಿ 25ರಂದು ತೆರೆಗಪ್ಪಳಿಸೋ ಹಿನ್ನೆಲೆ ಬಾಕ್ಸ್ ಆಫೀಸ್​ ಫೈಟ್​​ ಪಕ್ಕಾ.

ಇದನ್ನೂ ಓದಿ: ಪ್ರತಿಷ್ಠಿತ 'ಅಕಾಡೆಮಿ ಮ್ಯೂಸಿಯಂ ಗಾಲಾ' ಈವೆಂಟ್​ ಮುಗಿಸಿ ಬಂದ ದೀಪಿಕಾ ಪಡುಕೋಣೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.