ETV Bharat / entertainment

ಮಿಸ್ ವರ್ಲ್ಡ್ 2000: ದೇಸಿ ಗರ್ಲ್ ಪ್ರಿಯಾಂಕ ವಿರುದ್ಧ ಮಿಸ್ ಬಾರ್ಬಡೋಸ್ ಅಸಮಾಧಾನ

ಮಿಸ್ ವರ್ಲ್ಡ್ 2000 ಸ್ಪರ್ಧೆಯಲ್ಲಿ ಪ್ರಿಯಾಂಕ ಅವರಿಗೆ ವಿಶೇಷ ಒಲವು ತೋರಲಾಗಿದೆ. ಭಾರತ, ಪ್ರಿಯಾಂಕ ಅವರನ್ನು ಗೆಲ್ಲಿಸುವ ಸಲುವಾಗಿಯೇ ಆ ಕಾರ್ಯಕ್ರಮವನ್ನು 'ಸಜ್ಜುಗೊಳಿಸಲಾಗಿತ್ತು' ಎಂದು 2000ರ ಮಿಸ್ ಬಾರ್ಬಡೋಸ್ ಲಿಲಾನಿ (Leilani) ಆರೋಪಿಸಿದ್ದಾರೆ.

Leilani outrage against priyanka chopra
ಪ್ರಿಯಾಂಕ ವಿರುದ್ಧ ಮಿಸ್ ಬಾರ್ಬಡೋಸ್ ಅಸಮಧಾನ
author img

By

Published : Nov 4, 2022, 1:47 PM IST

ದೇಸಿ ಗರ್ಲ್ ಪ್ರಿಯಾಂಕ ಚೋಪ್ರಾ ಮಿಸ್ ವರ್ಲ್ಡ್ 2000 ಸ್ಪರ್ಧೆಯಲ್ಲಿ ಭಾಗವಹಿಸಿ ಗೆಲುವಿನ ಕಿರೀಟವನ್ನು ಮುಡಿಗೇರಿಸಿಕೊಂಡರು. ಸುಮಾರು 20 ವರ್ಷಗಳ ನಂತರ ಇದೀಗ 2000ರ ಮಿಸ್ ಬಾರ್ಬಡೋಸ್ ಲಿಲಾನಿ (Leilani) ಗೆಲುವಿನ ಬಗ್ಗೆ ಕೆಲವು ಪ್ರಶ್ನೆಗಳನ್ನು ಎತ್ತಿದ್ದಾರೆ. ಜಾಗತಿಕ ತಾರೆ ಪ್ರಿಯಾಂಕಾ ಚೋಪ್ರಾ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಸ್ಪರ್ಧೆಯಲ್ಲಿ ಪ್ರಿಯಾಂಕಾ ಅವರಿಗೆ ವಿಶೇಷ ಒಲವು ತೋರಲಾಗಿದೆ. ಭಾರತ, ಪ್ರಿಯಾಂಕ ಅವರನ್ನು ಗೆಲ್ಲಿಸುವ ಸಲುವಾಗಿಯೇ ಆ ಕಾರ್ಯಕ್ರಮವನ್ನು 'ಸಜ್ಜುಗೊಳಿಸಲಾಗಿತ್ತು' ಎಂದು ಆರೋಪಿಸಿದ್ದಾರೆ.

ಮಿಸ್ USA 2022ರ ಕುರಿತ ಕೆಲ ಆರೋಪಗಳ ಬಗ್ಗೆ ಮಾತನಾಡಿದ 2000ರ ಮಿಸ್ ಬಾರ್ಬಡೋಸ್ ಲಿಲಾನಿ, ಇವೆಲ್ಲವನ್ನು ಗಮನಿಸಿದರೆ ಕೆಲ ಸ್ಪರ್ಧಿಗಳನ್ನೇ ಗೆಲ್ಲಿಸುವ ಸಲುವಾಗಿ ಕಾರ್ಯಕ್ರಮ ರೂಪುಗೊಂಡಿರುತ್ತದೆ ಎನಿಸುತ್ತಿದೆ. ಸದ್ಯ ಮಿಸ್ ವರ್ಲ್ಡ್ 2000ನಲ್ಲಿ ತನಗಾದ ಸ್ವಂತ ಅನುಭವವನ್ನು ನೆನಪಾಗುತ್ತಿದೆ ಎಂದು ಅವರು ಹೇಳಿದರು. ಮಿಸ್ ವರ್ಲ್ಡ್ 1999ರ ವಿನ್ನರ್ ಭಾರತದಿಂದ ಬಂದವರು, ಮಿಸ್ ವರ್ಲ್ಡ್ 2000 ಸಹ ಭಾರತದಿಂದ ಬಂದವರು. ಭಾರತದ ಖಾಸಗಿ ಚಾನೆಲ್ ಮಿಸ್ ವರ್ಲ್ಡ್ ಕಾರ್ಯಕ್ರಮದ ಪ್ರಾಯೋಜಕರಲ್ಲಿ ಒಬ್ಬರಾಗಿದ್ದಾಗ ಇದು ಸಂಭವಿಸಿತು ಎಂದು ಆರೋಪಿಸಿದರು.

ಸ್ಪರ್ಧೆಯ ಸಮಯದಲ್ಲಿ ಪ್ರಿಯಾಂಕಾ ಚೋಪ್ರಾ ಅವರಿಗೆ ಒಲವು ತೋರಲಾಯಿತು. ಪ್ರಿಯಾಂಕಾ ಅವರ ಗೌನ್‌ಗಳು ಉತ್ತಮವಾಗಿ ತಯಾರಿಸಲ್ಪಟ್ಟವು. ಅವರಿಗೆ ಅವರ ಸ್ವಂತ ಕೋಣೆಯಲ್ಲಿಯೇ ಆಹಾರ ಪೂರೈಕೆ ಆಯಿತು. ಪತ್ರಿಕೆಗಳಲ್ಲಿ ಪ್ರಿಯಾಂಕಾ ಚೋಪ್ರಾ ಫೋಟೋಗಳು ದೊಡ್ಡದಾಗಿ ಬಂದವು. ಈಜು ಉಡುಗೆಯ ಸ್ಪರ್ಧೆಯ ಸಂದರ್ಭದಲ್ಲಿ ಪ್ರಿಯಾಂಕ ಅವರಿಗೆ ಸೀರೆ ಧರಿಸಲು ಅವಕಾಶ ನೀಡಲಾಯಿತು. ಆದರೆ ಇದ್ಯಾವುದು ನಮಗೆ ಸಿಗಲಿಲ್ಲ ಎಂದು ಆರೋಪಿಸಿದ್ದಾರೆ.

ಇದನ್ನೂ ಓದಿ: ಮುಂಬೈಯಲ್ಲಿ ದೇಸಿ ಗರ್ಲ್ ಬಿನ್ನಾಣ: 3 ವರ್ಷದ ಬಳಿಕ ಪ್ರಿಯಾಂಕ ಆಗಮನ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.