ETV Bharat / entertainment

ಬಾಲಿವುಡ್​ ತಾರೆಯರೊಂದಿಗೆ ಮಮತಾ ಬ್ಯಾನರ್ಜಿ ಡ್ಯಾನ್ಸ್- ವಿಡಿಯೋ - ಈಟಿವಿ ಭಾರತ್ ಕನ್ನಡ ಸುದ್ದಿ

KIFF 2023: 29ನೇ ಕೋಲ್ಕತ್ತಾ ಅಂತರರಾಷ್ಟ್ರೀಯ ಚಲನಚಿತ್ರೋತ್ಸವಕ್ಕೆ ಇಂದು ಚಾಲನೆ ದೊರೆಯಿತು.

ಕಲ್ಕತ್ತಾ ಅಂತರರಾಷ್ಟ್ರೀಯ ಚಲನಚಿತ್ರೋತ್ಸವ
ಕಲ್ಕತ್ತಾ ಅಂತರರಾಷ್ಟ್ರೀಯ ಚಲನಚಿತ್ರೋತ್ಸವ
author img

By ETV Bharat Karnataka Team

Published : Dec 5, 2023, 10:45 PM IST

ಕೋಲ್ಕತ್ತಾ: ಇಲ್ಲಿನ ನೇತಾಜಿ ಒಳಾಂಗಣ ಕ್ರೀಡಾಂಗಣದಲ್ಲಿ 29ನೇ ಕೋಲ್ಕತ್ತಾ ಅಂತರರಾಷ್ಟ್ರೀಯ ಚಲನಚಿತ್ರೋತ್ಸವಕ್ಕೆ ವರ್ಣರಂಜಿತ ಚಾಲನೆ ದೊರೆಯಿತು. ಕಾರ್ಯಕ್ರಮಕ್ಕೆ ಬಾಲಿವುಡ್​ ಸೆಲೆಬ್ರಿಟಿಗಳು ಆಗಮಿಸಿದ್ದರು. ಕಾರ್ಯಕ್ರಮದ ಥೀಮ್ ಸಾಂಗ್​ಗೆ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಬಾಲಿವುಡ್​ ನಟರ ಜೊತೆ ಡ್ಯಾನ್ಸ್​ ಮಾಡಿ ಎಲ್ಲರ ಗಮನ ಸೆಳೆದರು.

ಮುಖ್ಯಮಂತ್ರಿ ಬ್ಯಾನರ್ಜಿ ಚಲನಚಿತ್ರೋತ್ಸವ ಉದ್ಘಾಟಿಸಿದರು. ಮುಖ್ಯ ಅತಿಥಿಯಾಗಿ ಸಲ್ಮಾನ್ ಖಾನ್ ಆಗಮಿಸಿದ್ದರು. ಅನಿಲ್ ಕಪೂರ್, ಸೋನಾಕ್ಷಿ ಸಿನ್ಹಾ, ಮಹೇಶ್ ಭಟ್, ಶತ್ರುಘ್ನ ಸಿನ್ಹಾ ಸೇರಿದಂತೆ ಅನೇಕ ಗಣ್ಯರು ಸಮಾರಂಭದಲ್ಲಿ ಭಾಗವಹಿಸಿದ್ದರು.

ವೈರಲ್‌ ವಿಡಿಯೋವೊಂದರಲ್ಲಿ ಮಮತಾ ಬ್ಯಾನರ್ಜಿ ಬಾಲಿವುಡ್ ತಾರೆಯರ ಜೊತೆ ಡ್ಯಾನ್ಸ್ ಮಾಡಿರುವುದನ್ನು ಕಾಣಬಹುದು. ಈ ಸಂದರ್ಭದಲ್ಲಿ ಮಹೇಶ್ ಭಟ್, ಸೋನಾಕ್ಷಿ ಸಿನ್ಹಾ, ಶತ್ರುಘ್ನ ಸಿನ್ಹಾ ಮತ್ತು ಅನಿಲ್ ಕಪೂರ್ ಕೂಡ ಸಿಎಂಗೆ ಸಾಥ್‌ ಕೊಟ್ಟರು.

ಕಾರ್ಯಕ್ರಮದ ಆರಂಭದಲ್ಲಿ ಡೊನಾ ಗಂಗೂಲಿ ತಂಡದವರು ನೃತ್ಯ ಮಾಡಿ ಅತಿಥಿಗಳು ಹಾಗೂ ಹಿರಿಯ ತಾರೆಯರನ್ನು ಸ್ವಾಗತಿಸಿದರು. ಇದಲ್ಲದೆ ಸಿನಿಮೋತ್ಸವದ ಸಿಗ್ನೇಚರ್ ಆಡಿಯೋ ದೃಶ್ಯವನ್ನು ಪ್ರದರ್ಶಿಸಲಾಯಿತು. ಈ ಹಾಡನ್ನು ಶ್ರೀಜತ್ ರಚಿಸಿದ್ದು, ಅರಿಜಿತ್ ಸಿಂಗ್ ಧ್ವನಿ ನೀಡಿದ್ದಾರೆ. ಸಲ್ಮಾನ್, ಸೋನಾಕ್ಷಿ, ಶತ್ರುಘ್ನ, ಅನಿಲ್ ಕಪೂರ್ ಮುಂತಾದವರು ಅಭಿನಯಿಸಿದ್ದಾರೆ.

  • VIDEO | "This is one of the biggest film festivals that I have attended. I am really glad to be here, I absolutely enjoy this place," says actor @BeingSalmanKhan speaking at International Film Festival in #Kolkata.

    (Full video is available on PTI Videos -… pic.twitter.com/6SUuRoAQAH

    — Press Trust of India (@PTI_News) December 5, 2023 " class="align-text-top noRightClick twitterSection" data=" ">

ನಗರದಾದ್ಯಂತ 23 ಚಿತ್ರಮಂದಿರಗಳಲ್ಲಿ ಸಿನಿಮಾಗಳು ಪ್ರದರ್ಶನಗೊಳ್ಳಲಿವೆ. ಹಾಗಾಗಿ ಸಿನಿಪ್ರೇಮಿಗಳಿಗೆ ನಗರದ ಯಾವುದೇ ಭಾಗದಲ್ಲಿ ಸಿನಿಮಾ ನೋಡುವ ಅವಕಾಶವಿದೆ. ಈ ವರ್ಷ 1590 ಚಲನಚಿತ್ರಗಳು, 72 ಚಲನಚಿತ್ರಗಳು, 50 ಕಿರುಚಿತ್ರಗಳು ಮತ್ತು ಸಾಕ್ಷ್ಯಚಿತ್ರಗಳನ್ನು ಸ್ಪರ್ಧಾತ್ಮಕ ವಿಭಾಗದಲ್ಲಿ ಪ್ರದರ್ಶನಕ್ಕೆ ಸಲ್ಲಿಸಲಾಗಿದೆ. ಸ್ಪರ್ಧೆಯೇತರ ವಿಭಾಗದಲ್ಲಿ 97 ಚಿತ್ರಗಳಿವೆ. ಈ ಬಾರಿ 39 ದೇಶಗಳ ಚಿತ್ರಗಳು ನಾಮನಿರ್ದೇಶನಗೊಂಡಿವೆ. ಇದರಲ್ಲಿ ಒಟ್ಟು 219 ಚಿತ್ರಗಳು ಪ್ರದರ್ಶನಗೊಳ್ಳಲಿವೆ. ಬೆಂಗಾಲಿ ಪನೋರಮಾ ವಿಭಾಗದಲ್ಲಿ ಏಳು ಬೆಂಗಾಲಿ ಚಿತ್ರಗಳು ಪ್ರದರ್ಶನಗೊಳ್ಳಲಿವೆ. ಈ ಚಿತ್ರಗಳ ಹೆಸರುಗಳು - 'ಮನ್ ಪತಂಗ', 'ಬಿಜೋಯರ್ ಪೋರ್', 'ಅಬರ್ ಆಶಿಬೋ ಫಿರೆ', 'ಬನ್‌ಬಿಬಿ', 'ಅನಾಥ', 'ಅಸೋಂಪೂರ್ಣ' ಹಾಗು 'ಮಾತ್ರಪಕ್ಷ'.

ಬಾಲಿವುಡ್ ಮ್ಯಾಟಿನಿ ಆರಾಧ್ಯ ದೇವ್ ಆನಂದ್ ಅವರ 7 ಚಿತ್ರಗಳು ಪ್ರದರ್ಶನಗೊಳ್ಳಲಿವೆ. ಈ ಚಿತ್ರಗಳೆಂದರೆ, 'ಸಾಜಾ', 'ಜಾನಿ ಮೇರಾ ನಾಮ್', 'ಗೈಡ್', 'ಜ್ಯುವೆಲ್ ಥೀಫ್', 'ಜೀತ್', 'ಸಿಐಡಿ', 'ಬಾಜಿ'. ಕ್ರೀಡೆ ಮತ್ತು ಪರಿಸರದ ಬಗ್ಗೆಯೂ ಚಲನಚಿತ್ರಗಳನ್ನು ನಿರ್ಮಿಸಲಾಗಿದೆ. ಈ ಹಬ್ಬ ಡಿಸೆಂಬರ್ 12ರವರೆಗೆ ನಡೆಯಲಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.