ಖ್ಯಾತ ಮಲಯಾಳಂ ಚಿತ್ರನಟ ಪೃಥ್ವಿರಾಜ್ ಸುಕುಮಾರನ್ ಅವರು ಕಾರು ಅಪಘಾತದಲ್ಲಿ ಗಾಯಗೊಂಡಿದ್ದಾರೆ. 'ವಿಲಾಯತ್ ಬುದ್ಧ' ಚಿತ್ರದ ಶೂಟಿಂಗ್ ಸೆಟ್ನಲ್ಲಿ ಘಟನೆ ನಡೆದಿದೆ. ವರದಿಗಳ ಪ್ರಕಾರ, ನಟನ ಕಾಲಿಗೆ ಗಂಭೀರ ಸ್ವರೂಪದ ಗಾಯವಾಗಿದೆ. ತಕ್ಷಣ ಅವರನ್ನು ಕೊಚ್ಚಿಯ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಶಸ್ತ್ರಚಿಕಿತ್ಸೆ ನಡೆಸಲಾಗಿದೆ. ಸಂಪೂರ್ಣವಾಗಿ ಚೇತರಿಸಿಕೊಳ್ಳಲು ಕೆಲವು ವಾರಗಳು ಬೇಕಿದೆ ವೈದ್ಯರು ತಿಳಿಸಿದ್ದಾರೆ.
ಮರಯೂರಿನಲ್ಲಿ ಫೈಟಿಂಗ್ ದೃಶ್ಯ ಚಿತ್ರೀಕರಿಸಲಾಗುತ್ತಿತ್ತು. ಈ ವೇಳೆ ಪೃಥ್ವಿರಾಜ್ ಅವರ ಕಾರು ಅಪಘಾತವಾಗಿದೆ. ಇಂದು ಬೆಳಗ್ಗೆ ನಟನಿಗೆ ಶಸ್ತ್ರಚಿಕಿತ್ಸೆ ನಡೆದಿರುವುದಾಗಿ ತಿಳಿದುಬಂದಿದೆ. ಅಪಘಾತ ಹೇಗೆ ನಡೆಯಿತು ಮತ್ತು ಘಟನೆಯ ಬಗ್ಗೆ ಸಂಪೂರ್ಣ ಮಾಹಿತಿ ಲಭಿಸಿಲ್ಲ.
-
Leading actor #PrithvirajSukumaran met with an accident on location of
— Sreedhar Pillai (@sri50) June 25, 2023 " class="align-text-top noRightClick twitterSection" data="
his #VilayathBuddha in Marayur while shooting an action scene on Sunday. Today he will undergo a keyhole surgery on his leg at a private hospital in Kochi. He is expected to take a complete rest for a few… pic.twitter.com/9qnBkWMSeu
">Leading actor #PrithvirajSukumaran met with an accident on location of
— Sreedhar Pillai (@sri50) June 25, 2023
his #VilayathBuddha in Marayur while shooting an action scene on Sunday. Today he will undergo a keyhole surgery on his leg at a private hospital in Kochi. He is expected to take a complete rest for a few… pic.twitter.com/9qnBkWMSeuLeading actor #PrithvirajSukumaran met with an accident on location of
— Sreedhar Pillai (@sri50) June 25, 2023
his #VilayathBuddha in Marayur while shooting an action scene on Sunday. Today he will undergo a keyhole surgery on his leg at a private hospital in Kochi. He is expected to take a complete rest for a few… pic.twitter.com/9qnBkWMSeu
ಕೆಲವು ದಿನಗಳ ಹಿಂದೆ, ತಮಿಳು ನಟರಾದ ವಿಶಾಲ್ ಮತ್ತು ವಿಜಯ್ ಆಂಟೋನಿ ಸಿನಿಮಾ ಶೂಟಿಂಗ್ ವೇಳೆ ಗಾಯಗೊಂಡಿದ್ದರು. ಕೆಲವು ದಿನಗಳ ವಿಶ್ರಾಂತಿ ಬಳಿಕ ಚೇತರಿಸಿಕೊಂಡು ಶೂಟಿಂಗ್ನಲ್ಲಿ ಭಾಗವಹಿಸಿದ್ದರು. ಸಿನಿಮಾ ಸೆಟ್ಗಳಲ್ಲಿ ನಡೆಯುತ್ತಿರುವ ಇಂತಹ ಅವಘಡಗಳಿಂದಾಗಿ ಸೆಟ್ಗಳಲ್ಲಿ ಕೈಗೊಳ್ಳುತ್ತಿರುವ ಸುರಕ್ಷತಾ ಕ್ರಮಗಳ ಬಗ್ಗೆ ಅನುಮಾನ ಹುಟ್ಟುಹಾಕಿದೆ.
ಪೃಥ್ವಿರಾಜ್ ಕೆಲವು ತಿಂಗಳು ವಿಶ್ರಾಂತಿ ಪಡೆದುಕೊಳ್ಳಬೇಕಿದ್ದು ವಿಲಾಯತ್ ಬುದ್ಧ ಸಿನಿಮಾದ ಚಿತ್ರೀಕರಣ ಸ್ಥಗಿತಗೊಂಡಿದೆ. ಸಂಪೂರ್ಣ ಚೇತರಿಸಿಕೊಂಡ ಬಳಿಕವೇ ಶೂಟಿಂಗ್ ಪ್ರಾರಂಭವಾಗಲಿದೆ. ಈ ಸಿನಿಮಾ ಜಯನ್ ನಂಬಿಯಾರ್ ಅವರ ನಿರ್ದೇಶನದಲ್ಲಿ ಮೂಡಿಬರುತ್ತಿದೆ. ಗಂಧದ ಮರದ ಮಾಲೀಕತ್ವದ ಬಗ್ಗೆ ಎರಡು ಪ್ರಮುಖ ಪಾತ್ರಗಳ ನಡುವೆ ನಡೆಯುವ ಹೋರಾಟದ ಕಥೆಯನ್ನು ಚಿತ್ರ ಹೊಂದಿದೆ. ಅನು ಮೋಹನ್ ಮತ್ತು ಪ್ರಿಯಂವದಾ ಕೃಷ್ಣನ್ ಮುಂತಾದವರು ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.
ವಿಲಾಯತ್ ಬುದ್ಧದ ಜೊತೆಗೆ ಕೆಜಿಎಫ್ ಖ್ಯಾತಿಯ ಪ್ರಶಾಂತ್ ನೀಲ್ ನಿರ್ದೇಶನದ ಮತ್ತು ಪ್ರಭಾಸ್ ನಟಿಸಿರುವ ಮುಂಬರುವ ಸಲಾರ್ ಸಿನಿಮಾದಲ್ಲಿ ಪೃಥ್ವಿರಾಜ್ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಪೃಥ್ವಿರಾಜ್ ಈ ಸಿನಿಮಾದಲ್ಲಿ ರಗಡ್ ಲುಕ್ನಲ್ಲಿ ಕಾಣಿಸಿಕೊಂಡಿದ್ದು, ಬಹುನಿರೀಕ್ಷಿತ ಸಿನಿಮಾ ಸೆಪ್ಟೆಂಬರ್ 28ಕ್ಕೆ ತೆರೆ ಕಾಣಲಿದೆ.
ಇದನ್ನೂ ಓದಿ : ಪೃಥ್ವಿರಾಜ್ ಹುಟ್ಟುಹಬ್ಬಕ್ಕೆ ಸಲಾರ್ ಚಿತ್ರತಂಡದಿಂದ ಗಿಫ್ಟ್...ಹೊಸ ಪೋಸ್ಟರ್ ರಿಲೀಸ್