ETV Bharat / entertainment

ಸ್ಯಾಂಡಲ್​ವುಡ್​ನ ಮೇಕಪ್ ಮ್ಯಾನ್​​ ಈಗ ತಾಜ್​​ಮಹಲ್ 2 ಸಿನಿಮಾದ ನಾಯಕ ನಟ! - Makeup man Devaraj Kumar

ಟೈಟಲ್​​ನಿಂದಲೇ ಗಮನ ಸೆಳೆಯುತ್ತಿರುವ ತಾಜ್​ಮಹಲ್​ 2 ಚಿತ್ರ ಸೆ. 2 ರಂದು ಬಿಡುಗಡೆಯಾಗುತ್ತಿದೆ. ಚಿತ್ರದಲ್ಲಿ ದೇವರಾಜ್ ಜೊತೆ ಸಮೃದ್ಧಿ ಶುಕ್ಲಾ ಜೋಡಿಯಾಗಿದ್ದು, ಶೋಭರಾಜ್, ಕಡ್ಡಿಪುಡಿ ಚಂದ್ರು, ತಬಲ ನಾಣಿ, ವಾಣಿಶ್ರೀ, ಕಾಕ್ರೋಜ್ ಸುಧಿ, ವಿಕ್ಟರಿ ವಾಸು ಸೇರಿದಂತೆ ಇತರೆ ಕಲಾವಿದರಿದ್ದಾರೆ.

Makeup man is now the lead actor of Taj Mahal 2 movie
ತಾಜ್​​ಮಹಲ್ 2 ಸಿನಿಮಾದ ನಾಯಕ ನಟ
author img

By

Published : Jul 12, 2022, 5:39 PM IST

ಸ್ಯಾಂಡಲ್​ವುಡ್​ನಲ್ಲಿ ಇತ್ತೀಚೆಗೆ ಸಿಕ್ವೇಲ್ಸ್​​​ ಸಿನಿಮಾಗಳು ಬರುತ್ತಿರುವುದು ಸಾಮಾನ್ಯವಾಗಿದೆ. ಇದೀಗ ತಾಜ್​​ಮಹಲ್ 2 ಅಂತಾ ಸ್ಯಾಂಡಲ್​​ವುಡ್​ನಲ್ಲಿ ಸಿನಿಮಾವೊಂದು ಬರುತ್ತಿದೆ. ಮೇಕಪ್ ಕಲಾವಿದನಾಗಿ ಚಿತ್ರರಂಗ ಪ್ರವೇಶಿಸ ಮಾಡಿದ್ದ ದೇವರಾಜ್ ಕುಮಾರ್ ನಂತರದ ದಿನಗಳಲ್ಲಿ ನಿರ್ದೇಶಕರಾಗಿದ್ದರು. ನಿರ್ದೇಶನದೊಂದಿಗೆ ಈಗ ದೇವರಾಜ್ ಕುಮಾರ್​ ತಾಜ್​​ಮಹಲ್ 2 ಸಿನಿಮಾ ಮೂಲಕ ಹೀರೋ ಆಗಿ ಎಂಟ್ರಿ ಕೊಡುತ್ತಿದ್ದಾರೆ. ಸೈಲೆಂಟ್ ಆಗಿ ಶೂಟಿಂಗ್ ಮುಗಿಸಿ ಬಿಡುಗಡೆಗೆ ಸಜ್ಜಾಗಿರೋ ಈ ಚಿತ್ರವನ್ನ ದೇವರಾಜ್ ಕುಮಾರ್​ ಅಭಿನಯದ ಜೊತೆಗೆ ನಿರ್ದೇಶನ ಕೂಡ ಮಾಡಿದ್ದಾರೆ.

Makeup man is now the lead actor of Taj Mahal 2 movie
ತಾಜ್​​ಮಹಲ್ 2 ಸಿನಿಮಾದ ನಾಯಕ ನಟ

ಸಿನಿಮಾ ಬಗ್ಗೆ ಮಾತು ಶುರು ಮಾಡಿದ ದೇವರಾಜ್, ಇದೊಂದು ಲವ್ ಸ್ಟೋರಿ ಸಿನಿಮಾ. 2019ರಲ್ಲಿ ಈ ಚಿತ್ರವನ್ನು ಆರಂಭಿಸಿದ್ದೆವು. 2020ರಲ್ಲಿ ಚಿತ್ರೀಕರಣ ಬಹುತೇಕ ಮುಕ್ತಾಯವಾಗಿತ್ತು. ನಂತರ ಕೊರೊನಾದಿಂದ ಚಿತ್ರ ಸಿದ್ಧವಾಗಲು ವಿಳಂಬವಾಯಿತು. ಇತ್ತೀಚೆಗೆ ಈ ಚಿತ್ರದ ಹಾಡೊಂದನ್ನು ಉತ್ತರ ಕರ್ನಾಟಕದಲ್ಲಿ ಸಚಿವ ಶಂಕರ್ ಪಾಟೀಲ್ ಮುನೇನಕೊಪ್ಪ ಬಿಡುಗಡೆ ಮಾಡಿದರು.

ಆ ಹಾಡು ಐದು ಲಕ್ಷಕ್ಕೂ ಅಧಿಕ ವೀಕ್ಷಣೆಯಾಗಿದೆ. ಟ್ರೇಲರ್ ಸಹ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ. ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಭಾ.ಮ. ಹರೀಶ್, ನಿರ್ಮಾಪಕರ ಸಂಘದ ಅಧ್ಯಕ್ಷ ಪ್ರವೀಣ್ ಕುಮಾರ್, ಉಮೇಶ್ ಬಣಕಾರ್ ಸೇರಿದಂತೆ ಎಲ್ಲ ಗಣ್ಯರ ಸಹಕಾರವನ್ನು ನೆನೆಯುತ್ತಾ ಅವರಿಗೆ ಧನ್ಯವಾದ ತಿಳಿಸುತ್ತೇನೆ ಎಂದರು.

ಈ ಚಿತ್ರದಲ್ಲಿ ದೇವರಾಜ್ ಜೊತೆ ಸಮೃದ್ಧಿ ಶುಕ್ಲಾ ಜೋಡಿಯಾಗಿದ್ದು, ಶೋಭರಾಜ್, ಕಡ್ಡಿಪುಡಿ ಚಂದ್ರು, ತಬಲ ನಾಣಿ, ವಾಣಿಶ್ರೀ, ಕಾಕ್ರೋಜ್ ಸುಧಿ, ವಿಕ್ಟರಿ ವಾಸು ಸೇರಿದಂತೆ ಸಾಕಷ್ಟು ಕಲಾವಿದರಿದ್ದಾರೆ. ಶ್ರೀ ಗಂಗಾಂಭಿಕೆ ಫಿಲ್ಮ್ ಬ್ಯಾನರ್ ಅಡಿಯಲ್ಲಿ ಈ ಸಿನಿಮಾ ನಿರ್ಮಾಣವಾಗಿದೆ. ವಿಕ್ರಂ ಸೆಲ್ವ ಸಂಗೀತ ನೀಡಿದ್ದರೆ, ವೀನಸ್ ಮೂರ್ತಿ ಕ್ಯಾಮರಾ ವರ್ಕ್ ಈ ಸಿನಿಮಾಕ್ಕಿದೆ.

ನಿರ್ಮಾಪಕ ಉಮೇಶ್ ಬಣಕಾರ್, ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಉಪಾಧ್ಯಕ್ಷ ಶಿಲ್ಪ ಶ್ರೀನಿವಾಸ್, ಲಿಖಿತ್ ಫಿಲಂಸ್​​ನ ರಮೇಶ್ ಬಾಬು, ಪ್ರದರ್ಶಕ ಕುಮಾರ್ ಚಿತ್ರತಂಡಕ್ಕೆ ಶುಭ ಕೋರಿದರು. ಸದ್ಯ ಟೈಟಲ್​​ನಿಂದಲೇ ಗಮನ ಸೆಳೆಯುತ್ತಿರುವ ತಾಜ್​ಮಹಲ್​ 2 ಚಿತ್ರವು ಸೆಪ್ಟೆಂಬರ್ 2 ರಂದು ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.