'ವಯಸ್ಸು ಕೇವಲ ಒಂದು ಸಂಖ್ಯೆಯಷ್ಟೇ' ಎಂಬ ಮಾತಿಗೆ ಟಾಲಿವುಡ್ ಸ್ಟಾರ್ ನಟ ಮಹೇಶ್ ಬಾಬು ಉತ್ತಮ ಉದಾಹರಣೆ. 47 ವರ್ಷ ವಯಸ್ಸಾಗಿದ್ದರೂ, ಫಿಟ್ನೆಸ್ ಕಾಪಾಡಿಕೊಳ್ಳುವುದರಲ್ಲಿ ಸದಾ ಮುಂದಿದ್ದಾರೆ. ಇವರ ಇತ್ತೀಚಿನ ಫೋಟೋಗಳನ್ನು ನೋಡಿದರೆ, ನಿಮಗೆ ತಿಳಿಯಬಹುದು. ಇದೀಗ ಮತ್ತೊಂದು ಇನ್ಸ್ಟಾ ಸ್ಟೋರಿಯನ್ನು ನಟ ಹಂಚಿಕೊಂಡಿದ್ದಾರೆ. ಅವರು ತಮ್ಮ ದೇಹವನ್ನು ಫಿಟ್ ಆಗಿ ಇಡಲು ಸೇವಿಸುವ ಆಹಾರದ ಬಗ್ಗೆ ತಿಳಿಸಿದ್ದಾರೆ.
"ನಿತ್ಯ ಪೋಷಕಾಂಶಯುಕ್ತ ಆಹಾರ ಸೇವನೆ. ರಾತ್ರಿ ನೆನೆಸಿದ ಓಟ್ಸ್ ಮತ್ತು ಬೀಜಗಳ ಸರಳ ಮಿಶ್ರಣ. ಮುಂದಿನ ಒಂದೆರಡು ಗಂಟೆಗಳಲ್ಲಿ ನನಗೆ ಶಕ್ತಿಯ ಅಗತ್ಯವಿದೆ! #ಉಪಹಾರ" ಎಂದು ಸ್ಟೋರಿ ಕ್ಯಾಪ್ಶನ್ ಹಾಕಿಕೊಂಡಿದ್ದಾರೆ. ಸೌತ್ ಸೂಪರ್ಸ್ಟಾರ್ ಫಿಟ್ನೆಸ್ ಫ್ರೀಕ್ ಮತ್ತು ಊಟದ ವಿಚಾರವಾಗಿ ಹೆಚ್ಚು ಗಮನ ವಹಿಸುತ್ತಾರೆ. ಆಹಾರದ ಬಗ್ಗೆ ಬಹಳ ಜಾಗೃತರಾಗಿರುತ್ತಾರೆ. ಆರೋಗ್ಯಕರ ಜೀವನ ಶೈಲಿ ಉತ್ತೇಜಿಸುವ ಅವಕಾಶವನ್ನು ಅವರು ಎಂದಿಗೂ ಕಳೆದುಕೊಳ್ಳುವುದಿಲ್ಲ.
ನಟ ಹಂಚಿಕೊಂಡ ಫೋಟೋ ಇಂಟರ್ನೆಟ್ಗೆ ಕಿಚ್ಚು ಹಚ್ಚಿದೆ. ಮನಮೋಹಕ ನೋಟದಿಂದ ಎಲ್ಲರ ಮನಸ್ಸು ಕದ್ದಿದ್ದಾರೆ. ಚಿತ್ರದಲ್ಲಿ ಮಹೇಶ್ ಬಾಬು, ಬೂದು ಬಣ್ಣದ ಜಾಕೆಟ್ನೊಂದಿಗೆ ನೀಲಿ ಬಣ್ಣದ ಟೀ ಶರ್ಟ್ ಅನ್ನು ಧರಿಸಿದ್ದಾರೆ. ನಟ ಸನ್ಗ್ಲಾಸ್ನೊಂದಿಗೆ ತಮ್ಮ ನೋಟವನ್ನು ಪೂರ್ಣಗೊಳಿಸಿದ್ದಾರೆ. ಇದಕ್ಕೂ ಮುನ್ನ ನಟ ಒಂದು ಸೆಲ್ಫಿಯನ್ನು ಪೋಸ್ಟ್ ಮಾಡಿದ್ದರು. ಅದಕ್ಕೆ 'ಶೀಘ್ರದಲ್ಲೇ ಬರಲಿದೆ' ಎಂಬ ಶೀರ್ಷಿಕೆಯನ್ನು ನೀಡಿದ್ದರು. ಇದನ್ನು ನೆಟಿಜನ್ಗಳು ಅವರು ತಮ್ಮ ಮುಂದಿನ ಚಿತ್ರ 'ಗುಂಟೂರು ಖಾರಂ' ಬಗ್ಗೆ ಹೇಳಿರುವುದಾಗಿ ಅರ್ಥೈಸಿಕೊಂಡರು.
ಇದನ್ನೂ ಓದಿ: OMG 2 ಸಾಂಗ್ ರಿಲೀಸ್: ಅಕ್ಷಯ್ ಕುಮಾರ್ ನಟನೆಯ ಮತ್ತೊಂದು ಸಿನಿಮಾ ಯಾವುದು ಗೊತ್ತಾ?
ಇನ್ನೂ ಮಹೇಶ್ ಬಾಬು ಸಿನಿಮಾ ವಿಚಾರವಾಗಿ ಹೇಳುವುದಾದರೆ, ಎರಡು ಬಹುನಿರೀಕ್ಷಿತ ಚಿತ್ರಗಳಲ್ಲಿ ಅವರು ಬ್ಯುಸಿಯಾಗಿದ್ದಾರೆ. ಸದ್ಯ ನಿರ್ದೇಶಕ ತ್ರಿವಿಕ್ರಮ್ ಶ್ರೀನಿವಾಸ್ ಅವರ 'ಗುಂಟೂರು ಖಾರಂ'ನಲ್ಲಿ ನಟಿಸುತ್ತಿದ್ದಾರೆ. ಇದು ಮಹೇಶ್ ಬಾಬು ಅವರು 28ನೇ ಸಿನಿಮಾವಾಗಿದ್ದು, 2024ರ ಜನವರಿ 24 ರಂದು ಬಿಡುಗಡೆಯಾಗಲಿದೆ. ಇದರಲ್ಲಿ ನಾಯಕಿಯಾಗಿ ಕನ್ನಡದ ನಟಿ ಶ್ರೀಲೀಲಾ ನಟಿಸುತ್ತಿದ್ದಾರೆ. ಮೀನಾಕ್ಷಿ ಚೌಧರಿ ಕೂಡ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಅವರು ಗುಂಟೂರು ಖಾರಂ ವೇಳಾಪಟ್ಟಿಯನ್ನು ಪೂರ್ಣಗೊಳಿಸಿದ್ದಾರೆ. ಈ ಆ್ಯಕ್ಷನ್ ಸಿನಿಮಾವನ್ನು ಎಸ್. ರಾಧಾ ಕೃಷ್ಣ ಅವರ ಬ್ಯಾನರ್ ಹಾರಿಕಾ & ಹಸ್ಸಿನ್ ಕ್ರಿಯೇಷನ್ಸ್ ನಿರ್ಮಿಸುತ್ತಿದೆ.
ಇದರ ಹೊರತಾಗಿ ಆರ್ಆರ್ಆರ್ ಖ್ಯಾತಿಯ ಎಸ್ಎಸ್ ರಾಜಮೌಳಿ ಜೊತೆಗೆ ಮಹೇಶ್ ಬಾಬು ಕೈ ಜೋಡಿಸಲಿದ್ದಾರೆ. ಈ ಸಿನಿಮಾಗೆ ತಾತ್ಕಾಲಿಕವಾಗಿ SSMB29 ಎಂದು ಹೆಸರಿಡಲಾಗಿದೆ. ರಾಜಮೌಳಿ ಜೊತೆಗಿನ ಮಹೇಶ್ ಬಾಬು ಅವರ ಈ ಚಿತ್ರವು ಭಾರತೀಯ ಚಿತ್ರರಂಗದ ಇತಿಹಾಸದಲ್ಲಿ ನಿರ್ಮಿಸಲಾದ ಅತ್ಯಂತ ದುಬಾರಿ ಚಿತ್ರ ಎಂದು ಹೇಳಲಾಗುತ್ತಿದೆ. ಜೊತೆಗೆ ಇದೊಂದು ಆ್ಯಕ್ಷನ್ ಅಡ್ವೆಂಚರ್ ಸಿನಿಮಾ ಎನ್ನಲಾಗಿದೆ.
ಇದನ್ನೂ ಓದಿ: 'Guntur Kaaram' ಶೂಟಿಂಗ್ ಪೂರ್ಣಗೊಳಿಸಿದ ಮೀನಾಕ್ಷಿ ಚೌಧರಿ.. ಮಹೇಶ್ ಬಾಬು ಬಗ್ಗೆ ನಟಿ ಹೇಳಿದ್ದೇನು?