ETV Bharat / entertainment

ಪ್ರೀತಿಪಾತ್ರರೊಂದಿಗೆ ಮಹೇಶ್ ಬಾಬು; ಹೊಸ ವರ್ಷಾಚರಣೆಯ ಫೋಟೋಗಳನ್ನು ನೋಡಿ

author img

By ETV Bharat Karnataka Team

Published : Jan 2, 2024, 5:15 PM IST

ನಟ ಮಹೇಶ್​ ಬಾಬು ಕುಟುಂಬಸ್ಥರೊಡನೆ ಇರುವ ಫೋಟೋಗಳು ಇಲ್ಲಿವೆ ನೋಡಿ.

Mahesh Babu family
ಮಹೇಶ್​ ಬಾಬು ಕುಟುಂಬ

ಹೊಸ ವರ್ಷವನ್ನು ಎಲ್ಲರೂ ತಮ್ಮದೇ ಆದ ರೀತಿಯಲ್ಲಿ ಸ್ವಾಗತಿಸಿದ್ದಾರೆ. ಟಾಲಿವುಡ್​ ಸೂಪರ್‌ ಸ್ಟಾರ್ ಮಹೇಶ್ ಬಾಬು ಪತ್ನಿ ನಮ್ರತಾ ಶಿರೋಡ್ಕರ್ 2024ರ ಮೊದಲ ಫೋಟೋಗಳನ್ನು ಸೋಷಿಯಲ್​ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಇಂದು ತಮ್ಮ ಸಾಮಾಜಿಕ ಮಾಧ್ಯಮದಲ್ಲಿ ಹೊಸ ವರ್ಷಕ್ಕೆ ಸಂಬಂಧಿಸಿದಂತೆ ಆಕರ್ಷಕ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಮಹೇಶ್​ ಬಾಬು, ಮಕ್ಕಳಾದ ಗೌತಮ್ ಮತ್ತು ಸಿತಾರಾ, ಹಾಗೇ ಸಂಬಂಧಿಯೋರ್ವರು ಈ ಚಿತ್ರದಲ್ಲಿದ್ದಾರೆ.

ಇನ್‌ಸ್ಟಾಗ್ರಾಮ್‌ನಲ್ಲಿ ಫೋಟೋಗಳನ್ನು ಹಂಚಿಕೊಂಡ ನಮ್ರತಾ ಶಿರೋಡ್ಕರ್, "ಇದೊಂದು ಫ್ಯಾಮಿಲಿ ಡೇಟ್. 2024ರ ಮೊದಲನೆಯದು. ಪ್ರೀತಿ, ಪ್ರೀತಿ, ಹೆಚ್ಚು ಪ್ರೀತಿ. ಪ್ರೀತಿ, ಧನ್ಯತಾಭಾವದೊಂದಿಗೆ ಈ ವರ್ಷವನ್ನು ಆರಂಭಿಸುತ್ತಿದ್ದೇವೆ ಎಂದು ಬರೆದುಕೊಂಡಿದ್ದಾರೆ. ಸೂಪರ್​ ಸ್ಟಾರ್​ನ ಫ್ಯಾಮಿಲಿ ಫೋಟೋಗೆ ಬಹಳ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಫೋಟೋವೊಂದರಲ್ಲಿ ಮಕ್ಕಳೊಂದಿಗೆ ಮಹೇಶ್​ ಬಾಬು ಕಾಣಿಸಿಕೊಂಡಿದ್ದಾರೆ. ಎರಡನೇ ಚಿತ್ರದಲ್ಲಿ ನಮ್ರತಾ ಶಿರೋಡ್ಕರ್, ಮಕ್ಕಳೊಂದಿಗೆ ಕಾಣಿಸಿಕೊಂಡಿದ್ದಾರೆ. ಮೂರನೇ ಚಿತ್ರದಲ್ಲಿ ಸಿತಾರಾ, ಗೌತಮ್ ಮತ್ತು ಅವರ ಸೋದರಸಂಬಂಧಿ ಇದ್ದಾರೆ. ಇದಕ್ಕೂ ಮುನ್ನ ನ್ಯೂ ಇಯರ್​ ಸೆಲೆಬ್ರೇಶನ್​ ಫೋಟೋಗಳನ್ನು ಹಂಚಿಕೊಂಡಿದ್ದಾರೆ ನಮ್ರತಾ ಶಿರೋಡ್ಕರ್.

ನಟ ಮಹೇಶ್ ಬಾಬು ಅವರು ಪತ್ನಿ ನಮ್ರತಾ ಜೊತೆಗಿರುವ ಮುದ್ದಾದ ಫೋಟೋ ಶೇರ್ ಮಾಡಿ, ಅಭಿಮಾನಿಗಳಿಗೆ ಹೊಸ ವರ್ಷದ ಶುಭಾಶಯ ಕೋರಿದ್ದಾರೆ. ಇನ್​ಸ್ಟಾಗ್ರಾಮ್​ ಪೋಸ್ಟ್ ಕ್ಯಾಪ್ಷನ್​ನಲ್ಲಿ, ''ನಗು, ಪ್ರೀತಿ, ಸಾಹಸ, ಬೆಳವಣಿಗೆ. ಹ್ಯಾಪಿ ನ್ಯೂ ಇಯರ್, 2024" ಎಂದು ಬರೆದುಕೊಂಡಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿರುವ ನಮ್ರತಾ "ಲವ್ ಯು ಟೂ, ಫಾರೆವರ್" ಎಂದು ತಿಳಿಸಿದ್ದಾರೆ.

ಇದನ್ನೂ ಓದಿ: ನಾಳೆ ಅಮೀರ್​ ಖಾನ್​ ಮಗಳ ಮದುವೆ: ಇರಾ-ನೂಪುರ್ ನಿವಾಸಕ್ಕೆ ವಿಶೇಷ ದೀಪಾಲಂಕಾರ

ಇನ್ನು ನಟ ಮಹೇಶ್ ಬಾಬು ಅವರ ಮುಂದಿನ ಬಹುನಿರೀಕ್ಷಿತ ಸಿನಿಮಾ 'ಗುಂಟೂರು ಖಾರಂ'. ತ್ರಿವಿಕ್ರಮ್ ಶ್ರೀನಿವಾಸ್ ಆ್ಯಕ್ಷನ್​ ಕಟ್​ ಹೇಳಿರುವ ಈ ಸಿನಿಮಾ ಇದೇ ಜನವರಿ 12 ರಂದು ಬಿಡುಗಡೆಯಾಗಲಿದೆ. ಶ್ರೀಲೀಲಾ, ಮೀನಾಕ್ಷಿ ಚೌಧರಿ ಮಹತ್ವದ ಪಾತ್ರ ನಿರ್ವಹಿಸಿದ್ದು, ಸಂಕ್ರಾಂತಿ ಸಂದರ್ಭ ಅದ್ಧೂರಿಯಾಗಿ ತೆರೆಕಾಣಲಿದೆ. ಶ್ರೀಲೀಲಾ ಮತ್ತು ಮಹೇಶ್​ ಬಾಬು ಜೋಡಿಯ ಚೊಚ್ಚಲ ಚಿತ್ರ ಇದಾಗಿದ್ದು, ಈಗಾಗಲೇ ಮೂರು ಹಾಡುಗಳು ಅನಾವರಣಗೊಂಡಿವೆ.

ಇದನ್ನೂ ಓದಿ: 'ಲಿಯೋ' ಮೀರಿಸಿದ 'ಸಲಾರ್'​; ಜೈಲರ್, ಬಾಹುಬಲಿ ದಾಖಲೆ ಮುರಿಯಲು ಸಜ್ಜು

ಗುಂಟೂರು ಖಾರಂ, ಸೈಂಧವ್​, ಈಗಲ್, ನಾ ಸಾಮಿ ರಂಗ, ಹನುಮಾನ್, ಕ್ಯಾಪ್ಟನ್ ಮಿಲ್ಲರ್ ಸೇರಿದಂತೆ ಕೆಲ ಚಿತ್ರಗಳು ಈ ತಿಂಗಳಲ್ಲಿ ಬಾಕ್ಸ್ ಆಫೀಸ್​ ಪೈಪೋಟಿ ನಡೆಸಲಿದೆ. ಮುಂಬರುವ ತಿಂಗಳುಗಳಲ್ಲಿ ಆರ್​ಆರ್​ಆರ್​ ಖ್ಯಾತಿಯ ನಿರ್ದೇಶಕ ಎಸ್.ಎಸ್ ರಾಜಮೌಳಿ ಅವರೊಂದಿಗೆ ಮಹೇಶ್​ ಬಾಬು ತಮ್ಮ ಮುಂದಿನ ಬಹುನಿರೀಕ್ಷಿತ ಸಿನಿಮಾದ ಶೂಟಿಂಗ್​ ಆರಂಭಿಸಲಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.