ಸೌತ್ ಸೂಪರ್ಸ್ಟಾರ್ ಮಹೇಶ್ ಬಾಬು ಮತ್ತು ನಟಿ ನಮ್ರತಾ ಶಿರೋಡ್ಕರ್ ದಂಪತಿಗೆ ಇಂದು (ಫೆಬ್ರವರಿ 10, 2023) ವಿವಾಹ ವಾರ್ಷಿಕೋತ್ಸವದ ಸಂಭ್ರಮ. ತಮ್ಮ 18ನೇ ವಿವಾಹ ವಾರ್ಷಿಕೋತ್ಸವ ಆಚರಿಕೊಳ್ಳುತ್ತಿರುವ ಈ ದಂಪತಿಗೆ ಕುಟುಂಬಸ್ಥರು, ಆತ್ಮೀಯರು, ಚಿತ್ರರಂಗದವರು ಸೇರಿದಂತೆ ಅಭಿಮಾನಿಗಳು ವಿಶೇಷವಾಗಿ ಶುಭ ಕೋರುತ್ತಿದ್ದಾರೆ. ಈ ವಿಶೇಷ ದಿನದಂದು ಪರಸ್ಪರ ಶುಭ ಕೋರಲು, ಮಹೇಶ್ ಬಾಬು ಮತ್ತು ನಮ್ರತಾ ಶಿರೋಡ್ಕರ್ ತಮ್ಮ ಹಳೇ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಆ ಸುಂದರ ಚಿತ್ರಗಳಿಗೆ ಅಭಿಮಾನಿಗಳು ಭಾರೀ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
![Mahesh Babu Namrata Shirodkar](https://etvbharatimages.akamaized.net/etvbharat/prod-images/17716339_zxdfes.jpg)
ಮಹೇಶ್ ಬಾಬು ಇನ್ಸ್ಟಾ ಪೋಸ್ಟ್: ಪತ್ನಿ ನಮ್ರತಾ ಶಿರೋಡ್ಕರ್ ಅವರ ಜೊತೆಗಿನ ಫೋಟೋ ಹಂಚಿಕೊಂಡ ನಟ ಮಹೇಶ್ ಬಾಬು ಅವರು, ''ನಾವು - ಕೊಂಚ ಹುಡುಗಾಟ ಮತ್ತು ಸಂಪೂರ್ಣ ಪ್ರಿತಿ!, 18 ವರ್ಷಗಳು ಒಟ್ಟಿಗೆ ಮತ್ತು ಎಂದೆಂದಿಗೂ, ಎನ್ಎಸ್ಜಿ ವಾರ್ಷಿಕೋತ್ಸವದ ಶುಭಾಶಯಗಳು'' ಎಂದು ಬರೆದುಕೊಂಡಿದ್ದಾರೆ. ನಟ ಮಹೇಶ್ ಬಾಬು ಈ ಪೋಸ್ಟ್ ಅನ್ನು ಹಂಚಿಕೊಳ್ಳುತ್ತಿದ್ದಂತೆ, ಪತ್ನಿ ನಮ್ರತಾ ಶಿರೋಡ್ಕರ್ ಕೂಡ ತಮ್ಮ ಪ್ರೀತಿ ವ್ಯಕ್ತಪಡಿಸಿದ್ದಾರೆ, ಐ ಲವ್ ಯೂ ಟೂ ಎಂದು ಕಾಮೆಂಟ್ ಮಾಡಿದ್ದಾರೆ.
![Mahesh Babu Namrata Shirodkar](https://etvbharatimages.akamaized.net/etvbharat/prod-images/17716339_sbndfawegh.jpg)
ನಮ್ರತಾ ಶಿರೋಡ್ಕರ್ ಇನ್ಸ್ಟಾ ಪೋಸ್ಟ್: ಮತ್ತೊಂದೆಡೆ ನಮ್ರತಾ ಶಿರೋಡ್ಕರ್ ಕೂಡ ಸೋಶಿಯಲ್ ಮಿಡಿಯಾದಲ್ಲಿ ಒಂದು ಸುಂದರ ಫೋಟೋ ಹಂಚಿಕೊಂಡಿದ್ದಾರೆ. ಕ್ಯಾಮರಾದಲ್ಲಿ ಸೆರೆಹಿಡಿದ ಅಪರೂಪದ ರೊಮ್ಯಾಂಟಿಕ್ ಚಿತ್ರವನ್ನು ಹಂಚಿಕೊಂಡಿದ್ದಾರೆ. "ನಾವು ತೆಗೆದುಕೊಂಡ ಅತ್ಯುತ್ತಮ ನಿರ್ಧಾರದ 18 ವರ್ಷಗಳ ಸಂಭ್ರಮಾಚರಣೆ, ವಿವಾಹ ವಾರ್ಷಿಕೋತ್ಸವದ ಶುಭಾಶಯಗಳು ಎಂಬಿ'' ಎಂದು ಬರೆದುಕೊಂಡಿದ್ದಾರೆ.
- " class="align-text-top noRightClick twitterSection" data="
">
- " class="align-text-top noRightClick twitterSection" data="
">
ಇದನ್ನೂ ಓದಿ: ತೆಲುಗಿನ 'ವೇದ' ರಿಲೀಸ್: ಶಿವಣ್ಣನ ಮುಂದಿನ ಸಿನಿಮಾ ಯಾವುದು? ಭಕ್ತಿ ಪ್ರಧಾನ ಚಿತ್ರದತ್ತ ಹ್ಯಾಟ್ರಿಕ್ ಹೀರೋ ಚಿತ್ತ
ಮಹೇಶ್ ಬಾಬು ನಮ್ರತಾ ಶಿರೋಡ್ಕರ್ ಮದುವೆ: ನಮ್ರತಾ ಶಿರೋಡ್ಕರ್ ಮತ್ತು ಮಹೇಶ್ ಬಾಬು 2000ರಲ್ಲಿ ತಮ್ಮ ವಂಶಿ ಚಿತ್ರದ ಮುಹೂರ್ತದಲ್ಲಿ ಮೊದಲ ಬಾರಿಗೆ ಪರಸ್ಪರ ಭೇಟಿ ಆದರು. ಕೆಲ ಸಮಯದವರೆಗೆ ಪರಸ್ಪರ ಡೇಟಿಂಗ್ ಮಾಡಿದ ನಂತರ ಇಬ್ಬರೂ 2005ರಲ್ಲಿ ದಾಂಪತ್ಯ ಜೀವನ ಆರಂಭಿಸಿದರು. ಈ ಸ್ಟಾರ್ ದಂಪತಿಗೆ ಇಬ್ಬರು ಮಕ್ಕಳಿದ್ದಾರೆ. ಮಗ ಗೌತಮ್ ಘಟ್ಟಮನೇನಿ ಮತ್ತು ಮಗಳು ಸಿತಾರಾ ಘಟ್ಟಮನೇನಿ.
- " class="align-text-top noRightClick twitterSection" data="
">
ಇದನ್ನೂ ಓದಿ: ಶಾರುಖ್ ಅಭಿಮಾನಿಗಳಿಗೆ ಪ್ರೇಮಿಗಳ ದಿನಕ್ಕೆ ಭರ್ಜರಿ ಗಿಫ್ಟ್; ಮರು ಬಿಡುಗಡೆಗೆ ಸಜ್ಜಾಗಿದೆ ಡಿಡಿಎಲ್ಜೆ
ಪತ್ನಿ ನಮ್ರತಾ ಶಿರೋಡ್ಕರ್ ತಮ್ಮ ಶಕ್ತಿಯ ಆಧಾರ ಸ್ತಂಭ ಎಂದು ನಟ ಮಹೇಶ್ ಬಾಬು ಈವರೆಗೂ ಸಮರ್ಥಿಸಿಕೊಳ್ಳುತ್ತಾ ಬಂದಿದ್ದಾರೆ. ತಾನು ವೃತ್ತಿಜೀವನದತ್ತ ಗಮನ ಹರಿಸಲು ಪತ್ನಿ ನಮ್ರತಾ ಇತರೆ ಎಲ್ಲಾ ವಿಷಯಗಳನ್ನು ನೋಡಿಕೊಳ್ಳುತ್ತಾರೆ ಎಂದು ಹಲವು ಬಾರಿ ಹೇಳಿಕೊಂಡಿದ್ದಾರೆ ಮಹೇಶ್ ಬಾಬು.
- " class="align-text-top noRightClick twitterSection" data="
">
ಇದನ್ನೂ ಓದಿ: ಶ್ರೀನಗರದಲ್ಲಿ ದಶಕದ ನಂತರ ಥಿಯೇಟರ್‌ಗಳು ಭರ್ತಿ ಎಂದ ಮೋದಿ: ಶಾರುಖ್ ಅಭಿಮಾನಿಗಳು ಖುಷ್!
ಅಮೋಘ ಅಭಿನಯದ ಮೂಲಕ ನಟ ಮಹೇಶ್ ಬಾಬು ಹೆಚ್ಚಿನ ಸಂಖ್ಯೆ ಅಭಿಮಾನಿಗಳನ್ನು ಸಂಪಾದಿಸಿದ್ದಾರೆ. ಸದ್ಯ ತ್ರಿವಿಕ್ರಮ್ ನಿರ್ದೇಶನದ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ನಂತರ ಎಸ್ಎಸ್ ರಾಜಮೌಳಿ ನಿರ್ದೇಶನದ ಆ್ಯಕ್ಷನ್ ಮತ್ತು ಅಡ್ವೆಂಚರ್ ಕಥೆಯಲ್ಲಿ ಅಭಿನಯ ಮಾಡಲಿದ್ದಾರೆ. ಆಫ್ರಿಕನ್ ಕಾಡುಗಳಲ್ಲಿ ನಡೆಯುವ ಈ ಚಿತ್ರದ ಕಥೆಯನ್ನು ಸ್ಟಾರ್ ಡೈರೆಕ್ಟರ್ ರಾಜಮೌಳಿ ಅವರ ತಂದೆ ವಿಜಯೇಂದ್ರ ಪ್ರಸಾದ್ ಸಿದ್ಧಪಡಿಸಿದ್ದಾರೆ.