ETV Bharat / entertainment

ನ್ಯೂಯಾರ್ಕ್​ನ ಟೈಮ್​ ಸ್ಕ್ವೇರ್​ನಲ್ಲಿ ಮಿಂಚಿದ ಮಹೇಶ್​ ಬಾಬು ಪುತ್ರಿ.. ಸಿತಾರಾಗೆ ಪ್ರಶಂಸೆಯ ಸುರಿಮಳೆ - ಸಿತಾರಾ

ನಟ ಮಹೇಶ್​ ಬಾಬು ಪುತ್ರಿ ಸಿತಾರಾ ಘಟ್ಟಮನೇನಿ ಖ್ಯಾತ ಆಭರಣ ಕಂಪನಿಯೊಂದರ ಬ್ರಾಂಡ್ ಅಂಬಾಸಿಡರ್ ಆಗಿದ್ದಾರೆ. ಇವರ ಫೋಟೋ ನ್ಯೂಯಾರ್ಕ್​ ಸಿಟಿಯಲ್ಲಿರುವ ಟೈಮ್​ ಸ್ಕ್ವೇರ್​ನಲ್ಲಿ ಪ್ರದರ್ಶನಗೊಂಡಿದೆ.

Mahesh Babu
ಮಹೇಶ್​ ಬಾಬು ಪುತ್ರಿ
author img

By

Published : Jul 4, 2023, 5:04 PM IST

ಟಾಲಿವುಡ್​ ಸೂಪರ್ ಸ್ಟಾರ್ ಮಹೇಶ್ ಬಾಬು ಪುತ್ರಿ ಸಿತಾರಾ ಘಟ್ಟಮನೇನಿ ಬಾಲ್ಯದಿಂದಲೂ ಬಹುಮುಖ ಪ್ರತಿಭೆಯನ್ನು ತೋರಿಸುತ್ತಾ ಬರುತ್ತಿದ್ದಾರೆ. ಅನೇಕ ಯೂಟ್ಯೂಬ್ ಸಂದರ್ಶನಗಳು ಮತ್ತು ವಿಡಿಯೋಗಳಿಂದ ಜನಪ್ರಿಯವಾಗಿರುವ ಸಿತಾರಾ ಈಗಾಗಲೇ ಇನ್​ಸ್ಟಾಗ್ರಾಮ್​ನಲ್ಲಿ ಮಿಲಿಯನ್‌ಗಿಂತಲೂ ಹೆಚ್ಚು ಅನುಯಾಯಿಗಳನ್ನು ಗಳಿಸಿದ್ದಾರೆ. ಜೊತೆಗೆ ತಂದೆ ತಾಯಿಯಂತೆ ಅಂದ ಚೆಂದ ಮೈಗೂಡಿಸಿಕೊಂಡಿದ್ದಾರೆ. ಪ್ರತಿಭೆ ಎಂಬುದು ಇವರಿಗೆ ರಕ್ತಗತವಾಗಿಯೇ ಬಂದಿದೆ ಅಂತಲೇ ಹೇಳಬಹುದು.

ಇತ್ತೀಚೆಗಷ್ಟೇ ಖ್ಯಾತ ಆಭರಣ ಕಂಪನಿಯೊಂದರ ಬ್ರಾಂಡ್ ಅಂಬಾಸಿಡರ್ ಆಗಿ ಸಹಿ ಮಾಡಿರುವ ಸಿತಾರಾ ಇದೀಗ ಟ್ರೆಂಡಿಂಗ್​ ಆಗಿದ್ದಾರೆ. ಇವರ ಫೋಟೋ ನ್ಯೂಯಾರ್ಕ್​ ಸಿಟಿಯಲ್ಲಿರುವ ಟೈಮ್​ ಸ್ಕ್ವೇರ್​ನಲ್ಲಿ ಪ್ರದರ್ಶನಗೊಂಡಿದೆ. ಈ ಫೋಟೋ ಸದ್ಯ ವೈರಲ್​ ಆಗುತ್ತಿದೆ. ಮಹೇಶ್​ ಬಾಬು ಅವರು ಈ ಫೋಟೋವನ್ನು ತಮ್ಮ ಇನ್​ಸ್ಟಾ ಖಾತೆಯಲ್ಲಿ ಪೋಸ್ಟ್​ ಮಾಡಿ ಮಗಳಿಗೆ ಹೊಗಳಿಕೆಯ ಸುರಿಮಳೆ ಹರಿಸಿದ್ದಾರೆ.

"ಟೈಮ್ಸ್ ಸ್ಕ್ವೇರ್ ಅನ್ನು ಬೆಳಗಿಸಲಾಗುತ್ತಿದೆ!! ನನ್ನ ಪಟಾಕಿ, ನಿನ್ನನ್ನು ನೋಡಿ ನನಗೆ ಹೆಮ್ಮೆಯಾಗುತ್ತಿದೆ. ಹೀಗೆಯೇ ಹೊಳೆಯುವುದನ್ನು ಮುಂದುವರೆಸು" ಎಂದು ಕ್ಯಾಪ್ಶನ್​ ನೀಡಿದ್ದಾರೆ. ಮಹೇಶ್ ಪತ್ನಿ ನಮ್ರತಾ ಕೂಡ ಇದೇ ಚಿತ್ರ ಮತ್ತು ವಿಡಿಯೋವನ್ನು ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡು, ಮಗಳಿಗೆ ಪ್ರೀತಿಯ ಅಪ್ಪುಗೆ ನೀಡಿದ್ದಾರೆ.

ಇದನ್ನೂ ಓದಿ: ನಟ​ ಪವನ್​ ಕಲ್ಯಾಣ್​ ಇನ್​ಸ್ಟಾಗೆ ಎಂಟ್ರಿ.. ಕೆಲವೇ ಗಂಟೆಗಳಲ್ಲಿ 9 ಲಕ್ಷಕ್ಕೂ ಅಧಿಕ ಪಾಲೋವರ್ಸ್​!

"ಟೈಮ್ಸ್ ಸ್ಕ್ವೇರ್‌ನಲ್ಲಿ ಯಾರು ಪದಾರ್ಪಣೆ ಮಾಡಿದ್ದಾರೆ ಎಂದು ನೋಡಿ. ನಾನು ನಿನ್ನ ಬಗ್ಗೆ ಎಷ್ಟು ಸಂತೋಷ ಮತ್ತು ಹೆಮ್ಮೆಪಡುತ್ತೇನೆ ಎಂದು ಪದಗಳಲ್ಲಿ ಹೇಳಲು ಸಾಧ್ಯವಿಲ್ಲ. ಅವಳ ಕನಸುಗಳು ನನಸಾಗುವುದನ್ನು ನೋಡುವುದು ಅತ್ಯಂತ ನಂಬಲಾಗದ ಭಾವನೆ. ಯಾವಾಗಲೂ ಹೊಳೆಯುತ್ತಿರು ನನ್ನ ಸೂಪರ್​ ಸ್ಟಾರ್​" ಎಂದಿದ್ದಾರೆ.

ಮತ್ತೊಂದೆಡೆ ಸಿತಾರಾ ಮತ್ತು ಮಹೇಶ್​ ಬಾಬು ಅಭಿಮಾನಿಗಳು ಕಮೆಂಟ್​ ಮಾಡುತ್ತಿದ್ದಾರೆ. ಈ ಒಂದೇ ಒಂದು ಜಾಹೀರಾತಿನ ಮೂಲಕ ಸಿತಾರಾ ಎಲ್ಲೋ ಹೋಗಿ ಅಪ್ಪನನ್ನೂ ಮೀರಿಸಿದ್ದಾರೆ ಎಂಬ ಪ್ರತಿಕ್ರಿಯಿಸುತ್ತಿದ್ದಾರೆ. ಫೋಟೋ ಮತ್ತು ವಿಡಿಯೋದಲ್ಲಿ ಸಿತಾರಾ ಮೈ ತುಂಬಾ ಆಭರಣ ಧರಿಸಿ, ಆಕರ್ಷಕವಾಗಿ ಕಂಡಿದ್ದಾರೆ.

ಇಲ್ಲೊಂದು ವಿಶೇಷತೆ ಇದೆ. ಖ್ಯಾತ ಆಭರಣ ಕಂಪನಿಯವರು 'ಸಿತಾರಾ ಕಲೆಕ್ಷನ್'​ ಎಂದೇ ಹೆಸರಿಟ್ಟು ಪ್ರಚಾರ ಮಾಡುತ್ತಿದ್ದಾರೆ. ನ್ಯೂಯಾರ್ಕ್​ನ ಟೈಮ್​ ಸ್ಕ್ವೇರ್​ನಲ್ಲಿ ಮಹೇಶ್​ ಪುತ್ರಿಯ ಫೋಟೋ ರಾರಾಜಿಸಿದೆ. ಈ ಒಂದು ಬ್ರ್ಯಾಂಡ್​ ಜಾಹೀರಾತಿಗಾಗಿ ಕಂಪನಿಯಿಂದ ಸಿತಾರಾ ಭಾರಿ ಸಂಭಾವನೆ ಪಡೆಯುತ್ತಿದ್ದಾರೆ ಎನ್ನಲಾಗಿದೆ. ಸಣ್ಣ ವಯಸ್ಸಿನಲ್ಲಿ ಸಾಕಷ್ಟು ಸಾಧನೆ ಮಾಡಿದ ಸಿತಾರಾಗೆ ಎಲ್ಲೆಡೆ ಪ್ರಶಂಸೆ ವ್ಯಕ್ತವಾಗುತ್ತಿದೆ.

ಸಿತಾರಾಗೆ ಮುಂದೆ ನಾಯಕಿಯಾಗುವ ಅವಕಾಶಗಳು ಸಾಕಷ್ಟಿವೆ. ಈಗಿನಿಂದಲೇ ಆ ನಿಟ್ಟಿನಲ್ಲಿ ತರಬೇತಿಯನ್ನು ತೆಗೆದುಕೊಳ್ಳಲಾಗುತ್ತಿದೆಯಂತೆ. ಇದಲ್ಲದೇ, ಸಿತಾರಾ ಅವರ ತಂದೆ ಮಹೇಶ್ ಬಾಬು ಅಭಿನಯದ 'ಸರ್ಕಾರಿವಾರಿ ಪಟ' ಚಿತ್ರದ ಪೆನ್ನಿ ಹಾಡಿನ ಪ್ರೋಮೋದಲ್ಲಿ ಕಾಣಿಸಿಕೊಂಡಿದ್ದರು. ತನ್ನ ತಂದೆಯೊಂದಿಗೆ ನೃತ್ಯ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ್ದ ಸಿತಾರಾ ತನ್ನ ಸ್ವಾಭಾವಿಕತೆಯಿಂದ ಪ್ರಭಾವಿತರಾಗಿದ್ದಾರೆ.

ಇದನ್ನೂ ಓದಿ: ರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿ ಟ್ರೇಲರ್​​: ತೆರೆ ಮೇಲಿನ ರಣ್​​ವೀರ್-ಆಲಿಯಾ ಪ್ರೇಮಕಥೆ ವೀಕ್ಷಿಸಲು ಅಭಿಮಾನಿಗಳ ಕುತೂಹಲ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.