ಬಾಲಿವುಡ್ ಸ್ಟಾರ್ ಜೋಡಿಗಳಾದ ಆಲಿಯಾ ಭಟ್ ಹಾಗೂ ರಣ್ಬೀರ್ ಕಪೂರ್ ಭಾನುವಾರ(ನಿನ್ನೆ) ಹೆಣ್ಣು ಮಗುವಿಗೆ ತಂದೆ ತಾಯಿಯಾಗಿದ್ದಾರೆ. ಈ ಸಿಹಿ ಸುದ್ದಿಯನ್ನು ಆಲಿಯಾ ಭಟ್ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳುತ್ತಿದ್ದಂತೆ, ಟಾಲಿವುಡ್ ಸ್ಟಾರ್ ಮಹೇಶ್ ಬಾಬು ಕೂಡಾ ಅಭಿನಂದನೆ ತಿಳಿಸಿದ್ದಾರೆ.
ಆಲಿಯಾ ಭಟ್ ಹಾಕಿರುವ ಪೋಸ್ಟ್ ರಿ ಶೇರ್ ಮಾಡಿರುವ ಮಹೇಶ್ ಬಾಬು, "ಹೆಣ್ಣು ಮಕ್ಕಳು ನಿಜಕ್ಕೂ ವಿಶೇಷ. ಆಲಿಯಾ ಭಟ್ ಹಾಗೂ ರಣ್ಬೀರ್ಗೆ ಅಭಿನಂದನೆಗಳು" ಎಂದಿದ್ದಾರೆ.
"ನಮ್ಮ ಜೀವನದ ಅತ್ಯುತ್ತಮ ಸುದ್ದಿ ಇದು. ಎಂತಹ ಮ್ಯಾಜಿಕಲ್ ಹುಡುಗಿ. ನಾವು ಪೋಷಕರಾಗಿದ್ದೇವೆ. ಪ್ರೀತಿ ತುಂಬಿ ತುಳುಕುತ್ತಿದೆ" ಎಂದು ಆಲಿಯಾ ಭಟ್ ಸೋಶಿಯಲ್ ಮೀಡಿಯಾ ಪೋಸ್ಟ್ನಲ್ಲಿ ನಿನ್ನೆ ಖುಷಿ ಹಂಚಿಕೊಂಡಿದ್ದರು.
ಇದನ್ನೂ ಓದಿ: ಹೆಣ್ಣು ಮಗುವಿಗೆ ಜನ್ಮ ನೀಡಿದ ಆಲಿಯಾ ಭಟ್: ರಾಲಿಯಾ ಕುಟುಂಬದಲ್ಲಿ ಸಂತಸ