ETV Bharat / entertainment

ನವರಾತ್ರಿಗಾಗಿ 'ಗರ್ಬಾ' ಹಾಡು ಬರೆದ ಪ್ರಧಾನಿ ಮೋದಿ: ನೀವೂ ಕೇಳಿ - ಈಟಿವಿ ಭಾರತ ಕನ್ನಡ

Maadi Song Out: ನವರಾತ್ರಿ ಸಲುವಾಗಿ ಪ್ರಧಾನಿ ನರೇಂದ್ರ ಮೋದಿಯವರು ಬರೆದ 'ಗರ್ಬಾ' ಹಾಡನ್ನು ಇಂದು ಬಿಡುಗಡೆಗೊಳಿಸಲಾಗಿದೆ.

Maadi Song Out PM Narendra Modi unveils new Garba song written by him, Watch Video
Maadi Song Out: ನವರಾತ್ರಿಗಾಗಿ 'ಗಾರ್ಬೋ' ಹಾಡು ಬರೆದ ಪ್ರಧಾನಿ ಮೋದಿ
author img

By ETV Bharat Karnataka Team

Published : Oct 15, 2023, 8:03 PM IST

ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ಬರವಣಿಗೆ ಮೇಲಿನ ಆಸಕ್ತಿಯನ್ನು ನವರಾತ್ರಿಗೆ ಹಾಡೊಂದನ್ನು ರಚಿಸುವ ಮೂಲಕ ಪ್ರದರ್ಶಿಸಿದ್ದಾರೆ. ನವರಾತ್ರಿಗಾಗಿ ಮೋದಿ ರಚನೆಯ 'ಗರ್ಬಾ' ಹಾಡನ್ನು ಬಿಡುಗಡೆ ಮಾಡಲಾಗಿದೆ. ಅವರದ್ದೇ ಯೂಟ್ಯೂಬ್​ ಚಾನೆಲ್​ನಲ್ಲಿ ಈ ಹಾಡನ್ನು ಹಂಚಿಕೊಳ್ಳಲಾಗಿದೆ. ಇದೀಗ ಹಾಡಿನ ಲಿಂಕ್​ ಅನ್ನು ಪ್ರಧಾನಿ ಮೋದಿಯವರು ತಮ್ಮ ಎಕ್ಸ್​ ಖಾತೆಯಲ್ಲಿ ಶೇರ್​ ಮಾಡಿ, ಭಾರತೀಯರಿಗೆ ನವರಾತ್ರಿಯ ಶುಭಾಶಯಗಳನ್ನು ಕೋರಿದ್ದಾರೆ.

  • " class="align-text-top noRightClick twitterSection" data="">

ಮೋದಿ ಎಕ್ಸ್​ ಪೋಸ್ಟ್​: ಇಂದಿನಿಂದ ನವರಾತ್ರಿ ಪ್ರಾರಂಭಗೊಂಡಿದ್ದು, ಭಾರತೀಯರಿಗೆ ಶುಭಕೋರಿ ಪ್ರಧಾನಿ ತಾವು ಬರೆದ 'ಗರ್ಬಾ' ಹಾಡನ್ನು ಹಂಚಿಕೊಂಡಿದ್ದಾರೆ. "ಮಂಗಳಕರವಾದ ನವರಾತ್ರಿಯು ಆಗಮಿಸುತ್ತಿದ್ದಂತೆ, ಕಳೆದ ವಾರ ನಾನು ಬರೆದ ಗಾರ್ಬಾವನ್ನು ಹಂಚಿಕೊಳ್ಳಲು ನನಗೆ ಸಂತೋಷವಾಗಿದೆ. ಈ ಹಬ್ಬದ ಟ್ಯೂನ್​ ಎಲ್ಲರನ್ನೂ ಆಕರ್ಷಿಸಲಿ. ಈ ಹಾಡಿಗೆ ಧ್ವನಿ ಮತ್ತು ಸಂಗೀತ ನೀಡಿರುವ ಮೀಟ್​ ಬ್ರದರ್ಸ್​, ದಿವ್ಯಾ ಕುಮಾರ್​ ಅವರಿಗೆ ನಾನು ಧನ್ಯವಾದಗಳು" ಎಂದು ಎಕ್ಸ್​ನಲ್ಲಿ ಬರೆದುಕೊಂಡಿದ್ದಾರೆ.

  • As the auspicious Navratri dawns upon us, I am delighted to share a Garba penned by me during the past week. Let the festive rhythms embrace everyone!

    I thank @MeetBros, Divya Kumar for giving voice and music to this Garba.https://t.co/WqnlUFJTXm

    — Narendra Modi (@narendramodi) October 15, 2023 " class="align-text-top noRightClick twitterSection" data=" ">

ಈ ಹಾಡಿನಲ್ಲಿ ವಿಶೇಷವಾಗಿ ಗುಜರಾತ್​ನ ಸಾಂಸ್ಕೃತಿಕ ವೈಭವವನ್ನು ಬಿಂಬಿಸಲಾಗಿದೆ. ಎಕ್ಸ್​ನಲ್ಲಿ ಸಮಸ್ತ ಜನರಿಗೆ ನವರಾತ್ರಿಯ ಶುಭಾಶಯಗಳನ್ನು ಕೋರಿರುವ ಮೋದಿ, ಶಕ್ತಿ ಪ್ರದಾಯಿನಿ ಮಾ ದುರ್ಗಾ ಪ್ರತಿಯೊಬ್ಬರ ಜೀವನದಲ್ಲಿ ಸಂತೋಷ, ಸಮೃದ್ಧಿ, ಅದೃಷ್ಟ ಮತ್ತು ಉತ್ತಮ ಆರೋಗ್ಯವನ್ನು ಕರುಣಿಸಲಿ ಎಂದು ಹಾರೈಸಿದ್ದಾರೆ. ಈ 'ಗರ್ಬಾ' ಹಾಡಿಗೆ ದಿವ್ಯಾ ಕುಮಾರ್​ ಧ್ವನಿಯಾಗಿದ್ದಾರೆ. ಮೀಟ್ ಬ್ರದಸ್​ನ ಮನ್ಮೀತ್​ ಸಿಂಗ್​ ಮತ್ತು ಹರ್ಮೀತ್​ ಸಿಂಗ್​​ ಸಂಗೀತ ಸಂಯೋಜಿಸಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಸಾಹಿತ್ಯ ಬರೆದಿದ್ದಾರೆ.

ಇದನ್ನೂ ಓದಿ: 'ದಿ ವ್ಯಾಕ್ಸಿನ್​ ವಾರ್​' ಸಿನಿಮಾದಲ್ಲಿ ದೇಶದ ವೈಜ್ಞಾನಿಕ ಶಕ್ತಿಯ ಅನಾವರಣ: ಪ್ರಧಾನಿ ಮೋದಿ

ಅವರು ಗೀತೆ ರಚಿಸುವುದು ಇದೇ ಮೊದಲೇನಲ್ಲ. ಇದಕ್ಕೂ ಮುನ್ನ ಬರೆದಿದ್ದ 'ಗರ್ಬಾ' ಹಾಡಿಗೆ ಹೊಸ ರೂಪವನ್ನು ಕೊಟ್ಟು ನಿನ್ನೆಯಷ್ಟೇ ಆ ಹಾಡನ್ನು ಬಿಡುಗಡೆ ಮಾಡಲಾಗಿತ್ತು. ಈ ಹಾಡಿಗೆ ಗಾಯಕಿ ಧ್ವನಿ ಭಾನುಶಾಲಿ ಕಂಠ ನೀಡಿದ್ದಾರೆ. ತನಿಷ್ಕ್​ ಬಾಗ್ಚಿ ಸಂಗೀತ ಸಂಯೋಜಿಸಿದ್ದಾರೆ. ಬಾಲಿವುಡ್​ ನಟ ಹಾಗೂ ನಿರ್ಮಾಪಕ ಜಾಕಿ ಭಗ್ನಾನಿ ಹಾಡನ್ನು ನಿರ್ಮಾಣ ಮಾಡಿದ್ದಾರೆ. ಭಾನುಶಾಲಿ ಧ್ವನಿಯಾಗುವುದರ ಜೊತೆಗೆ ವಿಡಿಯೋದಲ್ಲಿ ನಟಿಸಿದ್ದಾರೆ.

  • Thank you @dhvanivinod, Tanishk Bagchi and the team of @Jjust_Music for this lovely rendition of a Garba I had penned years ago! It does bring back many memories. I have not written for many years now but I did manage to write a new Garba over the last few days, which I will… https://t.co/WAALGzAfnc

    — Narendra Modi (@narendramodi) October 14, 2023 " class="align-text-top noRightClick twitterSection" data=" ">

ಧ್ವನಿ ಭಾನುಶಾಲಿ ಟ್ಯಾಗ್​ ಮಾಡಿರುವ ವಿಡಿಯೋವನ್ನು ಪ್ರಧಾನಿ ಮೋದಿಯವರು ಮರು ಹಂಚಿಕೊಂಡು, "ನಾನು ವರ್ಷಗಳ ಹಿಂದೆ ಬರೆದ ಈ ಗಾರ್ಬೋದ ಸುಂದರ ಪ್ರಸ್ತುತಪಡಿಸುವಿಕೆಗಾಗಿ ಧ್ವನಿ ಭಾನುಶಾಲಿ, ತನಿಷ್ಕ್​ ಬಾಗ್ಚಿ, ಜಸ್ಟ್​ ಮ್ಯೂಸಿಕ್​ ಮತ್ತು ತಂಡಕ್ಕೆ ಧನ್ಯವಾದಗಳು. ಈ ಮೂಲಕ ನನ್ನ ಹಳೆಯ ನೆನಪುಗಳನ್ನು ಮುನ್ನಲೆಗೆ ತಂದಿದ್ದೀರಿ. ಆದರೆ ನಾನು ಕೆಲವು ದಿನಗಳಿಂದ ಹೊಸ ಗರ್ಬಾವನ್ನು ಬರೆಯುವಲ್ಲಿ ಯಶಸ್ವಿಯಾಗಿದ್ದೇನೆ. ಅದನ್ನು ನಾನು ನವರಾತ್ರಿಯಂದು ಹಂಚಿಕೊಳ್ಳುತ್ತೇನೆ" ಎಂದು ತಿಳಿಸಿದ್ದರು.

ಇದನ್ನೂ ಓದಿ: ಮೋದಿ ಭಾರತ vs ಸೆಕ್ಯುಲರ್ ಇಂಡಿಯಾ: 2024ರ ಲೋಕಸಭೆ ಚುನಾವಣೆ ಕುರಿತ ಪುಸ್ತಕ ಬಿಡುಗಡೆಗೆ ಸಜ್ಜು

ETV Bharat Logo

Copyright © 2025 Ushodaya Enterprises Pvt. Ltd., All Rights Reserved.