ETV Bharat / entertainment

'ಶಾರುಖ್​ ಖಾನ್ ಓರ್ವ ಮಹಾನ್​ ನಟ, ದಂತಕಥೆ, ರಾಜ, ಸ್ನೇಹಿತ': ಲೇಖಕ ಪೌಲೊ ಕೊಯೆಲೊ - ಪೌಲೊ ಕೊಯೆಲೊ ಟ್ವೀಟ್

ಪ್ರಸಿದ್ಧ ಲೇಖಕ ಪೌಲೊ ಕೊಯೆಲೊ (Paulo Coelho) ಬಾಲಿವುಡ್​​ ಸೂಪರ್​ಸ್ಟಾರ್​ ಶಾರುಖ್​ ಖಾನ್ ಬಗ್ಗೆ ಗುಣಗಾನ ಮಾಡಿದ್ದಾರೆ.

Paulo Coelho praises Shah Rukh Khan
ಶಾರುಖ್ ಬಗ್ಗೆ ಪೌಲೊ ಕೊಯೆಲೊ ಟ್ವೀಟ್
author img

By

Published : Feb 3, 2023, 1:25 PM IST

ಬಾಲಿವುಡ್​​ ಬೇಡಿಕೆ ನಟರಾದ ಶಾರುಖ್​ ಖಾನ್, ದೀಪಿಕಾ ಪಡುಕೋಣೆ, ಜಾನ್​ ಅಬ್ರಹಾಂ ನಟನೆಯ ಪಠಾಣ್​ ಸಿನಿಮಾ ನಿರೀಕ್ಷೆಗೂ ಮೀರಿ ಯಶಸ್ಸು ಸಾಧಿಸಿದೆ. ಸತತ ಸೋಲಿನಿಂದ ಕಂಗೆಟ್ಟಿದ್ದ ಬಾಲಿವುಡ್​ಗೆ ಬೂಸ್ಟರ್ ಡೋಸ್​ ಕೊಟ್ಟಿದೆ ಪಠಾಣ್​ ಸಿನಿಮಾ. ಬಿಡುಗಡೆ ಕಂಡ 9 ದಿನಗಳಲ್ಲಿ 700 ಕೋಟಿ ರೂಪಾಯಿ ಕಲೆಕ್ಷನ್​ ಮಾಡುವ ಮೂಲಕ ಈ ಹಿಂದೆ ಇದ್ದ ಎಲ್ಲ ದಾಖಲೆಗಳನ್ನು ಪುಡಿಗಟ್ಟಿದೆ.

  • King. Legend . Friend. But above all
    GREAT ACTOR
    ( for those who don’t know him in the West, I strongly suggest “My name is Khan- and I am not a terrorist”) https://t.co/fka54F1ycc

    — Paulo Coelho (@paulocoelho) February 2, 2023 " class="align-text-top noRightClick twitterSection" data=" ">

ಎಸ್​​ಆರ್​ಕೆ ಓರ್ವ "ರಾಜ": ಪಠಾಣ್ ಚಿತ್ರದ ಅಗಾಧ ಯಶಸ್ಸಿನ ನಂತರ, ಪ್ರಸಿದ್ಧ ಲೇಖಕ ಪೌಲೊ ಕೊಯೆಲೊ (Paulo Coelho) ಗುರುವಾರದಂದು ಶಾರುಖ್​ ಖಾನ್​​ ಅವರನ್ನು "ಮಹಾನ್ ನಟ" ಎಂದು ಹಾಡಿ ಹೊಗಳಿದ್ದಾರೆ. ಮುಂಬೈನಲ್ಲಿರುವ ತಮ್ಮ ಮನೆ ಮನ್ನತ್‌ನ ಹೊರಗೆ ನಟ ಶಾರುಖ್​ ಖಾನ್​ ತಮ್ಮ ಅಭಿಮಾನಿಗಳಿಗೆ ಕೃತಜ್ಞತೆ ವ್ಯಕ್ತಪಡಿಸಿದ್ದರು. ಟ್ವಿಟರ್‌ನಲ್ಲಿ ಶಾರುಖ್​ ಅವರ ಜನವರಿ 30ರ ಪೋಸ್ಟ್ ಕುರಿತು ಪ್ರತಿಕ್ರಿಯಿಸಿದ ಲೇಖಕ ಪೌಲೊ ಕೊಯೆಲೊ ಬಾಲಿವುಡ್ ತಾರೆ ಎಸ್​​ಆರ್​ಕೆ ಓರ್ವ "ರಾಜ" ಎಂದು ಮೆಚ್ಚುಗೆಯ ಮಳೆ ಸುರಿಸಿದರು.

ಮೆಚ್ಚುಗೆ ಸುರಿಮಳೆ: ಲೇಖಕ ಪೌಲೊ ಕೊಯೆಲೊ, ಶಾರುಖ್ ಖಾನ್ ಅವರನ್ನು ಹೊಗಳಿದ್ದು ಇದೇ ಮೊದಲಲ್ಲ. ಈ ಹಿಂದೆ 2017ರಲ್ಲಿ 'ಮೈ ನೇಮ್ ಈಸ್ ಖಾನ್' ಚಿತ್ರ 7 ವರ್ಷ ಪೂರೈಸಿದಾಗ ಕೂಡ ಶಾರುಖ್ ಅವರನ್ನು ಹೊಗಳಿದ್ದರು. ಇದೀಗ ಶಾರುಖ್ ಅವರ 2010ರ ಚಲನಚಿತ್ರ 'ಮೈ ನೇಮ್ ಈಸ್ ಖಾನ್' ವೀಕ್ಷಿಸಲು ತಮ್ಮ ಅಭಿಮಾನಿಗಳಿಗೆ ಲೇಖಕ ಪೌಲೊ ಕೊಯೆಲೊ ಶಿಫಾರಸು ಮಾಡಿದ್ದಾರೆ.

"ರಾಜ, ದಂತಕಥೆ, ಸ್ನೇಹಿತ, ಎಲ್ಲಕ್ಕಿಂತ ಹೆಚ್ಚಾಗಿ ಮಹಾನ್ ನಟ'' ಎಂದು ಗುಣಗಾನ ಮಾಡಿದ್ದಾರೆ. ಪಾಶ್ಚಿಮಾತ್ಯದಲ್ಲಿ ಅವರ ಬಗ್ಗೆ ತಿಳಿದಿಲ್ಲದವರು ಮೈ ನೇಮ್​ ಈಸ್​ ಖಾನ್​​ ಚಿತ್ರ ನೋಡಿ ಎಂದು ಹೇಳಿದ್ದಾರೆ. ಮತ್ತು ಮೈ ನೇಮ್ ಈಸ್ ಖಾನ್ ಅಂಡ್ ಐ ಆ್ಯಮ್ ನಾಟ್ ಎ ಟೆರರಿಸ್ಟ್ ಎಂಬ ಚಿತ್ರದ ಫೇಮಸ್ ಡೈಲಾಗ್ ಅನ್ನು ಕೂಡ ಅವರು ಈ ಪೋಸ್ಟ್ ಜೊತೆ ಹಂಚಿಕೊಂಡಿದ್ದಾರೆ.

ಲೇಖಕ ಪೌಲೊ ಕೊಯೆಲೊ ಮತ್ತು ನಟ ಶಾರುಖ್​ ಖಾನ್ ಆಗಾಗ್ಗೆ ಸಾಮಾಜಿಕ ಮಾಧ್ಯಮದಲ್ಲಿ ಸಂವಹನ ನಡೆಸುತ್ತಾರೆ. 2020ರ ಕಾದಂಬರಿ ದಿ ಆಲ್ಕೆಮಿಸ್ಟ್‌ಗೆ ( The Alchemist ) ಹೆಸರುವಾಸಿಯಾದ ಲೇಖಕ ಪೌಲೊ ಕೊಯೆಲೊ ಶಾರುಖ್ ಖಾನ್ ಅವರ ಹೋಮ್ ಪ್ರೊಡಕ್ಷನ್​​ನ ಕಾಮ್​ಯಾಬ್​ ಮತ್ತು ನಾಯಕ ನಟ ಸಂಜಯ್ ಮಿಶ್ರಾ ಅವರನ್ನು ಹೊಗಳಿದ್ದರು. ಪೌಲೊ ಕೊಯೆಲೊ ಅವರ ಟ್ವೀಟ್‌ಗೆ ಎಸ್‌ಆರ್‌ಕೆ ಪ್ರತಿಕ್ರಿಯಿಸಿ, ಕಾದಂಬರಿಕಾರರು ಚಲನಚಿತ್ರವನ್ನು ಇಷ್ಟಪಟ್ಟಿದ್ದಾರೆ ಎಂದು ಹೇಳಿದರು.

ನವಾಜುದ್ದೀನ್ ಸಿದ್ದಿಕಿಯ ಅಭಿಮಾನಿ: ನಟ ಶಾರುಖ್​ ಖಾನ್ ಮಾತ್ರವಲ್ಲ, ಲೇಖಕ ಪೌಲೊ ಕೊಯೆಲೊ ಅವರು ನಟ ನವಾಜುದ್ದೀನ್ ಸಿದ್ದಿಕಿಯ ಅಭಿಮಾನಿ ಕೂಡ ಹೌದು. 2020ರಲ್ಲಿ ಸೇಕ್ರೆಡ್ ಗೇಮ್ಸ್‌ನ ಎರಡನೇ ಕಂತು ರಿಲೀಸ್​ ಆದಾಗ, ಈ ಪ್ರಸಿದ್ಧ ಲೇಖಕರು ಸಿದ್ದಿಕಿ ಅವರನ್ನು ಕೂಡ ಸೋಷಿಯಲ್​ ಮೀಡಿಯಾದಲ್ಲಿ ಹಾಡಿ ಹೊಗಳಿದ್ದರು. ಅವರ ಮೆಚ್ಚುಗೆಗೆ ಪ್ರತಿಕ್ರಿಯಿಸಿದ ನವಾಜುದ್ದೀನ್ ಅವರು ಕೊಯೆಲೋ ಅವರ ಬರವಣಿಗೆಯ ಅಭಿಮಾನಿ ನಾನು ಎಂದು ಹೇಳಿದ್ದರು.

ಪಠಾಣ್ ಸಕ್ಸಸ್: ಪಠಾಣ್​ ಚಿತ್ರಕ್ಕೆ ಬಾಯ್ಕಾಟ್​ ಎಚ್ಚರಿಕೆ ಇತ್ತು. ಬೇಶರಂ ರಂಗ್​ ಹಾಡಿನಲ್ಲಿನ ನಟಿಯ ವೇಷಭೂಷಣಕ್ಕೆ ಭಾರೀ ವಿರೋಧ ವ್ಯಕ್ತವಾಗಿತ್ತು. ಪಠಾಣ್​ ತೆರೆಕಂಡ ಮೊದಲೆರಡು ದಿನಗಳೂ ಸಹ ಬಹುತೇಕ ಕಡೆಗಳಲ್ಲಿ ಪ್ರತಿಭಟನೆಗಳು ನಡೆದವು. ಆದರೆ ಪಠಾಣ್​ ಚಿತ್ರದ ಕಲೆಕ್ಷನ್​ ಎಲ್ಲರ ಹುಬ್ಬೇರುವಂತೆ ಮಾಡಿದೆ. ಸಿನಿಮಾ 700 ಕೋಟಿಗೂ ಅಧಿಕ ರೂಪಾಯಿ ಕಲೆಕ್ಷನ್ ಮಾಡಿ ದಾಖಲೆ ಬರೆದಿದೆ.

ಇದನ್ನೂ ಓದಿ: ಎಲ್ಲೆಡೆ 'ಪಠಾಣ್'​ ಸದ್ದು: 7 ದಿನಗಳಲ್ಲಿ 634 ಕೋಟಿ ಬಾಚಿದ ಶಾರುಖ್​ ಸಿನಿಮ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.