ETV Bharat / entertainment

'Love U Abhi': ವಿಕ್ರಮ್ ರವಿಚಂದ್ರನ್ ಪ್ರೀತಿಯಲ್ಲಿ ಅದಿತಿ ಪ್ರಭುದೇವ - Love U Abhi web series

ಲವ್ ಯು ಅಭಿ ಎಂಬ ಕನ್ನಡ ವೆಬ್ ಸೀರಿಸ್ ಮೇ 19ರಿಂದ JioCinema ಓಟಿಟಿ ವೇದಿಕೆಯಲ್ಲಿ ಪ್ರಸಾರ ಪ್ರಾರಂಭಿಸಲಿದೆ.

Love U Abhi kannada web series
ಲವ್ ಯು ಅಭಿ ಕನ್ನಡ ವೆಬ್ ಸೀರಿಸ್
author img

By

Published : May 17, 2023, 6:07 PM IST

ವೆಬ್ ಸೀರಿಸ್​ಗಳ ಜಮಾನ ಜೋರಾಗಿದೆ. ಈ ಟ್ರೆಂಡ್ ಕನ್ನಡ ಸಿನಿಮಾರಂಗಕ್ಕೂ ಕಾಲಿಟ್ಟಿದೆ. ಜೀಯೋ ಸಿನಿಮಾ ಓಟಿಟಿ ವೇದಿಕೆಯಿಂದ ಮನರಂಜನೆಯ ಹೊಸ ಪರ್ವ ಶುರುಮಾಡಿದೆ. ಅದಿತಿ ಪ್ರಭುದೇವ ಹಾಗು ವಿಕ್ರಮ್ ರವಿಚಂದ್ರನ್ ಮುಖ್ಯಭೂಮಿಕೆಯಲ್ಲಿರೋ ಲವ್ ಯು ಅಭಿ ಎಂಬ ಕನ್ನಡ ವೆಬ್ ಸೀರಿಸ್ ಪ್ರದರ್ಶನಗೊಳ್ಳಲು ಸಜ್ಜಾಗಿದೆ. ಕಾಳಿ ವೇಲಾಯುಧಂ ನಿರ್ಮಾಣ ಮಾಡಿ, ನಿರ್ದೇಶಿಸಿರುವ 'ಲವ್ ಯು ಅಭಿ' ವೆಬ್‌ ಸಿರೀಸ್‌ನಲ್ಲಿ ಅದಿತಿ ಪ್ರಭುದೇವ, ವಿಕ್ರಮ್‌ ರವಿಚಂದ್ರನ್‌ ಅಲ್ಲದೇ ರವಿಶಂಕರ್‍‌ ಮುಖ್ಯಪಾತ್ರದಲ್ಲಿ ನಟಿಸಿದ್ದಾರೆ.

ಕನ್ನಡದ ಕ್ರೇಜಿಸ್ಟಾರ್ ರವಿಚಂದ್ರನ್‌ ಪುತ್ರ ವಿಕ್ರಮ್‌ ರವಿಚಂದ್ರನ್ ಅವರಿಗೂ ಇದು ಮೊದಲ ವೆಬ್‌ ಸೀರಿಸ್‌. ತಮ್ಮ ಪಾತ್ರದ ಕುರಿತು ಬಹಳ ಉತ್ಸಾಹದಿಂದ ಮಾತನಾಡಿದ ವಿಕ್ರಮ್, ಶಿವ ನಿಮ್ಮನ್ನು ಕಾಡುತ್ತಾನೆ, ನಿಮ್ಮ ಮನಸ್ಸನ್ನು ಚುಚ್ಚುತ್ತಾನೆ. ಏಕೆಂದರೆ ಈ ಶಿವ ಎಲ್ಲರೊಳಗೂ ಇದ್ದಾನೆ. ಹಲವು ನಿಗೂಢಗಳನ್ನು ಮನಸ್ಸಿನಲ್ಲಿಟ್ಟುಕೊಂಡು, ಅದನ್ನು ಯಾರೊಂದಿಗೂ ಹಂಚಿಕೊಳ್ಳದ ವ್ಯಕ್ತಿ ಆತ. ಒಂದೊಮ್ಮೆ ಅವನು ಹಂಚಿಕೊಳ್ಳಲು ಯತ್ನಿಸಿದರೂ ಪರಿಸ್ಥಿತಿ ಅದಕ್ಕೆ ವಿರುದ್ಧವಾದ ಸನ್ನಿವೇಶವನ್ನು ಸೃಷ್ಟಿಸಿಬಿಡುತ್ತದೆ. ಪ್ರೇಮ ಮತ್ತು ಯುದ್ಧದಲ್ಲಿ ಎಲ್ಲವೂ ನ್ಯಾಯೋಚಿತವೇ ಎಂಬ ಮಾತಿದೆ. ಆದರೆ ಶಿವ ಮತ್ತು ಅವನ ಬದುಕಿನ ವಿಷಯಕ್ಕೆ ಬಂದಾಗ, ಅವನ ಪ್ರೇಮದಲ್ಲಿ, ಬದುಕಿನ ಹೋರಾಟದಲ್ಲಿಯೂ ನ್ಯಾಯೋಚಿತವಾಗಿದ್ದು ನಡೆಯುವುದೇ ಇಲ್ಲ ಎಂದು ಶಿವನ ಪಾತ್ರಕ್ಕೆ ಜೀವ ತುಂಬಿದ ವಿಕ್ರಮ್ ರವಿಚಂದ್ರನ್ ತಿಳಿಸಿದರು.

  • " class="align-text-top noRightClick twitterSection" data="">

ಕಿರುತೆರೆ ಮತ್ತು ಹಿರಿತೆರೆಗಳಲ್ಲಿ ತಮ್ಮದೇ ಛಾಪು ಮೂಡಿಸಿರುವ ನಟಿ ಅದಿತಿ ಪ್ರಭುದೇವ, 'ಲವ್‌ ಯು ಅಭಿ' ಮೂಲಕ ವೆಬ್‌ ಸೀರಿಸ್‌ ಜಗತ್ತಿಗೂ ಜಿಗಿದಿದ್ದಾರೆ. ಇವರಿಬ್ಬರ ಕ್ಯೂಟ್‌ ಕಾಂಬಿನೇಷನ್‌ ಜೊತೆ ಖ್ಯಾತ ನಟ ರವಿಶಂಕರ್‍‌ ಅವರ ಅಬ್ಬರದ ಮಸಾಲೆಯೂ ಇದೆ. ಪೊಲೀಸ್‌ ಅಧಿಕಾರಿಯಾಗಿ ರವಿಶಂಕರ್‍‌ ಕಾಣಿಸಿಕೊಳ್ಳಲಿದ್ದಾರೆ. ಎಲ್ಲ ಕಲಾವಿದರೂ ತಮ್ಮದೇ ಆದ ರಿದಮ್​ನಲ್ಲಿ, ಮನೋಭಾವದಲ್ಲಿ ನಟಿಸುತ್ತ ಹೋಗುತ್ತಿರುತ್ತೇವೆ. ಕಲಾವಿದರ ಜರ್ನಿ ಹಾಗೆಯೇ ಇರುತ್ತದೆ. ಒಮ್ಮೊಮ್ಮೆ ಅದು ಬ್ರೇಕ್ ಆಗಬೇಕಾಗುತ್ತದೆ. ಅಭಿ ನನ್ನ ನಟನಾಪಯಣವನ್ನು ಹಾಗೆ ಬ್ರೇಕ್ ಮಾಡಿದಂಥಹ ಪಾತ್ರ. ನನ್ನ ಇಡೀ ವ್ಯಕ್ತಿತ್ವಕ್ಕೆ ಚಾಲೆಂಜ್ ಮಾಡಿದಂಥ ಪಾತ್ರ. ಆ ಪಾತ್ರದಲ್ಲಿ ನಟಿಸುತ್ತ ನನ್ನ ವ್ಯಕ್ತಿತ್ವದಲ್ಲೂ ಸಾಕಷ್ಟು ಬದಲಾವಣೆಗಳನ್ನು ಮಾಡಿಕೊಂಡಿದ್ದೇನೆ ಎಂದು ಅದಿತಿ ಪ್ರಭುದೇವ ತಿಳಿಸಿದರು.

ಪ್ರೇಮ, ವಿರಹ, ಕೊಲೆ, ತನಿಖೆ ಹೀಗೆ ನೋಡುಗರನ್ನು ಕುರ್ಚಿಯ ತುದಿಯಲ್ಲಿ ಕೂಡುವಂತೆ ಮಾಡಬಲ್ಲ ಎಲ್ಲಾ ಅಂಶಗಳೂ ಇದರಲ್ಲಿದೆ. ಒಂದು ಸಾವಿನ ಸುತ್ತ ನಡೆಯುವ ಕಥೆಯಲ್ಲಿ ಮನಸ್ಸನ್ನು ಭಾವುಕಗೊಳಿಸುವ ಸನ್ನಿವೇಶಗಳಿವೆ. ದಾಂಪತ್ಯದ ಮಧುರ ಕ್ಷಣಗಳನ್ನು ಉಣಬಡಿಸುವ ದೃಶ್ಯಗಳಿವೆ. ಪ್ರೇಮದ ವ್ಯಾಮೋಹ ಮತ್ತು ಸತ್ಯದ ಹಂಬಲದ ನಡುವಿನ ಘರ್ಷಣೆಯೂ ಇದೆ. ಅನುಮಾನ, ವಂಚನೆ, ಮುಗ್ಧ ಪ್ರೇಮ, ಒಳ್ಳೆಯತನ, ಸ್ವಾರ್ಥ, ಪ್ರಾಮಾಣಿಕತೆ ಎಲ್ಲ ಗುಣಗಳೂ ಸೇರಿ ರೂಪುಗೊಂಡ ಅಪರೂಪದ ವೆಬ್​​ ಸೀರಿಸ್​​ 'ಲವ್‌ ಯು ಅಭಿ'. ಮೂವತ್ತು ನಿಮಿಷಗಳ ಏಳು ಎಪಿಸೋಡ್‌ಗಳಲ್ಲಿ ಅಭಿಯ ಬದುಕಿನ ಕಥೆಯನ್ನು ಹೇಳಲಾಗಿದೆ.

ಇದನ್ನೂ ಓದಿ: Cannes Film Festival: ಭಾರತವನ್ನು ಪ್ರತಿನಿಧಿಸಿದ ಸೆಲೆಬ್ರಿಟಿಗಳಿವರು, ಇವರ ಚೆಲುವಿಗೆ ಸಾಟಿ ಯಾರು!

ಕನ್ನಡ ಸಿನಿಮಾ ಲೋಕಕ್ಕೆ ಹೊಸತನ್ನು ಪರಿಚಯಿಸಲಿರುವ ಈ ಸಸ್ಪೆನ್ಸ್ ಥ್ರಿಲ್ಲರ್‍‌ ಕಥೆಯಲ್ಲಿ ವಿನಯಾ ಪ್ರಸಾದ್, ರಚಿತಾ ಮಹಾಲಕ್ಷ್ಮಿ, ಅಶೋಕ್ ಶರ್ಮಾ, ಶ್ರೀನಾಥ್, ಅಂಬಿಕಾ, ಶ್ರೀನಿವಾಸ ಮೂರ್ತಿ, ಸುಂದರ್‍‌ರಾಜ್‌ ಹೀಗೆ ಅನುಭವಿ ಕಲಾವಿದರ ತಂ ಇದೆ. ಚಿತ್ರಕ್ಕೆ ಅರುಣ್ ಬ್ರಹ್ಮ ಅವರ ಕ್ಯಾಮರಾ ಚಳಕವಿದ್ದು, ಪ್ರದಿಪ್‌ ರಾಘವ್ ಸಂಕಲನ ಮಾಡಿದ್ದಾರೆ. ನಿಜಿಲ್‌ ದಿನಕರ್‍‌ ಸಂಗೀತ ನಿರ್ದೇಶನ ಮತ್ತು ಧ್ವನಿ ವಿನ್ಯಾಸವನ್ನು ನಿರ್ವಹಿಸಿದ್ದಾರೆ. ಅಭಿಲಾಷ್‌ ಗೌಡ ಮತ್ತು ಜಿ.ವಿ. ಸತೀಶ್‌ ಕುಮಾರ್ ಜಂಟಿಯಾಗಿ ಮಾತುಗಳನ್ನು ಪೋಣಿಸಿದ್ದಾರೆ. ‘JioCinema’ ಓಟಿಟಿ ವೇದಿಕೆಯಲ್ಲಿ ಮೇ 19ರಂದು ಲವ್ ಯು ಅಭಿ ಕನ್ನಡ ವೆಬ್ ಸಿರೀಸ್ ಪ್ರದರ್ಶನಗೊಳ್ಳಲಿದ್ದು, ಇದನ್ನು ಉಚಿತವಾಗಿ ವೀಕ್ಷಿಸಬಹುದಾಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.