ETV Bharat / entertainment

ಬಿಗ್​ಬಾಸ್​ 16ರಲ್ಲಿ ಈ ಬಾರಿ ಪುಟ್ಟ ಅತಿಥಿ: ಮಗನ ಹೆಸರಿಗೆ ಸಲ್ಮಾನ್​ ಆಸ್ತಿ ಬರೆಸಿಕೊಂಡ ಭಾರ್ತಿ!? - ಈಟಿವಿ ಭಾರತ್​ ಕನ್ನಡ

ಹಿಂದಿ ಬಿಗ್​ಬಾಸ್​ನಲ್ಲಿ ಕಾಮಿಡಿಯನ್​ ಭಾರ್ತಿ ಕುಟುಂಬ - ಸಲ್ಮಾನ್​ ಫಾರ್ಮ್​ಹೌಸ್​ ಅನ್ನು ಮಗನ ಹೆಸರಿಗೆ ಮಾಡಿ ಎಂದ ಭಾರ್ತಿ- ಲಕ್ಷ್​​ ಜೊತೆ ಸಲ್ಮಾನ್​ ನೋಡಿ ಅಭಿಮಾನಿಗಳು ಖುಷ್​​

ಬಿಗ್​ಬಾಸ್​ 16ರಲ್ಲಿ ಈ ಬಾರಿ ಪುಟ್ಟ ಅತಿಥಿ; ಮಗನ ಹೆಸರಿಗೆ ಸಲ್ಮಾನ್​ ಆಸ್ತಿ ಬರೆಸಿಕೊಂಡ ಭಾರ್ತಿ
little-guest-this-time-in-bigg-boss-16-salman-khan-gifted-his-trademark-bracelet
author img

By

Published : Jan 13, 2023, 5:12 PM IST

ಮುಂಬೈ: ಬಾಲಿವುಡ್​ ಸ್ಟಾರ್​ ಸಲ್ಮಾನ್​ ಖಾನ್​ ನಡೆಸಿಕೊಡುತ್ತಿರುವ ಬಿಗ್​ ಬಾಸ್​ 16ರ ಮುಂದಿನ ಸಂಚಿಕೆಯಲ್ಲಿ ವಿಶೇಷ ಪುಟ್ಟ ಅತಿಥಿ ಕಾರ್ಯಕ್ರಮದ ಆಕರ್ಷಣೆಯ ಕೇಂದ್ರ ಬಿಂದುವಾಗಿದೆ. ಕಿರುತೆರೆ ಖ್ಯಾತ ಆ್ಯಂಕರ್​, ಕಾಮಿಡಿಯನ್ ಆಗಿರುವ​ ಭಾರ್ತಿ ಸಿಂಗ್​ ಮತ್ತು ಆಕೆಯ ಪತಿ ಹರ್ಷ ಲಿಂಬಚಿಯಾ ತಮ್ಮ ಮುದ್ದು ಮಗನೊಂದಿಗೆ ಈ ಬಾರಿ ವೇದಿಕೆಯಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಇದೇ ಮೊದಲ ಬಾರಿ ಭಾರ್ತಿ ಸಿಂಗ್​ ಮಗ ಲಕ್ಷ್​ ಲಿಂಬಚಿಯಾ ಬಿಗ್​ಬಾಸ್​ ವೇದಿಕೆಯಲ್ಲಿ ಮಿಂಚಲಿದ್ದು, ಪುಟ್ಟ ಅತಿಥಿ ಆಗಮನ ಅಭಿಮಾನಿಗಳ ಮನಸೊರೆಗೊಂಡಿದೆ.

ಇನ್ನು ಈ ಸಂಚಿಕೆಯ ತುಣುಕಿನಲ್ಲಿ ಈ ಹಿಂದೆ ಬಿಗ್​ ಬಾಸ್​ ಮನೆಯಲ್ಲಿ ಸಲ್ಮಾನ್​ ಖಾನ್​ ನೀಡಿದ ಭರವಸೆಯೊಂದನ್ನು ಭಾರ್ತಿ ನೆನಪಿಸಿದ್ದಾರೆ. ನನಗೆ ಇನ್ನು ನೆನಪಿದೆ ಸಲ್ಮಾನ್​ ಖಾನ್​ ನನ್ನ ಮಗುವನ್ನು ಚಿತ್ರೋದ್ಯಮಕ್ಕೆ ಪರಿಚಯಿಸುವುದಾಗಿ ತಿಳಿಸಿದ್ದರು ಎಂದಿದ್ದಾರೆ. ಅಲ್ಲದೇ ವೇದಿಕೆಯಲ್ಲಿ ಮಗನೊಂದಿಗೆ ಸಲ್ಮಾನ್​ ಭೇಟಿಯಾದ ಭಾರ್ತಿ, ಲಕ್ಷ್​ನನ್ನು ಕೆಲವು ಕಾಲ ಹಿಡಿದುಕೊಳ್ಳುವಂತೆ ಮನವಿ ಮಾಡಿರುವುದು ಕಾಣಬಹುದಾಗಿದೆ.

ಉಡುಗೊರೆ ಕೊಟ್ಟ ಸಲ್ಮಾನ್​: ಇದೇ ವೇಳೆ, ನಟ ಸಲ್ಮಾನ್​ ಲಾಹೋರಿ ಹಬ್ಬದ ಉಡುಗೊರೆಯಾಗಿ ತಮ್ಮ ಕೈಯಲ್ಲಿನ ಟ್ರೇಡ್​ ಮಾರ್ಕ್​ ಆಗಿರುವ ಬೆಳ್ಳಿ ಬ್ರೆಸ್ಲೆಟ್​ ಅನ್ನು ಹರ್ಷ್​ಗೆ ವಿಶೇಷ ಉಡುಗೊರೆಯಾಗಿ ನೀಡಿದ್ದಾರೆ. ಇದಕ್ಕೆ ಪ್ರತಿಯಾಗಿ ಜೋಕ್​ ಮಾಡಿರುವ ಭಾರ್ತಿ ಸಲ್ಮಾನ್​ಗೆ ಇಷ್ಟೋಂದು ಸಹಾನುಭೂತಿ ಇದ್ದರೆ ಅವರ ಫಾರ್ಮ್​ ಹೌಸ್​ ಅನ್ನು ಮಗ ಲಕ್ಷ್​​ಗೆ ವರ್ಗಾಯಿಸುವಂತೆ ತಿಳಿಸಿದ್ದಾರೆ. ಇದಕ್ಕೆ ನಟ ಸಲ್ಮಾನ್​ ಸೇರಿದಂತೆ ಸೆಟ್​ ಮಂದಿ ನಕ್ಕಿದ್ದಾರೆ.

ಮಗ ಲಕ್ಷ್​​ನನ್ನು ಬಿಟ್ಟು ಭಾರ್ತಿ ಹಾಗೂ ಹರ್ಷ್​​ ಬಿಗ್​ ಬಾಸ್​ 16ರ ಮನೆ ಪ್ರವೇಶಿಸಿ, ಅಭ್ಯರ್ಥಿಗಳನ್ನು ಭೇಟಿಯಾಗಿದ್ದಾರೆ. ಈ ವೇಳೆ, ಅಭ್ಯರ್ಥಿಗಳಾದ ಸಜೀದ್​ ಖಾನ್​ ಮತ್ತು ಅಬ್ದು ರೊಸಿಕಾ ಸಂಬಂಧದ ಬಗ್ಗೆ ಮನೆ ಹೊರಗೆ ಸಾಕಷ್ಟು ಗೊಂದಲಗಳು ಇದೆ ಎಂದು ಭಾರ್ತಿ ತಿಳಿಸಿದ್ದಾರೆ. ಸಜೀದ್​ ಅವರು ಅಬ್ದು ಅವರ ತಾಯಿ ಎಂದಿರುವ ಭಾರ್ತಿ ಬಳಿಕ ತಮ್ಮ ಗೆಳತಿ ಟೀನಾ ದತ್ತಾ ಜೊತೆ ಕೂಡ ಬಿಗ್​ ಬಾಸ್​ ಮನೆಯಲ್ಲಿ ಹರಟಿದ್ದಾರೆ. ಟೀನಾ ತಾಯಿಯ ರೀತಿ ಅನುಕರಿಸಿದ ಅರ್ಚನಾಗೆ ಅಪ್ಪುಗೆಯನ್ನು ನೀಡಿದ್ದಾರೆ ಭಾರ್ತಿ.

ಕಾಮಿಡಿಯನ್​ ಭಾರ್ತಿ ಮತ್ತು ಹರ್ಷಾ ಕಳೆದ ವರ್ಷ ತಮ್ಮ ಮೊದಲ ಮಗುವಿನ ಆಗಮನ ಮಾಡಿಕೊಂಡಿದ್ದರು. ಲಕ್ಷ್​​ಗೆ ಈಗ 9 ತಿಂಗಳಾಗಿದೆ. ಕಾರ್ಯಕ್ರಮದಲ್ಲಿ ಭಾರ್ತಿ ಗುಲಾಬಿ ಬಣ್ಣದ ಎಥ್ನಿಕ್​ ಡ್ರೆಸ್​ನಲ್ಲಿ ಮಿಂಚಿದ್ದರೆ, ಹರ್ಷ್​​ ಗೋಲ್ಡನ್​ ಜಾಕೆಟ್​ ಕಪ್ಪು ಶರ್ಟ್, ಪ್ಯಾಂಟ್​ನಲ್ಲಿ ಕಂಡಿದ್ದಾರೆ. ಇನ್ನು ತಮ್ಮ ಮುದ್ದು ಕಂದನಿಗೆ ಆರೆಂಜ್​ ಬಣ್ಣದ ಜಾಕೆಟ್​ ನೊಂದಿಗೆ ನೀಲಿ ಬಣ್ಣದ ಉಡುಗೆ ಹಾಕಿದ್ದಾರೆ. ಸಲ್ಮಾನ್​ ಕೈಯಲ್ಲಿ ಭಾರ್ತಿ ಮಗುವನ್ನು ಇಟ್ಟಿರುವ ದೃಶ್ಯಕ್ಕೆ ಅಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದು, ಪ್ರೀತಿಯ ಎಮೋಜಿಗಳನ್ನು ಹಾಕಿದ್ದಾರೆ.

ಬಿಗ್​ ಬಾಸ್​ 16: ಹಿಂದಿಯಲ್ಲಿ ಬಹು ಬೇಡಿಕೆ ಹೊಂದಿರುವ ಬಿಗ್​ ಬಾಸ್​ 16ರ ಜನಪ್ರಿಯತೆ ಹಿನ್ನಲೆ ಕಾರ್ಯಕ್ರಮವನ್ನು ಮತ್ತೆ ಐದು ವಾರಗಳ ಕಾಲ ಮುಂದೂರಲಾಗಿದೆ. ಫೆಬ್ರವರಿಯಲ್ಲಿ ಈ ಸೀಸನ್​ ಅಂತ್ಯವಾಗುವ ಸಾಧ್ಯತೆ ಇದೆ.

ಇದನ್ನೂ ಓದಿ: ಮಗಳ ಜೊತೆ ರಣಬೀರ್​ - ಆಲಿಯಾ ಔಟಿಂಗ್​; ಮೊಮ್ಮಗಳಿಗೆ ಲಹೋರಿ ಶುಭ ಕೋರಿದ ನೀತು ಕಪೂರ್​​

ETV Bharat Logo

Copyright © 2025 Ushodaya Enterprises Pvt. Ltd., All Rights Reserved.