ನವದೆಹಲಿ: ಬಾಲಿವುಡ್ ನಟಿ ಮತ್ತು ರೂಪದರ್ಶಿ ಲೀಸಾ ಹೇಡನ್ ತಮ್ಮ ಕುಟುಂಬದೊಂದಿಗೆ ಸ್ಪೇನ್ನ ಬೀಚೊಂದರಲ್ಲಿ ಕುಟುಂಬದೊಂದಿಗೆ ಮೋಜು ಮಸ್ತಿ ಮಾಡಿದ್ದಾರೆ. ಪತಿ, ಮಕ್ಕಳೊಂದಿಗಿನ ಫೋಟೋಗಳನ್ನು ಅವರು ತಮ್ಮ ಇನ್ಸ್ಟಾಗ್ರಾಮ್ನಲ್ಲಿ ಹಂಚಿಕೊಂಡಿದ್ದಾರೆ.
- " class="align-text-top noRightClick twitterSection" data="
">
ಮಕ್ಕಳಾದ ಜಾಕ್, ಲಿಯೋ ಮತ್ತು ಲಾರಾ ಲೀಸಾ ಮತ್ತು ಪತಿ ಡಿನೋ ಲಾಲ್ವಾನಿ ಅವರ ತೊಡೆಯ ಮೇಲೆ ಕುಳಿತಿರುವಾಗ ಪರಸ್ಪರ ಅವರಿಬ್ಬರು ಚುಂಬಿಸುತ್ತಿರುವ ಚಿತ್ರವನ್ನೂ ಪೋಸ್ಟ್ ಮಾಡಿದ್ದಾರೆ. ಜೊತೆಗೆ, ಬೆಳಕು ಕವಿಯುವ ಮುನ್ನವೇ ಬೇಗ ನನ್ನನ್ನು ಚುಂಬಿಸು ಎಂದು ಅಡಿ ಟಿಪ್ಪಣಿ ಬರೆದಿದ್ದಾರೆ.
ಲೀಸಾ ತನ್ನ ಮಕ್ಕಳೊಂದಿಗೆ ನೀರಿನಲ್ಲಿ ಸರ್ಫಿಂಗ್ ಮಾಡುತ್ತಿರುವ ವಿಡಿಯೋ ಕ್ಲಿಪ್ ಅನ್ನು ಸಹ ಹಂಚಿಕೊಂಡಿದ್ದಾರೆ. ಜೀವನದ ಅಮೂಲ್ಯ ಕ್ಷಣಗಳು ಎಂದು ಶೀರ್ಷಿಕೆ ನೀಡಿದ್ದಾರೆ.
ಲೀಸಾರ ಈ ಹಾಟ್ ಪೋಸ್ಟ್ಗೆ ಅಭಿಮಾನಿಗಳು ತರಹೇವಾರಿ ಕಮೆಂಟ್ ಮಾಡಿದ್ದಾರೆ. ಸುಂದರವಾದ ಕುಟುಂಬವನ್ನು ದೇವರು ಕಾಪಾಡಲಿ ಎಂದರೆ, ಮತ್ತೊಬ್ಬರು ಸುಂದರ ಕುಟಂಬವನ್ನು ಒಟ್ಟಾಗಿ ನೋಡಲು ಕಾಯುತ್ತಿದ್ದೆವು ಎಂದು ಬರೆದಿದ್ದಾರೆ.
ಸೋನಂ ಕಪೂರ್ ಅಭಿನಯದ 2010 ರಲ್ಲಿ ತೆರೆಕಂಡ ಆಯಿಷಾ ಸಿನಿಮಾದ ಮೂಲಕ ಬಾಲಿವುಡ್‌ಗೆ ಪದಾರ್ಪಣೆ ಮಾಡಿದ ಲೀಸಾ, 2016 ರಲ್ಲಿ ಉದ್ಯಮಿ ಡಿನೋ ಲಾಲ್ವಾನಿ ಅವರನ್ನು ವಿವಾಹವಾದರು. ಈ ದಂಪತಿಗೀಗ ಮೂವರು ಮಕ್ಕಳಿದ್ದಾರೆ.
ಓದಿ: ನನ್ನ ಸೆಕ್ಸ್ ಲೈಫ್ ಆಸಕ್ತಿದಾಯಕವಾಗಿಲ್ಲ.. ನಟಿ ತಾಪ್ಸಿ ಪನ್ನು ಹೀಗೆ ಹೇಳಿದ್ದೇಕೆ?