ETV Bharat / entertainment

ದಿ. ಗಾಯಕ ಸಿಧು ಮೂಸೆವಾಲಾರ ಹೊಸ ಹಾಡು 'ವಾಚ್-ಔಟ್' ಬಿಡುಗಡೆ - watch out song

Singer Sidhu Moose Wala new song Watch out: ದಿವಂಗತ ಗಾಯಕ ಸಿಧು ಮೂಸೆವಾಲಾ ಅವರ ಹೊಸ ಹಾಡು ಅನಾವರಣಗೊಂಡಿದೆ.

late singer Sidhu Moose Wala's new song release
ಸಿಧು ಮೂಸೆವಾಲಾರ ಹೊಸ ಹಾಡು 'ವಾಚ್-ಔಟ್' ಬಿಡುಗಡೆ
author img

By ETV Bharat Karnataka Team

Published : Nov 12, 2023, 5:10 PM IST

ಪಂಜಾಬಿ ದಿವಂಗತ ಗಾಯಕ ಸಿಧು ಮೂಸೆವಾಲಾ ಅವರ ಹೊಸ ಹಾಡು 'ವಾಚ್-ಔಟ್' ಬಿಡುಗಡೆ ಆಗಿದೆ. ಈ ಹಾಡಿನ ಬಗ್ಗೆ ಅಭಿಮಾನಿಗಳು ಬಹಳ ಉತ್ಸುಕರಾಗಿದ್ದರು. ದಿವಂಗತ ಗಾಯಕನ ತಂಡ ಇಂದು ಹೊಸ ಹಾಡನ್ನು ಅನಾವರಣಗೊಳಿಸಿದೆ. ಬಿಡುಗಡೆ ಆಗಿರುವ ಹಾಡಿಗೆ ಕೆಲವೇ ಕ್ಷಣದಲ್ಲಿ ಮೂರು ಲಕ್ಷಕ್ಕೂ ಹೆಚ್ಚು ಲೈಕ್ಸ್ ಬಂದಿವೆ. ಯೂಟ್ಯೂಬ್‌ನಲ್ಲಿ 4 ಲಕ್ಷ ಜನರು ಪ್ರೀಮಿಯರ್ ಅನ್ನು ಲೈವ್ ಆಗಿ ವೀಕ್ಷಿಸಿದ್ದಾರೆ. ಹಾಡು ಬಿಡುಗಡೆಯಾದ ತಕ್ಷಣ ವೈರಲ್ ಆಗಿ ಸಖತ್​ ಸದ್ದು ಮಾಡಿದೆ. ಗಾಯಕ ಸಿಧು ಮೂಸೆವಾಲಾ ಸಾವಿನ ನಂತರ ಬಿಡುಗಡೆಯಾಗಿರುವ 5ನೇ ಹಾಡು ಇದಾಗಿದೆ.

ಸಾವಿನ ನಂತರ ಅನಾವರಣಗೊಂಡ ಐದನೇ ಹಾಡು: ಗಾಯಕ ಸಿಧು ಮೂಸೆವಾಲಾ ಅವರ ಸಾವಿನ ನಂತರ ಬಿಡುಗಡೆ ಆಗಿರುವ ಐದನೇ ಹಾಡು ಇದು. ತಾಯಿ ಚರಣ್ ಕೌರ್ ಈ ಹಾಡಿಗೆ ಸಂಬಂಧಿಸಿದಂತೆ ಪೋಸ್ಟರ್ ಬಿಡುಗಡೆ ಮಾಡಿದ್ದು, ನನ್ನ ಬಬ್ಬರ್ ಶೇರ್ ಮತ್ತು ನಿಮ್ಮ ಸಹೋದರ ಆಗಮಿಸಿದ್ದಾರೆ. ಅದನ್ನು ಹಿಂದಕ್ಕೆ ತಳ್ಳುವುದು ಸುಲಭವಲ್ಲ, ಹಾಗಾಗಿ ದಾರಿಯನ್ನು ತೆರವುಗೊಳಿಸುವುದು ಉತ್ತಮ ಎಂದು ಬರೆದುಕೊಂಡಿದ್ದಾರೆ.

ಇದಕ್ಕೂ ಮೊದಲು ಚೋರ್ನಿ ಬಿಡುಗಡೆಯಾಗಿತ್ತು: 'ವಾಚ್-ಔಟ್' ಹಾಡಿಗೂ ಮೊದಲು ಚೋರ್ನಿ ಎಂಬ ಗೀತೆಯನ್ನು ಬಿಡುಗಡೆಗೊಳಿಸಲಾಗಿತ್ತು. ಚೋರ್ನಿ ಹಾಡನ್ನು 2023ರ ಜುಲೈ 8 ರಂದು ಬಿಡುಗಡೆ ಮಾಡಲಾಗಿದ್ದು, ಯೂಟ್ಯೂಬ್‌ನಲ್ಲಿ 5.4 ಕೋಟಿ ಜನರು ವೀಕ್ಷಿಸಿದ್ದಾರೆ. ಗಾಯಕನ ಮರಣದ ನಂತರ ಐದು ಹಾಡುಗಳು ಅನಾವರನಗೊಂಡಿವೆ. ಪ್ರತೀ ಹಾಡನ್ನು ಅಭಿಮಾನಿಗಳು ತುಂಬು ಹೃದಯದಿಂದ ಸ್ವೀಕರಿಸಿದ್ದಾರೆ. ಚೋರ್ನಿ ಹಾಡನ್ನು ಮೊದಲ ಎರಡು ಗಂಟೆಯಲ್ಲಿ 2 ಲಕ್ಷ ಮಂದಿ ವೀಕ್ಷಿಸಿ. ಇದಾದ ಬಳಿಕ ಈವರೆಗೆ ಒಟ್ಟು 4 ಹಾಡುಗಳು ಬಿಡುಗಡೆಯಾಗಿವೆ. ಅಲ್ಲಿಗೆ ಗಾಯಕನ ಐದು ಹಾಡುಗಳು ಸಾವಿನ ನಂತರ ಬಿಡುಗಡೆಗೊಂಡಂತಾಗಿದೆ.

  • " class="align-text-top noRightClick twitterSection" data="">

ಮರಣದ ನಂತರ ಬಿಡುಗಡೆಯಾದ ಹಾಡುಗಳು: SYL ಹಾಡು 2022ರ ಜೂನ್​​ 23 ರಂದು ಬಿಡುಗಡೆ ಆಗಿತ್ತು. ಹಾಡಿನಲ್ಲಿ ಪಂಜಾಬ್‌ನ ನೀರಿನ ಸಮಸ್ಯೆಯನ್ನು ಪ್ರಸ್ತಾಪಿಸಿದ್ದರು. ಈ ಹಾಡು 72 ಗಂಟೆಗಳಲ್ಲಿ 2.7 ಕೋಟಿ ವೀಕ್ಷಣೆ ಪಡೆದಿತ್ತು. ಆದರೆ ನಂತರ ಈ ಹಾಡನ್ನು ಭಾರತದಲ್ಲಿ ನಿಷೇಧಿಸಲಾಯಿತು. ನಂತರ ವಾರ್​ ಸಾಂಗ್ ರಿಲೀಸ್​ ಆಯ್ತು. ಕಳೆದ ವರ್ಷ ನವೆಂಬರ್ 8 ರಂದು ಹಾಡು ಬಿಡುಗಡೆಯಾಗಿತ್ತು. ಈ ಹಾಡು ಪಂಜಾಬ್‌ನ ವೀರ ಯೋಧ ನಾಯಕ್ ಹರಿ ಸಿಂಗ್ ನಲ್ವಾ ಅವರಿಗಾಗಿ ಹಾಡಲಾಗಿತ್ತು. ಮೂರನೇ ಹಾಡು ಮೇರಾ ನಾಮ್ ಅನ್ನು 2023ರ ಏಪ್ರಿಲ್ 7 ರಂದು ಬಿಡುಗಡೆ ಮಾಡಲಾಗಿತ್ತು. ನಂತರ ಬಂದ ಹಾಡೇ ಚೋರ್ನಿ. ಇಂದು ಐದನೇ ಹಾಡು 'ವಾಚ್-ಔಟ್' ಬಿಡುಗಡೆ ಆಗಿದೆ.

ಇದನ್ನೂ ಓದಿ: ಪ್ರಭಾಸ್​ ಪೋಸ್ಟರ್ ರಿಲೀಸ್: ಡಿ. 1ರಂದು 'ಸಲಾರ್​' ಟ್ರೇಲರ್​ ಅನಾವರಣ

ಸಿಧು ಮೂಸೆವಾಲಾ ಹತ್ಯೆ: 2022 ರ ಮೇ 29ರಂದು ಮಾನ್ಸಾ ಜಿಲ್ಲೆಯ ಜವಾಹರ್ಕೆ ಎಂಬ ಗ್ರಾಮದಲ್ಲಿ ಗಾಯಕ ಸಿಧು ಮೂಸೆವಾಲಾ ಹತ್ಯೆಗೊಳಗಾಗಿದ್ದರು. ಅವರನ್ನು ಗುಂಡಿಕ್ಕಿ ಕೊಲ್ಲಲಾಗಿತ್ತು. ಈ ಹತ್ಯೆ ಪ್ರಕರಣ ದೇಶಾದ್ಯಂತ ಸದ್ದು ಮಾಡಿತ್ತು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.