ಸೌತ್ ಸಿನಿಮಾ ಇಂಡಸ್ಟ್ರಿಯ ಸ್ಟಾರ್ ಕಲಾವಿದರಾದ ಸಮಂತಾ ರುತ್ ಪ್ರಭು ಮತ್ತು ವಿಜಯ್ ದೇವರಕೊಂಡ ಮುಖ್ಯಭೂಮಿಕೆಯ 'ಖುಷಿ' ಸಿನಿಮಾ ಪ್ರೇಕ್ಷಕರ ಮನ ಮುಟ್ಟುವಲ್ಲಿ ಯಶ ಕಂಡಿದೆ. ಸಿನಿಮಾ ಗೆದ್ದ 'ಖುಷಿ'ಯಲ್ಲಿ ಚಿತ್ರತಂಡವಿದೆ. ಚಿತ್ರಮಂದಿರಗಳಳಲ್ಲಿ ಖುಷಿ ಉತ್ತಮ ಪ್ರದರ್ಶನ ಮುಂದುವರಿಸಿದೆ.
ಸೋಮವಾರದಂದು ಆಂಧ್ರಪ್ರದೇಶದ ವಿಶಾಖಪಟ್ಟಣಂನಲ್ಲಿ 'ಖುಷಿ' ಸಕ್ಷಸ್ ಸೆಲೆಬ್ರೇಶನ್ ನಡೆಯಿತು. ಅದ್ಧೂರಿ ಕಾರ್ಯಕ್ರಮದಲ್ಲಿ ಸಿನಿಮಾವನ್ನು ಗೆಲ್ಲಿಸಿಕೊಟ್ಟ ಸರ್ವರಿಗೂ ನಾಯಕ ನಟ ವಿಜಯ್ ದೇವರಕೊಂಡ ಕೃತಜ್ಞತೆ ಸಲ್ಲಿಸಿದ್ದರು. ಖುಷಿ ಸಿನಿಮಾ ಬಾಕ್ಸ್ ಆಫೀಸ್ನಲ್ಲಿ ಸದ್ದು ಮಾಡುತ್ತಿದೆ. ಸುಮಾರು ವಿಶ್ವದಾದ್ಯಂತ 16 ಕೋಟಿ ರೂ.ನೊಂದಿಗೆ ಓಪನಿಂಗ್ ಪಡೆದಿರುವ ಈ ಸಿನಿಮಾ ದೇಶೀಯ ಗಲ್ಲಾಪೆಟ್ಟಿಗೆಯಲ್ಲಿ 39.25 ಕೋಟಿ ರೂಪಾಯಿ ಸಂಪಾದಿಸಿದೆ.
'ಖುಷಿ' ಸಕ್ಷಸ್ ಸೆಲೆಬ್ರೇಶನ್ ಈವೆಂಟ್ನಲ್ಲಿ ನಟ ವಿಜಯ್ ದೇವರಕೊಂಡ ಕೇವಲ ಕೃತಜ್ಞತೆ ಸಲ್ಲಿಸಿದ್ದು ಮಾತ್ರವಲ್ಲದೇ, ಅನಿರೀಕ್ಷಿತ ಘೋಷಣೆ ಮೂಲಕ ಜನರ ಮನ ತಲುಪಿದರು. ತಮ್ಮ ಅಭಿಮಾನಿಗಳಿಗೆ ತಮ್ಮ ಮೆಚ್ಚುಗೆ, ಪ್ರೀತಿ ವ್ಯಕ್ತಪಡಿಸಿದರು. ಬಳಿಕ, 100 ಅರ್ಹ ಕುಟುಂಬಗಳಿಗೆ ಸಹಾಯ ಮಾಡುವುದಾಗಿ ಘೋಷಿಸಿದರು. ಇದಕ್ಕಾಗಿ, ಖುಷಿ ಸಿನಿಮಾದ ತಮ್ಮ ಸಂಪಾದನೆಯಿಂದ 1 ಕೋಟಿ ರೂ. ನೀಡುವುದಾಗಿ ಬಹಿರಂಗಪಡಿಸಿದರು. ಅಭಿಮಾನಿಗಳ ಕುಟುಂಬದ ಬೆಂಬಲಕ್ಕಾಗಿ, ಫ್ಯಾನ್ಸ್ ಮೇಲಿನ ಮೆಚ್ಚುಗೆ ಮತ್ತು ಕೃತಜ್ಞತೆಯ ಸಂಕೇತವಾಗಿ ಪ್ರತೀ ಕುಟುಂಬ 1 ಲಕ್ಷ ರೂ. ಹಣವನ್ನು ಪಡೆಯಲಿದೆ.
ವಿಜಯ್ ದೇವರಕೊಂಡ ಅವರ ಹೃದಯಸ್ಪರ್ಶಿ ಘೋಷಣೆ ಅಭಿಮಾನಿಗಳ ಹರ್ಷೋದ್ಘಾರ ಮತ್ತು ಚಪ್ಪಾಳೆಗಳನ್ನು ಸ್ವೀಕರಿಸಿತು. ಕಾರ್ಯಕ್ರಮದಲ್ಲಿ ನಟ ತಮ್ಮ ಭಾವನೆಗಳನ್ನು ವ್ಯಕ್ತಪಡಿಸಿದರು. ತಮ್ಮ ಸಂತೋಷವನ್ನು ಸಮರ್ಪಿತ ಅಭಿಮಾನಿಗಳೊಂದಿಗೆ ಹಂಚಿಕೊಳ್ಳುವ ಬಯಕೆಯನ್ನು ವ್ಯಕ್ತಪಡಿಸಿದರು. ಈ ದೇಣಿಗೆ ಹಣ ತಮ್ಮ ವೈಯಕ್ತಿಕ ಖಾತೆಯಿಂದ ಬರಲಿದೆ ಎಂಬುದನ್ನೂ ಕೂಡ ಅರ್ಜುನ್ ರೆಡ್ಡಿ ಸ್ಟಾರ್ ಸ್ಪಷ್ಟಪಡಿಸಿದರು.
-
TRULY #SpreadingKushi ❤️
— Mythri Movie Makers (@MythriOfficial) September 4, 2023 " class="align-text-top noRightClick twitterSection" data="
Big hearted @TheDeverakonda announces the distribution of 1 CRORE RUPEES to 100 families to share his #Kushi ❤️
Watch the blockbuster celebrations live now!
- https://t.co/mgpbwu8tQp#BlockbusterKushi 🩷
@Samanthaprabhu2 @ShivaNirvana @HeshamAWMusic… pic.twitter.com/FmyKqse5uC
">TRULY #SpreadingKushi ❤️
— Mythri Movie Makers (@MythriOfficial) September 4, 2023
Big hearted @TheDeverakonda announces the distribution of 1 CRORE RUPEES to 100 families to share his #Kushi ❤️
Watch the blockbuster celebrations live now!
- https://t.co/mgpbwu8tQp#BlockbusterKushi 🩷
@Samanthaprabhu2 @ShivaNirvana @HeshamAWMusic… pic.twitter.com/FmyKqse5uCTRULY #SpreadingKushi ❤️
— Mythri Movie Makers (@MythriOfficial) September 4, 2023
Big hearted @TheDeverakonda announces the distribution of 1 CRORE RUPEES to 100 families to share his #Kushi ❤️
Watch the blockbuster celebrations live now!
- https://t.co/mgpbwu8tQp#BlockbusterKushi 🩷
@Samanthaprabhu2 @ShivaNirvana @HeshamAWMusic… pic.twitter.com/FmyKqse5uC
-
Heart full of joy, gratitude and a lot of #Kushi ❤️
— Mythri Movie Makers (@MythriOfficial) September 4, 2023 " class="align-text-top noRightClick twitterSection" data="
The happy and blockbuster team of #Kushi from the BLOCKBUSTER CELEBRATIONS ❤🔥
- https://t.co/16jRp6UqHu#BlockbusterKushi 🩷@TheDeverakonda @Samanthaprabhu2 @ShivaNirvana @HeshamAWMusic @saregamasouth pic.twitter.com/IIp1wl8qvc
">Heart full of joy, gratitude and a lot of #Kushi ❤️
— Mythri Movie Makers (@MythriOfficial) September 4, 2023
The happy and blockbuster team of #Kushi from the BLOCKBUSTER CELEBRATIONS ❤🔥
- https://t.co/16jRp6UqHu#BlockbusterKushi 🩷@TheDeverakonda @Samanthaprabhu2 @ShivaNirvana @HeshamAWMusic @saregamasouth pic.twitter.com/IIp1wl8qvcHeart full of joy, gratitude and a lot of #Kushi ❤️
— Mythri Movie Makers (@MythriOfficial) September 4, 2023
The happy and blockbuster team of #Kushi from the BLOCKBUSTER CELEBRATIONS ❤🔥
- https://t.co/16jRp6UqHu#BlockbusterKushi 🩷@TheDeverakonda @Samanthaprabhu2 @ShivaNirvana @HeshamAWMusic @saregamasouth pic.twitter.com/IIp1wl8qvc
ಇದನ್ನೂ ಓದಿ: Jawan: ತಿರುಪತಿಯಲ್ಲಿ ಜವಾನ್ ಜೋಡಿ.. ಚಿತ್ರ ಬಿಡುಗಡೆಗೂ ಮುನ್ನ ತಿಮ್ಮಪ್ಪನ ದರ್ಶನ ಪಡೆದ ಶಾರುಖ್ ಖಾನ್, ನಯನತಾರಾ
ನಟನ ಈ ಉದಾರತೆಯ ಸ್ವಭಾವ ಸದ್ದು ಮಾಡುತ್ತಿರುವುದು ಇದೇ ಮೊದಲಲ್ಲ. ಈ ವರ್ಷದ ಆರಂಭದಲ್ಲಿ ಅವರು ತಮ್ಮ ಲಕ್ಕಿ ಫ್ಯಾನ್ಸ್ಅನ್ನು ಮನಾಲಿ ಟ್ರಿಪ್ಗೆ ಕಳುಹಿಸಿದ್ದರು. ಅಲ್ಲಿನ ಎಲ್ಲಾ ಖರ್ಚುಗಳನ್ನು ಸ್ವತಃ ನಟನೇ ಭರಿಸಿದ್ದರು. ಈ ರೀತಿಯ ಕೆಲಸಗಳು ನಟನನ್ನು ಪ್ರೀತಿಸುವ, ಬೆಂಬಲಿಸುವವರ ಜೀವನದ ಮೇಲೆ ಸಕಾರಾತ್ಮಕ ಪರಿಣಾಮ ಬೀರುವ ಅವರ ಬದ್ಧತೆಗೆ ಹೊಂದಿಕೆಯಾಗುತ್ತವೆ.
ಇದನ್ನೂ ಓದಿ: ಜೈಲರ್ ಗೆದ್ದ ಖುಷಿ: ಮ್ಯೂಸಿಕ್ ಡೈರೆಕ್ಟರ್ ಅನಿರುಧ್ ರವಿಚಂದರ್ಗೆ ಸಿಕ್ತು ದುಬಾರಿ ಕಾರು
ಒಂದು ವಾರ ಅಥವಾ ಮುಂದಿನ 10 ದಿನಗಳಲ್ಲಿ 100 ಅರ್ಹ ಕುಟುಂಬಗಳಿಗೆ 1 ಲಕ್ಷ ರೂ.ನಂತೆ ಒಟ್ಟು 1 ಕೋಟಿ ರೂ. ವಿತರಿಸುವುದಾಗಿ ವಿಜಯ್ ದೇವರಕೊಂಡ ಭರವಸೆ ನೀಡಿದ್ದಾರೆ. ಇದು ತಮ್ಮ ಕಟ್ಟಾ ಅಭಿಮಾನಿಗಳಿಗೆ ಹಿಂದಿರುಗಿ ಏನಾದರು ಕೊಡಬೇಕೆಂಬ ನಟನ ಸ್ವಭಾವದ ಕುರಿತು ಒತ್ತಿ ಹೇಳುತ್ತದೆ. ವೃತ್ತಿಜೀವನದುದ್ದಕ್ಕೂ ತಮ್ಮೊಂದಿಗೆ ನಿಂತ ಅಭಿಮಾನಿಗಳಿಗೆ ನಟ ಪ್ರೀತಿ ತೋರಿಸುವ ಕಾರ್ಯವನ್ನು ಮುಂದುವರಿಸಿದ್ದಾರೆ.