'ಲವ್ ಮಾಕ್ಟೇಲ್' ಖ್ಯಾತಿಯ ನಟ ಡಾರ್ಲಿಂಗ್ ಕೃಷ್ಣ ಮತ್ತು ಮೊಗ್ಗಿನ ಮನಸು, ಬಚ್ಚನ್, ಮುಂಗಾರು ಮಳೆ 2 ಮುಂತಾದ ಹಿಟ್ ಚಿತ್ರಗಳನ್ನು ನೀಡಿರುವ ಸ್ಯಾಂಡಲ್ವುಡ್ ಸ್ವ-ಮೇಕ್ ನಿರ್ದೇಶಕ ಶಶಾಂಕ್ ಕಾಂಬೋದಲ್ಲಿ 'ಕೌಸಲ್ಯಾ ಸುಪ್ರಜಾ ರಾಮ' ಸಿನಿಮಾ ಬರುತ್ತಿರುವುದು ಗೊತ್ತೇ ಇದೆ. ಈಗಾಗಲೇ ಬಿಡುಗಡೆಗೂ ಮುಹೂರ್ತ ಫಿಕ್ಸ್ ಆಗಿದ್ದು, ಸಿನಿಮಾವು ಜುಲೈ 28ರಂದು ತೆರೆ ಕಾಣಲಿದೆ. ಇತ್ತೀಚೆಗಷ್ಟೇ ಚಿತ್ರದ ಟ್ರೇಲರ್ ಕೂಡ ರಿಲೀಸ್ ಆಗಿದ್ದು, ಸಿನಿಪ್ರೇಮಿಗಳನ್ನು ಆಕರ್ಷಿಸಿದೆ.
- " class="align-text-top noRightClick twitterSection" data="">
ಇದೀಗ ಚಿತ್ರದ ಹಾಡೊಂದನ್ನು ಚಿತ್ರತಂಡ ಬಿಡುಗಡೆಗೊಳಿಸಿದೆ. '90 ಹಾಡು' ರಿಲೀಸ್ ಆಗಿದ್ದು, ಮಿಲನಾ ನಾಗರಾಜ್ ಸ್ಟೆಪ್ ಹಾಕಿದ್ದಾರೆ. 90 ಹಾಕು ಕಿಟ್ಟಪ್ಪ ಅಂತ ಹೇಳ್ತಾ ನಿಧಿಮಾ ಎಲ್ಲರನ್ನೂ ಕುಣಿಸಿದ್ದಾರೆ. "Weekend ಬಂತಲ್ಲ.. ನಮ್ ಕಿಟ್ಟಪ್ಪಾನೂ ಎಣ್ಣೆ ತಗೊಂಡು, ಹುಡ್ಗೀರ್ ಜೊತೆ ಬಂದೇಬಿಟ್ಟ!" ಎಂಬ ಕ್ಯಾಪ್ಶನ್ ಜೊತೆ ಚಿತ್ರತಂಡ ಹಾಡಿನ ಪೋಸ್ಟರ್ ಅನ್ನು ಹಂಚಿಕೊಂಡಿದ್ದಾರೆ. ಸದ್ಯ ಈ ಹಾಡು ಸಖತ್ ಟ್ರೆಂಡಿಂಗ್ ಆಗಿದೆ. 90 ಹಾಡಿಗೆ ಶಶಾಂಕ್ ಸಾಹಿತ್ಯ ಮತ್ತು ಅರ್ಜುನ್ ಜನ್ಯ ಸಂಗೀತ ನಿರ್ದೇಶನವಿದೆ. ಈ ಐಟಂ ಸಾಂಗ್ ಐಶ್ವರ್ಯಾ ರಂಗರಾಜನ್ ಕಂಠದಲ್ಲಿ ಮೂಡಿಬಂದಿದೆ.
ಟ್ರೇಲರ್ ಹೇಗಿದೆ?: ಕೌಸಲ್ಯಾ ಸುಪ್ರಜಾ ರಾಮ ಒಂದು ರೀತಿಯಲ್ಲಿ ಎಲ್ಲರ ಮನೆಯ ಕಥೆಯಂತಿದೆ. ಟ್ರೇಲರ್ ನೋಡಿದವರಿಗೆ ಇದು ಪುರುಷ ಪ್ರಧಾನ ಸಮಾಜದ ಕಥೆ ಎನಿಸುತ್ತದೆ. ಆದರೆ ಪುರುಷ ಪ್ರಧಾನ ಸಮಾಜದ ಪ್ರತೀಕದಂತಿರುವ ನಾಯಕ ನಟ ನಂತರದಲ್ಲಿ ಏನಾಗುತ್ತಾನೆ? ಅನ್ನೋದೇ ಕಥಾಹಂದರ. ಪುರುಷರ ಅಹಂ ಎಂಬುದು ಸಮಾಜವನ್ನು ಎಷ್ಟು ಆವರಿಸಿಕೊಂಡಿದೆ. ಅದರ ಪರಿಣಾಮ ಏನು ಎಂಬುದನ್ನು ಈ ಸಿನಿಮಾ ಹೇಳುತ್ತದೆ. ಇದು ತಾಯಿ ಮತ್ತು ಮಗನ ಬಾಂಧವ್ಯದ ಕಥೆಯ ಜೊತೆಗೆ ವಿಭಿನ್ನವಾಗಿದೆ.
-
Weekend ಬಂತಲ್ಲ.. ನಮ್ ಕಿಟ್ಟಪ್ಪಾನೂ ಎಣ್ಣೆ
— Darling Krishna (@darlingkrishnaa) July 22, 2023 " class="align-text-top noRightClick twitterSection" data="
ತಗೊಂಡು, ಹುಡ್ಗೀರ್ ಜೊತೆ ಬಂದೇಬಿಟ್ಟ!#Cheers🥂#𝟗𝟎𝐇𝐚𝐚𝐤𝐮𝐊𝐢𝐭𝐭𝐚𝐩𝐩𝐚
A new age ಎಣ್ಣೆ Song
𝐎𝐔𝐓 𝐍𝐎𝐖
https://t.co/S2SFFzaIcO#KousalyaSuprajaRama pic.twitter.com/tgBfDNYGXK
">Weekend ಬಂತಲ್ಲ.. ನಮ್ ಕಿಟ್ಟಪ್ಪಾನೂ ಎಣ್ಣೆ
— Darling Krishna (@darlingkrishnaa) July 22, 2023
ತಗೊಂಡು, ಹುಡ್ಗೀರ್ ಜೊತೆ ಬಂದೇಬಿಟ್ಟ!#Cheers🥂#𝟗𝟎𝐇𝐚𝐚𝐤𝐮𝐊𝐢𝐭𝐭𝐚𝐩𝐩𝐚
A new age ಎಣ್ಣೆ Song
𝐎𝐔𝐓 𝐍𝐎𝐖
https://t.co/S2SFFzaIcO#KousalyaSuprajaRama pic.twitter.com/tgBfDNYGXKWeekend ಬಂತಲ್ಲ.. ನಮ್ ಕಿಟ್ಟಪ್ಪಾನೂ ಎಣ್ಣೆ
— Darling Krishna (@darlingkrishnaa) July 22, 2023
ತಗೊಂಡು, ಹುಡ್ಗೀರ್ ಜೊತೆ ಬಂದೇಬಿಟ್ಟ!#Cheers🥂#𝟗𝟎𝐇𝐚𝐚𝐤𝐮𝐊𝐢𝐭𝐭𝐚𝐩𝐩𝐚
A new age ಎಣ್ಣೆ Song
𝐎𝐔𝐓 𝐍𝐎𝐖
https://t.co/S2SFFzaIcO#KousalyaSuprajaRama pic.twitter.com/tgBfDNYGXK
ಇದನ್ನೂ ಓದಿ: Suriya Birthday: ಕಂಗುವ ಫಸ್ಟ್ ಗ್ಲಿಂಪ್ಸ್ ರಿಲೀಸ್; ರೋಮಾಂಚಕ ದೃಶ್ಯಗಳಲ್ಲಿ ಕಾಲಿವುಡ್ ಸೂಪರ್ ಸ್ಟಾರ್ ಸೂರ್ಯ!
ಇಲ್ಲಿ ಬರುವ ಎಲ್ಲ ಪಾತ್ರಗಳಿಗೂ ವಿಶೇಷ ಮಹತ್ವ ನೀಡಲಾಗಿದೆ. ರಂಗಾಯಣ ರಘು ಅವರ ಆ್ಯಕ್ಟಿಂಗ್ ಅಂತೂ ಸೂಪರ್ ಆಗಿದೆ. ಟ್ರೇಲರ್ನಲ್ಲಿ ಸ್ಟ್ರಿಕ್ಟ್ ಅಪ್ಪನಾಗಿ ಕಂಡಿದ್ದಾರೆ. ನಾಗಭೂಷಣ್ ಅವರ ಪಾತ್ರವೂ ಉತ್ತಮವಾಗಿದೆ. ಬೃಂದಾ ಆಚಾರ್ಯ ನಾಯಕಿಯಾಗಿ ನಟಿಸಿದ್ದು, ಕೃಷ್ಣನನ್ನು ಪ್ರೀತಿಯ ಬಲೆಗೆ ಆಕೆ ಬೀಳಿಸುವ ಪರಿ ತುಂಬಾ ಚೆನ್ನಾಗಿದೆ. ಟ್ರೇಲರ್ನ ಕೊನೆಯಲ್ಲಿ ಮಿಲನಾ ನಾಗರಾಜ್ ಬೋಲ್ಡ್ ಲುಕ್ನಲ್ಲಿ ಕಾಣಿಸಿಕೊಂಡಿದ್ದಾರೆ.
ಚಿತ್ರತಂಡ ಹೀಗಿದೆ..: ಮಗನಾಗಿ ಡಾರ್ಲಿಂಗ್ ಕೃಷ್ಣ, ತಾಯಿಯ ಪಾತ್ರದಲ್ಲಿ ಸುಧಾ ಬೆಳವಾಡಿ, ತಂದೆಯ ಪಾತ್ರದಲ್ಲಿ ರಂಗಾಯಣ ರಘು ಅಭಿನಯವಿದೆ. ಅಚ್ಯುತ್ ಕುಮಾರ್, ಗಿರಿರಾಜ್ ಪ್ರಮುಖ ಪಾತ್ರ ಮಾಡುತ್ತಿದ್ದಾರೆ. ಒಟ್ಟು ಐದು ಹಾಡುಗಳಿವೆ. ಅರ್ಜುನ್ ಜನ್ಯ ಸಂಗೀತ, ಸುಜ್ಞಾನ್ ಛಾಯಾಗ್ರಹಣವಿದೆ. ಶಶಾಂಕ್ ಸಿನಿಮಾಸ್ ಮತ್ತು ಬಿ.ಸಿ.ಪಾಟೀಲ್ ಅವರ ಕೌರವ ಪ್ರೊಡಕ್ಷನ್ ಹೌಸ್ ಜಂಟಿಯಾಗಿ ಚಿತ್ರ ನಿರ್ಮಾಣ ಮಾಡುತ್ತಿದೆ.
ಇದನ್ನೂ ಓದಿ: 'ಭಗವಂತ ಕೇಸರಿ' ರಿಲೀಸ್ಗೆ ಮುಹೂರ್ತ ಫಿಕ್ಸ್: ಬಾಲಯ್ಯ ಅಭಿಮಾನಿಗಳಲ್ಲಿ ಗರಿಗೆದರಿದ ನಿರೀಕ್ಷೆ