ETV Bharat / entertainment

ಕಾಫಿ ವಿತ್​ ಕರಣ್ ಶೋನಲ್ಲಿ ಮತ್ತೆ ಫಸ್ಟ್​ನೈಟ್​ ಟಾಕ್​.. ಈ ಬಾರಿ ಯಾರ ಸರದಿ ಗೊತ್ತಾ?

author img

By

Published : Sep 5, 2022, 5:30 PM IST

ಕಾಫಿ ವಿತ್​ ಕರಣ್​ ಚಾಟ್​ ಶೋನಲ್ಲಿ ಮೊದಲ ರಾತ್ರಿಯ ಮಾತುಗಳು ಮತ್ತೆ ಕೇಳಿ ಬಂದಿವೆ. ಈ ಹಿಂದೆ ಆಲಿಯಾ ಭಟ್​ ಈ ಬಗ್ಗೆ ಮಾತನಾಡಿದ್ದರೆ, ಈ ಬಾರಿ ಕತ್ರಿನಾ ಕೈಫ್​ ಫಸ್ಟ್​ ನೈಟ್​ ಪ್ರಸಂಗವನ್ನು ಹಂಚಿಕೊಂಡಿದ್ದಾರೆ.

koffee-with-karan
ಕಾಫಿ ವಿತ್​ ಕರಣ್ ಶೋನಲ್ಲಿ ಮತ್ತೆ ಫಸ್ಟ್​ನೈಟ್​ ಟಾಕ್​

ಮುಂಬೈ: ಬಾಲಿವುಡ್​ ನಿರ್ಮಾಪಕ ಕರಣ್​ ಜೋಹರ್ ನಡೆಸಿಕೊಡುವ ಚಾಟ್​ ಶೋ ಕಾಫಿ ವಿತ್​ ಕರಣ್​ನಲ್ಲಿ ನಟಿ ಕತ್ರಿನಾ ಕೈಪ್​ ಭಾಗವಹಿಸಿದ್ದಾರೆ. ಈ ವೇಳೆ ಮದುವೆಯ ಮೊದಲ ರಾತ್ರಿಯ ಬಗ್ಗೆ ಶೋನಲ್ಲಿ ಮುಕ್ತವಾಗಿ ಮಾತನಾಡಿದ್ದಾರೆ. ಈ ಹಿಂದೆ ಇನ್ನೊಬ್ಬ ನಟಿ ಆಲಿಯಾ ಭಟ್​ ಕೂಡ ಮೊದಲ ರಾತ್ರಿ ಬಗ್ಗೆ ಮಾತನಾಡಿ ಸುದ್ದಿಯಾಗಿದ್ದರು.

ನಟಿ ಕತ್ರಿನಾ ಕೈಫ್ ಅವರು ಸಹ ನಟರಾದ ಇಶಾನ್ ಖಟ್ಟರ್ ಮತ್ತು ಸಿದ್ಧಾಂತ್ ಚತುರ್ವೇದಿ ಅವರೊಂದಿಗೆ ಕಾಫಿ ವಿತ್​ ಕರಣ್​ ಶೋನಲ್ಲಿ ಭಾಗವಹಿಸಿದ್ದಾರೆ. ಸುಹಾಗ್ ರಾತ್ ಪರಿಕಲ್ಪನೆಯ ಬಗ್ಗೆ ಮಾತನಾಡಿರುವ ಪ್ರೋಮೋವನ್ನು ತಂಡ ಬಿಡುಗಡೆ ಮಾಡಿದೆ.

ಫಸ್ಟ್​ನೈಟ್​ ಬಗ್ಗೆ ಕರಣ್​ ಕೇಳಿದ ಪ್ರಶ್ನೆಗೆ ಉತ್ತರಿಸಿದ ಕತ್ರಿನಾ "ಅದು ಮೊದಲ ರಾತ್ರಿಯಾಗಿರದೇ ಮೊದಲ ದಿನವಾಗಿರುತ್ತದೆ. ದಣಿದವರಿಗೆ ಇದೊಂದು ಉತ್ತಮ ಅವಕಾಶ" ಎಂಬ ರೀತಿ ಹೇಳಿಕೆ ನೀಡಿದ್ದಾರೆ.

ಕತ್ರಿನಾ ಜೊತೆಗೆ ಬಂದಿದ್ದ ಯುವ ನಟ ಇಶಾನ್ ಖಟ್ಟರ್ ತಾವೀಗ ಸಿಂಗಲ್​ ಎಂದು ಹೇಳಿಕೊಂಡಿದ್ದಾರೆ. ನಟಿ ಅನನ್ಯಾ ಪಾಂಡೆ ಅವರೊಂದಿಗೆ ಅವರು ಡೇಟಿಂಗ್​ ನಡೆಸುತ್ತಿದ್ದರು ಎಂಬ ಗುಸುಗುಸು ಹಬ್ಬಿತ್ತು. ಇನ್ನೊಂದೆಡೆ ಅಮಿತಾಭ್ ಬಚ್ಚನ್ ಅವರ ಮೊಮ್ಮಗಳಾದ ನವ್ಯಾ ನವೇಲಿ ನಂದಾ ಅವರೊಂದಿಗೆ ಡೇಟಿಂಗ್ ಮಾಡುತ್ತಿರುವ ನಟ ಸಿದ್ಧಾಂತ್ ಚತುರ್ವೇದಿ ತಾವೂ ಕೂಡ ಸಿಂಗಲ್​ ಎಂದು ಹೇಳಿರುವುದು ಪ್ರೋಮೋದಲ್ಲಿದೆ.

  • " class="align-text-top noRightClick twitterSection" data="">

ಇನ್ನು, ಸಿನಿಮಾ ವಿಚಾರಕ್ಕೆ ಬಂದರೆ ಕತ್ರಿನಾ ಕೈಫ್​, ಇಶಾನ್ ಮತ್ತು ಸಿದ್ಧಾಂತ್ ಚತುರ್ವೇದಿ ಮತ್ತು ಫರ್ಹಾನ್ ಅಖ್ತರ್ ಅವರು "ಫೋನ್ ಭೂತ್‌" ಸಿನಿಮಾದಲ್ಲಿ ನಟಿಸಿದ್ದಾರೆ. ಇದೊಂದು ಹಾಸ್ಯಭರಿತ ಸಿನಿಮಾವಾಗಿದ್ದು, ಶೀಘ್ರದಲ್ಲೇ ತೆರೆ ಕಾಣಲಿದೆ.

ಕಾಫಿ ವಿತ್​ ಕರಣ್​ನ ಈ ಹಿಂದಿನ ಸಂಚಿಕೆಯಲ್ಲಿ ಆಲಿಯಾ ಭಟ್​ "ಮೊದಲ ರಾತ್ರಿ ಎಂಬುದು ಇರುವುದಿಲ್ಲ. ಅಂದು ನೀವು ಸುಸ್ತಾಗಿರುತ್ತೀರಿ" ಎಂದು ಹೇಳಿದಾಗ ಜೊತೆಗಿದ್ದ ರಣವೀರ್​ ಸಿಂಗ್​ ಮತ್ತು ಕರಣ್​ ಜೋರಾಗಿ ನಕ್ಕಿದ್ದರು.

ಓದಿ: ಅಮಿತಾಭ್​ ಬಚ್ಚನ್​ ರಶ್ಮಿಕ ಅಭಿನಯದ ಗುಡ್​ ಬೈ ಚಿತ್ರದ ಮೊದಲ ಪೋಸ್ಟರ್​ ಬಿಡುಗಡೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.