ಬಾಲಿವುಡ್ ಸೂಪರ್ ಸ್ಟಾರ್ ಸಲ್ಮಾನ್ ಖಾನ್ ಅಭಿನಯದ 'ಕಿಸಿ ಕಾ ಭಾಯ್ ಕಿಸಿ ಕಿ ಜಾನ್' ಬಿಡುಗಡೆಗೆ ಕ್ಷಣಗಣನೆ ಆರಂಭವಾಗಿದೆ. ಈಗಾಗಲೇ ಚಿತ್ರತಂಡದಿಂದ ಭರ್ಜರಿ ಪ್ರಚಾರ ಕಾರ್ಯ ಕೂಡಾ ನಡೆದಿದೆ. ಅಭಿಮಾನಿಗಳು ಕಾತರದಿಂದ ಕಾಯುತ್ತಿರುವ ಈ ಬಹು ನಿರೀಕ್ಷಿತ ಚಿತ್ರ ನಾಳೆ ಅಂದರೆ ಏಪ್ರಿಲ್ 21ರಂದು ದೇಶ ಸೇರಿದಂತೆ ವಿಶ್ವಾದ್ಯಂತ ಅದ್ಧೂರಿಯಾಗಿ ತೆರೆ ಕಾಣಲಿದೆ.
- " class="align-text-top noRightClick twitterSection" data="
">
100ಕ್ಕೂ ಹೆಚ್ಚು ದೇಶಗಳಲ್ಲಿ ರಿಲೀಸ್: 'ಕಿಸಿ ಕಾ ಭಾಯ್ ಕಿಸಿ ಕಿ ಜಾನ್' ಸಿನಿಮಾ ಭಾರತದಲ್ಲಿ 4,500ಕ್ಕೂ ಹೆಚ್ಚು ಸ್ಕ್ರೀನ್‌ಗಳಲ್ಲಿ ಮತ್ತು ವಿದೇಶದಲ್ಲಿ 1,200ಕ್ಕೂ ಹೆಚ್ಚು ಸ್ಕ್ರೀನ್‌ಗಳಲ್ಲಿ ಪ್ರದರ್ಶನ ಕಾಣಲಿದೆ. 100ಕ್ಕೂ ಹೆಚ್ಚು ದೇಶಗಳಲ್ಲಿ ರಿಲೀಸ್ ಆಗುತ್ತಿದ್ದು, ದಿನಕ್ಕೆ 16 ಸಾವಿರಕ್ಕೂ ಹೆಚ್ಚು ಶೋಗಳು ನಡೆಯಲಿವೆ ಎಂದು ಸಲ್ಮಾನ್ ಖಾನ್ ಫಿಲ್ಮ್ಸ್ ತಮ್ಮ ಅಧಿಕೃತ ಇನ್ಸ್ಟಾ ಪೇಜ್ನಲ್ಲಿ ಮಾಹಿತಿ ಹಂಚಿಕೊಂಡಿದೆ.
ಸಲ್ಮಾನ್ ಖಾನ್ ಫಿಲ್ಮ್ಸ್ ಮಾಹಿತಿ: ತಮ್ಮ ಇನ್‌ಸ್ಟಾಗ್ರಾಮ್ ಪುಟದಲ್ಲಿ ಮಾಹಿತಿ ನೀಡಿದ ಸಲ್ಮಾನ್ ಖಾನ್ ಫಿಲ್ಮ್ಸ್, ’ಕಿಸಿ ಕಾ ಭಾಯಿ ಕಿಸಿ ಕಿ ಜಾನ್’ ಚಲನಚಿತ್ರವು 4,500ಕ್ಕೂ ಹೆಚ್ಚು ದೇಶೀಯ ಥಿಯೇಟರ್‌ಗಳಲ್ಲಿ ಬಿಡುಗಡೆ ಆಗಲಿದೆ ಮತ್ತು ಚಿತ್ರವು ದೇಶದಲ್ಲಿ ದಿನಕ್ಕೆ 16 ಸಾವಿರಕ್ಕೂ ಹೆಚ್ಚು ಪ್ರದರ್ಶನಗಳನ್ನು ನಡೆಸಲಿದೆ ಎಂದು ತಿಳಿಸಿದೆ. ಸಾಗರೋತ್ತರದಲ್ಲಿ, ಚಿತ್ರವು 100ಕ್ಕೂ ಹೆಚ್ಚು ದೇಶಗಳಲ್ಲಿ 1,200ಕ್ಕೂ ಹೆಚ್ಚು ಪರದೆಗಳಲ್ಲಿ ಪ್ರದರ್ಶನ ಕಾಣಲಿದೆ. ಒಟ್ಟಿನಲ್ಲಿ ’ಕಿಸಿ ಕಾ ಭಾಯ್ ಕಿಸಿ ಕಿ ಜಾನ್’ ಚಿತ್ರ ವಿಶ್ವದಾದ್ಯಂತ 5,700 ಸ್ಕ್ರೀನ್ ಗಳಲ್ಲಿ ಬಿಡುಗಡೆಯಾಗಲಿದೆ.
'ಭಾಯಿಜಾನ್' ಪಾತ್ರದಲ್ಲಿ ಸಲ್ಲು: ಫರ್ಹಾದ್ ಸಾಮ್ಜಿ ನಿರ್ದೇಶನದ 'ಕಿಸಿ ಕಾ ಭಾಯ್ ಕಿಸಿ ಕಿ ಜಾನ್' ಚಿತ್ರದಲ್ಲಿ ಸಲ್ಮಾನ್ ಖಾನ್ 'ಭಾಯಿಜಾನ್' ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಸಲ್ಮಾನ್ ಜೊತೆಗೆ ಕನ್ನಡತಿ ಪೂಜಾ ಹೆಗ್ಡೆ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಪಂಜಾಬ್ನ ಕತ್ರಿನಾ ಕೈಫ್ ಖ್ಯಾತಿಯ ಶೆಹನಾಜ್ ಗಿಲ್ ಮತ್ತು 'ಬಿಜ್ಲಿ ಬಿಜ್ಲಿ' ಖ್ಯಾತಿಯ ಪಲಕ್ ತಿವಾರಿ ಈ ಚಿತ್ರದ ಮೂಲಕ ಬಾಲಿವುಡ್‌ಗೆ ಪದಾರ್ಪಣೆ ಮಾಡಲಿದ್ದಾರೆ. ಮತ್ತೊಂದೆಡೆ, ಪಂಜಾಬಿ ಗಾಯಕ ಜಸ್ಸಿ ಗಿಲ್, ಕಿರುತೆರೆ ನಟ ಸಿದ್ಧಾರ್ಥ್ ನಿಗಮ್ ಮತ್ತು ನೃತ್ಯ ನಿರ್ದೇಶಕ, ನಿರೂಪಕ ರಾಘವ್ ಜುಯಲ್ ಕೂಡ ತಾರಾಗಣದಲ್ಲಿದ್ದಾರೆ. ಇವರಲ್ಲದೇ ದಕ್ಷಿಣ ಚಿತ್ರರಂಗದ ವೆಂಕಟೇಶ್ ದಗ್ಗುಬಾಟಿ ಮತ್ತು ಭೂಮಿಕಾ ಚಾವ್ಲಾ ಸಹ ಈ ಚಿತ್ರದಲ್ಲಿ ನಟಿಸಿದ್ದಾರೆ.
ಸಲ್ಮಾನ್ ಖಾನ್ ಈದ್ ಗಿಫ್ಟ್: ಅಭಿಮಾನಿಗಳಿಗೆ ದುಬೈನಲ್ಲಿ ಸಮಯ ಮೀಸಲು
ಇತ್ತೀಚೆಗಷ್ಟೇ ಸಲ್ಮಾನ್ ಇನ್ಸ್ಟಾ ಪೇಜ್ನಲ್ಲಿ ಪೋಸ್ಟರ್ ಒಂದನ್ನು ಹಂಚಿಕೊಂಡಿದ್ದರು. ಆ ಪ್ರಕಾರ, ಅಭಿಮಾನಿಗಳೊಂದಿಗೆ ನಟ ಸಮಯ ಕಳೆಯಲಿದ್ದಾರೆ. ಹೌದು, ಅಭಿಮಾನಿಗಳಿಗೆ ಇದೇ 24ರಂದು ಸಮಯ ಮೀಸಲಿಡಲು ದಬಾಂಗ್ ನಟ ನಿರ್ದರಿಸಿದ್ದಾರೆ. ಸಾಮಾನ್ಯ ಟಿಕೆಟ್, ಭೇಟಿ, ಟೇಬಲ್ ಬುಕಿಂಗ್ಗಾಗಿ ಸಂಪರ್ಕ ಸಂಖ್ಯೆಗಳನ್ನೂ ಕೊಟ್ಟಿದ್ದಾರೆ. WWW.VKREVENTS.COM ಮೂಲಕ ಹೆಚ್ಚಿನ ಮಾಹಿತಿ ಪಡೆಯಬಹುದು. ನಟನ ಅಧಿಕೃತ ಇನ್ಸ್ಟಾ ಪೇಜ್ನಲ್ಲಿಯೂ ಈ ಸಂಬಂಧ ಮಾಹಿತಿ ಇದೆ.
ಇದನ್ನೂ ಓದಿ: ವೇಶ್ಯೆಯ ಪಾತ್ರದಲ್ಲಿ ಸಂಯುಕ್ತ ಹೆಗ್ಡೆ: 'ಕ್ರೀಂ' ಚಿತ್ರದಿಂದ ವಿವಾದ? ಅಗ್ನಿ ಶ್ರೀಧರ್ ಹೇಳಿದ್ದಿಷ್ಟು..