ಬಾಲಿವುಡ್ ಸೂಪರ್ ಸ್ಟಾರ್ ಸಲ್ಮಾನ್ ಖಾನ್ ಮತ್ತು ಪೂಜಾ ಹೆಗ್ಡೆ ಅಭಿನಯದ 'ಕಿಸಿ ಕಿ ಭಾಯ್ ಕಿಸಿ ಕಿ ಜಾನ್' ಚಿತ್ರ ಮಿಶ್ರ ಪ್ರತಿಕ್ರಿಯೆ ಪಡೆಯುತ್ತಿದೆ. ಈ ನಡುವೆ ತಮ್ಮೆಲ್ಲಾ ಕೆಲಸಗಳಿಗೆ ಬ್ರೇಕ್ ನೀಡಿ ಕರಾವಳಿ ಬೆಡಗಿ ಪೂಜಾ ಹೆಗ್ಡೆ ಮಂಗಳೂರಿಗೆ ಬಂದಿಳಿದಿದ್ದಾರೆ. ಸಿನಿಮಾ ವಿಚಾರವಾಗಿ ನಟಿ ಎಷ್ಟೇ ಬ್ಯುಸಿಯಾಗಿದ್ದರೂ ಸಹ ಮಂಗಳೂರಿಗೆ ಆಗಾಗ ಭೇಟಿ ಕೊಡುತ್ತಲೇ ಇರುತ್ತಾರೆ.
ಇದೀಗ ತಮ್ಮ ಮನೆಯ ಪಕ್ಕದ ಕಾಡಿನಲ್ಲಿ ಸುತ್ತಾಡಿ, ಹೆಬ್ಬಲಸು ಕಿತ್ತು ತಿಂದಿದ್ದಾರೆ. ನಾಯಿ ಜೊತೆ ಆಟವಾಡಿದ್ದಾರೆ. ಮಂಗಳೂರಿನ ಫೇಮಸ್ ಏಡಿ ಸುಕ್ಕವನ್ನು ಸವಿದಿದ್ದಾರೆ. ಈ ಕುರಿತು ಅವರು ಫೋಟೋಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಹೆಬ್ಬಲಸು (ಪೆಜಕಾಯಿ) ಕಾಣಲು ಒಂದು ರೀತಿ ಹಲಸಿನ ಹಣ್ಣು ತರವೇ ಇರುತ್ತದೆ. ಆದರೆ, ಇದು ಗಾತ್ರದಲ್ಲಿ ಬಹಳ ಸಣ್ಣದಾಗಿದ್ದು, ಸವಿಯಲು ಬಹಳ ರುಚಿಯಾಗಿರುತ್ತದೆ.
- " class="align-text-top noRightClick twitterSection" data="
">
ನಟಿ ಪೂಜಾ ಹೆಗ್ಡೆ ಅಂತೂ ಕಾಡಿಗೆ ತೆರಳಿ ಹಣ್ಣನ್ನು ಕೊಯ್ದು ಅದರ ರುಚಿ ನೋಡಿದ್ದಾರೆ. ಜೊತೆಗೆ ಮಂಗಳೂರು ಕಡೆ ಏಡಿ ಪದಾರ್ಥ ತುಂಬಾ ಫೇಮಸ್. ಅದರ ಸುಕ್ಕವನ್ನು ಬಾಯಿಗಿಟ್ಟರೇ ಸಾಕು, ಮತ್ತೊಮ್ಮೆ ತಿನ್ನಬೇಕೆನ್ನುವಷ್ಟು ರುಚಿ. ಈ ಏಡಿ ಸುಕ್ಕವನ್ನು ಕೂಡ ಪೂಜಾ ಸವಿದಿದ್ದಾರೆ. ನಟಿ ಶೇರ್ ಮಾಡಿಕೊಂಡಿರುವ ಫೋಟೋದಲ್ಲಿ ಬ್ಲೂ ಬಣ್ಣದ ಸೆಲ್ವಾರ್ ಧರಿಸಿ, ಮಂಗಳೂರು ಮಲ್ಲಿಗೆ ಮುಡಿದು ಸಾಂಪ್ರದಾಯಿಕವಾಗಿ ಕಂಡಿದ್ದಾರೆ.
ಇದನ್ನೂ ಓದಿ: ಹಾಲಿವುಡ್ನಲ್ಲಿ ಅವಕಾಶ ಕೊಡಿಸುತ್ತೇವೆಂದು ಹೇಳಿ ನಟಿಗೆ ವಂಚನೆ ಆರೋಪ: ಇಬ್ಬರು ಅರೆಸ್ಟ್!
ಕಿಸಿ ಕಿ ಭಾಯ್ ಕಿಸಿ ಕಿ ಜಾನ್ ಕಲೆಕ್ಷನ್..: ಸಲ್ಮಾನ್ ಖಾನ್ ಮತ್ತು ಪೂಜಾ ಹೆಗ್ಡೆ ನಟನೆಯ ಕಿಸಿ ಕಿ ಭಾಯ್ ಕಿಸಿ ಕಿ ಜಾನ್ ಚಿತ್ರ ಮಿಶ್ರ ಪ್ರತಿಕ್ರಿಯೆ ಪಡೆದಿದೆ. ಸಿನಿಮಾವು ಸೋಮವಾರದಂದು 10.5 ಕೋಟಿ ರೂಪಾಯಿ ಗಳಿಸಿದೆ. ಹೀಗಾಗಿ ಭಾರತದಲ್ಲಿ ಸಿನಿಮಾದ ಒಟ್ಟು ಗಳಿಕೆಯು 74 ಕೋಟಿ ರೂಪಾಯಿಗೆ ಬಂದು ತಲುಪಿದೆ. ಶುಕ್ರವಾರ ಕೇವಲ 13 ಕೋಟಿ ಗಳಿಸಿದ ಚಿತ್ರ, ಶನಿವಾರ ಮತ್ತು ಭಾನುವಾರ ಕ್ರಮವಾಗಿ 25 ಕೋಟಿ ಮತ್ತು 26 ಕೋಟಿ ಕಲೆಕ್ಷನ್ ಮಾಡಿದೆ. ಈ ವಾರಾಂತ್ಯದಲ್ಲಿ 100 ಕೋಟಿ ರೂಪಾಯಿ ಕ್ಲಬ್ ಸೇರುವ ಸಾಧ್ಯತೆಯಿದೆ.
ಚಿತ್ರದಲ್ಲಿ ಸಲ್ಮಾನ್ ಮತ್ತು ಪೂಜಾ ಜೊತೆಗೆ ವೆಂಕಟೇಶ್ ದಗ್ಗುಬಾಟಿ, ಶೆಹನಾಜ್ ಗಿಲ್, ಪಾಲಕ್ ತಿವಾರಿ, ರಾಘವ್ ಜುಯಲ್, ಸಿದ್ಧಾರ್ಥ್ ನಿಗಮ್, ಜಸ್ಸಿ ಗಿಲ್ ಮತ್ತು ಜಗಪತಿ ಬಾಬು ಇದ್ದಾರೆ. ಶಹನಾಜ್ ಗಿಲ್ ಮತ್ತು ಪಾಲಕ್ ತಿವಾರಿ ಅವರಿಗಿದು ಚೊಚ್ಚಲ ಹಿಂದಿ ಚಿತ್ರ. ಬಹು ತಾರಾಗಣದ ಸಿನಿಮಾವು 100 ಕ್ಕೂ ಹೆಚ್ಚು ದೇಶಗಳಲ್ಲಿ ತೆರೆ ಕಂಡಿದೆ. ನಮ್ಮ ದೇಶದಲ್ಲಿ 4,500ಕ್ಕೂ ಹೆಚ್ಚು ಸ್ಕ್ರೀನ್ಗಳಲ್ಲಿ ಮತ್ತು ವಿದೇಶಗಳಲ್ಲಿ 1,200ಕ್ಕೂ ಹೆಚ್ಚು ಪರದೆಗಳಲ್ಲಿ ಪ್ರದರ್ಶನಗೊಳ್ಳುತ್ತಿದೆ.
ಇದನ್ನೂ ಓದಿ: ಚುನಾವಣಾ ಅಖಾಡದಲ್ಲಿ ಆ್ಯಕ್ಷನ್ ಪ್ರಿನ್ಸ್: ನಿಖಿಲ್ ಕುಮಾರಸ್ವಾಮಿ ಪರ ಧ್ರುವ ಸರ್ಜಾ ಪ್ರಚಾರ