ETV Bharat / entertainment

ಕಿಚ್ಚ ಸುದೀಪ್ ಸಿನಿಮಾ ಪಯಣದಲ್ಲಿ ಬಾಕ್ಸ್​​​ ಆಫೀಸ್​ ಕೊಳ್ಳೆ ಹೊಡೆದ ಚಿತ್ರಗಳಿವು

ಇಂದು ಸ್ಯಾಂಡಲ್​​ವುಡ್​ ಬಾದ್​ಷಾ ಎನಿಸಿಕೊಂಡಿರುವ ಕಿಚ್ಚ ಸುದೀಪ್ ಹುಟ್ಟುಹಬ್ಬ. ಚಿತ್ರರಂಗದಲ್ಲಿ 25 ವರ್ಷಗಳನ್ನು ಪೂರೈಸಿರುವ ಅವರು ಸಾಕಷ್ಟು ಏಳು ಬೀಳುಗಳನ್ನು ಕಂಡವರು. ಅವರ ಸಿನಿ‌‌‌ ಕೆರಿಯರ್​ನಲ್ಲಿ ಆಫೀಸ್​ ಕೊಳ್ಳೆ ಹೊಡೆದ ಚಿತ್ರಗಳನ್ನು ನೋಡುವುದಾದರೆ...

Kichcha Sudeep best movies in his career
ಪತ್ನಿ ಪ್ರಿಯಾ ಜೊತೆ ಸುದೀಪ್​
author img

By

Published : Sep 2, 2022, 3:50 PM IST

Updated : Sep 2, 2022, 4:28 PM IST

ಕನ್ನಡ ಚಿತ್ರರಂಗ ಅಲ್ಲದೇ ಪರಭಾಷೆಯಲ್ಲಿ‌ ಕನ್ನಡದ ಕೀರ್ತಿ ಎತ್ತಿ ಹಿಡಿದಿರುವ ನಟ‌ ಕಿಚ್ಚ ಸುದೀಪ್, ಕ್ರಿಕೆಟ್ ಆಟಗಾರ ಆಗಬೇಕು ಎಂದುಕೊಂಡಿದ್ದವರು. ಆದರೆ, ಈಗ ಭಾರತೀಯ ಸಿನಿಮಾ‌ರಂಗದಲ್ಲಿ ಸ್ಟಾರ್ ಆಗಿರೋದು ಇತಿಹಾಸ. ಕನ್ನಡ ಚಿತ್ರರಂಗ ಮಾತ್ರವಲ್ಲದೇ ಹಿಂದಿ, ತಮಿಳು, ತೆಲುಗು ಮತ್ತು ಮಲಯಾಳಂ ಸಿನಿಮಾಗಳಲ್ಲಿ ನಟಿಸುವ ಮೂಲಕ ಸುದೀಪ್ ಕೋಟ್ಯಂತರ ಸಂಖ್ಯೆಯ ಅಭಿಮಾನಿ ಬಳಗವನ್ನ ಹೊಂದಿದ್ದಾರೆ. ಸದ್ಯ ಅವರಿಗೆ ಹುಟ್ಟುಹಬ್ಬದ ಸಂಭ್ರಮ. 49ನೇ ವಸಂತಕ್ಕೆ ಕಾಲಿಟ್ಟ ಕಿಚ್ಚ ಸಾವಿರಾರು ಅಭಿಮಾನಿಗಳ ಜೊತೆ ಈ ವರ್ಷ ತಮ್ಮ ಬರ್ತ್ ಡೇ ಸೆಲೆಬ್ರೆಟ್ ಮಾಡಿಕೊಂಡಿದ್ದಾರೆ.

Kichcha Sudeep best movies in his career
ಕಿಚ್ಚ ಸುದೀಪ್ ಸಿನಿಮಾ ಪಯಣ

ಚಿತ್ರರಂಗದಲ್ಲಿ 25 ವರ್ಷಗಳನ್ನು ಪೂರೈಸಿರುವ ಅವರು ಬಣ್ಣದ ಜಗತ್ತಿನಲ್ಲಿ ಸಾಕಷ್ಟು ಏಳು-ಬೀಳುಗಳನ್ನು ಕಂಡವರು. ಕಷ್ಟದ ದಿನಗಳನ್ನು ಮೆಟ್ಟಿ ಸ್ಯಾಂಡಲ್​​ವುಡ್​ ಬಾದ್​ಷಾ ಎನಿಸಿಕೊಂಡಿದ್ದಾರೆ. ಇನ್ನು ಪ್ರತಿಯೊಬ್ಬ ಸ್ಟಾರ್ ನಟನ ಸಿನಿ ಕರಿಯರ್​​​ನಲ್ಲಿ ಒಂದೊಂದು ಸಿನಿಮಾಗಳು ಒಂದೊಂದು ಮಹತ್ವ ಹೊಂದಿರುತ್ತದೆ. ಅದೇ ರೀತಿ ಕಿಚ್ಚನ ಸಿನಿ‌‌‌ ಕೆರಿಯರ್​ನಲ್ಲಿ ಬಾಕ್ಸ್ ಆಫೀಸ್‌ನಲ್ಲಿ ಲೂಟಿ ಮಾಡಿದ ಸಿನಿಮಾಗಳ ಕಹಾನಿ ಹೀಗಿದೆ.

Kichcha Sudeep best movies in his career
ಪತ್ನಿ ಪ್ರಿಯಾ ಜೊತೆ ಸುದೀಪ್​

ಸುದೀಪ್ ಬಣ್ಣ ಹಚ್ಚಿದ್ದು ಮೊದಲು 'ಬ್ರಹ್ಮ' ಚಿತ್ರಕ್ಕಾದರೂ ಈ ಸಿನಿಮಾ ಪೂರ್ತಿಯಾಗಲಿಲ್ಲ. ನಂತರ 1997 ರಲ್ಲಿ 'ತಾಯವ್ವ' ಚಿತ್ರದ ಮೂಲಕ ತೆರೆಗೆ ಬರುತ್ತಾರೆ. ಆದರೆ, ಇದು ಸುದೀಪ್​​​​ಗೆ ಹೇಳಿಕೊಳ್ಳುವಂತ ಹೆಸರು ನೀಡಲಿಲ್ಲ. 'ಪ್ರತ್ಯರ್ಥ' ಚಿತ್ರ ಕೂಡಾ ಬ್ರೇಕ್ ನೀಡದಿದ್ದಾಗ ಸುದೀಪ್, ಈ ಚಿತ್ರರಂಗದ ಸಹವಾಸವೇ ಸಾಕು ಎಂದು ನಿರ್ಧರಿಸಿದವರು.

ಸ್ಪರ್ಶ ಚಿತ್ರದ ಪೋಸ್ಟರ್​

ಆ ವೇಳೆ ಸುನಿಲ್ ಕುಮಾರ್ ದೇಸಾಯಿ ಅವರ 'ಸ್ಪರ್ಶ' ಅವರನ್ನು ಹಿಡಿದು ನಿಲ್ಲಿಸುತ್ತದೆ. ಸುದೀಪ್ ತಂದೆ ಸಂಜೀವ್​​ ಸರೋವರ್ 1999ರಲ್ಲಿ ಸುಮಾರು ಒಂದೂವರೆ ಕೋಟಿ ರೂ. ಬಜೆಟ್​​​ನಲ್ಲಿ ಈ ಚಿತ್ರವನ್ನು ನಿರ್ಮಿಸಿದ್ದರು. ಕ್ಯೂಟ್ ಲವ್ ಸ್ಟೋರಿ ಜೊತೆ ಸುಂದರ ಹಾಡುಗಳು ಚಿತ್ರಕ್ಕೆ ಪ್ಲಸ್ ಪಾಯಿಂಟ್ ಆಗಿತ್ತು. ಸುದೀಪ್ ಜೊತೆ ರೇಖಾ, ಸುಧಾರಾಣಿ ನಟಿಸಿದ್ದರು. ಚಿತ್ರ ಸುಮಾರು 4 ಕೋಟಿ ರೂ. ಕಲೆಕ್ಷನ್ ಮಾಡಿತ್ತು.

ಹುಚ್ಚ ಚಿತ್ರದ ಪೋಸ್ಟರ್​

ಅದಾದ ಬಳಿಕ ಅವರಿ​ಗೆ ದೊಡ್ಡ ಮಟ್ಟದ ಬ್ರೇಕ್ ನೀಡಿದ್ದು ಓಂ ಪ್ರಕಾಶ್ ರಾವ್ ನಿರ್ದೇಶನದ ಹುಚ್ಚ ಸಿನಿಮಾ. ಈ ಚಿತ್ರ ಅವರನ್ನು ಸ್ಟಾರ್ ಹೀರೋ ಮಾಡಿತು. 2001ರಲ್ಲಿ ತೆರೆಕಂಡ ಈ ಸಿನಿಮಾವನ್ನು ರೆಹಮಾನ್ ಎಂಬ ನಿರ್ದೇಶಕ ಸುಮಾರು 2 ಕೋಟಿ ರೂ. ಬಜೆಟ್​​ನಲ್ಲಿ ನಿರ್ಮಿಸಿದ್ದರು. ಈ ಚಿತ್ರದ ಮೂಲಕ ಸುದೀಪ್ ಅದ್ಭುತ ನಟ ಎಂಬುದು ಎಲ್ಲರಿಗೂ ತಿಳಿಯಿತು. ಆ ವೇಳೆ ಸಿನಿಮಾ 5 ಕೋಟಿ ರೂ. ಕಲೆಕ್ಷನ್ ಮಾಡಿತ್ತು.

ಆಟೋಗ್ರಾಫ್​ ಚಿತ್ರದ ಪೋಸ್ಟರ್​

ಚಂದು, ಧಮ್, ಸ್ವಾತಿಮುತ್ತು ಚಿತ್ರಗಳಲ್ಲಿ ವಿಭಿನ್ನ ಪಾತ್ರ ಮಾಡಿದ್ದ ಸುದೀಪ್, ನಟ ಮಾತ್ರವಲ್ಲ ನಿರ್ದೇಶಕರಾಗಿಯೂ ಗುರುತಿಸಿಕೊಂಡರು. 'ಮೈ ಆಟೋಗ್ರಾಫ್' ಚಿತ್ರದ ಮೂಲಕ ನಿರ್ದೇಶಕನ ಸ್ಥಾನವನ್ನು ತುಂಬಿದರು. ಈ ಚಿತ್ರದ ಮೂಲಕ ಆ್ಯಕ್ಟರ್, ಡೈರಕ್ಟರ್ ಹಾಗೂ ಪ್ರೊಡ್ಯೂಸರ್ ಆಗಿ ಕೂಡಾ ಗುರುತಿಸಿಕೊಂಡರು. ಕಿಚ್ಚ ಕ್ರಿಯೇಷನ್ಸ್ ಬ್ಯಾನರ್ ಮೂಲಕ ಸುದೀಪ್ ಈ ಚಿತ್ರವನ್ನು ತಾವೇ ನಿರ್ಮಿಸಿದ್ದರು. 2006 ರಲ್ಲಿ ಸುಮಾರು 2 ಕೋಟಿ ರೂ. ಬಜೆಟ್​​​ನಲ್ಲಿ ತಯಾರಾದ 'ಮೈ ಆಟೋಗ್ರಾಫ್' 6 ಕೋಟಿ ರೂ. ಲಾಭ ಮಾಡಿತು.

ಮದಕರಿ ಚಿತ್ರದ ಪೋಸ್ಟರ್​

ಕಿಚ್ಚ ಖಾಕಿ ತೊಟ್ಟು ಅಬ್ಬರಿಸಿದ ಸಿನಿಮಾ 'ವೀರ ಮದಕರಿ'. 2009 ರಲ್ಲಿ ತೆರೆ ಕಂಡ ಸಿನಿಮಾ ಸೂಪರ್ ಹಿಟ್ ಎನಿಸಿಕೊಂಡಿತು. ಈ ಚಿತ್ರಕ್ಕಾಗಿ ಸುದೀಪ್ ತೂಕ ಇಳಿಸಿಕೊಂಡು ಬಹಳ ಸಣ್ಣ ಆಗಿದ್ದರು. ಇದು ರಾಗಿಣಿ ಅವರ ಮೊದಲ ಸಿನಿಮಾ ಕೂಡಾ. 4 ಕೋಟಿಯ ಈ ಸಿನಿಮಾ ಬಾಚಿಕೊಂಡದ್ದು 8 ಕೋಟಿ ರೂಪಾಯಿ. ಬಳಿಕ ಕಾಮಣ್ಣನ ಮಕ್ಕಳು, ಫೂಂಕ್ (ಹಿಂದಿ ಸಿನಿಮಾ) ನಂತರ ಮತ್ತೆ ಸುದೀಪ್ ಖಾಕಿ ತೊಟ್ಟದ್ದು 'ಕೆಂಪೇಗೌಡ' ಚಿತ್ರದಲ್ಲಿ. ಶಂಕರೇಗೌಡ ನಿರ್ಮಾಣದ ಈ ಚಿತ್ರದಲ್ಲಿ ಮತ್ತೆ ರಾಗಿಣಿ ಸುದೀಪ್ ಜೊತೆ ಡ್ಯೂಯೆಟ್ ಹಾಡಿದ್ದರು. 7ಕೋಟಿ ರೂ. ಸಿನಿಮಾ ಬಾಕ್ಸ್​ ಆಫೀಸಿನಲ್ಲಿ 11 ಕೋಟಿ ರೂ. ಗಳಿಸಿತ್ತು.

ಈಗ ಚಿತ್ರದ ಪೋಸ್ಟರ್​

ನಾಯಕ ಮಾತ್ರವಲ್ಲ ಸುದೀಪ್ ಖಳನಟನಾಗಿ ಕೂಡಾ ನಟಿಸಿದ ಚಿತ್ರ ವಾಲಿ. ಈ ಚಿತ್ರದ ನಂತರ ತೆಲುಗಿನ ಎಸ್​.ಎಸ್​. ರಾಜಮೌಳಿ ನಿರ್ದೇಶನದ 'ಈಗ' ಚಿತ್ರದಲ್ಲಿ ಸುದೀಪ್ ಅವರು ನಾಣಿ ಎದುರು ವಿಲನ್ ಆಗಿ ನಟಿಸಿದರು. ನಾಯಕಿ ಸಮಂತಾಳನ್ನು ಕಾಡುವ ಮತ್ತು ನೊಣದಿಂದ ತೊಂದರೆಗೆ ಒಳಗಾಗುವ ಪಾತ್ರದಲ್ಲಿ ಸುದೀಪ್ ಬಹಳ ಚೆನ್ನಾಗಿ ನಟಿಸಿದ್ದರು. 40 ಕೋಟಿ ರೂ. ವೆಚ್ಚದ ಈ ಸಿನಿಮಾ 100 ಕೋಟಿ ಲಾಭ ಮಾಡಿತ್ತು.

ಮಾಣಿಕ್ಯ ಚಿತ್ರದ ಪೋಸ್ಟರ್​

ಒಂದೊಂದು ಚಿತ್ರಗಳ ಮೂಲಕ ಸ್ಟಾರ್ ವ್ಯಾಲ್ಯೂ ಹೆಚ್ಚಿಸಿಕೊಂಡ ಸುದೀಪ್, 2014 ರಲ್ಲಿ 'ಮಾಣಿಕ್ಯ' ಚಿತ್ರದಲ್ಲಿ ನಟಿಸಿದರು. ಸುದೀಪ್ ಜೊತೆ ಸೇರಿ ಎನ್. ಕುಮಾರ್ ಸುಮಾರು 18 ಕೋಟಿ ರೂ. ವೆಚ್ಚದಲ್ಲಿ ಈ ಚಿತ್ರವನ್ನು ನಿರ್ಮಿಸಿದರು. ಫ್ಯಾಮಿಲಿ ಸೆಂಟಿಮೆಂಟ್ ಹೊಂದಿದ್ದ ಮಾಣಿಕ್ಯ 22 ಕೋಟಿ ರೂ. ಕಲೆಕ್ಷನ್ ಮಾಡುವ ಮೂಲಕ ಗಲ್ಲಾಪೆಟ್ಟಿಗೆ ತುಂಬಿಸಿತ್ತು.

ಕೆಂಪೇಗೌಡ ಚಿತ್ರದ ಪೋಸ್ಟರ್​

ಈ ಸಿನಿಮಾ ಯಶಸ್ಸಿನ ನಂತರ ಸುದೀಪ್ ಮತ್ತೊಂದು ಹಿಟ್ ಚಿತ್ರ ಕೊಟ್ಟಿದ್ದು 'ರನ್ನ'. 2015ರಲ್ಲಿ ರಿಲೀಸ್ ಆದ ಈ ಚಿತ್ರವನ್ನು, ನಿರ್ಮಾಪಕರಾದ ಎಂ​. ಚಂದ್ರಶೇಖರ್ 20 ಕೋಟಿ ಬಜೆಟ್​​​​​​​​​​​​​​​​​ನಲ್ಲಿ ನಿರ್ಮಾಣ ಮಾಡಿದ್ರು. ರನ್ನ ಬಾಕ್ಸ್ ಆಫೀಸ್​​​​ನಲ್ಲಿ ಕೊಳ್ಳೆ ಹೊಡೆದಿದ್ದು 24 ಕೋಟಿ ರೂ. ಕಲೆಕ್ಷನ್.

ಕೋಟಿಗೊಬ್ಬ 2 ಚಿತ್ರದ ಪೋಸ್ಟರ್​

ಕನ್ನಡ ಸಿನಿಮಾಗಳೊಂದಿಗೆ ತೆಲುಗು ಹಾಗೂ ತಮಿಳು ಸಿನಿಮಾಗಳಲ್ಲಿ ಗೆಸ್ಟ್ ಅಪಿಯರೆನ್ಸ್ ಮಾಡುವ ಜೊತೆಗೆ ಸುದೀಪ್ 'ಕೋಟಿಗೊಬ್ಬ -2' ಸಿನಿಮಾ ಮಾಡಿದ್ರು. ತಮಿಳು ನಿರ್ದೇಶಕ ಕೆ.ಎಸ್. ರವಿಕುಮಾರ್ ನಿರ್ದೇಶನದ, ಈ ಚಿತ್ರವನ್ನು ನಿರ್ಮಾಪಕ ಸೂರಪ್ಪ ಬಾಬು 25 ಕೋಟಿ ಬಜೆಟ್​​ನಲ್ಲಿ ಸಿನಿಮಾ ಮಾಡಿದ್ರು. ಈ ಚಿತ್ರ 30 ಕೋಟಿ ರೂ. ಕಲೆಕ್ಷನ್ ಮಾಡಿತ್ತು.

ಹೆಬ್ಬುಲಿ ಚಿತ್ರದ ಪೋಸ್ಟರ್​

ಕಿಚ್ಚ ಡಿಫರೆಂಟ್​ ಹೇರ್​​ಸ್ಟೈಲ್ ಹಾಗೂ ಆರ್ಮಿ ಗೆಟಪ್​​ನಲ್ಲಿ ಕಾಣಿಸಿಕೊಂಡ ಸಿನಿಮಾ 'ಹೆಬ್ಬುಲಿ'. ಉಮಾಪತಿ ಈ ಚಿತ್ರವನ್ನು 30 ಕೋಟಿ ರೂ. ಬಜೆಟ್​​​ನಲ್ಲಿ ನಿರ್ಮಾಣ ಮಾಡಿದರು. ಈ ಚಿತ್ರದ ನಂತರ ಸುದೀಪ್ ಕುಸ್ತಿ ಅಖಾಡದಲ್ಲಿ ತೊಡೆ ತಟ್ಟಿದ ಸಿನಿಮಾ 'ಪೈಲ್ವಾನ್'. ಚಿತ್ರಕ್ಕಾಗಿ ಸುದೀಪ್ ಬಾಕ್ಸಿಂಗ್, ಕುಸ್ತಿ ಕಲಿತು ನಟಿಸಿದರು. ಚಿತ್ರವನ್ನು ಕೃಷ್ಣ ನಿರ್ದೇಶನ ಮಾಡಿದರೆ, ಪತ್ನಿ ಸ್ವಪ್ನ ಕೃಷ್ಣ ಚಿತ್ರಕ್ಕಾಗಿ 35 ಕೋಟಿ ರೂ. ಬಂಡವಾಳ ಹೂಡಿದ್ದರು. ಸಿನಿಮಾ 40 ಕೋಟಿ ರೂ. ಕಲೆಕ್ಷನ್ ಮಾಡಿತ್ತು.

ಪೈಲ್ವಾನ್​ ಚಿತ್ರದ ಪೋಸ್ಟರ್​

ಈ ಸಿನಿಮಾ ಬಳಿಕ ಕಿಚ್ಚನ ಸಿನಿ ಜರ್ನಿಯಲ್ಲಿ ಅತೀ ಹೆಚ್ಚು ಬಾಕ್ಸ್ ಆಫೀಸ್ ಕಲೆಕ್ಷನ್ ಮಾಡಿದ ಚಿತ್ರ ವಿಕ್ರಾಂತ್ ರೋಣ. ಸ್ಟೈಲಿಷ್ ಪೊಲೀಸ್ ಆಫೀಸರ್ ಆಗಿ ಬೆಳ್ಳಿ ತೆರೆ ಮೇಲೆ ಅಬ್ಬರಿಸಿದರು. ಪ್ಯಾನ್ ಇಂಡಿಯಾ ಮಟ್ಟದಲ್ಲಿ ಬಿಡುಗಡೆ ಆದ ವಿಕ್ರಾಂತ್ ರೋಣ ಸಿನಿಮಾ ಬಜೆಟ್ 95 ಕೋಟಿ. ಈ ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ ಲೂಟಿ ಮಾಡಿದ್ದು 150 ಕೋಟಿಯಿಂದ‌ 210‌ ಕೋಟಿ ಎಂಬುದು ಗಾಂಧಿ ನಗರದ ಮಾತು. ಇಟ್ಟಿನಲ್ಲಿ ಕಿಚ್ಚನ ಸಿನಿಮಾ ಕೆರಿಯರ್ ಗ್ರಾಫ್​ನಲ್ಲಿ ಕೋಟಿ ಕೋಟಿ ಕಲೆಕ್ಷನ್ ಮಾಡಿರುವ ಸಿನಿಮಾಗಳೇ ಸಾಕ್ಷಿ.

ವಿಕ್ರಾಂತ್​ ರೋಣ ಚಿತ್ರದ ಪೋಸ್ಟರ್​

ಇದನ್ನೂ ಓದಿ: ಹುಟ್ಟುಹಬ್ಬದ ಸಂಭ್ರಮದಲ್ಲಿ ಸುದೀಪ್​; ಭಾರತೀಯ ಚಿತ್ರರಂಗದಲ್ಲಿ ಗಮನ ಸೆಳೆದ ಅಭಿನಯ ಚಕ್ರವರ್ತಿಯ ಸಿನಿ ಜರ್ನಿ

Last Updated : Sep 2, 2022, 4:28 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.