ETV Bharat / entertainment

ಪಾತ್ರದಿಂದ ಹೊರಬರದ ಡಾರ್ಲಿಂಗ್ ಕೃಷ್ಣ: ಚಿತ್ರತಂಡ, ಪತ್ನಿ ಮಿಲನ ನಾಗರಾಜ್ ಶಾಕ್​!

ಕೌಸಲ್ಯಾ ಸುಪ್ರಜಾ ರಾಮ ಚಿತ್ರದ ಪ್ರೊಮೋಶನಲ್​ ವಿಡಿಯೋ ಬಿಡುಗಡೆ ಮಾಡಲಾಗಿದೆ.

author img

By

Published : Apr 18, 2023, 12:52 PM IST

Kausalya Supraja Rama
ಕೌಸಲ್ಯಾ ಸುಪ್ರಜಾ ರಾಮ
ಕೌಸಲ್ಯಾ ಸುಪ್ರಜಾ ರಾಮ ಪ್ರೊಮೋಶನಲ್​ ವಿಡಿಯೋ

'ಕೌಸಲ್ಯಾ ಸುಪ್ರಜಾ ರಾಮ' ಶೀರ್ಷಿಕೆಯಿಂದ ಕನ್ನಡ ಚಿತ್ರರಂಗದಲ್ಲಿ ಟಾಕ್ ಆಗುತ್ತಿರುವ ಸಿನಿಮಾ. ಡಾರ್ಲಿಂಗ್‌ ಕೃಷ್ಣ ಹಾಗೂ ನಿರ್ದೇಶಕ ಶಶಾಂಕ್‌ ಕಾಂಬಿನೇಷನ್​ನಲ್ಲಿ ಮೂಡಿ ಬರುತ್ತಿರುವ ಈ ಕೌಸಲ್ಯಾ ಸುಪ್ರಜಾ ರಾಮ ಚಿತ್ರ ಕೆಲವೊಂದು ವಿಚಾರಗಳಿಗೆ ಸದ್ದು ಮಾಡುತ್ತಿದೆ. ಡಾರ್ಲಿಂಗ್ ಕೃಷ್ಣನ‌ ಲುಕ್ ಈ ಚಿತ್ರದಲ್ಲಿ ಬಹಳ ವಿಶೇಷವಾಗಿದೆ. ಇದಕ್ಕಾಗಿ ನಿರ್ದೇಶಕ ಶಶಾಂಕ್ ಅವರು ಕೃಷ್ಣರ ಕೂದಲಿಗೆ ಹಾಗೂ ಗಡ್ಡಕ್ಕೆ ಕತ್ತರಿ ಹಾಕಿಸಿ ರಗಡ್ ಅ್ಯಂಡ್​ ಸ್ಟೈಲಿಶ್ ಲುಕ್ ಕೊಟ್ಟಿದ್ದಾರೆ. ಡಾರ್ಲಿಂಗ್​ ಕೃಷ್ಣ ಆ್ಯಟಿಟ್ಯೂಡ್‌ ಲುಕ್​​ನಿಂದ ಗಮನ ಸೆಳೆಯುತ್ತಿದ್ದು, ಈ ಚಿತ್ರದ ಶಿವಾನಿ ಎಂಬ ರೊಮ್ಯಾಂಟಿಕ್ ಹಾಡು ಮತ್ತು ಸಿನಿಮಾ ಪ್ರಚಾರಕ್ಕಾಗಿ ಸಖತ್ ಕ್ಯೂರ್ಯಾಸಿಟಿ ಹುಟ್ಟಿಸುವ ಪ್ರಮೋಷನಲ್ ಮೇಕಿಂಗ್ ವಿಡಿಯೋ ಒಂದನ್ನು ಚಿತ್ರತಂಡ ಮಾಡಿದೆ.

'ಶಿವಾನಿ' ಸಾಂಗ್​​ ಬಿಡುಗಡೆ ದಿನಾಂಕ.. ಹೌದು, ಸದ್ಯ ಟೀಸರ್​ನಿಂದಲೇ ಸೌಂಡ್ ಮಾಡುತ್ತಿರುವ ಈ ಕೌಸಲ್ಯಾ ಸುಪ್ರಜಾ ರಾಮ ಚಿತ್ರದ ಬಗ್ಗೆ ಡಾರ್ಲಿಂಗ್ ಕೃಷ್ಣ, ನಿರ್ದೇಶಕ ಶಶಾಂಕ್ ಹಾಗು ನಟಿ ಬೃಂದಾ ಆಚಾರ್ಯ ಮಾತುಕತೆ ಮಾಡ್ತಾರೆ. ಇಲ್ಲಿ ಡಾರ್ಲಿಂಗ್ ಕೃಷ್ಣ ಸಖತ್ ಸೀರಿಯಸ್ ಆಗಿ ಮಾತನಾಡಿದ್ದು, ಸಿನಿಮಾದ ಸೀರಿಯಸ್ ರಾಮನ ಗುಂಗಿನಲ್ಲಿದ್ದಾರೆ. ಹೀಗಾಗಿ ನಿರ್ದೇಶಕ ಶಶಾಂಕ್‌ ಹಾಗೂ ಬೃಂದಾ ಆಚಾರ್ಯ ಒಂದು ಕ್ಷಣ ಶಾಕ್ ಆಗಿದ್ದು‌ ನಿಜ. ಮತ್ತೊಂದು ಕಡೆ ಡಾರ್ಲಿಂಗ್ ಕೃಷ್ಣ ಪತ್ನಿ ಮಿಲನ ನಾಗರಾಜ್ ಕೂಡ ಪತಿಯ ಆ್ಯಟಿಟ್ಯೂಡ್​ಗೆ ಶಾಕ್ ಆಗಿದ್ದಾರೆ. ಆದರೆ ಶಿವಾನಿ ಹಾಡಿನಲ್ಲಿ ಕೃಷ್ಣ ಹಾಗೂ ಬೃಂದಾ ಆಚಾರ್ಯ ಜೋಡಿ ಯೂತ್​ಗೆ ಇಷ್ಟ ಆಗುತ್ತೆ ಅನ್ನೋದು ನಿರ್ದೇಶಕ ಶಶಾಂಕ್‌ ಅವರ ನಂಬಿಕೆ. 'ಶಿವಾನಿ' ವಿಡಿಯೋ ಸಾಂಗ್​ ಇದೇ ಏಪ್ರಿಲ್​​ 21ರ ಸಂಜೆ 6 ಗಂಟೆಗೆ ಯೂಟ್ಯೂಬ್​ನಲ್ಲಿ ರಿಲೀಸ್​ ಆಗಲಿದೆ.

70 ದಿನಗಳ ಚಿತ್ರೀಕರಣ... ಚಿತ್ರದ ಟೈಟಲ್​ ಜೊತೆ 'ಟೇಲ್‌ ಆಫ್‌ ಎ ರಿಯಲ್‌ ಮ್ಯಾನ್‌' ಎಂಬ‌ ಅಡಿಬರಹ ಇದೆ. ಹೆಣ್ಣಿನ ದೃಷ್ಟಿಕೋನಲ್ಲಿ ನಿಜವಾದ ಪುರುಷ ಎಂದರೆ ಯಾರು ಮತ್ತು ಆತ ಹೇಗಿರಬೇಕು ಎಂಬುದನ್ನು ಕೌಸಲ್ಯಾ ಸುಪ್ರಜಾ ರಾಮ ಸಿನಿಮಾ ಹೊಂದಿದೆ. ಲವ್ ಸ್ಟೋರಿ ಜೊತೆಗೆ ತಾಯಿ‌ಯ ಸೆಂಟಿಮೆಂಟ್ ಕೂಡ ಹೊಂದಿದೆ‌. 70 ದಿನಗಳ ಕಾಲ ಚಿತ್ರೀಕರಣ ಮಾಡಲಾಗಿದೆ. ಬೆಂಗಳೂರು ಹಾಗೂ ಮೈಸೂರಿನ ವಿವಿಧ ಭಾಗಗಳಲ್ಲಿ ಶೂಟಿಂಗ್‌ ನಡೆಸಲಾಗಿದೆ. ಕಾಶ್ಮೀರದಲ್ಲಿ ಒಂದು ಹಾಡನ್ನು ಸೆರೆ ಹಿಡಿಯಲಾಗಿದೆ. ಸದ್ಯ ಸಿನಿಮಾದ ರೀ ರೆಕಾರ್ಡಿಂಗ್‌ ಕೆಲಸ ನಡೆಯುತ್ತಿದ್ದು, ಪೋಸ್ಟ್ ಪ್ರೊಡಕ್ಷನ್ ಹಂತದಲ್ಲಿದೆ.

ಇದನ್ನೂ ಓದಿ: ಮಹಿಳಾ ಕಾಸ್ಟಿಂಗ್​ ನಿರ್ದೇಶಕಿ ವೇಶ್ಯಾವಾಟಿಕೆ ದಂಧೆ.. ಗಿರಾಕಿಗಳ ರೀತಿ ಹೋದ ಪೊಲೀಸರು, ಮುಂದಾಗಿದ್ದೇನು?

ಡಾರ್ಲಿಂಗ್ ಕೃಷ್ಣ ಜೊತೆ ಬೃಂದಾ ಆಚಾರ್ಯ ಮೊದಲ ಬಾರಿಗೆ ಸ್ಕ್ರೀನ್ ಶೇರ್ ಮಾಡಿಕೊಂಡಿದ್ದಾರೆ. ಜೊತೆಗೆ ರಂಗಾಯಣ ರಘು, ಸುಧಾ ಬೆಳವಾಡಿ,‌ ನಾಗಭೂಷಣ್ ಸೇರಿದಂತೆ ಸಾಕಷ್ಟು ಕಲಾವಿದರು ‌ಈ ಚಿತ್ರದಲ್ಲಿದ್ದಾರೆ‌. ಈ ಚಿತ್ರವನ್ನು ಬಿ.ಸಿ. ಪಾಟೀಲ್‌ ಅವರ ಕೌರವ ಪ್ರೊಡಕ್ಷನ್‌ ಹಾಗೂ ಶಶಾಂಕ್‌ ಸಿನಿಮಾಸ್‌ ಜಂಟಿಯಾಗಿ ನಿರ್ಮಿಸಿದೆ. ಅರ್ಜುನ್‌ ಜನ್ಯ ಸಂಗೀತ ನಿರ್ದೇಶನ ಚಿತ್ರಕ್ಕಿದೆ. ಡಾಲಿಂಗ್‌ ಕೃಷ್ಣ ಅವರ ಕರಿಯರ್‌ನಲ್ಲೇ ದೊಡ್ಡ ಬಜೆಟ್‌ನ ಸಿನಿಮಾ ಇದಾಗಿದ್ದು, ಸಿನಿ ಪ್ರೇಮಿಗಳ ಹೃದಯ ಕದಿಯುವಲ್ಲಿ ಯಶಸ್ವಿ ಆಗುತ್ತೆ ಅನ್ನೋದು ಇಡೀ ಚಿತ್ರತಂಡದ ವಿಶ್ವಾಸ.

ಇದನ್ನೂ ಓದಿ: ಹ್ಯಾಪಿ ಬರ್ತ್​ಡೇ ಲವ್ಲಿ ಸ್ಟಾರ್: 47ನೇ ವಸಂತಕ್ಕೆ ಕಾಲಿಟ್ಟ ನೆನಪಿರಲಿ ಪ್ರೇಮ್​

ETV Bharat Logo

Copyright © 2024 Ushodaya Enterprises Pvt. Ltd., All Rights Reserved.