ಹೈದರಾಬಾದ್: ಬಿ-ಟೌನ್‌ನಲ್ಲಿ ಸದ್ಯ ಸುದ್ದಿಯಲ್ಲಿರುವ ಪ್ರಸಿದ್ಧ ಜೋಡಿ ಅರ್ಜುನ್ ಕಪೂರ್ ಮತ್ತು ಮಲೈಕಾ ಅರೋರಾ ತಮ್ಮ ಪ್ರೀತಿಯನ್ನು ಮುಕ್ತವಾಗಿ ಸಾಮಾಜಿಕ ಮಾಧ್ಯಮದಲ್ಲಿ ವ್ಯಕ್ತಪಡಿಸುತ್ತಿದ್ದಾರೆ. ಈ ಜೋಡಿ ತಮ್ಮ ಮುದ್ದಾದ ಚಿತ್ರಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳುತ್ತಿದ್ದು, ಇದೀಗ ಅರ್ಜುನ್ ಕಪೂರ್ ಇನ್ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಿದ ಹೊಸ ಜೊತೆಗಿನ ಪೋಟೋ ಬಾರಿ ಸದ್ದು ಮಾಡಿದೆ.
- " class="align-text-top noRightClick twitterSection" data="
">
ಈ ಜೋಡಿಗಳು ಮುಂಬರುವ ದಿನಗಳಲ್ಲಿ ತುಂಬಾ ಬ್ಯುಸಿಯಾಗಲಿದ್ದಾರೆ. ಶೂಟಿಂಗ್ ಇರುವ ಕಾರಣ ಇಬ್ಬರು ದೂರ ಹೋಗಲಿದ್ದಾರೆ. ಹಾಗಾಗಿ ತನ್ನ ಲವ್ಲಿ ಲೇಡಿ ಮಲೈಕಾಳಿಗೆ ಸ್ಪೆಷಲ್ ಅನ್ನಿಸಲು ಇಬ್ಬರು ಹೊರಗೆ ಸುತ್ತಾಡಿದ್ದು ಆ ಸಂದರ್ಭದಲ್ಲಿ ತೆಗೆದುಕೊಂಡ ಪೋಟೋವನ್ನು ಅರ್ಜುನ್ ಇನ್ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಿದ್ದಾರೆ. ಮತ್ತು ಅದಕ್ಕೆ " ಶೂಟಿಂಗ್ ನಿಂದಾಗಿ ನಾವಿಬ್ಬರೂ ದೂರ ಹೋಗಲಿದ್ದೇವೆ, ಇದಕ್ಕೂ ಮುನ್ನ ಬೇಬಿ ಮಲೈಕಾ ಸ್ಪೆಷಲ್ ಅನ್ನಿಸಲು ವಾಕ್ ಹೋಗಿದ್ದೆ" ಎಂದು ಈ ರೀತಿಯಾಗಿ ಬರೆದುಕೊಂಡಿದ್ದಾರೆ.
ಫೋಟೋಗೆ ಮಲೈಕಾ ಪ್ರತಿಕ್ರಿಯೆ : ಅರ್ಜುನ್ ಕಪೂರ್ ಅವರ ಪೋಸ್ಟ್ ಅನ್ನು ತಮ್ಮ ಇನ್ಸ್ಟಾ ಸ್ಟೋರಿಯಲ್ಲಿ 'ಮೇರಾ ರಾಕ್' ಎಂಬ ಶೀರ್ಷಿಕೆಯೊಂದಿಗೆ ಅರೋರಾ ಹಂಚಿಕೊಂಡಿದ್ದಾರೆ. ಈ ಜೋಡಿಯನ್ನು ಮೆಚ್ಚಿಕೊಂಡ ಅಭಿಮಾನಿಗಳು ಅವರ ಮದುವೆಗಾಗಿ ಕಾಯುತ್ತಿದ್ದಾರೆ. ಮಾಧ್ಯಮ ವರದಿಗಳ ಪ್ರಕಾರ, ಅರ್ಜುನ್ ಮತ್ತು ಮಲೈಕಾ ಈ ವರ್ಷದ ಕೊನೆಯಲ್ಲಿ ಮದುವೆಯಾಗಲಿದ್ದು, ಇವರಿಬ್ಬರ ಮದುವೆ ಮಾಮೂಲಿಯಾಗಿ ನಡೆಯಲಿದೆ, ವಿಶೇಷ ವ್ಯಕ್ತಿಗಳು ಮಾತ್ರ ಭಾಗಿಯಾಗಲಿದ್ದಾರೆ ಎಂಬ ಮಾತು ಕೇಳಿಬಂದಿದೆ.
ಇದನ್ನೂ ಓದಿ: ಮಗಳ ನಿಶ್ಚಿತಾರ್ಥ ಸಮಾರಂಭದಲ್ಲಿ ಸೂಪರ್ ಸ್ಟಾರ್ ಅಮೀರ್ ಖಾನ್ ಡ್ಯಾನ್ಸ್