ಇಂಡಿಯನ್ ಸೂಪರ್ ಸ್ಟಾರ್ ರಜನಿಕಾಂತ್ ಪುತ್ರಿ ಐಶ್ವರ್ಯಾ ರಜನಿಕಾಂತ್ ಆ್ಯಕ್ಷನ್ ಕಟ್ ಹೇಳಿರುವ ಮುಂದಿನ ಬಹುನಿರೀಕ್ಷಿತ ಸಿನಿಮಾ 'ಲಾಲ್ ಸಲಾಮ್'. ವಿಷ್ಣು ವಿಶಾಲ್ ಮತ್ತು ವಿಕ್ರಾಂತ್ ಮುಖ್ಯಭೂಮಿಕೆಯಲ್ಲಿರುವ ಈ ಚಿತ್ರ 2024ರ ಸಂಕ್ರಾಂತಿ ಸಂದರ್ಭ ತೆರೆಕಾಣಲಿದೆ. ರಜನಿ ಪ್ರಮುಖ ಪಾತ್ರದಲ್ಲಿರುವ ಬಹುನಿರೀಕ್ಷಿತ ಚಿತ್ರ ಪ್ರಸ್ತುತ ಪೋಸ್ಟ್-ಪ್ರೊಡಕ್ಷನ್ ಹಂತದಲ್ಲಿದೆ.
ವಿಶೇಷ ಪಾತ್ರದಲ್ಲಿ ಕಪಿಲ್ ದೇವ್: ಕ್ರಿಕೆಟ್ ಕಥೆಯಾಧಾರಿತ ಈ ಸಿನಿಮಾದಲ್ಲಿ ಕ್ರಿಕೆಟ್ ದಿಗ್ಗಜ ಕಪಿಲ್ ದೇವ್ ಕೂಡ ನಟಿಸಿದ್ದಾರೆ. ಹೌದು, ವಿಶೇಷ ಪಾತ್ರದಲ್ಲಿ ಕಪಿಲ್ ದೇವ್ ಕಾಣಿಸಿಕೊಳ್ಳಲಿದ್ದಾರೆ. ಇತ್ತೀಚೆಗೆ, ಕಪಿಲ್ ದೇವ್ ತಮ್ಮ ದೃಶ್ಯಗಳಿಗೆ ದನಿ ನೀಡಿದ್ದಾರೆ. ಡಬ್ಬಿಂಗ್ ಕೆಲಸ ಪೂರ್ಣಗೊಂಡಿದ್ದು, ಸೋಷಿಯಲ್ ಮೀಡಿಯಾದಲ್ಲಿ ಫೋಟೋಗಳನ್ನು ಹಂಚಿಕೊಳ್ಳಲಾಗಿದೆ.
ಡಬ್ಬಿಂಗ್ ಕೆಲಸ ಪೂರ್ಣ: ಚಿತ್ರತಂಡ ಡಬ್ಬಿಂಗ್ ಸ್ಟುಡಿಯೋದಲ್ಲಿ ಮಾಜಿ ಕ್ರಿಕೆಟಿಗನಿರುವ ಫೋಟೋಗಳನ್ನು ಹಂಚಿಕೊಂಡು, ಲೆಜೆಂಡರಿ ಕ್ರೀಡಾಪಟು ನಮ್ಮ ಚಿತ್ರದಲ್ಲಿರುವುದು ನಮಗೆ ಗೌರವದ ವಿಷಯ ಎಂದು ತಿಳಿಸಿದೆ. ಕಪಿಲ್ ದೇವ್ ಹೊರತುಪಡಿಸಿ, ಜೀವಿತಾ ರಾಜಶೇಖರ್ ಈ ಚಿತ್ರದಲ್ಲಿ ರಜನಿಕಾಂತ್ ಅವರ ಸಹೋದರಿಯಾಗಿ ಕಾಣಿಸಿಕೊಳ್ಳಲಿದ್ದಾರೆ. ನಿರೋಷಾ, ತಂಬಿ ರಾಮಯ್ಯ, ಸೆಂಥಿಲ್ ಮತ್ತು ತಂಗದುರೈ ಪೋಷಕ ಪಾತ್ರಗಳನ್ನು ನಿರ್ವಹಿಸಿದ್ದಾರೆ. ಖ್ಯಾತ ಗಾಯಕ ಎಆರ್ ರೆಹಮಾನ್ ಸಂಗೀತ ಸಂಯೋಜಿಸಿದ್ದಾರೆ. 2024ರ ಜನವರಿಯಲ್ಲಿ ಬಹುಭಾಷೆಗಳಲ್ಲಿ ಸಿನಿಮಾ ಬಿಡುಗಡೆ ಆಗಲಿದೆ.
ಇದನ್ನೂ ಓದಿ: ತ್ರಿಶಾ ಬಗ್ಗೆ ಕಾಮೆಂಟ್: ನಿರೀಕ್ಷಣಾ ಜಾಮೀನಿಗೆ ಕೋರ್ಟ್ ಮೊರೆ ಹೋದ ಮನ್ಸೂರ್ ಅಲಿ ಖಾನ್
-
It is my honour and privilege working with the Legendary, most respected and wonderful human being Kapildevji., who made India proud winning for the first time ever..Cricket World Cup!!!#lalsalaam#therealkapildev pic.twitter.com/OUvUtQXjoQ
— Rajinikanth (@rajinikanth) May 18, 2023 " class="align-text-top noRightClick twitterSection" data="
">It is my honour and privilege working with the Legendary, most respected and wonderful human being Kapildevji., who made India proud winning for the first time ever..Cricket World Cup!!!#lalsalaam#therealkapildev pic.twitter.com/OUvUtQXjoQ
— Rajinikanth (@rajinikanth) May 18, 2023It is my honour and privilege working with the Legendary, most respected and wonderful human being Kapildevji., who made India proud winning for the first time ever..Cricket World Cup!!!#lalsalaam#therealkapildev pic.twitter.com/OUvUtQXjoQ
— Rajinikanth (@rajinikanth) May 18, 2023
ಇದಕ್ಕೂ ಮೊದಲು ಸೂಪರ್‌ಸ್ಟಾರ್ ರಜನಿಕಾಂತ್ ಅವರು ಪುತ್ರಿ ಐಶ್ವರ್ಯಾ ನಿರ್ದೇಶಿಸುತ್ತಿರುವ ಲಾಲ್ ಸಲಾಮ್‌ನಲ್ಲಿ ಮಾಜಿ ಭಾರತೀಯ ಕ್ರಿಕೆಟಿಗ ಮತ್ತು 1983ರ ವಿಶ್ವಕಪ್‌ನ ನಾಯಕ (ವಿಜೇತ) ಕಪಿಲ್ ದೇವ್ ಅವರು ಅತಿಥಿ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂಬುದನ್ನು ಬಹಿರಂಗಪಡಿಸಿದ್ದರು. ಕ್ರಿಕೆಟ್ ದಿಗ್ಗಜನೊಂದಿಗೆ ಕೆಲಸ ಮಾಡುವುದು ಗೌರವದ ಕ್ಷಣ ಎಂದ ರಜನಿಕಾಂತ್, ಕಪಿಲ್ ದೇವ್ ಅವರ ಐತಿಹಾಸಿಕ ಸಾಧನೆಗಳ ಬಗ್ಗೆ ಅಪಾರ ಹೆಮ್ಮೆ ವ್ಯಕ್ತಪಡಿಸಿದ್ದರು. ಕಪಿಲ್ ದೇವ್ ಕೂಡ ಪ್ರತಿಕ್ರಿಯಿಸಿ, ತಮ್ಮ ಸಂತಸ ವ್ಯಕ್ತಪಡಿಸಿದ್ದರು. ಸೂಪರ್ ಸ್ಟಾರ್‌ನೊಂದಿಗಿನ ಫೋಟೋ ಪೋಸ್ಟ್ ಮಾಡಿ, ಅವರ ಜೊತೆ ಕೆಲಸ ಮಾಡುವುದರ ಬಗ್ಗೆ ಸಂತಸ ವ್ಯಕ್ತಪಡಿಸಿದ್ದರು.
ಇದನ್ನೂ ಓದಿ: ಶೂಟಿಂಗ್ ಸೆಟ್ನಲ್ಲಿ ದಿಗ್ಗಜರ ಸಮಾಗಮ: ಕಪಿಲ್ ದೇವ್ ಭೇಟಿ ಬಗ್ಗೆ ರಜನಿಕಾಂತ್ ಏನಂದ್ರು ಗೊತ್ತಾ?
ಸೂಪರ್ ಸ್ಟಾರ್ ರಜನಿಕಾಂತ್ ಕೊನೆಯದಾಗಿ ಜೈಲರ್‌ನಲ್ಲಿ ಕಾಣಿಸಿಕೊಂಡರು. ಚಿತ್ರ ಬಾಕ್ಸ್ ಆಫೀಸ್‌ನಲ್ಲಿ ಹಲವು ದಾಖಲೆಗಳನ್ನು ಬರೆಯಿತು. ಹಾಗಾಗಿ ಅವರ ಮುಂದಿನ ಸಿನಿಮಾಗಳ ಮೇಲೆಯೂ ಭಾರಿ ನಿರೀಕ್ಷೆಗಳಿವೆ. ಇತ್ತೀಚೆಗಷ್ಟೇ 'ಲಾಲ್ ಸಲಾಮ್' ಟೀಸರ್ ಅನಾವರಣಗೊಂಡು, ಸಿನಿಮಾ ಬಗೆಗಿನ ಅಭಿಮಾನಿಗಳ ಕುತೂಹಲ ಹೆಚ್ಚಿಸಿದೆ. ಮೊಯ್ದೀನ್ ಭಾಯ್ ಪಾತ್ರದಲ್ಲಿ ಹಿರಿಯ ನಟ ಕಾಣಿಸಿಕೊಂಡಿದ್ದಾರೆ.