ETV Bharat / entertainment

ತೆಲುಗು, ತಮಿಳಲ್ಲೂ ಕನ್ನಡದ ಕಂಪು.. ನೆರೆರಾಜ್ಯಗಳಲ್ಲಿ ಕಾಂತಾರ ಸೂಪರ್ ಹಿಟ್ - kantara movie latest news

ಕಾಂತಾರ ತೆಲುಗು ಮತ್ತು ತಮಿಳು ವರ್ಷನ್ ರಿಲೀಸ್​ ಆಗುವ ಮೂಲಕ ಪರರಾಜ್ಯಗಳಲ್ಲೂ ಕನ್ನಡ ಸಿನಿಮಾ ಛಾಪು ಮೂಡಿಸಿದೆ.

kantara telugu tamil version released
ಕಾಂತಾರ ಸೂಪರ್ ಹಿಟ್
author img

By

Published : Oct 15, 2022, 1:07 PM IST

Updated : Oct 15, 2022, 5:44 PM IST

ಚಿತ್ರರಂಗದಲ್ಲಿ ಸಖತ್​ ಹಾಟ್​ ಟಾಪಿಕ್​ ಆಗಿರುವ 'ಕಾಂತಾರ' ಚಿತ್ರಮಂದಿರಗಳಲ್ಲಿ ಧೂಳೆಬ್ಬಿಸುತ್ತಿದೆ. ನಿನ್ನೆ ಚಿತ್ರದ ಹಿಂದಿ ಅವತರಣಿಕೆ ಬಿಡುಗಡೆ ಆಗಿ ಬಾಲಿವುಡ್​​​ನಲ್ಲಿ ಮೆಚ್ಚುಗೆ ಸಂಪಾದಿಸಿದೆ. ಇಂದು ತೆಲುಗು ಮತ್ತು ತಮಿಳು ವರ್ಷನ್ ರಿಲೀಸ್​ ಆಗುವ ಮೂಲಕ ಪರರಾಜ್ಯಗಳಲ್ಲೂ ಕನ್ನಡ ಸಿನಿಮಾ ಛಾಪು ಮೂಡಿಸಿದೆ.

ಇಂದು ತಮಿಳು ಮತ್ತು ತೆಲುಗು ಭಾಷೆಯ ಕಾಂತಾರ ಸಿನಿಮಾ ಚಿತ್ರಮಂದಿರಗಳಲ್ಲಿ ಬಿಡುಗಡೆ ಆಗಿದೆ. ಇನ್ನೂ ಮಲೆಯಾಳಂ ಚಿತ್ರರಂಗದ ಸೂಪರ್​ ಸ್ಟಾರ್ ಪೃಥ್ವಿರಾಜ್ ಸುಕುಮಾರನ್​ ಅವರು ಈ ಕಾಂತಾರ ಸಿನಿಮಾವನ್ನು ಮಲೆಯಾಳಂನಲ್ಲಿ ಪ್ರಸ್ತುತಪಡಿಸಲಿದ್ದಾರೆ. ಅಕ್ಟೋಬರ್​ 20ರಂದು ಮಲೆಯಾಳಂ ಕಾಂತಾರ ಚಿತ್ರಮಂದಿರಗಳಲ್ಲಿ ಬಿಡುಗಡೆ ಆಗಲಿದ್ದು, ಅಫೀಶಿಯಲ್​ ಟ್ರೈಲರ್​ ರಿಲೀಸ್​ ಆಗಿದೆ. ಇನ್ನೂ ತಮಿಳು ಮತ್ತು ತೆಲುಗು ಭಾಷೆಗಳಿಗಿಂತ ಹಿಂದಿ ಅಲ್ಲೇ ಹೆಚ್ಚು ಥಿಯೇಟರ್​​ಗಳಲ್ಲಿ ಬಿಡುಗಡೆ ಆಗಿದೆ ಎನ್ನುವ ಮಾಹಿತಿ ಇದೆ.

ಇನ್ನೂ ನಿರ್ಮಾಪಕ ವಿಜಯ್ ಕಿರಗಂದೂರು ಮತ್ತು ಹೊಂಬಾಳೆ ಫಿಲ್ಮ್ಸ್​​​ ತಂಡದವರು ಕೇಂದ್ರ ಸಚಿವ ಅನುರಾಗ್ ಠಾಕೂರ್ ಅವರನ್ನು ಭೇಟಿ ಮಾಡಿ ಹಲವು ಮಹತ್ವದ ವಿಷಯಗಳ ಬಗ್ಗೆ ಚರ್ಚೆ ನಡೆಸಿದ್ದಾರೆ. ಕೇಂದ್ರ ಸಚಿವರು ಸಹ ಚಿತ್ರತಂಡಕ್ಕೆ ಶುಭಹಾರೈಸಿದ್ದಾರೆ.

ಕೆಜಿಎಫ್ ನಂತರ ಕನ್ನಡದ ಮತ್ತೊಂದು ಸಿನಿಮಾ ಈ ಮಟ್ಟಿಗೆ ಸುದ್ದಿ ಮಾಡುತ್ತಿದೆ. ಪ್ರಮಾಣದ ಸಂಖ್ಯೆಯಲ್ಲಿ ರಿಲೀಸ್ ಆಗುತ್ತಿರುವುದ ಸಹಜವಾಗಿಯೇ ಬಿಟೌನ್ ನಿದ್ದೆ ಕೆಡಿಸಿದೆ. ಈಗಾಗಲೇ ಕೆಜಿಎಫ್ ಸಿನಿಮಾ ಮೂಲಕ ಯಶಸ್ಸು ಕಂಡಿರುವ ಹೊಂಬಾಳೆ ಫಿಲ್ಮ್ಸ್​​ ಕಾಂತಾರ ಮೂಲಕ ಮತ್ತೊಂದು ಗೆಲುವಿಗೆ ಸಿದ್ಧತೆ ಮಾಡಿಕೊಂಡಿದೆ.

ಕನ್ನಡದಲ್ಲಿ ಸೂಪರ್ ಹಿಟ್ ಆಗಿ ಪರಭಾಷೆಯಲ್ಲಿ ಡಬ್​ ಆಗಿರುವ ಕಾಂತಾರ ಸಿನಿಮಾ ಸಿನಿಮಾ ತುಳು ಭಾಷೆಗೂ ಡಬ್ ಆಗಲಿದೆ ಎನ್ನುವ ಮಾಹಿತಿ ಇದೆ. ಕರಾವಳಿಯ ಭಾಷೆ, ಆಚಾರ ವಿಚಾರ, ಅಲ್ಲಿನ ಸಂಸ್ಕೃತಿಯನ್ನು ಈ ಸಿನಿಮಾದ ಮೂಲಕ ಎಳೆ ಎಳೆಯಾಗಿ ಬಿಚ್ಚಿಡಲಾಗಿದೆ. ಅಲ್ಲದೇ ಕೆಲ ಕಡೆ ತುಳು ಭಾಷೆಯನ್ನೂ ಬಳಸಲಾಗಿದೆ. ಹೀಗಾಗಿ ಕಾಂತಾರ ಮುಂದಿನ ದಿನಗಳಲ್ಲಿ ತುಳು ಭಾಷೆಯಲ್ಲೇ ನೋಡಬಹುದಾಗಿದೆ.

ಇದನ್ನೂ ಓದಿ: ಕಾಂತಾರ ತಂಡಕ್ಕೆ ಶುಭ ಕೋರಿದ ಕೇಂದ್ರ ಸಚಿವ ಅನುರಾಗ್.. ಎರಡನೇ ಬಾರಿ ಸಿನಿಮಾ ನೋಡಿದ ಬಾಹುಬಲಿ

Last Updated : Oct 15, 2022, 5:44 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.