ETV Bharat / entertainment

ಬಿಗ್​ ಬಾಸ್​ ಗ್ರ್ಯಾಂಡ್​ ಲಾಂಚ್​ಗೆ ಇನ್ನೆರಡೇ ದಿನ; ಸ್ಪೆಷಲ್ ಸೀಸನ್​ಗೆ ಮನೆಯೂ ಸ್ಪೆಷಲ್! - ಈಟಿವಿ ಭಾರತ ಕನ್ನಡ

ಕನ್ನಡದ ಬಿಗ್​ ಬಾಸ್​ ಸೀಸನ್ 10 ಅಕ್ಟೋಬರ್​ 8ರಂದು ಗ್ರ್ಯಾಂಡ್​ ಲಾಂಚ್​ ಆಗಲಿದೆ. ಸ್ಪೆಷಲ್ ಸೀಸನ್​ಗೆ ಮನೆಯೂ ಸ್ಪೆಷಲ್ ಆಗಿರಲಿದೆ.

Kannada Bigg Boss Season 10 starts from October 8
ಬಿಗ್​ ಬಾಸ್​ ಸೀಸನ್​ 10
author img

By ETV Bharat Karnataka Team

Published : Oct 6, 2023, 5:35 PM IST

ಕನ್ನಡದ ಜನಪ್ರಿಯ ರಿಯಾಲಿಟಿ ಶೋಗಳಲ್ಲಿ 'ಬಿಗ್​ ಬಾಸ್'​ ಕೂಡ ಒಂದು. ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್​ ನಡೆಸಿಕೊಡುವ ಈ ಕಾರ್ಯಕ್ರಮಕ್ಕೆ ಅಪಾರ ಸಂಖ್ಯೆಯಲ್ಲಿ ಅಭಿಮಾನಿಗಳಿದ್ದಾರೆ. ಈವರೆಗೆ ಒಂಬತ್ತು ಸೀಸನ್​ಗಳನ್ನು ಯಶಸ್ವಿಯಾಗಿ ಮುಗಿಸಿರುವ ಬಿಗ್​ ಬಾಸ್​ ಇದೀಗ ಮತ್ತೆ ಬಂದಿದೆ. ಬಿಗ್​ ಬಾಸ್​ 10ನೇ ಸೀಸನ್ ಅಕ್ಟೋಬರ್​ 8ರಂದು ಸಂಜೆ 6ಕ್ಕೆ ಗ್ರ್ಯಾಂಡ್​ ಲಾಂಚ್​ ಆಗಲಿದೆ. ಈ ಹಿಂದಿನ ಎಲ್ಲಾ ಸೀಸನ್​ಗಿಂತ ಈ ಬಾರಿಯ ಬಿಗ್​ ಬಾಸ್​ ಸ್ಪೆಷಲ್​ ಆಗಿರಲಿದೆ.

4 ತಿಂಗಳಲ್ಲಿ ಹೊಸ ಮನೆ ನಿರ್ಮಾಣ: ಬಿಗ್​ ಬಾಸ್​ ಸೀಸನ್​ 10 ಮಾತ್ರ ಸ್ಪೆಷಲ್​ ಅಲ್ಲ, ಸ್ಪೆಷಲ್ ಸೀಸನ್​ಗೆ ಮನೆಯೂ ಸ್ಪೆಷಲ್ ಆಗಿರಲಿದೆ. ಕೇವಲ 4 ತಿಂಗಳಲ್ಲಿ ನೂರಾರು ಕಾರ್ಮಿಕರ ಎಡಬಿಡದ ಪರಿಶ್ರಮದಿಂದ 12 ಸಾವಿರ ಚದರ​ ಅಡಿಯಲ್ಲಿ ಅರಮನೆಯೊಂದು ತಲೆ ಎತ್ತಿ ನಿಂತಿದೆ. ಮನೆ ನಿರ್ಮಾಣದ ವಿಡಿಯೋವನ್ನು ಕಲರ್ಸ್​ ಕನ್ನಡ ವಾಹಿನಿ ಸೋಷಿಯಲ್​ ಮೀಡಿಯಾದಲ್ಲಿ ಹಂಚಿಕೊಂಡಿದೆ. "ಕತ್ತಲು ಬೆಳಕಿನ ಅಂತ್ಯವಲ್ಲ, ಅದು ಬೆಳಕಿನ ಆರಂಭ" ಎಂಬ ಮಾತಿನೊಂದಿಗೆ ವಿಡಿಯೋ ಪ್ರಾರಂಭಗೊಳ್ಳುತ್ತದೆ.

"ಹತ್ತನೇ ಸೀಸನ್​ ಮಾತ್ರ ಸ್ಪೆಷಲ್​ ಅಲ್ಲ, ಈ ಬಾರಿಯ ಮನೆಯೂ ಅಷ್ಟೇ ಸ್ಪೆಷಲ್​. ನೂರಾರು ಕಾರ್ಮಿಕರ ಹಗಲು ರಾತ್ರಿಯೆನ್ನದ ನಾಲ್ಕು ತಿಂಗಳ ಈ ಎಡಬಿಡದ ಶ್ರಮ ಈ ಸುಂದರ ಮನೆಯ ಹಿಂದಿದೆ. ಖಾಲಿ ನೆಲದ ಮೇಲೆ ಭವ್ಯ ಮನೆಯೊಂದನ್ನು ನಿರ್ಮಿಸಲು ಪಟ್ಟ ಸಾಹಸವೆಷ್ಟೋ, ಸುರಿಸಿದ ಬೆವರೆಷ್ಟೋ. ಇಷ್ಟೆಲ್ಲಾ ತಯಾರಾಗಿರುವ ಈ ಮನೆಯಲ್ಲಿ ನಡೆಯುವುದು ನೂರು ದಿನಗಳ ಹಬ್ಬ" ಎಂಬ ಹಿನ್ನೆಲೆ ಧ್ವನಿಯೊಂದಿಗೆ ವಿಡಿಯೋ ಮೂಡಿಬಂದಿದೆ. ಬರಡು ನೆಲದಲ್ಲಿ ನಿರ್ಮಾಣಗೊಂಡ ದೊಡ್ಮನೆ ಅದ್ಭುತವಾಗಿದೆ.

ಇದನ್ನೂ ಓದಿ: ಕನ್ನಡ, ಹಿಂದಿಯಲ್ಲಿ ಬಿಗ್​ ಬಾಸ್​ ಪ್ರೋಮೋ​​ ರಿಲೀಸ್: ಸುದೀಪ್, ಸಲ್ಮಾನ್​ ಸ್ಟೈಲಿಶ್​ ಎಂಟ್ರಿ

ಇದಕ್ಕೂ ಮುನ್ನ ಬಿಗ್​ ಬಾಸ್​ ಕಡೆಯಿಂದ ಮತ್ತೊಂದು ವಿಡಿಯೋ ಹಂಚಿಕೊಳ್ಳಲಾಗಿತ್ತು. ಕಲರ್ಸ್​ ಕನ್ನಡ ವಾಹಿನಿಯು 'ನೆನಪುಗಳೊಂದಿಗೆ ಬಿಗ್ ಬಾಸ್ ಕನ್ನಡದ ಹತ್ತು ವರ್ಷಗಳ ಜರ್ನಿ' ಎಂಬ ಶೀರ್ಷಿಕೆಯೊಂದಿಗೆ 9 ಸೀಸನ್​ಗಳ ನೆನಪುಗಳನ್ನು ಒಂದೇ ವಿಡಿಯೋದಲ್ಲಿ ಕಟ್ಟಿಕೊಟ್ಟಿದೆ. ದೊಡ್ಮನೆಗೆ ಸ್ಪರ್ಧಿಗಳ ಎಂಟ್ರಿ, ಟಾಸ್ಕ್​ಗಳು, ಕಂಟೆಸ್ಟೆಂಟ್​ ಜಗಳಗಳು, ಖುಷಿಯ ಕ್ಷಣಗಳು, ನೋವು... ಹೀಗೆ ಎಲ್ಲಾ ಕ್ಷಣಗಳನ್ನು ಈ ದೃಶ್ಯದಲ್ಲಿ ನೋಡಬಹುದು.

17 ಸ್ವರ್ಧಿಗಳು, 'ಚಾರ್ಲಿ' ಶ್ವಾನ ಕೂಡ ಕಂಟೆಸ್ಟೆಂಟ್?: ಈ ಬಾರಿ ಬಿಗ್​ ಬಾಸ್​ ಮನೆಗೆ 17 ಸ್ಪರ್ಧಿಗಳು ಎಂಟ್ರಿಯಾಗಲಿದ್ದಾರೆ. ಸ್ಯಾಂಡಲ್​ವುಡ್​ ಸೂಪರ್​ ಹಿಟ್​ ಚಾರ್ಲಿ 777 ಸಿನಿಮಾದ 'ಚಾರ್ಲಿ' ಶ್ವಾನ ಕೂಡ ಮನೆಯ ಕಂಟೆಸ್ಟೆಂಟ್​ ಆಗಿರಲಿದೆ. ಉಳಿದ ಸ್ಙರ್ಧಿಗಳ ವಿವರ ಅಕ್ಟೋಬರ್​ 8ರಂದು ಬಿಗ್​ ಬಾಸ್​ ಸೀಸನ್​ 10 ಗ್ರ್ಯಾಂಡ್​ ಲಾಂಚ್​ ವೇಳೆಯೇ ತಿಳಿಯಲಿದೆ. ಈಗಾಗಲೇ ಕಿರುತೆರೆ ನಟಿ ರಜಿನಿ, ಡಾ.ಬ್ರೋ, ರಘು ಮುಖರ್ಜಿ ಸೇರಿದಂತೆ ಹಲವರ ಹೆಸರುಗಳು ಸೋಷಿಯಲ್​ ಮೀಡಿಯಾದಲ್ಲಿ ವೈರಲ್​ ಆಗುತ್ತಿದೆ.

ಇದನ್ನೂ ಓದಿ: ಅ. 8ರಿಂದ ಬಿಗ್​ ಬಾಸ್​ ಆಟ ಶುರು; 'ಚಾರ್ಲಿ' ಜೊತೆ 17 ಸ್ವರ್ಧಿಗಳು ದೊಡ್ಮನೆಗೆ ಎಂಟ್ರಿ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.