ETV Bharat / entertainment

Suriya Birthday: ಕಂಗುವ ಫಸ್ಟ್ ಗ್ಲಿಂಪ್ಸ್ ರಿಲೀಸ್​; ರೋಮಾಂಚಕ ದೃಶ್ಯಗಳಲ್ಲಿ ಕಾಲಿವುಡ್​ ಸೂಪರ್​ ಸ್ಟಾರ್​ ಸೂರ್ಯ! - Suriya upcoming movies

ಕಾಲಿವುಡ್​ ಸೂಪರ್​ ಸ್ಟಾರ್​ ಸೂರ್ಯ ಜನ್ಮದಿನ ಹಿನ್ನೆಲೆಯಲ್ಲಿ ಅವರ ಮುಂದಿನ 'ಕಂಗುವ' ಚಿತ್ರದ ಫಸ್ಟ್ ಗ್ಲಿಂಪ್ಸ್ ಬಿಡುಗಡೆಯಾಗಿದೆ.

Kanguva First Glimpse
ಕಂಗುವ ಫಸ್ಟ್ ಗ್ಲಿಂಪ್ಸ್ ರಿಲೀಸ್
author img

By

Published : Jul 23, 2023, 10:55 AM IST

ಕಾಲಿವುಡ್​ ಸೂಪರ್​ ಸ್ಟಾರ್​ ಸೂರ್ಯ ಅವರ ಬಗ್ಗೆ ವಿಶೇಷ ಪರಿಚಯ ಬೇಕಿಲ್ಲ. ಇವರು ತಮ್ಮ ಅಮೋಘ ಅಭಿನಯದ ಮೂಲಕ ರಾಷ್ಟ್ರ ಮಟ್ಟದಲ್ಲಿ ಗುರುತಿಸಿಕೊಂಡಿರುವ ಪ್ರತಿಭಾನ್ವಿತ ನಟ. ಕಮರ್ಷಿಯಲ್​ ಸಿನಿಮಾಗಳ ಜೊತೆ ಜೊತೆಗೆ ಸಾಮಾಜಿಕ ಕಳಕಳಿಯ ಸಂದೇಶಗಳನ್ನು ಸಾರುವ ಸಿನಿಮಾಗಳಲ್ಲಿ ಕೆಲಸ ಮಾಡಿರುವ ಸ್ಟಾರ್ ಹೀರೋ ಕೂಡಾ ಹೌದು. ವಿಭಿನ್ನ ಕಥೆಗಳು, ವಿಶಿಷ್ಟ ಪಾತ್ರಗಳನ್ನು ಆಯ್ಕೆ ಮಾಡಿಕೊಳ್ಳುವ ಮೂಲಕ ಬಣ್ಣದ ಜಗತ್ತಿನಲ್ಲಿ ಯಶಸ್ವಿ ವೃತ್ತಿಜೀವನ ನಡೆಸುತ್ತಿದ್ದಾರೆ.

ಸೂರ್ಯ ಜನ್ಮದಿನ: ಅಪಾರ ಸಂಖ್ಯೆಯ ಅಭಿಮಾನಿಗಳನ್ನು ಸಂಪಾದಿಸಿರುವ ತಮಿಳು ಜನಪ್ರಿಯ ನಟ ಇಂದು ಜನ್ಮದಿನದ ಸಂಭ್ರಮದಲ್ಲಿದ್ದಾರೆ. 48ನೇ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿರುವ ಸೂಪರ್​ಸ್ಟಾರ್​ಗೆ ಕುಟುಂಬ ಸದಸ್ಯರು, ಆಪ್ತರು, ಸಿನಿ ಗಣ್ಯರೂ ಸೇರಿದಂತೆ ಅಭಿಮಾನಿಗಳು ಶುಭ ಕೋರುತ್ತಿದ್ದಾರೆ.

  • " class="align-text-top noRightClick twitterSection" data="">

ಕಂಗುವ ಫಸ್ಟ್ ಗ್ಲಿಂಪ್ಸ್: ಸೂರ್ಯ ನಟನೆಯ ಮುಂದಿನ ಬಹುನಿರೀಕ್ಷಿತ ಚಿತ್ರ 'ಕಂಗುವ'. ಶಿವ ಅವರ ನಿರ್ದೇಶನದಲ್ಲಿ ಚಿತ್ರ ನಿರ್ಮಾಣಗೊಳ್ಳುತ್ತಿದೆ. ಸ್ಟುಡಿಯೋ ಗ್ರೀನ್ ಮತ್ತು ಯುವಿ ಕ್ರಿಯೇಷನ್ಸ್ ಜಂಟಿಯಾಗಿ ಬಿಗ್​​ ಬಜೆಟ್​ನಲ್ಲಿ ನಿರ್ಮಾಣ ಮಾಡುತ್ತಿದೆ. ಸೂರ್ಯ ಹುಟ್ಟುಹಬ್ಬದ ಹಿನ್ನೆಲೆಯಲ್ಲಿ ಚಿತ್ರದ ಫಸ್ಟ್ ಗ್ಲಿಂಪ್ಸ್ ಅನ್ನು ಚಿತ್ರತಂಡ ಅನಾವರಣಗೊಳಿಸಿದೆ.

ಅಗ್ನಿಯ ಶಕ್ತಿಯುಳ್ಳವನು...: ಕಂಗುವ ಫಸ್ಟ್ ಗ್ಲಿಂಪ್ಸ್‌ನಲ್ಲಿ ಈವರೆಗೆ ನಿರ್ವಹಿಸಿರದ ಪಾತ್ರದಲ್ಲಿ ನಾಯಕ ನಟ ಸೂರ್ಯ ಅಭಿನಯಿಸಿದ್ದಾರೆ. ಕಂಗುವ ಎಂದರೆ ಅಗ್ನಿಯ ಶಕ್ತಿಯುಳ್ಳವ ಎಂದರ್ಥ. ಪರಾಕ್ರಮಿ ಎಂತಲೂ ಕರೆಯುತ್ತಾರೆ. ಮೊದಲ ವಿಡಿಯೋದಲ್ಲಿ ಸೂರ್ಯ ವಿಭಿನ್ನ, ಬಲಾಢ್ಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ದೇವಿ ಶ್ರೀ ಪ್ರಸಾದ್ ಸಂಗೀತ ನೀಡಿದ್ದು ಚಿತ್ರದ ಹೈಲೈಟ್. ಸೂರ್ಯ ಅವರ ಅದ್ಭುತ ಹಾವಭಾವ​, ಸಹಸ್ರಾರು ಜನರಿರುವ ಸೈನ್ಯ ಒಟ್ಟಾಗಿ ಬೆಂಕಿಯ ಬಾಣಗಳನ್ನು ಬಿಡುವುದು, ಕೊನೆಗೆ ಸೂರ್ಯ ಅಬ್ಬರಿಸುವುದನ್ನು ನೋಡುವುದೇ ಸಿನಿಮಾ ಪ್ರೇಮಿಗಳಿಗೆ ರೋಮಾಂಚಕ ಅನುಭವ.

ಇದನ್ನೂ ಓದಿ: ಗಲ್ಲಿಭಾಯ್​ ಬಳಿಕ ರಾಕಿ ರಾಣಿ ಲವ್​ಸ್ಟೋರಿ: ಭರ್ಜರಿ ಪ್ರಚಾರದಲ್ಲಿ ರಣ್​ವೀರ್​-ಆಲಿಯಾ; ಹಿಟ್​ ಹಿಸ್ಟರಿ ಮರುಕಳಿಸುತ್ತಾ?

3Dಯಲ್ಲಿ 10 ಭಾಷೆಗಳಲ್ಲಿ ಬರಲಿದೆ ಕಂಗುವ: ಸಿನಿಮಾ ಬಿಗ್​ ಬಜೆಟ್​ನಲ್ಲಿ ನಿರ್ಮಾಣಗೊಳ್ಳುತ್ತಿದೆ. ಹತ್ತು ಭಾಷೆಗಳಲ್ಲಿ ಏಕಕಾಲಕ್ಕೆ 3ಡಿಯಲ್ಲಿ ನಿರ್ಮಾಣವಾಗುತ್ತಿದೆ. ಅದ್ಧೂರಿ ಸಾಹಸ ದೃಶ್ಯಗಳು ಹಾಗೂ ವಿಶುವಲ್ ಎಫೆಕ್ಟ್ಸ್​ ಚಿತ್ರದ ಪ್ರಮುಖ ಆಕರ್ಷಣೆ. ಮುಂದಿನ ವರ್ಷ ಕಂಗುವ ಚಿತ್ರ ಅದ್ಧೂರಿಯಾಗಿ ತೆರೆಕಾಣಲಿದೆ. ಚಿತ್ರಕ್ಕೆ ದೇವಿಶ್ರೀ ಪ್ರಸಾದ್ ಧ್ವನಿ ನೀಡುತ್ತಿದ್ದಾರೆ. 300 ಕೋಟಿ ರೂ.ಗೂ ಅಧಿಕ ಬಜೆಟ್​ನಲ್ಲಿ ಸಿನಿಮಾ ರೂಪುಗೊಳ್ಳುತ್ತಿದೆ. ಸೂರ್ಯ ಅವರ ಸಿನಿ ಕೆರಿಯರ್‌ನಲ್ಲಿ ಇದೊಂದು ಬಿಗ್ ಬಜೆಟ್ ಸಿನಿಮಾ ಎಂದು ಹೇಳಲಾಗಿದೆ. ಚಿತ್ರ ಎರಡು ಭಾಗಗಳಲ್ಲಿ ಮೂಡಿ ಬರಲಿದೆ. ಮೊದಲ ಭಾಗದಲ್ಲಿ ದಿಶಾ ಪಟಾನಿ ನಾಯಕ ನಟಿ. ಎರಡನೇ ಭಾಗದಲ್ಲಿ ದೀಪಿಕಾ ಪಡುಕೋಣೆ ಅವರಿಂದ ಅಭಿನಯ ಮಾಡಿಸಲು ಮಾತುಕತೆ ನಡೆಸುತ್ತಿದ್ದಾರೆ ಎಂಬ ಮಾಹಿತಿ ಇದೆ.

ಇದನ್ನೂ ಓದಿ: ಮಹೇಶ್​​ ಬಾಬು ಫ್ಯಾಮಿಲಿ ಟೈಮ್​: ಹೆಂಡತಿ, ಮಕ್ಕಳೊಂದಿಗೆ ಪ್ರವಾಸ ಹೊರಟ ಸೂಪರ್​ ಸ್ಟಾರ್

ETV Bharat Logo

Copyright © 2025 Ushodaya Enterprises Pvt. Ltd., All Rights Reserved.