ETV Bharat / entertainment

ಅಸ್ಸಾಂನ ಪ್ರಸಿದ್ಧ ಕಾಮಾಖ್ಯ ದೇಗುಲಕ್ಕೆ ಭೇಟಿ ನೀಡಿ ದೇವಿಯ ದರ್ಶನ ಪಡೆದ ಕಂಗನಾ ರಣಾವತ್​​ - Kangana Ranaut latest news

ಗುಹಾಹಟಿಯ ಕಾಮಾಖ್ಯ ದೇವಿ ದೇವಸ್ಥಾನಕ್ಕೆ ನಟಿ ಕಂಗನಾ ರಣಾವತ್​​ ಭೇಟಿ ಕೊಟ್ಟು ಪೂಜೆ ಸಲ್ಲಿಸಿದ್ದಾರೆ.

Kangana Ranaut visits Kamakhya Temple
ಕಾಮಾಖ್ಯ ದೇವಿ ದರ್ಶನ ಪಡೆದ ಕಂಗನಾ ರಣಾವತ್​​
author img

By

Published : Jun 28, 2023, 7:01 PM IST

ಅದ್ಭುತ ಸಿನಿಮಾ ಮತ್ತು ಬೋಲ್ಡ್​ ಹೇಳಿಕೆಗಳಿಂದ ಹೆಸರು ಮಾಡುತ್ತಿರುವ ಬಾಲಿವುಡ್​ ನಟಿ ಕಂಗನಾ ರಣಾವತ್​​ ಅಸ್ಸಾಂ ರಾಜಧಾನಿ ಗುಹಾಹಟಿಯಲ್ಲಿರುವ ಶಕ್ತಿಪೀಠ ಕಾಮಾಖ್ಯ ದೇವಿ ದೇವಸ್ಥಾನಕ್ಕೆ (Kamakhya Temple) ಭೇಟಿ ಕೊಟ್ಟು ತಾಯಿಯ ದರ್ಶನ ಪಡೆದರು. ಆಗಾಗ್ಗೆ ದೇವಸ್ಥಾನಗಳಿಗೆ ಭೇಟಿ ಕೊಡುವ ನಟಿ ಕಂಗನಾ ಇಂದು ಸೋಷಿಯಲ್​ ಮೀಡಿಯಾದಲ್ಲಿ ಹೊಸ ವಿಡಿಯೋ ಹಂಚಿಕೊಂಡು, ಕಾಮಾಖ್ಯ ದೇವಿ ಶಕ್ತಿ ಬಗ್ಗೆ ಬರೆದುಕೊಂಡಿದ್ದಾರೆ.

ಶಕ್ತಿಯ ಒಂದು ರೂಪ...: ಇನ್​ಸ್ಟಾಗ್ರಾಮ್​ನಲ್ಲಿ ವಿಡಿಯೋ ಶೇರ್ ಮಾಡಿರುವ ಕಂಗನಾ ರಣಾವತ್, "ಇಂದು ಕಾಮಾಖ್ಯ ಮಾತೆಯ ದರ್ಶನ ಪಡೆದೆ. ಇಲ್ಲಿ ಮಾತೆಯ ವಿರಾಟ ರೂಪವಿದೆ. ಇಲ್ಲಿ ದೇವಿಗೆ ಮಾಂಸ ಮತ್ತು ಬಲಿ ಕೊಡಲಾಗುತ್ತದೆ. ಈ ಪವಿತ್ರ ಸ್ಥಾನ ಶಕ್ತಿಯ ಒಂದು ರೂಪ. ಇಲ್ಲಿ ಶಕ್ತಿಯ ಅದ್ಭುತ ಸಂಚಾರವಿದೆ. ನೀವು ಗುಹಾಹಟಿಗೆ ಬಂದ್ರೆ ದೇವಿಯ ದರ್ಶನ ಪಡೆಯಿರಿ" ಎಂದು ಹೇಳಿದ್ದಾರೆ.

ನೆಟ್ಟಿಗರು ಹೀಗಂದ್ರು: ಕಂಗನಾ ಹಂಚಿಕೊಂಡಿರುವ ವಿಡಿಯೋಗೆ ಅಭಿಮಾನಿಗಳು, ನೆಟ್ಟಿಗರು ಪ್ರತಿಕ್ರಿಯಿಸಿದ್ದಾರೆ. ಸಾಮಾಜಿಕ ಜಾಲತಾಣ ಬಳಕೆದಾರರೋರ್ವರು ಪ್ರತಿಕ್ರಿಯಿಸಿ, 'ಸನಾತನಿ ಕ್ವೀನ್' ಎಂದು ಕಾಮೆಂಟ್ ಮಾಡಿದ್ದಾರೆ. ಮತ್ತೋರ್ವರು, 'ಜೈ ಮಾತಾ, ಮಾ ಕಾಮಾಖ್ಯ ನಿಮಗೆ ಆಶೀರ್ವಾದ ಮಾಡಲಿ' ಎಂದು ಬರೆದಿದ್ದಾರೆ.

ಪ್ರೀತಿ ಜಿಂಟಾ ಕೂಡ ಭೇಟಿ ಕೊಟ್ಟಿದ್ದರು: ಏಪ್ರಿಲ್​ನಲ್ಲಿ ಬಾಲಿವುಡ್‌ ನಟಿ ಪ್ರೀತಿ ಜಿಂಟಾ ಕೂಡ ಕಾಮಾಖ್ಯ ದೇವಸ್ಥಾನಕ್ಕೆ ಭೇಟಿ ಕೊಟ್ಟಿದ್ದರು. ದೇವಸ್ಥಾನದ ದೃಶ್ಯಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದರು. ದೇವಾಲಯ ಪ್ರವೇಶಿಸುತ್ತಿದ್ದಂತೆ ಶಾಂತಿ ಮತ್ತು ನೆಮ್ಮದಿಯ ಅನುಭವವಾಯ್ತು" ಎಂದು ಬರೆದುಕೊಂಡಿದ್ದರು.

ಕಂಗನಾ ಸಿನಿಮಾಗಳು: ಇತ್ತೀಚೆಗೆ, ನಟಿ ಕಂಗನಾ ರಣಾವತ್ ನಿರ್ಮಾಣದ 'ಟಿಕು ವೆಡ್ಸ್ ಶೇರು' ಚಿತ್ರವು ಅಮೆಜಾನ್ ಪ್ರೈಮ್‌ನಲ್ಲಿ ಬಿಡುಗಡೆಯಾಗಿದೆ. ರೊಮ್ಯಾಂಟಿಕ್ ಕಾಮಿಡಿ ಚಿತ್ರದಲ್ಲಿ ನವಾಜುದ್ದೀನ್ ಮತ್ತು ಅವನೀತ್ ಕೌರ್ ಮುಖ್ಯ ಭೂಮಿಕೆಯಲ್ಲಿ ನಟಿಸಿದ್ದಾರೆ. ಸಿನಿಮಾ ಜೂನ್ 23ರಂದು ಬಿಡುಗಡೆ ಆಗಿದೆ.

ಇದನ್ನೂ ಓದಿ: Julian Sands Death: ಕಣ್ಮರೆಯಾಗಿ ಐದು ತಿಂಗಳ ನಂತರ ಆಸ್ಕರ್ ನಾಮನಿರ್ದೇಶಿತ ಸಿನಿಮಾ ನಟನ ಶವ ಪತ್ತೆ!

'ಎಮರ್ಜೆನ್ಸಿ': ರಾಜಕೀಯ ಹಿನ್ನೆಲೆಯುಳ್ಳ 'ಎಮರ್ಜೆನ್ಸಿ' ಸಿನಿಮಾ ಕಂಗನಾ ರಣಾವತ್​ ಅವರ ಮುಂದಿನ ಬಹುನಿರೀಕ್ಷಿತ ಚಿತ್ರ. ಮಾಜಿ ಪ್ರಧಾನಿ ದಿ. ಇಂದಿರಾ ಗಾಂಧಿ ಬಯೋಪಿಕ್​​ನಲ್ಲಿ ನಟಿಯಾಗಿ, ನಿರ್ದೇಶಕಿಯಾಗಿ, ನಿರ್ಮಾಪಕಿಯಾಗಿ ಕೆಲಸ ಮಾಡಿದ್ದಾರೆ. ತುರ್ತು ಪರಿಸ್ಥಿತಿ ಘೋಷಣೆಯಾಗಿ 48 ವರ್ಷ (ಜೂನ್​ 25ಕ್ಕೆ) ಆದ ಹಿನ್ನೆಲೆಯಲ್ಲಿ ಜೂನ್​ 24ರಂದು ಚಿತ್ರದ ಟೀಸರ್​ ಅನಾವರಣಗೊಳಿಸಿದ್ದರು. ಪ್ರಮುಖ ಪಾತ್ರಗಳಲ್ಲಿ ಅನುಪಮ್ ಖೇರ್, ಮಹಿಮಾ ಚೌಧರಿ, ವಿಶಾಕ್ ನಾಯರ್, ಶ್ರೇಯಸ್ ತಲ್ಪಾಡೆ ನಟಿಸಿದ್ದು ಸಿನಿಮಾ ನವೆಂಬರ್ 24ರಂದು ತೆರೆಕಾಣಲಿದೆ.

ಇದನ್ನೂ ಓದಿ: Coz I Luv U: ಗಾಯಕರಿಲ್ಲ! ಕೃತಕ ಬುದ್ಧಿಮತ್ತೆ ತಂತ್ರಜ್ಞಾನದಿಂದ ತಯಾರಾಯ್ತು ಆಲ್ಬಂ ಸಾಂಗ್​!

ETV Bharat Logo

Copyright © 2025 Ushodaya Enterprises Pvt. Ltd., All Rights Reserved.