ETV Bharat / entertainment

'ಎಮರ್ಜೆನ್ಸಿ' ಚಿತ್ರೀಕರಣ ಮುಕ್ತಾಯ.. ಸಿನಿಮಾಗಾಗಿ ಆಸ್ತಿ ಅಡವಿಟ್ಟ ಕಂಗನಾ ರಣಾವತ್​ - ಕಂಗನಾ ರಣಾವತ್​ ಎಮರ್ಜೆನ್ಸಿ

ಎಮರ್ಜೆನ್ಸಿ ಸಿನಿಮಾಗಾಗಿ ತಮ್ಮ ಆಸ್ತಿ ಅಡವಿಟ್ಟಿರುವ ವಿಚಾರವನ್ನು ನಟಿ ಕಂಗನಾ ರಣಾವತ್​ ಬಹಿರಂಗಪಡಿಸಿದ್ದಾರೆ.

Kangana Ranaut
ಕಂಗನಾ ರಣಾವತ್​
author img

By

Published : Jan 21, 2023, 5:26 PM IST

ಬಾಲಿವುಡ್​ ಕ್ವೀನ್​ ಕಂಗನಾ ರಣಾವತ್​ ಈ ಸಾಲಿನಲ್ಲಿ ಮನೋರಂಜನಾ ಕ್ಷೇತ್ರದಲ್ಲಿ ಭರ್ಜರಿ ಸದ್ದು ಮಾಡಲು ಸಜ್ಜಾಗಿದ್ದಾರೆ. ಅವರ ಬಹುನಿರೀಕ್ಷಿತ ರಾಜಕೀಯ ಸಿನಿಮಾ 'ಎಮರ್ಜೆನ್ಸಿ' ಚಿತ್ರೀಕರಣವನ್ನು ಮುಗಿಸಿದ್ದಾರೆ. ಈ ಸಿನಿಮಾದಲ್ಲಿ ನಟಿ ಕಂಗನಾ ರಣಾವತ್ ಅವರು ದಿವಂಗತ ಪ್ರಧಾನಿ ಇಂದಿರಾ ಗಾಂಧಿ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಇಂದು (ಶನಿವಾರ, ಜನವರಿ 21) ಎಮರ್ಜೆನ್ಸಿ ಶೂಟಿಂಗ್​ ಮುಗಿಸಿದ ಬಳಿಕ ಕಂಗನಾ ರಣಾವತ್ ಸಾಮಾಜಿಕ ಮಾಧ್ಯಮದಲ್ಲಿ ಫೋಸ್ಟ್ ಒಂದನ್ನು ಶೇರ್ ಮಾಡಿಕೊಂಡಿದ್ದಾರೆ. ಜೊತೆಗೆ, ಈ ಸಿನಿಮಾಗಾಗಿ ಎಲ್ಲವನ್ನೂ ಪಣಕ್ಕಿಟ್ಟಿರುವುದಾಗಿ ತಿಳಿಸಿದ್ದಾರೆ.

ಎಮರ್ಜೆನ್ಸಿ ಶೂಟಿಂಗ್ ಕಂಪ್ಲೀಟ್: ತಮ್ಮ ಅಧಿಕೃತ ಇನ್​ಸ್ಟಾಗ್ರಾಮ್​ ಖಾತೆಯಲ್ಲಿ ಎಮರ್ಜೆನ್ಸಿ ಶೂಟಿಂಗ್ ಸೆಟ್​ನ ಚಿತ್ರಗಳನ್ನು ಶೇರ್​ ಮಾಡಿದ್ದಾರೆ. ನಾನು ನಟಿಯಾಗಿ ಈ ಚಿತ್ರದ ಚಿತ್ರೀಕರಣವನ್ನು ಪೂರ್ಣಗೊಳಿಸಿದ್ದೇನೆ. ಇದು ನನ್ನ ಜೀವನದ ಹೆಮ್ಮೆಯ ಕ್ಷಣ. ನಾನು ಸಿನಿಮಾ ಶೂಟಿಂಗ್​ ಅನ್ನು ಸುಲಭವಾಗಿ ಮುಗಿಸಿದ್ದೇನೆ. ಆದ್ರೆ ವಾಸ್ತವವಾಗಿ ಕಥೆ ಬೇರೇಯೇ. ಈ ಚಿತ್ರಕ್ಕಾಗಿ ನಾನು ನನ್ನ ಆಸ್ತಿಯನ್ನು ಅಡವಿಟ್ಟಿರುವೆ. ಅನಾರೋಗ್ಯದ ಹೊರತಾಗಿಯೂ ಸಿನಿಮಾ ಶೂಟಿಂಗ್​ ಮುಗಿಸಿದ್ದೇನೆ ಎಂದು ತಿಳಿಸಿದ್ದಾರೆ.

ಕಂಗನಾ ರಣಾವತ್ ಜವಾಬ್ದಾರಿಗಳು? ಈ 'ಎಮರ್ಜೆನ್ಸಿ' ಚಿತ್ರ ಬಾಲಿವುಡ್​ ಕ್ವೀನ್​ ಕಂಗನಾ ರಣಾವತ್​ ಅವರಿಗೆ ದೊಡ್ಡ ಪರೀಕ್ಷೆ ಅಂದ್ರೆ ತಪ್ಪಾಗಲ್ಲ. ಅವರು ಕೇವಲ ನಟಿಯಾಗಿ ಕಾಣಿಸಿಕೊಳ್ಳುತ್ತಿಲ್ಲ. ನಿರ್ದೇಶಕಿ ಮತ್ತು ನಿರ್ಮಾಪಕಿಯಾಗಿಯೂ ಹೊರ ಹೊಮ್ಮಲಿದ್ದಾರೆ. ಈ ಚಿತ್ರದಲ್ಲಿ ಅವರ ಜವಾಬ್ದಾರಿ ಹೆಚ್ಚಿದೆ. ಈ ಹಿನ್ನೆಲೆ ತಮ್ಮ ಆಸ್ತಿ ಅಡವಿಟ್ಟು ಸಿನಿಮಾಗಾಗಿ ದುಡಿದಿರುವುದಾಗಿ ಹೇಳಿಕೊಂಡಿದ್ದಾರೆ.

ಕಂಗನಾ ಸೋಶಿಯಲ್​ ಮೀಡಿಯಾ ಪೋಸ್ಟ್: ಸೋಶಿಯಲ್​ ಮೀಡಿಯಾದಲ್ಲಿ ಮತ್ತಷ್ಟು ತಮ್ಮ ಅನಿಸಿಕೆ ವ್ಯಕ್ತಪಡಿಸಿರುವ ಅವರು, ''ಸಾಮಾಜಿಕ ಮಾಧ್ಯಮದಲ್ಲಿ ನನ್ನ ಭಾವನೆಗಳನ್ನು ಮುಕ್ತವಾಗಿ ಹಂಚಿಕೊಳ್ಳುತ್ತಿದ್ದೇನೆ. ಈ ಮೊದಲು ಎಲ್ಲವನ್ನೂ ಶೇರ್ ಮಾಡಿಕೊಳ್ಳುತ್ತಿರಲಿಲ್ಲ. ಏಕೆಂದರೆ, ನನ್ನನ್ನು ಕೆಳಗಿಳಿಸಲು ಪ್ರಯತ್ನಿಸುವ ಜನರು ನನಗೆ ಬೇಕಾಗಿರಲಿಲ್ಲ. ನನ್ನನ್ನು ನಿಂದಿಸಲು ಅವರು ಎಲ್ಲಾ ರೀತಿಯ ಪ್ರಯತ್ನ ಮಾಡುತ್ತಾರೆ. ಇದೀಗ ನನ್ನ ನೋವಿನಿಂದ ಅವರಿಗೆ ಖುಷಿ ಕೊಡಲು ಬಯಸಿದ್ದೇನೆ'' ಎಂದು ತಿಳಿಸಿದ್ದಾರೆ.

ನನಗಿದು ಪುನರ್ಜನ್ಮ : ''ನೀವು ಕಷ್ಟ ಪಟ್ಟು ಕೆಲಸ ಮಾಡಬೇಕು. ನೀವು ಸಮರ್ಥರಾಗಿದ್ದರೆ ನೀವು ಬಯಸಿದ್ದನ್ನು ನೀವು ಪಡೆಯಬಹುದು. ಎಂದಿಗೂ ಕುಗ್ಗಬೇಡಿ. ನಿಮ್ಮ ಪುನರ್ಜನ್ಮಕ್ಕೆ ಇದು ಸಮಯ. ನನಗೆ ಈ ಸಮಯ ಪುನರ್ಜನ್ಮ ಎಂದೇ ನಾನು ಭಾವಿಸುತ್ತೇನೆ. ನನ್ನ ತಂಡಕ್ಕೆ ಧನ್ಯವಾದಗಳು. ನಾನು ಸುರಕ್ಷಿತ ಸ್ಥಳದಲ್ಲಿ ಇದ್ದೇನೆ. ನಿಮ್ಮ ಪ್ರೀತಿ ಮತ್ತು ಆಶೀರ್ವಾದ ನನ್ನ ಮೇಲಿರಲಿ'' ಎಂದು ಕಂಗನಾ ರಣಾವತ್​ ಬರೆದುಕೊಂಡಿದ್ದಾರೆ.

ಇದನ್ನೂ ಓದಿ: ಪ್ರವೀರ್ ಶೆಟ್ಟಿ ಅಭಿನಯದ ಸೈರನ್ ಸಿನಿಮಾಗೆ ಧ್ವನಿ ನೀಡಿದ ಗಾಯಕಿ ಮಂಗ್ಲಿ

ಎಮರ್ಜೆನ್ಸಿ ಚಿತ್ರತಂಡ : 2021ರಲ್ಲಿ ನಟಿ ಕಂಗನಾ ರಣಾವತ್​ ಅವರು ಈ 'ಎಮರ್ಜೆನ್ಸಿ' ಸಿನಿಮಾವನ್ನು ಘೋಷಿಸಿದರು. ಅವರ ಹಿಂದಿನ ಚಿತ್ರ ಧಾಕಡ್​​ ಕಥೆ ಬರೆದ ಬರಹಗಾರ ರಿತೇಶ್​ ಶಾ ಅವರೇ ಈ ಚಿತ್ರದ ಕಥೆಯನ್ನೂ ಬರೆದಿದ್ದಾರೆ. ಧಾಕಡ್​​ ಸಿನಿಮಾ ಯಸಶ್ಸು ಕಂಡಿಲ್ಲ. ಇದೀಗ ಯಶಸ್ಸಿನ ಗುರಿಯೊಂದಿಗೆ ಎಮರ್ಜೆನ್ಸಿ ಸಿನಿಮಾ ಮಾಡಿದ್ದಾರೆ. ಈ ಚಿತ್ರದಲ್ಲಿ ನಟಿ ಕಂಗನಾ ರಣಾವತ್ ಜೊತೆಗೆ ಅನುಪಮ್​ ಖೇರ್, ಮಿಲಿಂದ್​ ಸೋಮನ್, ಮಹಿಮಾ ಚೌಧರಿ, ಸತೀಶ್​ ಕೌಶಿಕ್​, ಶ್ರೇಯಸ್​ ತಲ್ಪಾಡೆ ಅವರು ಪ್ರಮುಖ ರಾಜಕೀಯ ಮುಖಂಡರ ಪಾತ್ರಕ್ಕೆ ಜೀವ ತುಂಬಿದ್ದಾರೆ.

ಇದನ್ನೂ ಓದಿ: ಆಸ್ಕರ್​ ಅಂಗಳದಲ್ಲಿ ಜೂನಿಯರ್​ ಎನ್​ಟಿಆರ್.. ಅಮೋಘ ಅಭಿನಯಕ್ಕೆ ಸಿಗುತ್ತಾ ಪ್ರಶಸ್ತಿ ಗರಿ?

ETV Bharat Logo

Copyright © 2025 Ushodaya Enterprises Pvt. Ltd., All Rights Reserved.