ETV Bharat / entertainment

ಕರಣ್​ ಜೋಹರ್​ ತರಾಟೆಗೆ ತೆಗೆದುಕೊಂಡ ಕಂಗನಾ ರಣಾವತ್.. ಸೌತ್​ ಸ್ಟಾರ್ಸ್ ನೋಡಿ ಕಲಿಯಿರಿ ಎಂದು ರಣ್​ವೀರ್​ಗೆ ಸಲಹೆ - ranbir kapoor

Kangana Ranaut Instagram story: ಬಾಲಿವುಡ್ ನಟಿ ಕಂಗನಾ ರಣಾವತ್ ನಿರ್ದೇಶಕ ಕರಣ್​ ಜೋಹರ್​ ಮತ್ತು ರಾಲಿಯಾ ದಂಪತಿಯನ್ನು ಗುರಿಯಾಗಿಸಿ ಇನ್​ಸ್ಟಾಗ್ರಾಮ್​ ಸ್ಟೋರಿ ಶೇರ್ ಮಾಡಿದ್ದಾರೆ. ಅಲ್ಲದೇ ಸೌತ್​ ಸಿನಿಮಾ ನಟರನ್ನು ಹಾಡಿ ಹೊಗಳಿದ್ದಾರೆ.

Kangana Ranaut
ಕಂಗನಾ ರಣಾವತ್
author img

By

Published : Jul 29, 2023, 1:39 PM IST

ಬಾಲಿವುಡ್ ನಟಿ ಕಂಗನಾ ರಣಾವತ್ ತಮ್ಮ ಸಿನಿಮಾ ಮತ್ತು ಹೇಳಿಕೆಗಳ ವಿಚಾರವಾಗಿ ಸುದ್ದಿಯಲ್ಲಿರುತ್ತಾರೆ. ಆಗಾಗ್ಗೆ ಧಾರ್ಮಿಕ ಕ್ಷೇತ್ರಗಳಿಗೆ ಭೇಟಿ ಕೊಡುವ ಮೂಲಕವೂ ಗಮನ ಸೆಳೆಯುತ್ತಾರೆ.

ಆಗಾಗ್ಗೆ ಬಾಲಿವುಡ್‌ನಲ್ಲಿ ಕೆಲವರನ್ನು ಗುರಿಯಾಗಿಸಿ ಹೇಳಿಕೆ ಕೊಡುತ್ತಿರುತ್ತಾರೆ. ಕಂಗನಾ ಅವರ ಗುರಿಯಲ್ಲಿರುವುದು ಅತ್ಯಂತ ಜನಪ್ರಿಯ ಚಲನಚಿತ್ರ ನಿರ್ಮಾಪಕ ಕರಣ್ ಜೋಹರ್ ಮತ್ತು ಅವರ ಜೊತೆಗಿರುವ ಸ್ಟಾರ್ ಕಿಡ್ಸ್ ಎಂಬುದು ಅಭಿಮಾನಿಗಳ ಅಭಿಪ್ರಾಯ. ಕರಣ್ ಜೋಹರ್ ನಿರ್ದೇಶನದ ಮತ್ತು ಸ್ಟಾರ್ ಕಿಡ್​ ಆಲಿಯಾ ಭಟ್ ಅಭಿನಯದ ರಾಕಿ ಔರ್​ ರಾಣಿ ಕಿ ಪ್ರೇಮ್​ ಕಹಾನಿ ಸಿನಿಮಾ ಬಿಡುಗಡೆ ಆದ ಬೆನ್ನಲ್ಲೇ ಕಂಗನಾ ರಣಾವತ್ ಸಾಮಾಜಿಕ ಮಾಧ್ಯಮದಲ್ಲಿ ಸ್ಟೋರಿ ಶೇರ್ ಮಾಡಿದ್ದಾರೆ. ಕಂಗನಾ ಅವರ ಈ ಪೋಸ್ಟ್ ಕರಣ್ ಜೋಹರ್ ಮತ್ತು ರಾಲಿಯಾ ಜೋಡಿಯನ್ನೇ ಗುರಿಯಾಗಿಸಿದೆ ಎಂದು ನೆಟ್ಟಿಗರು ಊಹಿಸಿದ್ದಾರೆ.

ಕಂಗನಾ ರಣಾವತ್​ ಇನ್​ಸ್ಟಾಗ್ರಾಮ್​ ಸ್ಟೋರಿ: ನಟಿ ಕಂಗನಾ ರಣಾವತ್ ತಮ್ಮ ಮೊದಲ ಇನ್​ಸ್ಟಾಗ್ರಾಮ್​ ಸ್ಟೋರಿಯಲ್ಲಿ ಯಾರನ್ನೂ ಹೆಸರಿಸಿಲ್ಲ. ಆದರೆ ನೆಟ್ಟಿಗರು ಇದು ಕರಣ್ ಜೋಹರ್ ಅವರಿಗಾಗೇ ಹಾಕಿರುವ ಪೋಸ್ಟ್ ಎಂದು ಊಹಿಸಿದ್ದಾರೆ. ನಟಿ ಶೇರ್ ಮಾಡಿರುವ ಪೋಸ್ಟ್​ನಲ್ಲಿ, ''ಬೆಳಿಗ್ಗೆಯಿಂದ ನನ್ನ ಬಗ್ಗೆ ಒಂದೇ ಒಂದು ಆಧಾರವಿಲ್ಲದ, ನಕಾರಾತ್ಮಕ ಸುದ್ದಿ ಬಂದಿಲ್ಲ. ನನ್ನ ನಕಲಿ ಹೇಳಿಕೆಗಳನ್ನೂ ಕೂಡ ಮಾಧ್ಯಮಗಳಿಗೆ ಮೇಲ್ ಮಾಡಲಾಗಿಲ್ಲ. ನನ್ನ ಮುಮದಿನ ಪ್ರಾಜೆಕ್ಟ್​ಗಳ ಕುರಿತಾಗಿ ಯಾವುದೇ ವದಂತಿಯನ್ನು ಹರಡಿಲ್ಲ. ನನ್ನ ಹಳೇ ಚಲನಚಿತ್ರಗಳಲ್ಲಿನ ದೃಶ್ಯಗಳನ್ನು ಬಳಸಿ ನನ್ನ ಮೇಲೆ ಮಾನಸಿಕ ಹಲ್ಲೆ ಮಾಡಲಾಗುತ್ತಿಲ್ಲ. ಏಕೆ ಇಷ್ಟೊಂದು ಮೌನ? ಲಂಕೆಯಲ್ಲಿ ಬೆಂಕಿ ಬಿದ್ದಿದಿಯೇ? ಯಾರಾದರು ಪತ್ತೆ ಮಾಡಿ, ನೆಪೋ ಗ್ಯಾಂಗ್ ಇಂದು ಎಲ್ಲಿ ಬ್ಯುಸಿಯಾಗಿದೆ? ಎಂದು ಹೇಳಿ'' ಅಂತಾ ಬರೆದುಕೊಂಡಿದ್ದಾರೆ.

Kangana Ranaut Instagram story
ಕಂಗನಾ ರಣಾವತ್​ ಇನ್​ಸ್ಟಾಗ್ರಾಮ್​ ಸ್ಟೋರಿ

'ಲಂಕೆಯಲ್ಲಿ ಬೆಂಕಿ ಬಿದ್ದಿದಿಯೇ?' ಎಂಬ ಸಾಲು ರಾಲಿಯಾ ಜೋಡಿಗೆ ಕೊಟ್ಟ ಟಾಂಗ್​ ಎಂದು ಅಭಿಮಾನಿಗಳು ಊಹಿಸಿದ್ದಾರೆ. ಏಕೆಂದರೆ ಕಲೆದ ಕೆಲ ದಿನಗಳಿಂದ ಬಾಲಿವುಡ್​ನಲ್ಲಿ ರಾಮಾಯಣ ಸಿನಿಮಾ ಕುರಿತು ಸುದ್ದಿಗಳು ಬರುತ್ತಿವೆ. ಈ ಚಿತ್ರದಲ್ಲಿ ಶ್ರೀರಾಮನ ಪಾತ್ರದಲ್ಲಿ ರಣ್​ವೀರ್​ ಸಿಂಗ್​​ ಮತ್ತು ಸೀತೆ ಪಾತ್ರದಲ್ಲಿ ಆಲಿಯಾ ಭಟ್​ ಕಾಣಿಸಿಕೊಳ್ಳಲಿದ್ದಾರೆ ಎನ್ನುವ ವರದಿ ಇದೆ. ನಿನ್ನೆಯಷ್ಟೇ ಕರಣ್​ ನಿರ್ದೇಶನದ, ಆಲಿಯಾ ಅಭಿನಯದ 'ರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿ' ಸಿನಿಮಾ ಕೂಡ ಬಿಡುಗಡೆಯಾಗಿದ್ದು, ಕಳೆದ ಕೆಲ ದಿನಗಳಿಂದ ಈ ಚಿತ್ರದಲ್ಲಿ ಇಡೀ ತಂಡ ಬ್ಯುಸಿಯಾಗಿದೆ. ಈ ಹಿನ್ನೆಲೆ ಕಂಗನಾ ರಣಾವತ್​ ಇನ್​ಸ್ಟಾಗ್ರಾಮ್​ ಸ್ಟೋರಿ ಕರಣ್​, ಆಲಿಯಾ, ಅಣ್​ಬೀರ್​ ಅವರನ್ನು ಗುರಿಯಾಗಿಸಿದೆ ಎಂದು ನೆಟ್ಟಿಗರು ತಿಳಿಸಿದ್ದಾರೆ.

Kangana Ranaut Instagram story
ಕಂಗನಾ ರಣಾವತ್​ ಇನ್​ಸ್ಟಾಗ್ರಾಮ್​ ಸ್ಟೋರಿ

ಕರಣ್​ ಜೋಹರ್​ಗೆ ತರಾಟೆ: ಈ ಸ್ಟೋರಿ ಶೇರ್ ಮಾಡಿದ ಕೆಲವೇ ಕ್ಷಣಗಳಲ್ಲಿ ಮತ್ತೆರಡು ಸ್ಟೋರಿ ಹಂಚಿಕೊಂಡಿದ್ದಾರೆ. ಈ ಸ್ಟೋರಿಗಳಲ್ಲಿ ನೇರವಾಗಿ ಕರಣ್​ ಜೋಹರ್​ ಹೆಸರನ್ನು ಉಲ್ಲೇಖಿಸಿ ತರಾಟೆಗೆ ತೆಗೆದುಕೊಂಡಿದ್ದಾರೆ. ''ಕರಣ್​ ಜೋಹರ್​​ ಈ ಮೊದಲು ನಿರ್ದೇಶಿಸಿದ್ದ ಸಿನಿಮಾದಂತೆ 9ನೇ ಬಾರಿಯೂ ಆ್ಯಕ್ಷನ್​ ಕಟ್​ ಹೇಳಿದ್ದಾರೆ. ಹಣವನ್ನು ವೇಸ್ಟ್ ಮಾಡಬೇಡಿ. ಸಿನಿಮಾ ಇಂಡಸ್ಟ್ರಿ ಕಠಿಣ ಸಮಯ ಎದುರಿಸುತ್ತಿದೆ. ಹಾಗಾಗಿ ನಿವೃತ್ತಿ ಪಡೆಯಿರಿ. ಅದ್ಭುತ ಸಿನಿಮಾ ಮಾಡಲು ಹೊಸ ನಿರ್ದೇಶಕರಿಗೆ ಅವಕಾಶ ಮಾಡಿಕೊಡಿ ಎಂದು ತಿಳಿಸಿದ್ದಾರೆ.

Kangana Ranaut Instagram story
ಕಂಗನಾ ರಣಾವತ್​ ಇನ್​ಸ್ಟಾಗ್ರಾಮ್​ ಸ್ಟೋರಿ

ಇದನ್ನೂ ಓದಿ: 'ರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿ' ಮೊದಲ ದಿನದ ಕಲೆಕ್ಷನ್ ಡೀಟೆಲ್ಸ್​​

ಇನ್ನೂ ನಾಯಕ ನಟ ರಣ್​ವೀರ್​ ಸಿಂಗ್ ಅವರಿಗೂ ಸಲಹೆ ನೀಡಿರುವ ಕಂಗನಾ, ''ಕರಣ್​ ಜೋಹರ್ ಮತ್ತು ಅವರ ಡ್ರೆಸ್ಸಿಂಗ್​ ಸ್ಟೈಲ್​​ನಿಂದ ನಟ ರಣ್​ವೀರ್​ ಸಿಂಗ್​ ಪ್ರಭಾವಿತರಾಗುವುದನ್ನು ನಿಲ್ಲಿಸಬೇಕು. ಸಾಮಾನ್ಯ ಮನುಷ್ಯರು ಡ್ರೆಸ್​ ಮಾಡಿಕೊಳ್ಳುವಂತೆ ರಣ್​ವಿರ್​ ಮಾಡಿಕೊಳ್ಳಬೇಕು. ಉದಾಹರಣೆಗೆ ಧರ್ಮ ಜಿ ಅಥವಾ ವಿನೋದ್​ ಖನ್ನಾ ಅವರು ಅವರ ಕಾಲದಲ್ಲಿ ಡ್ರೆಸ್​​ ಮಾಡಿಕೊಳ್ಳುತ್ತಿದ್ದಂತೆ ಮಾಡಿಕೊಳ್ಳಬೇಕು. ಕಾರ್ಟೂನ್​ನಂತೆ ಕಾಣುವ ವ್ಯಕ್ತಿಯನ್ನು ಗುರುತಿಸುವುದು ಜನರಿಗೆ ಕಷ್ಟವಾಗುತ್ತದೆ. ಸೌತ್​​ ಸಿನಿಮಾ ನಟರನ್ನು ನೋಡಿ. ಅವರು ಎಷ್ಟು ಘನತೆಯಿಂದ ಕಾಣಿಸಿಕೊಳ್ಳುತ್ತಾರೆ'' ಎಂದು ತಿಳಿಸಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.