ETV Bharat / entertainment

ಅಬ್ಬಬ್ಬಾ..2 ಲಕ್ಷ ರೂ.ಗೆ ಮಾರಾಟವಾಯ್ತು 'ಕಡಲತೀರದ ಭಾರ್ಗವ' ಟಿಕೆಟ್ - kadala teerada bhargava latest news

ಮಾರ್ಚ್ 3ಕ್ಕೆ ತೆರೆಕಾಣಲು ಸಜ್ಜಾಗಿರುವ 'ಕಡಲತೀರದ ಭಾರ್ಗವ' ಚಿತ್ರದ ಮೊದಲ ಟಿಕೆಟ್​ 2 ಲಕ್ಷ ರೂಪಾಯಿಗೆ ಸೇಲ್​ ಆಗಿದೆ.

kadala teerada bhargava trailer
ಕಡಲತೀರದ ಭಾರ್ಗವ ಟ್ರೇಲರ್​ ರಿಲೀಸ್
author img

By

Published : Feb 15, 2023, 3:54 PM IST

Updated : Feb 15, 2023, 7:02 PM IST

ಕನ್ನಡ ಚಿತ್ರರಂಗದಲ್ಲಿ ಶೀರ್ಷಿಕೆ, ಹಾಡುಗಳು ಹಾಗೂ ಟೀಸರ್ ಮೂಲಕ ಈಗಾಗಲೇ ಕನ್ನಡಿಗರ ಮನ‌ ತಲುಪಿರುವ ಚಿತ್ರ 'ಕಡಲತೀರದ ಭಾರ್ಗವ'. ಮಾಜಿ ಉಪ ಮೇಯರ್​ ಮೋಹನ್ ರಾಜು, ನೀರ್ ದೋಸೆ ಚಿತ್ರದ ನಿರ್ಮಾಪಕ ಪ್ರಸನ್ನ ಹಾಗೂ ಗಜಾನನ ಗ್ಯಾಂಗ್ ಚಿತ್ರದ ನಿರ್ಮಾಪಕ ನಾಗೇಶ್ ಕಡಲತೀರದ ಭಾರ್ಗವ ಟ್ರೇಲರ್ ಬಿಡುಗಡೆ ಮಾಡಿ ಈ ಚಿತ್ರತಂಡಕ್ಕೆ ಶುಭ ಕೋರಿದರು.

ಕಡಲತೀರದ ಭಾರ್ಗವ ಮೊದಲ ಟಿಕೆಟ್ ಸೇಲ್​: ಬಹುತೇಕ ಚಿತ್ರೀಕರಣ ಮುಗಿಸಿರುವ ಕಡಲತೀರದ ಭಾರ್ಗವ ಚಿತ್ರ ಬಿಡುಗಡೆಗೂ ಮುನ್ನ ಸಖತ್​ ಸೌಂಡ್ ಮಾಡುತ್ತಿದೆ. ಈ ಚಿತ್ರದ ಮೊದಲ ಟಿಕೆಟ್ ಅನ್ನು ಹರಾಜಿನ ಮೂಲಕ ಮಾರಾಟ ಮಾಡಲಾಯಿತು. ಅತಿಥಿಯಾಗಿ ಆಗಮಿಸಿದ್ದ ಮೋಹನ್ ರಾಜು ಅವರು 2 ಲಕ್ಷ ರೂಪಾಯಿ ನೀಡಿ ಈ ಚಿತ್ರದ ಮೊದಲ ಟಿಕೆಟ್ ಪಡೆದುಕೊಂಡರು. ಭಾರಿ ಬೆಲೆಗೆ ಟಿಕೆಟ್ ಮಾರಾಟವಾಗಿರುವುದಕ್ಕೆ ನಿರ್ಮಾಪಕರಾದ ಪಟೇಲ್ ವರುಣ್ ರಾಜು ಹಾಗೂ ಭರತ್ ಗೌಡ ಸಂತೋಷ ವ್ಯಕ್ತಪಡಿಸಿದರು. ಮೊದಲ ಟಿಕೆಟ್ ಮಾರಾಟದಿಂದ ಬಂದ ಹಣವನ್ನು ಬಡ ವಿದ್ಯಾರ್ಥಿಗಳ ವ್ಯಾಸಂಗಕ್ಕೆ ನೀಡುವುದಾಗಿ ತಿಳಿಸಿದ್ದಾರೆ.

  • " class="align-text-top noRightClick twitterSection" data="">

ಈ ಚಿತ್ರದ ಮೊದಲ ಟಿಕೆಟ್ ಅನ್ನು ಎರಡು ಲಕ್ಷ ರೂಪಾಯಿ ಕೊಟ್ಟು ಖರೀದಿಸಿರುವ ಮೋಹನ್ ರಾಜ್ ಮಾತನಾಡಿ, ಕನ್ನಡದಲ್ಲಿ ಕಂಟೆಂಟ್ ಓರಿಯೆಂಟೆಡ್ ಚಿತ್ರಗಳು ಗೆಲ್ಲುತ್ತಿವೆ. ಅದರಲ್ಲೂ "ಕ" ಹೆಸರಿನಿಂದ ಆರಂಭವಾಗುವ ಕೆಜಿಎಫ್, ಕಾಂತಾರ ಚಿತ್ರಗಳು ಭರ್ಜರಿ ಯಶಸ್ಸು ಕಂಡಿದೆ. ಅದೇ "ಕ" ಅಕ್ಷರದಿಂದ ಆರಂಭವಾಗುವ "ಕಡಲತೀರದ ಭಾರ್ಗವ" ಕೂಡ ಪ್ರಚಂಡ ಯಶಸ್ಸು ಕಾಣಲಿ ಅಂತಾ ಶುಭ ಹಾರೈಸಿದರು.

ಈ ಚಿತ್ರದ ನಾಯಕ ನಟ ಭರತ್ ಗೌಡ ಮಾತನಾಡಿ, ನಾನು ಈ ಚಿತ್ರದಲ್ಲಿ ಭರತ್ ಎಂಬ ಪಾತ್ರದಲ್ಲೇ ಕಾಣಿಸಿಕೊಂಡಿದ್ದೇನೆ. ಚಿತ್ರದ ಹಾಡುಗಳಿಗೆ ಸಿಗುತ್ತಿರುವ ಪ್ರತಿಕ್ರಿಯೆಗೆ ತುಂಬಾ ಸಂತೋಷವಾಗಿದೆ. ಈ ಸಿನಿಮಾ ಎಲ್ಲರಿಗೂ ಇಷ್ಟ ಆಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಇದನ್ನೂ ಓದಿ: ಬಹುನಿರೀಕ್ಷಿತ ಜೂಲಿಯೆಟ್‌ 2 ಟ್ರೇಲರ್​ ರಿಲೀಸ್​: ಆ್ಯಕ್ಷನ್​ ಅವತಾರದಲ್ಲಿ ಬೃಂದಾ ಆಚಾರ್ಯ

ಚಿತ್ರದ ನಿರ್ಮಾಪಕ ಪಟೇಲ್ ವರುಣ್ ರಾಜ್ ಮಾತನಾಡಿ, ನಾನು ಕಡಲತೀರದಲ್ಲಿ ವಾಸಿಸುವ ಭಾರ್ಗವನಾಗಿ ನಾನು ಅಭಿನಯಿಸಿದ್ದೇನೆ. ಚಿತ್ರ ಚೆನ್ನಾಗಿ ಮೂಡಿ ಬಂದಿದೆ. ಅಧಿಕ ಮೊತ್ತ ಕೊಟ್ಟು ಟಿಕೆಟ್ ಖರೀದಿಸಿದ ಮೋಹನ್ ರಾಜು ಅವರಿಗೆ ಹಾಗೂ ಚಿತ್ರಕ್ಕೆ ಸಹಕಾರ ‌ನೀಡಿರುವ ಪ್ರತಿಯೊಬ್ಬರಿಗೂ ನನ್ನ ಧನ್ಯವಾದ ಎಂದು ತಿಳಿಸಿದರು.

ಇದನ್ನೂ ಓದಿ: ಹೃದಯ ಸಂಬಂಧಿ ಸಮಸ್ಯೆಗಳಿಂದ ಬಳಲುತ್ತಿರುವ ಪವನ್ ಕಲ್ಯಾಣ್ ಮಾಜಿ ಪತ್ನಿ ರೇಣು ದೇಸಾಯಿ!

ನಿರ್ದೇಶಕ ಪನ್ನಗ ಸೋಮಶೇಖರ್ ಮಾತನಾಡಿ, ಇದು ಹಿರಿಯ ಸಾಹಿತಿ ಶಿವರಾಮ ಕಾರಂತರ ಜೀವನಾಧಾರಿತ ಚಿತ್ರವಲ್ಲ. ಕಡಲತೀರದಲ್ಲಿ ವಾಸಿಸುವ ಒಬ್ಬ ವ್ಯಕ್ತಿಯ ಕಥೆ ಎಂದರು. ಭರತ್ ಗೌಡರಿಗೆ ಜೋಡಿಯಾಗಿ ಶ್ರುತಿ ಪ್ರಕಾಶ್ ಕಾಣಿಸಿಕೊಂಡಿದ್ದಾರೆ. ಜೊತೆಗೆ ರಾಘವ್ ನಾಗ್, ಕೆಎಸ್ ಶ್ರೀಧರ್, ಅಶ್ವಿನ್ ಹಾಸನ್ ಮುಂತಾದವರು ಈ ಚಿತ್ರದಲ್ಲಿ ನಟಿಸಿದ್ದಾರೆ. ಚಿತ್ರಕ್ಕೆ ಅನಿಲ್ ಸಿ.ಜೆ ಅವರ ಸಂಗೀತ ಮತ್ತು ಕೀರ್ತನ್ ಪೂಜಾರಿ ಛಾಯಾಗ್ರಹಣವಿದೆ. ಹಲವು ವಿಷಯಗಳಿಗೆ ಗಮನ ಸೆಳೆಯುತ್ತಿರೋ ಕಡಲತೀರದ ಭಾರ್ಗವ ಚಿತ್ರ ಪ್ರೇಕ್ಷಕರನ್ನು ಎಷ್ಟರ ಮಟ್ಟಿಗೆ ರಂಜಿಸಲಿದೆ ಅನ್ನೋದು ಮಾರ್ಚ್ 3ರಂದು ಗೊತ್ತಾಗಲಿದೆ.

Last Updated : Feb 15, 2023, 7:02 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.