ಬಹುನಿರೀಕ್ಷಿತ ಕಬ್ಜ ಚಿತ್ರದ ಬಿಡುಗಡೆಗೆ ಕ್ಷಣಗಣನೆ ಶುರುವಾಗಿದೆ. ನಾಳೆ ದಿ. ಪುನೀತ್ ರಾಜ್ಕುಮಾರ್ ಹುಟ್ಟುಹಬ್ಬವಿದ್ದು, ಸಿನಿಮಾ ತೆರೆ ಕಾಣಲಿದೆ. 4,000 ಚಿತ್ರಮಂದಿರಗಳಲ್ಲಿ ಏಕಕಾಲಕ್ಕೆ ಹಲವು ಭಾಷೆಗಳಲ್ಲಿ ಬಿಡುಗಡೆಯಾಗಲಿದೆ. ಚಿತ್ರದ ಯಶಸ್ಸಿಗಾಗಿ ರಿಯಲ್ ಸ್ಟಾರ್ ಉಪೇಂದ್ರ, ನಿರ್ದೇಶಕ ಆರ್.ಚಂದ್ರು, ನಿರ್ಮಾಪಕ ಕೆ.ಪಿ.ಶ್ರೀಕಾಂತ್, ಸೀಕಲ್ ರಾಮಚಂದ್ರಗೌಡ ಸೇರಿದಂತೆ ಚಿತ್ರತಂಡ ತಿರುಪತಿ ತಿಮ್ಮಪ್ಪನ ಸನ್ನಿಧಾನಕ್ಕೆ ತೆರಳಿ ದರ್ಶನ ಪಡೆದಿದ್ದಾರೆ.
-
ನಿಮ್ಮೆಲ್ಲರ ಆಶೀರ್ವಾದವಿರಲಿ...
— R.Chandru (@rchandru_movies) March 16, 2023 " class="align-text-top noRightClick twitterSection" data="
ಕಬ್ಜ ಬಿಡುಗಡೆಗೆ ಮುನ್ನ ತಿರುಪತಿ ದರ್ಶನ..#Kabzaa #nimmaupendra #kpsrikanth #march17release pic.twitter.com/CJyLUStuxZ
">ನಿಮ್ಮೆಲ್ಲರ ಆಶೀರ್ವಾದವಿರಲಿ...
— R.Chandru (@rchandru_movies) March 16, 2023
ಕಬ್ಜ ಬಿಡುಗಡೆಗೆ ಮುನ್ನ ತಿರುಪತಿ ದರ್ಶನ..#Kabzaa #nimmaupendra #kpsrikanth #march17release pic.twitter.com/CJyLUStuxZನಿಮ್ಮೆಲ್ಲರ ಆಶೀರ್ವಾದವಿರಲಿ...
— R.Chandru (@rchandru_movies) March 16, 2023
ಕಬ್ಜ ಬಿಡುಗಡೆಗೆ ಮುನ್ನ ತಿರುಪತಿ ದರ್ಶನ..#Kabzaa #nimmaupendra #kpsrikanth #march17release pic.twitter.com/CJyLUStuxZ
ದೇಶದ ಹಲವೆಡೆ ಪ್ರಚಾರ ಕಾರ್ಯ ಮುಗಿಸಿರುವ ಚಿತ್ರತಂಡ ಸಿನಿಮಾ ಬಿಡುಗಡೆಗೆ ಕಾಯುತ್ತಿದೆ. ಇನ್ನೇನು ಬೆಳ್ಳಿ ಪರದೆಯಲ್ಲಿ ಅಬ್ಬರಿಸಲು ಕೇವಲ ಒಂದು ದಿನವಷ್ಟೇ ಬಾಕಿ ಇದ್ದು, ಚಿತ್ರತಂಡದವರು ತಿರುಪತಿಗೆ ತೆರಳಿ ತಿಮ್ಮಪ್ಪನ ಆಶೀರ್ವಾದ ಪಡೆದರು. ತಿರುಪತಿಗೆ ತೆರಳಿರುವ ಫೋಟೋವನ್ನು ನಿರ್ದೇಶಕ ಆರ್.ಚಂದ್ರು ಟ್ವಿಟರ್ನಲ್ಲಿ ಹಂಚಿಕೊಂಡಿದ್ದಾರೆ. "ನಿಮ್ಮೆಲ್ಲರ ಆಶೀರ್ವಾದವಿರಲಿ. ಕಬ್ಜ ಬಿಡುಗಡೆಗೆ ಮುನ್ನ ತಿರುಪತಿ ದರ್ಶನ" ಎಂದು ಕ್ಯಾಪ್ಶನ್ ಕೊಟ್ಟಿದ್ದಾರೆ.
ಬಾಲಿವುಡ್ ದಿಗ್ಗಜರ ಮೆಚ್ಚುಗೆ: ಕೆಲವು ದಿನಗಳ ಹಿಂದೆ
ಇದನ್ನೂ ಓದಿ: 'ಕಬ್ಜ'ದಲ್ಲಿ ಉಪ್ಪಿ ಬಲಗೈ ಬಂಟನಾಗಿ ಅನೂಪ್ ರೇವಣ್ಣ ರೀ ಎಂಟ್ರಿ
ಕಬ್ಜ ಭೂಗತ ಲೋಕದ ಸುತ್ತಮುತ್ತ ನಡೆಯುವ ಕಥೆ ಎಂದು ಎಲ್ಲರೂ ಅಂದುಕೊಂಡಿದ್ದರು. ಆದರೆ ಚಿತ್ರದಲ್ಲಿ ಸ್ವಾತಂತ್ರ್ಯಕ್ಕೂ ಮುನ್ನ ಮತ್ತು ನಂತರದ ಕಥೆಯ ಜೊತೆ ವ್ಯಥೆಯೂ ಇದೆ. ತಾಯಿಯ ಮಮತೆ, ಸಹೋದರನ ಬಾಂಧವ್ಯ, ಪ್ರೇಮದ ಘಮಲು ಇದೆ.
ಚಿತ್ರತಂಡದಲ್ಲಿ ಯಾರಿದ್ದಾರೆ?: ರಿಯಲ್ ಸ್ಟಾರ್ ಉಪೇಂದ್ರ, ಕಿಚ್ಚ ಸುದೀಪ್, ಶಿವರಾಜ್ ಕುಮಾರ್ ಅಲ್ಲದೇ ಟಾಲಿವುಡ್ ಸುಂದರಿ ಶ್ರೀಯಾ ಶರಣ್, ಕಬೀರ್ ಸಿಂಗ್ ದುಹಾನ್, ಪ್ರಮೋದ್ ಶೆಟ್ಟಿ, ಮುರಳಿ ಶರ್ಮ ನವಾಬ್ ಷಾ, ತೆಲುಗಿನ ಬೇಡಿಕೆಯ ನಟರಾದ ಪೊಸನಿ ಕೃಷ್ಣ ಮುರಳಿ ಹೀಗೆ ಬಿಗ್ ಸ್ಟಾರ್ ಕಾಸ್ಟ್ ಈ ಚಿತ್ರದಲ್ಲಿದೆ. ಶ್ರೀ ಸಿದ್ಧೇಶ್ವರ ಎಂಟರ್ಪ್ರೈಸಸ್ ಅಡಿ ಆರ್ ಚಂದ್ರು ನಿರ್ಮಿಸಿ, ನಿರ್ದೇಶನ ಮಾಡಿರೋ ಕಬ್ಜ ಚಿತ್ರವನ್ನು ಆನಂದ್ ಮೋಷನ್ ಪಿಕ್ಚರ್ಸ್, ಇನ್ವೀನಿಯೋ ಆರಿಜಿನ್, ರುಚಿರಾ ಎಂಟರ್ಟೈನ್ಮೆಂಟ್ಸ್ ಅಂಡ್ ಸಿನಿಮಾಸ್ ಸಂಸ್ಥೆಗಳು ನಿರ್ಮಾಣ ಮಾಡಿವೆ.
ಇದನ್ನೂ ಓದಿ: ಕಬ್ಜ ದೊಡ್ಡ ಸಿನಿಮಾ ಆಗುತ್ತೆಂದು ಭವಿಷ್ಯ ನುಡಿದಿದ್ದ ಪುನೀತ್ ರಾಜ್ಕುಮಾರ್