ETV Bharat / entertainment

ಬಿಡುಗಡೆಗೂ ಮುನ್ನ ದಾಖಲೆ ಬರೆಯುತ್ತಿರುವ ಕಬ್ಜ: ಮತ್ತೊಂದು ಗೆಲುವು ಪಕ್ಕಾ ಅಂತಿದ್ದಾರೆ ಅಭಿಮಾನಿಗಳು - kabzaa latest news

ಮಾರ್ಚ್ 17ರಂದು ತೆರೆಕಾಣಲು ಸಜ್ಜಾಗಿರುವ ಕಬ್ಜ ಸಿನಿಮಾ ದೊಡ್ಡ ಮಟ್ಟದ ಯಶಸ್ಸು ಸಾಧಿಸಲಿದೆ ಎನ್ನುವ ವಿಶ್ವಾಸದಲ್ಲಿ ಚಿತ್ರತಂಡವಿದೆ.

kabzaa movie
ಕಬ್ಜ ಸಿನಿಮಾ
author img

By

Published : Mar 9, 2023, 8:54 PM IST

ಕನ್ನಡ ಚಿತ್ರರಂಗದಲ್ಲಿ ಮತ್ತೊಂದು ದೊಡ್ಡ ಗೆಲುವಿನ ಸೂಚನೆ ಸಿಗುತ್ತಿದೆ. ರಿಯಲ್ ಸ್ಟಾರ್ ಉಪೇಂದ್ರ, ಕಿಚ್ಚ ಸುದೀಪ್ ಹಾಗೂ ಸೆಂಚುರಿ ಸ್ಟಾರ್ ಶಿವ ರಾಜ್​ಕುಮಾರ್ ಅವರಂತಹ ಮೂವರು ಸಿನಿಮಾ ದಿಗ್ಗಜರ ಸಮಾಗಮದ 'ಕಬ್ಜ' ಬಿಡುಗಡೆಗೂ ಮುನ್ನ ಕೋಟಿ ಕೋಟಿ ವ್ಯವಹಾರ ನಡೆಸುತ್ತಿದೆ ಅನ್ನೋ ಸುದ್ದಿ ಸೌತ್ ಸಿನಿಮಾ ಇಂಡಸ್ಟ್ರಿಯಲ್ಲಿ ದೊಡ್ಡ ಮಟ್ಟದಲ್ಲಿ ಕೇಳಿ ಬರುತ್ತಿದೆ.

ಇತ್ತೀಚೆಗಷ್ಟೇ ಬಾಲಿವುಡ್ ದಿಗ್ಗಜ ಅಮಿತಾಭ್​ ಬಚ್ಚನ್ ಈ ಚಿತ್ರದ ಟ್ರೇಲರ್​ ಅನಾವರಣಗೊಳಿಸಿದ್ದು, ಚಿತ್ರತಂಡಕ್ಕೆ ಆನೆಬಲ ಬಂದಂತಾಗಿದೆ. ಅಷ್ಟೇ ಅಲ್ಲ ಬಾಲಿವುಡ್ ನಟ ಅಜಯ್ ದೇವಗನ್, ನಿರ್ದೇಶಕ ರಾಕೇಶ್ ರೋಷನ್, ನಟ ಮನೋಜ್ ಬಾಜಪೇಯಿ, ನಟ ಶ್ರೇಯಸ್ ತಲ್ಪಾಡೆ, ಕಶ್ಮೀರಾ ಶಾ, ರೋನಿತ್ ರಾಯ್, ನಿರ್ದೇಶಕ ಮಧುರ್ ಭಂಡಾರ್ಕರ್, ಮೀರಾ ಚೋಪ್ರಾ, ಕುನಾಲ್ ಕೋಹ್ಲಿ ಸೇರಿದಂತೆ ಅನೇಕ ಬಾಲಿವುಡ್ ತಾರೆಯರು ಸೋಷಿಯಲ್ ಮೀಡಿಯಾದಲ್ಲಿ ಕಬ್ಜ ಟ್ರೇಲರ್ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ.

ನಿರ್ದೇಶಕ ಆರ್ ಚಂದ್ರು ಆಪ್ತರ ಪ್ರಕಾರ, ಸಿನಿಮಾ ಬಿಡುಗಡೆಗೂ ಮುನ್ನ ಬರೋಬ್ಬರಿ 100 ಕೋಟಿ ರೂ.ಗೂ ಹೆಚ್ಚು ವ್ಯವಹಾರ ನಡೆದಿದೆಯಂತೆ. ಕಬ್ಜ ಸಿನಿಮಾವನ್ನು ಒಟಿಟಿಗೆ ಅಮೇಜಾನ್ ಪ್ರೈಂ ಖರೀದಿ ಮಾಡಿದೆ. ಸ್ಯಾಟಲೈಟ್ ರೈಟ್ಸ್ ಖರೀದಿ ಮಾಡಿರುವುದು ಕಲರ್ಸ್ ಕನ್ನಡ. ಹಿಂದಿ, ತಮಿಳು, ಮಲಯಾಳಂ, ತೆಲುಗು ರೈಟ್ಸ್​​ಗಳಿಗೂ ಸಖತ್ ಡಿಮ್ಯಾಂಡ್ ಬಂದಿದೆ ಎನ್ನುವ ಮಾಹಿತಿ ಇದೆ.

ಈಗಾಗಲೇ ಸೇಲ್ ಆಗಿರುವ ಲೆಕ್ಕವನ್ನೇ ಗಮನಿಸುವುದಾದರೆ, 65 ಕೋಟಿ ರೂ. ಕಲೆಕ್ಷನ್ ಆಗಿದೆ. ಇನ್ನೂ ಬರಬೇಕಿರುವ ಲೆಕ್ಕವನ್ನೂ ಸೇರಿಸಿದರೆ 100 ಕೋಟಿ ರೂ. ದಾಟಲಿದೆ. ಅಂದ ಹಾಗೆ ಈ ಲೆಕ್ಕದಲ್ಲಿ ಥಿಯೇಟರ್ ಶೇರ್ಸ್ ಲೆಕ್ಕಾಚಾರ ಇಲ್ಲ. ಈಗಾಗಲೇ ತಮಿಳು, ಹಿಂದಿಯ ಥಿಯೇಟರ್ ರೈಟ್ಸ್​ ಅನ್ನೂ ಮಾರಾಟ ಮಾಡಲಾಗಿದ್ದು, ಆ ಲೆಕ್ಕವನ್ನು ಇಲ್ಲಿ ಸೇರಿಸಿಲ್ಲ. ಕನ್ನಡದಲ್ಲಂತೂ ವಿತರಕರು ನಾ ಮುಂದು ತಾ ಮುಂದು ಎಂದು ಕಬ್ಜ ಖರೀದಿಗೆ ಮುಗಿಬಿದ್ದಿದ್ದಾರೆ. ಈ ಎಲ್ಲ ಲೆಕ್ಕಾಚಾರಗಳ ಆಧಾರದ ಮೇಲೆ, ಕಬ್ಜ ಸಿನಿಮಾ ಬಾಕ್ಸ್ ಆಫೀಸ್​ನಲ್ಲಿ ಕೋಟಿ ಕೋಟಿ ಕಲೆಕ್ಷನ್ ಮಾಡಲಿದೆ ಎಂದು ಅಂದಾಜಿಸಲಾಗಿದೆ.

ಶ್ರೀ ಸಿದ್ಧೇಶ್ವರ ಎಂಟರ್​ಪ್ರೈಸಸ್ ಅಡಿ ಆರ್ ಚಂದ್ರು ನಿರ್ಮಿಸಿ, ನಿರ್ದೇಶನ ಮಾಡಿರೋ ಕಬ್ಜ ಚಿತ್ರವನ್ನು ಆನಂದ್ ಮೋಷನ್ ಪಿಕ್ಚರ್ಸ್, ಇನ್ವೀನಿಯೋ ಆರಿಜಿನ್, ರುಚಿರಾ ಎಂಟರ್​ಟೈನ್ಮೆಂಟ್ಸ್ ಅಂಡ್ ಸಿನಿಮಾಸ್ ಸಂಸ್ಥೆಗಳು ನಿರ್ಮಾಣ ಮಾಡಿವೆ. ತಮಿಳುನಾಡಿನಾದ್ಯಂತ ಕಬ್ಜ ಚಿತ್ರವನ್ನು ಪ್ರೇಕ್ಷಕರಿಗೆ ಒಪ್ಪಿಸುವ ಜವಾಬ್ದಾರಿಯನ್ನು ಲೈಕಾ ಪ್ರೊಡಕ್ಷನ್ಸ್ ಸಂಸ್ಥೆ ಹೊತ್ತುಕೊಂಡಿದೆ.

ಕಬ್ಜ ಮೂಲತಃ ಭೂಗತ ಲೋಕದ ಸುತ್ತಮುತ್ತ ನಡೆಯುವ ಕಥೆ ಎಂದು ಎಲ್ಲರೂ ಅಂದುಕೊಂಡಿದ್ದರು. ಆದರೆ ಇಲ್ಲಿ ಕೇವಲ ಮಚ್ಚಿನ ಕಥೆ ಇಲ್ಲ. ದೇಶ ಮೆಚ್ಚುವಂತಹ ಕಥೆ ಇದೆ. ಸ್ವಾತಂತ್ರ್ಯಕ್ಕೂ ಮುನ್ನ ಮತ್ತು ನಂತರದ ಕಥೆ - ವ್ಯಥೆ ಇದೆ. ತಾಯಿಯ ಮಮತೆ ಇದೆ. ಸಹೋದರನ ಬಾಂಧವ್ಯ ಇದೆ. ಪ್ರೇಮದ ಘಮಲು ಇದೆ. ಎಲ್ಲವನ್ನೂ ನಿರ್ದೇಶಕ ಆರ್ ಚಂದ್ರು ಹದವಾಗಿ ಬೆರಸಿದ್ದಾರೆ. ಟ್ರೇಲರ್ ಮೂಲಕ ಕೂತುಹಲ ಹುಟ್ಟಿಸುವಲ್ಲಿ ಯಶಸ್ವಿಯೂ ಆಗಿದ್ದಾರೆ.

ಇದನ್ನೂ ಓದಿ: ಕೆಜಿಎಫ್ ಚಾಪ್ಟರ್ 2 ದಾಖಲೆ ಸರಿಗಟ್ಟಲಿದೆ ಕಬ್ಜ ಸಿನಿಮಾ ಬಿಡುಗಡೆ.. 4000 ಚಿತ್ರಮಂದಿರಗಳಲ್ಲಿ ಏಕಕಾಲಕ್ಕೆ ಬಿಡುಗಡೆ ಸಂಭವ

ಉಪೇಂದ್ರ, ಸುದೀಪ್, ಶಿವ ರಾಜ್​​ಕುಮಾರ್ ಅಲ್ಲದೇ ಟಾಲಿವುಡ್ ಸುಂದರಿ ಶ್ರೀಯಾ ಶರಣ್​, ಕಬೀರ್​ ಸಿಂಗ್​ ದುಹಾನ್​, ಪ್ರಮೋದ್​ ಶೆಟ್ಟಿ, ಮುರಳಿ ಶರ್ಮ ನವಾಬ್ ಷಾ, ತೆಲುಗಿನ ಬೇಡಿಕೆಯ ನಟರಾದ ಪೊಸನಿ ಕೃಷ್ಣ ಮುರಳಿ ಹೀಗೆ ಬಿಗ್ ಸ್ಟಾರ್ ಕಾಸ್ಟ್ ಈ ಚಿತ್ರದಲ್ಲಿದೆ.

ಇದನ್ನೂ ಓದಿ: ಕಬ್ಜ ಹವಾ: 30ಕ್ಕೂ ಹೆಚ್ಚು ಅದ್ಧೂರಿ ಸೆಟ್​​​​ಗಳಿಗಾಗಿ ಕೋಟಿ ಕೋಟಿ ಖರ್ಚು!

ಮಾರ್ಚ್ 17, ದಿ. ನಟ ಪುನೀತ್ ರಾಜ್​ಕುಮಾರ್​ ಅವರ ಹುಟ್ಟು ಹಬ್ಬದಂದು ಕಬ್ಜ ಸಿನಿಮಾ ಜಗತ್ತಿನಾದ್ಯಂತ ಬಿಡುಗಡೆ ಆಗಲಿದೆ. ಕೇವಲ ಕನ್ನಡಿಗರು ಮಾತ್ರವಲ್ಲ, ಅನ್ಯ ಭಾಷೆಯವರೂ ಕೂಡ ಕಬ್ಜ ಬಗ್ಗೆ ಮಾತನಾಡ್ತಿದ್ದಾರೆ. ಕಬ್ಜ ಭಾರತ ಚಿತ್ರಂಗದಲ್ಲಿ ಐತಿಹಾಸಿಕ ಗೆಲುವಬ್ಬು ಕಾಣಲಿ, ಕನ್ನಡದ ಮತ್ತೊಂದು ಹೆಮ್ಮೆಯ ಸಿನಿಮಾ ಆಗಿ ಹೊರ ಹೊಮ್ಮಲಿ ಎನ್ನುವುದೇ ಕನ್ನಡ ಸಿನಿಪ್ರೇಮಿಗಳ ಆಶಯ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.