ಲಾಲ್ ಸಿಂಗ್ ಚಡ್ಡಾ ಹಿನ್ನಡೆ ಕಂಡ ಬಳಿಕ ಬಾಲಿವುಡ್ ಪರ್ಫೆಕ್ಷನಿಷ್ಟ್ ಖ್ಯಾತಿಯ ಅಮೀರ್ ಖಾನ್ ತಮ್ಮ ಮುಂದಿನ ಪ್ರಾಜೆಕ್ಟ್ ಘೋಷಿಸಿಲ್ಲ. ಸದ್ಯ ಸಂಪೂರ್ಣ ಸಮಯವನ್ನು ತಮ್ಮ ಕುಟುಂಬಕ್ಕೆ ಮೀಸಲಿಟ್ಟಿದ್ದಾರೆ. ಕುಟುಂಬಸ್ಥರೊಂದಿಗೆ ಸಮಯ ಕಳೆಯಲು ಇಚ್ಛಿಸುತ್ತೇನೆ, ಸದ್ಯಕ್ಕೆ ಯಾವುದೇ ಸಿನಿಮಾ ಘೋಷಿಸುವುದಿಲ್ಲ ಎಂದು ಸ್ವತಃ ನಟನೇ ತಿಳಿಸಿದ್ದರು.
ಅಮೀರ್ ಖಾನ್ ಯಾವುದೇ ಸಿನಿಮಾ ಘೋಷಿಸದೇ ಇದ್ದರೂ ಅಭಿಮಾನಿಗಳು ಶೀಘ್ರವೇ ಮೆಚ್ಚಿನ ನಟನ ಚಿತ್ರ ಬರಲಿ ಎಂದು ಆಶಿಸುತ್ತಿದ್ದಾರೆ. ಇತ್ತ ಮುಂದಿನ ಚಿತ್ರದ ಕುರಿತು ಹಲವು ಅಂತೆ-ಕಂತೆಗಳು ಹುಟ್ಟಿಕೊಂಡಿವೆ. ಹೌದು, ಪುತ್ರ ಜುನೈದ್ ಖಾನ್ ನಟನೆಯ ಸಿನಿಮಾವನ್ನು ಅಮೀರ್ ನಿರ್ಮಾಣ ಮಾಡಲಿದ್ದಾರಂತೆ. ದಿ. ನಟಿ ಶ್ರೀದೇವಿ ಮತ್ತು ನಿರ್ಮಾಪಕ ಬೋನಿ ಕಪೂರ್ ದಂಪತಿಯ ಕಿರಿಯ ಪುತ್ರಿ ಖುಷಿ ಕಪೂರ್ (ಬಾಲಿವುಡ್ ನಟಿ ಜಾನ್ವಿ ಕಪೂರ್ ತಂಗಿ) ಚಿತ್ರದಲ್ಲಿ ಪ್ರಮುಖ ಪಾತ್ರದಲ್ಲಿ ನಟಿಸಲಿದ್ದಾರಂತೆ ಅನ್ನೋದೆಲ್ಲ ವದಂತಿಗಳು. ಆದರೆ, ತಮ್ಮ ನಿರ್ಮಾಣದ ಮುಂದಿನ ಸಿನಿಮಾವನ್ನು ಅಮೀರ್ ಖಾನ್ ಇನ್ನೂ ಅಧಿಕೃತವಾಗಿ ಘೋಷಿಸಿಲ್ಲ. ಆದ್ರೆ ಜುನೈದ್ ಖಾನ್ ಮತ್ತು ಖುಷಿ ಕಪೂರ್ ಮುಖ್ಯಭೂಮಿಕೆಯಲ್ಲಿ ಅದ್ಧೂರಿ ಸಿನಿಮಾವೊಂದು ಬರಲಿದೆ. ಇದು ಥಾಯ್ ಸಿನಿಮಾವೊಂದರ (Thai film) ರೀಮೇಕ್ ಆಗಲಿದೆ ಎಂಬ ಮಾಹಿತಿ ಸಖತ್ ಸದ್ದು ಮಾಡುತ್ತಿದೆ. ಹೀಗಾಗಿ ಅಧಿಕೃತ ಘೋಷಣೆ ನಿರೀಕ್ಷಿಸಲಾಗಿದೆ.
- " class="align-text-top noRightClick twitterSection" data="">
ಜುನೈದ್ ಖಾನ್ ಅವರು ಯಶ್ ರಾಜ್ ಫಿಲ್ಮ್ಸ್ ನಿರ್ಮಾಣದ ಮಹಾರಾಜ ಸಿನಿಮಾ ಮೂಲಕ ಬಣ್ಣದ ಲೋಕಕ್ಕೆ ಎಂಟ್ರಿ ಕೊಡುತ್ತಿದ್ದಾರೆ. ಚೊಚ್ಚಲ ಚಿತ್ರ ತೆರೆಕಾಣುವ ಮುನ್ನವೇ ಜುನೈದ್ ಅವರಿಗಾಗಿ ಮತ್ತೊಂದು ಚಿತ್ರ ರೆಡಿಯಾಗುತ್ತಿದೆಯಂತೆ. ಇದನ್ನು ಸ್ವತಃ ತಂದೇ ಅಮೀರ್ ಖಾನ್ ಅವರೇ ನಿರ್ದೇಶಿಸಲಿದ್ದಾರೆ. ಇದು ಥಾಯ್ ಭಾಷೆಯ ಒನ್ ಡೇ ಸಿನಿಮಾದ ಅಧಿಕೃತ ರೀಮೇಕ್ ಎಂದು ಹೇಳಲಾಗಿದೆ. ಅಮೀರ್ ಖಾನ್ ಈಗಾಗಲೇ ಚಿತ್ರದ ರೀಮೇಕ್ ಹಕ್ಕುಗಳನ್ನು ಪಡೆದುಕೊಂಡಿದ್ದಾರೆ. ಸಿನಿಮಾವನ್ನು ಅಮೀರ್ ಆಪ್ತರಲ್ಲಿ ಒಬ್ಬರಾದ ಸುನೀಲ್ ಪಾಂಡೆ ನಿರ್ದೇಶಿಸಲಿದ್ದಾರೆ ಎಂಬ ಮಾಹಿತಿಯೂ ಇದೆ.
ಇದನ್ನೂ ಓದಿ: ಸೈಫ್ ಅಲಿ ಖಾನ್ ಬರ್ತ್ಡೇ: ಪ್ರೀತಿಯ ಮಳೆ ಸುರಿಸಿದ ಪತ್ನಿ ಕರೀನಾ - 'ದೇವರ' ಸಿನಿಮಾದಿಂದ ಫಸ್ಟ್ ಲುಕ್ ಅನಾವರಣ
ವರದಿಗಳ ಪ್ರಕಾರ, ಈ ವರ್ಷದ ಕೊನೆಯಲ್ಲಿ ಜುನೈದ್ ಮತ್ತು ಖುಷಿ ತಮ್ಮ ಚಿತ್ರದ ಶೂಟಿಂಗ್ ಪ್ರಾರಂಭಿಸಲಿದ್ದಾರೆ. ರೊಮ್ಯಾಂಟಿಕ್ ಲವ್ಸ್ಟೋರಿ ನಾಚಿಕೆ ಸ್ವಭಾವವುಳ್ಳ ವೃತ್ತಿಪರರ ಸುತ್ತ ಸುತ್ತುತ್ತದೆ. ಸಹೋದ್ಯೋಗಿಯನ್ನು ಪ್ರೀತಿಸಲು ಪ್ರಾರಂಭಿಸಿ, ಭಾವನೆ ವ್ಯಕ್ತಪಡಿಸಲು ಹೆಣಗಾಡುವ ದೃಶ್ಯಗಳನ್ನು ಸಿನಿಮಾ ಒಳಗೊಂಡಿರಲಿದೆಯಂತೆ. ಬ್ಯಾನ್ಜಾಂಗ್ ಪಿಸಂತಾನಕುನ್ (Banjong Pisanthanakun) ಆ್ಯಕ್ಷನ್ ಕಟ್ ಹೇಳಿರುವ ಥಾಯ್ (Thailand) ಸಿನಿಮಾ ಒನ್ ಡೇ 1016ರಲ್ಲಿ ತೆರೆಕಂಡಿದೆ.
ಇದನ್ನೂ ಓದಿ: ವಿಜಯ್ ದೇವರಕೊಂಡ ಜೊತೆ ಸಮಂತಾ ಸಿನಿಮಾ ಪ್ರಚಾರ; ಅಭಿಮಾನಿಗಳು ಫುಲ್ 'ಕುಶಿ': Photos