ETV Bharat / entertainment

'ಬೆವರ ಹನಿಯ ಒಡಲಿನಲಿ ತಂದೆಯ ಸಹನೆ ಲಾಲಿ..': ಜೂಲಿಯೆಟ್ 2 ಹಾಡಿಗೆ ಮೆಚ್ಚುಗೆ - ನೆನಪಿಲ್ಲಿ ಈಗ ಹಾಡು

ಜೂಲಿಯೆಟ್‌ 2 ಚಿತ್ರದ ತಂದೆ ಮತ್ತು ಮಗಳ ಬಾಂಧವ್ಯ ಸಾರುವ ಹಾಡು ವೀಕ್ಷಕರ ಮೆಚ್ಚುಗೆ ಗಳಿಸುತ್ತಿದೆ.

Juliet 2 movie song
ಜೂಲಿಯೆಟ್‌ 2 ಚಿತ್ರದ ಹಾಡು
author img

By

Published : Feb 10, 2023, 6:15 PM IST

ಹೆತ್ತವರ ಪ್ರೀತಿಯನ್ನು ವರ್ಣಿಸಲು ಪದಗಳು ಸಾಲದು. ಆ ಪ್ರೀತಿಯ ಬಗ್ಗೆ ಎಷ್ಟು ಹೇಳಿದರೂ ಕಡಿಮೆಯೇ. ಅದರಲ್ಲೂ ತಾಯಿಗೆ ಮಗನ‌ ಮೇಲೆ, ತಂದೆಗೆ ಮಗಳ ಮೇಲೆ ಮಮತೆ ಕೊಂಚ ಹೆಚ್ಚೇ. ಇಂಥದ್ದೇ ಬಾಂಧವ್ಯ ಒಳಗೊಂಡಿರುವ ಹಾಡು ಈಗ ಸ್ಯಾಂಡಲ್​ವುಡ್​ನಲ್ಲಿ ಅನುರಣಿಸುತ್ತಿದೆ. ಪ್ರೇಮಂ ಪೂಜ್ಯಂ ಸಿನಿಮಾ ಖ್ಯಾತಿಯ ಬೃಂದಾ ಆಚಾರ್ಯ ಮುಖ್ಯ ಭೂಮಿಕೆಯಲ್ಲಿರುವ ಜೂಲಿಯೆಟ್‌ 2 ಚಿತ್ರದ ಹಾಡು ಇದಾಗಿದೆ.

ಕೆಲ ದಿನಗಳ ಹಿಂದೆ ಅಶ್ವಿನಿ ಪುನೀತ್ ರಾಜ್​​ಕುಮಾರ್ ಚಿತ್ರದ ಟೀಸರ್ ಬಿಡುಗಡೆ ಮಾಡಿ ಮೆಚ್ಚುಗೆ ವ್ಯಕ್ತಪಡಿಸಿ, ಚಿತ್ರದ ಯಶಸ್ಸಿಗೆ ಶುಭ ಹಾರೈಸಿದ್ದರು. ಇದರ ಬೆನ್ನಲ್ಲೇ ಚಿತ್ರತಂಡ ತಂದೆ ಮತ್ತು ಮಗಳ ಬಾಂಧವ್ಯದ ಹಾಡೊಂದನ್ನು ಬಿಡುಗಡೆ ಮಾಡಿತ್ತು. ವಿಭಿನ್ನ ಕಥಾಹಂದರ ಹೊಂದಿರುವ ಜ್ಯೂಲಿಯೆಟ್ 2 ಚಿತ್ರದ ತಂದೆ ಮಗಳ ಬಾಂಧವ್ಯವನ್ನು ಸಾರುವ ಹಾಡು ಕೇಳುಗರ ಮನ ಕರಗಿಸಿದೆ. ಬೆವರ ಹನಿಯ ಒಡಲಿನಲಿ ತಂದೆಯ ಸಹನೆ ಲಾಲಿ ಹಾಡುತ್ತೆ ಎಂಬ ಹಾಡು (ನೆನಪಿಲ್ಲಿ ಈಗ ಹಾಡು) ಬಿಡುಗಡೆಯಾಗಿ ಒಂದು ಮಿಲಿಯನ್ ವೀಕ್ಷಣೆ ಪಡೆದಿದೆ.

ಪೋಷಕರನ್ನು ಬಣ್ಣಿಸುವ ಕೆಲ ಹಾಡುಗಳು ಈಗಾಗಲೇ ಬಂದಿವೆ. ಕೆಲ ವರ್ಷಗಳ ಹಿಂದೆ ಬಂದ ಅಪ್ಪಾ ಐ ಲವ್ ಯೂ ಪಾ ಹಾಡು ಸೂಪರ್ ಹಿಟ್ ಆಗಿತ್ತು. ಈ ಹಾಡಿನ ಬಳಿಕ ಇದೀಗ ಜೂಲಿಯಟ್ 2 ಚಿತ್ರದ ಅಪ್ಪ ಮಗಳ ಹಾಡು ಸ್ಯಾಂಡಲ್​ವುಡ್​ನಲ್ಲಿ ಸಖತ್​ ಸೌಂಡ್ ಮಾಡುತ್ತಿದೆ.

Juliet 2
ಜೂಲಿಯೆಟ್‌ 2 ಚಿತ್ರತಂಡ

ಯುವ ಪ್ರತಿಭೆ ಸುಕೀರ್ತ್ ಶೆಟ್ಟಿ ಬರೆದ ಸಾಹಿತ್ಯಕ್ಕೆ, ಸಂಗೀತ ನಿರ್ದೇಶಕ ಸಂದೀಪ್ ಆರ್.ಬಲ್ಲಾಳ್ ಕ್ಯಾಚೀ ಟ್ಯೂನ್ ಹಾಕಿದ್ದಾರೆ. ಮಲ್ಲಿಕಾ ಮಟ್ಟಿ ಇಂಪಾಗಿ ಹಾಡಿದ್ದಾರೆ. ಮಗಳ ಪಾತ್ರದಲ್ಲಿ ರಕ್ಷಿತಾ ಬೋಳಾರ್ ಹಾಗೂ ತಂದೆಯ ಪಾತ್ರದಲ್ಲಿ ಲಕ್ಷ್ಮೀಶ್ ಭಟ್ ಸೊಗಸಾಗಿ ನಟಿಸಿದ್ದಾರೆ.

ಪ್ರೇಮಂ ಪೂಜ್ಯಂ ಖ್ಯಾತಿಯ ಬೃಂದಾ ಆಚಾರ್ಯ ಅವರು ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಬೃಂದಾ ಆಚಾರ್ಯ ಜೊತೆಗೆ ಅನೂಪ್ ಸಾಗರ್, ಖುಷ್ ಆಚಾರ್ಯ, ರವಿ, ರಾಧೇಶ್ ಶೆಣೈ, ಶ್ರೀಕಾಂತ್, ರಾಯ್, ರಕ್ಷಿತಾ ಬೋಳಾರ್, ಲಕ್ಷ್ಮೀಶ್ ಭಟ್ ಸೇರಿದಂತೆ ಸಾಕಷ್ಟು ಕಲಾವಿದರು ಅಭಿನಯಿಸಿದ್ದಾರೆ.

ಪಿಐ ಪ್ರೊಡಕ್ಷನ್​ ಮತ್ತು ವಿರಾಟ್​ ಮೋಷನ್ ಪಿಕ್ಚರ್ ಲಾಂಛನದಲ್ಲಿ ಲಿಖಿತ್ ಆರ್.ಕೋಟ್ಯಾನ್ ನಿರ್ಮಾಣ ಮಾಡಿರುವ "ಜ್ಯೂಲಿಯೆಟ್ 2" ಚಿತ್ರವನ್ನು ವಿರಾಟ್ ಬಿ.ಗೌಡ ನಿರ್ದೇಶಿಸಿದ್ದಾರೆ. ಸಚಿನ್ ಬಸ್ರೂರ್ ಅವರ ಬಿ.ಜಿ.ಎಂ ಹಾಗೂ ಶ್ಯಾಂಟೋ ವಿ ಆ್ಯಂಟೋ ಅವರ ಛಾಯಾಗ್ರಹಣ ಚಿತ್ರದ ಹೈಲೆಟ್.

ಇದನ್ನೂ ಓದಿ: ಜೂಲಿಯೆಟ್ 2 ಚಿತ್ರದ ಅಪ್ಪ ಮಗಳ ಬಾಂಧವ್ಯದ ಹಾಡು ಬಿಡುಗಡೆ

ಕನ್ನಡ, ತೆಲುಗು, ತಮಿಳು, ಮಲೆಯಾಳಂ ಹಾಗೂ ಹಿಂದಿ ಭಾಷೆಗಳಲ್ಲಿ ಈ ಚಿತ್ರವನ್ನು ರಿಲಯನ್ಸ್ ಎಂಟರ್​ಟೈನ್​ಮೆಂಟ್ ಮೂಲಕ ವಿಶ್ವಾದ್ಯಂತ ಬಿಡುಗಡೆ ಮಾಡಲಾಗುತ್ತಿದೆ. ಹಾಡು ಮತ್ತು ಟೀಸರ್​ನಿಂದಲೇ ಟಾಕ್ ಆಗುತ್ತಿರುವ ಜೂಲಿಯೆಟ್‌ 2 ಸಿನಿಮಾ ಬೃಂದಾ ಆಚಾರ್ಯ ಅವರ ಕೆರಿಯರ್​ಗೆ ಬ್ರೇಕ್ ನೀಡುತ್ತಾ ಅನ್ನೋದು ಈ ತಿಂಗಳ 24ರಂದು ಗೊತ್ತಾಗಲಿದೆ.

ಇದನ್ನೂ ಓದಿ: ಜೂಲಿಯೆಟ್ 2 ಟೀಸರ್ ಬಿಡುಗಡೆ ಮಾಡಿದ ಅಶ್ವಿನಿ ಪುನೀತ್ ರಾಜ್‌ಕುಮಾರ್

ETV Bharat Logo

Copyright © 2025 Ushodaya Enterprises Pvt. Ltd., All Rights Reserved.