ಬಾಲಿವುಡ್ ನಟ ವರುಣ್ ಧವನ್, ಕಿಯಾರಾ ಅಡ್ವಾಣಿ ಹಾಗೂ ಅನಿಲ್ ಕಪೂರ್, ನೀತು ಕಪೂರ್ ನಟನೆಯ ಬಹು ನಿರೀಕ್ಷಿತ ಫ್ಯಾಮಿಲಿ ಎಂಟರ್ಟೈನ್ಮೆಂಟ್ ಸಿನಿಮಾ 'ಜುಗ್ಜುಗ್ಗ್ ಜಿಯೋ' ಶುಕ್ರವಾರ ತೆರೆಕಂಡಿದ್ದು, ಮೊದಲ ದಿನ 9.28 ಕೋಟಿ ರೂಪಾಯಿ ಗಳಿಸಿದೆ ಎಂದು ಧರ್ಮ ಪ್ರೊಡಕ್ಷನ್ಸ್ ಶನಿವಾರ ತಿಳಿಸಿದೆ.
ಚಿತ್ರದ ಆರಂಭಿಕ ದಿನದ ಅಂಕಿ-ಅಂಶವನ್ನು ಕರಣ್ ಜೋಹರ್ ನೇತೃತ್ವದ ಬ್ಯಾನರ್ ತನ್ನ ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದೆ. ''ಸಿನಿಮಾ ಯಶಸ್ವಿಯಾಗಿದೆ, ಬಾಕ್ಸ್ ಆಫೀಸ್‌ನಲ್ಲಿ ಭರಪೂರ ಆಶೀರ್ವಾದ, ನಿಮ್ಮೆಲ್ಲರ ಪ್ರೀತಿಗೆ ಧನ್ಯವಾದಗಳು' ಎಂದು ಪೋಸ್ಟ್ ಮಾಡಿದೆ.
- " class="align-text-top noRightClick twitterSection" data="
">
ಜುಗ್ಜುಗ್ಗ್ ಜಿಯೋ ಕಾಮಿಡಿ ಡ್ರಾಮಾವನ್ನು ನಿರ್ದೇಶಕ ರಾಜ್ ಮೆಹ್ತಾ ನಿರ್ದೇಶಿಸಿದ್ದು, ವಯಾಕಾಮ್ 18 ಹಾಗೂ ಧರ್ಮ ಪ್ರೊಡಕ್ಷನ್ಸ್ ಬಂಡವಾಳ ಹೂಡಿದೆ. ಏಳು ವರ್ಷಗಳ ನಂತರ ನೀತು ಕಪೂರ್ ಸ್ಕ್ರೀನ್ಗೆ ಮರಳಿದ್ದಾರೆ. ಚಿತ್ರದಲ್ಲಿ ಮನೀಶ್ ಪೌಲ್ ಹಾಗೂ ಪ್ರಜಕ್ತಾ ಕೋಲಿ ಸಹ ನಟಿಸಿದ್ದಾರೆ.
ಇದನ್ನೂ ಓದಿ: ಆಲಿಯಾಗಿಂತ ಉತ್ತಮ ಸಂಗಾತಿ ಪಡೆಯಲು ಸಾಧ್ಯವಿಲ್ಲ: ರಣಬೀರ್ ಕಪೂರ್