ETV Bharat / entertainment

ಸೆ.2ಕ್ಕೆ ಹೈದರಾಬಾದ್​ನಲ್ಲಿ ಬ್ರಹ್ಮಾಸ್ತ್ರ ಪ್ರೀ ರಿಲೀಸ್ ಈವೆಂಟ್.. ಜೂ. ಎನ್​ಟಿಆರ್ ಭಾಗಿ​ - ನಟ ರಣ್​​ಬೀರ್ ಕಪೂರ್

ಹೈದರಾಬಾದ್​ನಲ್ಲಿ ಸೆ.2ರಂದು ಬ್ರಹ್ಮಾಸ್ತ್ರ ಪ್ರೀ ರಿಲೀಸ್ ಈವೆಂಟ್​ ನಡೆಯಲಿದ್ದು, ಆರ್​​ಆರ್​ಆರ್​ ಸ್ಟಾರ್ ಜೂನಿಯರ್ ಎನ್​ಟಿಆರ್​ ಭಾಗಿಯಾಗಲಿದ್ದಾರೆ.

Jr NTR to grace Brahmastra pre release event in Hyderabad, makers laud RRR star's generosity
ಹೈದರಾಬಾದ್​ನಲ್ಲಿ ಬ್ರಹ್ಮಾಸ್ತ್ರ ಪ್ರೀ ರಿಲೀಸ್ ಈವೆಂಟ್
author img

By

Published : Aug 27, 2022, 2:52 PM IST

ಬಾಲಿವುಡ್​ ನಟಿ ಆಲಿಯಾ ಭಟ್ ಮತ್ತು ನಟ ರಣ್​​ಬೀರ್ ಕಪೂರ್ ಜೋಡಿಯಾಗಿ ನಟಿಸಿರುವ ಬಹು ನಿರೀಕ್ಷಿತ ಬ್ರಹ್ಮಾಸ್ತ್ರ ​ಸಿನಿಮಾ ಸೆಪ್ಟೆಂಬರ್​ 9ರಂದು ಅದ್ಧೂರಿಯಾಗಿ ದೇಶಾದ್ಯಂತ ಬಿಡುಗಡೆ ಆಗಲಿದೆ. ಈ ದಂಪತಿ ಮೊದಲ ಬಾರಿಗೆ ಒಟ್ಟಿಗೆ ನಟಿಸಿರುವ ಬ್ರಹ್ಮಾಸ್ತ್ರ ​ಸಿನಿಮಾ ಪ್ರಚಾರ ಕಾರ್ಯಕ್ರಮ ಜೋರಾಗಿ ನಡೆಯುತ್ತಿದೆ. ಹೈದರಾಬಾದ್​ನಲ್ಲಿ ಸೆ.2ರಂದು ಬ್ರಹ್ಮಾಸ್ತ್ರ ಪ್ರೀ ರಿಲೀಸ್ ಈವೆಂಟ್​ ನಡೆಯಲಿದ್ದು, ಆರ್​​ಆರ್​ಆರ್​ ಸ್ಟಾರ್ ಜೂನಿಯರ್ ಎನ್​ಟಿಆರ್​ ಕಾರ್ಯಕ್ರಮಕ್ಕೆ ಮೆರುಗು ನೀಡಲಿದ್ದಾರೆ.

ಬ್ರಹ್ಮಾಸ್ತ್ರ ನಿರ್ದೇಶಕ ಅಯಾನ್‌ ಮುಖರ್ಜಿ ಸಾಮಾಜಿಕ ಜಾಲತಾಣದಲ್ಲಿ, ಜೂನಿಯರ್ ಎನ್​ಟಿಆರ್ ಸಿನಿಮಾದ ಪ್ರಚಾರದಲ್ಲಿ ತೊಡಗಿಕೊಳ್ಳುತ್ತಿರುವುದಕ್ಕೆ ತಮ್ಮ ಕೃತಜ್ಞತೆ ತಿಳಿಸಿದ್ದಾರೆ. ಬ್ರಹ್ಮಾಸ್ತ್ರ ಪ್ರೀ ರಿಲೀಸ್ ಈವೆಂಟ್‌ನಲ್ಲಿ ಜೂನಿಯರ್ ಎನ್‌ಟಿಆರ್ ಭಾಗವಹಿಸುವಿಕೆ ಬಗ್ಗೆ ಘೋಷಿಸುವ ವಿಡಿಯೋವನ್ನು ಅಯಾನ್ ಮುಖರ್ಜಿ ಶನಿವಾರದಂದು ಹಂಚಿಕೊಂಡಿದ್ದಾರೆ. ಜೂನಿಯರ್ ಎನ್​ಟಿಆರ್ ಬ್ರಹ್ಮಾಸ್ತ್ರ ಪ್ರಚಾರದ ಭಾಗವಾಗಿ ಸಿನಿಮಾ ಅಬ್ಬರಿಸಲು ನೆರವಾಗುತ್ತಿದ್ದಾರೆ ಎಂದು ತಿಳಿಸಿದ್ದಾರೆ.

ಸೆ.2ರಂದು ನಡೆಯಲಿರುವ ಬ್ರಹ್ಮಾಸ್ತ್ರ ಪ್ರೀ ರಿಲೀಸ್ ಈವೆಂಟ್ ನಲ್ಲಿ ​ ನಟಿ ಆಲಿಯಾ ಭಟ್, ನಟ ರಣ್​​ಬೀರ್ ಕಪೂರ್, ನಟ ನಾಗಾರ್ಜುನ್, ನಿರ್ದೇಶಕ ರಾಜಮೌಳಿ ಇರಲಿದ್ದಾರೆ. ಇನ್ನೂ ಆ.24ರಂದು ಚೆನ್ನೈನಲ್ಲಿ ಸಿನಿಮಾ ಪ್ರಚಾರ ಕಾರ್ಯಕ್ರಮ ನಡೆದಿತ್ತು. ರಾಜಮೌಳಿ, ನಾಗಾರ್ಜುನ, ರಣ್​​ಬೀರ್ ಕಪೂರ್ ಉಪಸ್ಥಿತರಿದ್ದರು. ಅಂದು ನಟ ರಣ್​​ಬೀರ್ ಕಪೂರ್ ದಕ್ಷಿಣ ಭಾರತದ ಆಹಾರ ಸವಿದು ಹರ್ಷ ವ್ಯಕ್ತಪಡಿಸಿದ್ದರು.

ಬ್ರಹ್ಮಾಸ್ತ್ರ ಭಾಗ 1 ಶಿವ ಭಾರತೀಯ ಪುರಾಣಗಳಲ್ಲಿ ಆಳವಾಗಿ ಬೇರೂರಿರುವ ಪರಿಕಲ್ಪನೆಗಳು, ಕಥೆಗಳಿಂದ ಸ್ಫೂರ್ತಿ ಪಡೆದ ಸಿನಿಮಾ. ಅಯಾನ್‌ ಮುಖರ್ಜಿ ನಿರ್ದೇಶನದ ಈ ಚಿತ್ರವನ್ನು ಎಸ್.ಎಸ್ ರಾಜಮೌಳಿ ತಮಿಳು, ತೆಲುಗು, ಕನ್ನಡ, ಮಲಯಾಳಂನಲ್ಲಿ ನಿರ್ಮಿಸಿ ಪ್ರಸ್ತುತಪಡಿಸಲಿದ್ದಾರೆ. ಸ್ಟಾರ್ ಸ್ಟುಡಿಯೋಸ್, ಧರ್ಮ ಪ್ರೊಡಕ್ಷನ್ಸ್, ಪ್ರೈಮ್ ಫೋಕಸ್ ಮತ್ತು ಸ್ಟಾರ್‌ಲೈಟ್ ಪಿಕ್ಚರ್ಸ್ ನಿರ್ಮಿಸಿರುವ ಈ ಸಿನಿಮಾ ಸೆಪ್ಟೆಂಬರ್ 9 ರಂದು ಹಿಂದಿ, ತಮಿಳು, ತೆಲುಗು, ಮಲಯಾಳಂ ಮತ್ತು ಕನ್ನಡ ಸೇರಿ 5 ಭಾಷೆಗಳಲ್ಲಿ ಬಿಡುಗಡೆಯಾಗಲಿದೆ.

ಇದನ್ನೂ ಓದಿ: ಬ್ರಹ್ಮಾಸ್ತ್ರ ಚಿತ್ರದ ಪ್ರಚಾರದಲ್ಲಿ ಗರ್ಭಿಣಿ ಆಲಿಯಾ ಭಟ್‌: ಚಿತ್ರಗಳನ್ನು ನೋಡಿ

ಇನ್ನು, ಸಾಮಾಜಿಕ ಜಾಲತಾಣದಲ್ಲಿ ಸಿನಿಮಾ ನೋಡದಂತೆ ಟ್ವಿಟರ್​​ ಅಭಿಯಾನ ಸಹ ಆರಂಭಿಸಲಾಗಿದೆ. ನಟಿ ಆಲಿಯಾ ಭಟ್ ಇತ್ತೀಚೆಗೆ ನೀಡಿದ ಹೇಳಿಕೆಗೆ ನೆಟಿಜನ್‌ಗಳು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಆಲಿಯಾ ಭಟ್​ ಜೊತೆಗೆ ಬ್ರಹ್ಮಾಸ್ತ್ರಕ್ಕೆ ಬಾಯ್ಕಾಟ್​ ಬಿಸಿ ತಾಗಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.