ಇಂಡಿಯನ್ ಸೂಪರ್ ಸ್ಟಾರ್ ರಜನಿಕಾಂತ್ ಅಭಿನಯದ 'ಜೈಲರ್' ಅಂತಿವಾಗಿ ಪ್ರೇಕ್ಷಕರಿಗೆ ದರ್ಶನ ಕೊಟ್ಟಿದೆ. ನೆಲ್ಸನ್ ದಿಲೀಪ್ ಕುಮಾರ್ ಆ್ಯಕ್ಷನ್ ಕಟ್ ಹೇಳಿರುವ ಸಿನಿಮಾದಲ್ಲಿ ಕನ್ನಡದ ಹಿರಿಯ ನಟ ಶಿವ ರಾಜ್ಕುಮಾರ್, ಸೌತ್ ಸೂಪರ್ ಸ್ಟಾರ್ಗಳಾದ ಮೋಹನ್ ಲಾಲ್, ರಮ್ಯಾ ಕೃಷ್ಣನ್, ಯೋಗಿ ಬಾಬು, ವಸಂತ್ ರವಿ ಸೇರಿದಂತೆ ಅನೇಕರು ಕಾಣಿಸಿಕೊಂಡಿದ್ದಾರೆ. ಎರಡು ವರ್ಷಗಳ ಬ್ರೇಕ್ ಬಳಿಕ ಬಂದ ರಜನಿಕಾಂತ್ ಸಿನಿಮಾವನ್ನು ಪ್ರೇಕ್ಷಕರು ಖುಷಿಯಿಂದ ಸ್ವೀಕರಿಸಿದ್ದಾರೆ. ಸದ್ಯ ಆ್ಯಕ್ಷನ್ ಸಿನಿಮಾಗೆ ಪ್ರೇಕ್ಷಕರು ಉತ್ತಮ ಪ್ರತಿಕ್ರಿಯೆ ಕೊಟ್ಟಿದ್ದಾರೆ.
ಮಾವನ ಸಿನಿಮಾ ವೀಕ್ಷಿಸಿದ ಅಳಿಯ ಧನುಷ್: ಥಿಯೇಟರ್ಗಳಲ್ಲಿ ಸಿನಿಮಾ ವೀಕ್ಷಿಸಿದ ತಲೈವಾನ ಕಟ್ಟಾ ಅಭಿಮಾನಿಗಳು ಹುಚ್ಚೆದ್ದು ಕುಣಿದಿದ್ದಾರೆ. ಎಂದಿನಂತೆ ತೆರೆ ಮೇಲೆ ರಜನಿಯನ್ನು ಬಲು ಸಂಭ್ರಮದಿಂದ ಸ್ವೀಕರಿಸಿದ್ದಾರೆ. ಸೌತ್ ಸೂಪರ್ ಸ್ಟಾರ್, ಅಳಿಯ ಧನುಷ್ ಕೂಡ ಮೊದಲ ದಿನವೇ ಮಾವನ ಸಿನಿಮಾ ನೋಡಿ ಸಂಭ್ರಮಿಸಿದ್ದಾರೆ. ಜೈಲರ್ ಸಿನಿಮಾವನ್ನು ಮೊದಲ ದಿನವೇ ಕಣ್ತುಂಬಿಕೊಂಡವರ ಪೈಕಿ ಪುತ್ರಿ ಐಶ್ವರ್ಯಾ ರಜನಿಕಾಂತ್, ಅಳಿಯ ಧನುಷ್ ಕೂಡ ಓರ್ವರು.
ಇದು ಜೈಲರ್ ವೀಕ್: ಧನುಷ್ ಅವರು ತಮ್ಮ ಮಾವ ರಜನಿಕಾಂತ್ ಅವರ ಕಟ್ಟಾ ಅಭಿಮಾನಿ. ಆಗಸ್ಟ್ 7 ರಂದು ಇದು ಜೈಲರ್ ವೀಕ್ ಎಂದು ಟ್ವೀಟ್ ಮಾಡಿದ್ದ ಧನುಷ್, ಮೊದಲ ದಿನವೇ ಸಿನಿಮಾ ನೋಡುವುದರಿಂದ ತಪ್ಪಿಸಿಕೊಂಡಿಲ್ಲ. ಮೊದಲ ದಿನ ಧನುಷ್, ಐಶ್ವರ್ಯಾ ಮಾತ್ರವಲ್ಲದೇ ರಾಘವ ಲಾರೆನ್ಸ್, ರಜನಿಕಾಂತ್ ಪತ್ನಿ ಲತಾ ಕೂಡ ಸಿನಿಮಾ ವೀಕ್ಷಿಸಿ ಸಂಭ್ರಮಿಸಿದ್ದಾರೆ.
ಚೆನ್ನೈಗೆ ಬಂದ ಜಪಾನ್ ಜೋಡಿ: ವಿಶಿಷ್ಠ ಮ್ಯಾನರಿಸಂ ಹೊಂದಿರುವ ರಜನಿಕಾಂತ್ ದೇಶ ಮಾತ್ರವಲ್ಲದೇ ವಿಶ್ವಾದ್ಯಂತ ಅಭಿಮಾನಿಗಳನ್ನು ಸಂಪಾದಿಸಿದ್ದಾರೆ. ಫ್ಯಾನ್ಸ್ ತಮ್ಮದೇ ಆದ ರೀತಿಯಲ್ಲಿ ಅಭಿಮಾನ ವ್ಯಕ್ತಪಡಿಸುತ್ತಿರುತ್ತಾರೆ. ಇದೀಗ ಜಪಾನ್ ಜೋಡಿ ಜೈಲರ್ ಸಿನಿಮಾ ವೀಕ್ಷಿಸಲು ಚೆನ್ನೈಗೆ ಆಗಮಿಸಿ, ರಜನಿಕಾಂತ್ ಮೇಲೆ ಪ್ರೀತಿಯ ಧಾರೆಯೆರೆದಿದ್ದಾರೆ.
ಇದನ್ನೂ ಓದಿ: Kiara Advani: ಕಣ್ಣಲ್ಲೇ ಕೊಲ್ತಾರೆ ಕಿಯಾರಾ ಅಡ್ವಾಣಿ ಅಂದಕ್ಕೆ ಹುಬ್ಬೇರಿಸಿದ ಅಭಿಮಾನಿ
ಬಹುಬೇಡಿಕೆಯ ನಟ ರಜನಿಕಾಂತ್ ಅವರ ಕಟ್ಟಾ ಅಭಿಮಾನಿಯಾಗಿರುವ ಯಸುದಾ (Yasuda Hidetoshi) ಅವರು ಜಪಾನ್ನ ಒಸಾಕಾ ಹೋಟೆಲ್ನಲ್ಲಿ ಕೆಲಸ ಮಾಡುತ್ತಾರೆ. 1995ರ ಮುತು ಸಿನಿಮಾ ಮೂಲಕ ರಜನಿ ಅವರ ಅಭಿಮಾನಿಯಾದರು. ಆನಂತರ ನಟನ ಎಲ್ಲಾ ಸಿನಿಮಾಗಳನ್ನು ಯಸುದಾ ಅವರು ವೀಕ್ಷಿಸಿದ್ದಾರೆ. ರಜನಿ ಕುರಿತ ಲೇಖನಗಳನ್ನು ಮ್ಯಾಗಜಿನ್ಗಳಲ್ಲಿ ಓದಿ ತಿಳಿದಿದ್ದಾರೆ. 2002ರ ಬಾಬಾ ಸಿನಿಮಾ, ರಜನಿ ಅವರ ಚಲನಚಿತ್ರಗಳನ್ನು ಚೆನ್ನೈನ ಥಿಯೇಟರ್ಗಳಲ್ಲಿ ಮೊದಲ ದಿನವೇ ನೋಡುವಂತೆ ಮಾಡಿತು. ಇದೀಗ ಜೈಲರ್ ಅನ್ನು ಚೈನ್ನೈನ ಥಿಯೇಟರ್ನಲ್ಲಿ ವೀಕ್ಷಿಸಿದ್ದಾರೆ. ಕಾಲ, ಕಬಾಲಿ, ದರ್ಬಾರ್ ಸಿನಿಮಾಗಳನ್ನು ಸಹ ಚೈನ್ನೈಗೆ ಬಂದು ವೀಕ್ಷಿಸಿದ್ದರು.
ಇದನ್ನೂ ಓದಿ: ಗ್ಯಾಂಗ್ಸ್ಟರ್ ಪಾತ್ರದಲ್ಲಿ ದುಲ್ಕರ್ ಸಲ್ಮಾನ್ ಅಬ್ಬರ - 'ಕಿಂಗ್ ಆಫ್ ಕೋಥಾ' ಯಶಸ್ಸಿಗೆ ಶಾರುಖ್ ಶುಭ ಹಾರೈಕೆ
ಜಪಾನ್ನಲ್ಲಿ ರಜನಿಕಾಂತ್ ಫ್ಯಾನ್ಸ್ ಕ್ಲಬ್ ಇದೆ. ಈ ಬಾರಿ ರಜನಿ ಅವರ ಸಿನಿಮಾ ವೀಕ್ಷಿಸಲು ಪತ್ನಿ ಶತ್ಸುಕಿ (Shatsuki) ಅವರೊಂದಿಗೆ ಆಗಮಿಸಿದ್ದಾರೆ. ಆಗಸ್ಟ್ 2ರಂದು ಯಸುದಾ ದಂಪತಿ ತಮ್ಮ ಮೆಚ್ಚಿನ ನಟ ರಜನಿ ಅವರನ್ನು ಭೇಟಿಯಾಗಿದ್ದರು. ಜೈಲರ್ ಯಶಸ್ಸಿಗೆ ಈ ದಂಪತಿ ಶುಭ ಕೋರಿದ್ದರು. ಅಂದು ಜಪಾನ್ಗೆ ಭೇಟಿ ನೀಡುವುದಾಗಿ ನಟ ಭರವಸೆ ನೀಡಿದ್ದರು.