ETV Bharat / entertainment

Jailer movie: ಸಿನಿ ಪ್ರೇಮಿಗಳ ಮನಗೆದ್ದ ಚಿತ್ರ.. ಕರುನಾಡ ಚಕ್ರವರ್ತಿಗೆ ಜೈಲರ್ ವಿತರಕರಿಂದ ಸನ್ಮಾನ - ಜೈಲರ್ ಸಿನಿಮಾ

ತಮಿಳು ನಿರ್ದೇಶಕ ನೆಲ್ಸನ್​ ಅವರ ಜೈಲರ್​ ಸಿನೆಮಾದಲ್ಲಿ ಅತಿಥಿ ಪಾತ್ರದಲ್ಲಿ ಮಿಂಚಿರುವ ಕರುನಾಡ ಚಕ್ರವರ್ತಿ ಶಿವರಾಜಕುಮಾರ್​ ಅವರಿಗೆ ಸಿನೆಮಾದ ವಿತರಕರು ಶಾಲು ಹೊದಿಸಿ ಸನ್ಮಾನ ಮಾಡಿದ್ದಾರೆ.

jailer-movie-distributors-honored-actor-shivarajkumar
ಸಿನಿಮಾ ಪ್ರೇಮಿಗಳ ಮನಗೆದ್ದ ಜೈಲರ್ ಸಿನಿಮಾ : ಕರುನಾಡ ಚಕ್ರವರ್ತಿಗೆ ಜೈಲರ್ ವಿತರಕರಿಂದ ಸನ್ಮಾನ
author img

By

Published : Aug 12, 2023, 9:48 PM IST

ಈ ಚಿತ್ರರಂಗದಲ್ಲಿ ಒಂದು ಸಿನಿಮಾ ಸೂಪರ್ ಹಿಟ್ ಆದಾಗ ಸಿನಿಮಾದ ನಾಯಕನಿಗೆ, ನಿರ್ದೇಶಕನಿಗೆ ಹಾಗು ನಾಯಕಿಗೆ ಅಭಿನಂದನೆಗಳನ್ನು ಹೇಳುವುದು ಸಾಮಾನ್ಯ. ಆದರೆ ಸಿನಿಮಾದಲ್ಲಿ ಅತಿಥಿ ಪಾತ್ರ ಮಾಡಿದ ನಟನಿಗೆ ಜೈಕಾರಗಳನ್ನು ಹಾಕಿ ಉಡುಗೊರೆಗಳನ್ನು ಕೊಡೋದು ತೀರ ಅಪರೂಪ. ಕನ್ನಡ, ತೆಲುಗು, ತಮಿಳು ಹಾಗೂ ಮಲಯಾಳಂ ಭಾಷೆಯಲ್ಲಿ ಸೂಪರ್ ಸ್ಟಾರ್ ರಜನಿಕಾಂತ್ ಅಭಿನಯದ ಜೈಲರ್ ಸಿನಿಮಾದ ಹವಾ ಜೋರಾಗಿದೆ.

ತಂದೆ ಮಗನ ಬಾಂಧವ್ಯದ ಜೊತೆಗೆ ಜಬರ್​​ದಸ್ತ್ ಆ್ಯಕ್ಷನ್ ಕಥಾ ಹಂದರ ಹೊಂದಿರುವ ಜೈಲರ್ ಚಿತ್ರ ಬಿಡುಗಡೆಯಾಗಿ ಭರ್ಜರಿ ಪ್ರದರ್ಶನ ಕಾಣುತ್ತಿದೆ. ತಲೈವಾ ಜೊತೆ ಮೊದಲ ಬಾರಿಗೆ ಸ್ಕ್ರೀನ್ ಹಂಚಿಕೊಂಡಿರುವ ನಟ ಶಿವರಾಜಕುಮಾರ್ ಅವರ ಅತಿಥಿ ಪಾತ್ರಕ್ಕೆ ಅಭಿಮಾನಿಗಳಿಂದ ವ್ಯಾಪಕ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಈ ಹಿನ್ನೆಲೆಯಲ್ಲಿ ಹ್ಯಾಟ್ರಿಕ್ ಹೀರೋ ಕೂಡ ವಿಡಿಯೋ ಮೂಲಕ ಅಭಿಮಾನಿಗಳಿಗೆ ಕೃತಜ್ಞತೆ ಹೇಳಿದ್ದಾರೆ.

ಜೈಲರ್ ಸಿನಿಮಾದಲ್ಲಿ ನರಸಿಂಹ ಹೆಸರಿನ ಅತಿಥಿ ಪಾತ್ರದಲ್ಲಿ ಶಿವರಾಜಕುಮಾರ್ ನಟಿಸಿದ್ದಾರೆ. ತೆರೆಯ ಮೇಲೆ ಕೆಲವು ನಿಮಿಷಗಳಷ್ಟೇ ಶಿವರಾಜಕುಮಾರ್ ಕಾಣಿಸಿಕೊಳ್ಳುತ್ತಾರೆ. ಆದರೂ ಅವರ ಪಾತ್ರಕ್ಕೆ ಭಾರಿ ಪ್ರಶಂಸೆ ವ್ಯಕ್ತವಾಗುತ್ತಿದೆ. ತಮಿಳು ಸಿನಿಮಾ ಪ್ರೇಮಿಗಳು ಸಹ ಶಿವರಾಜಕುಮಾರ್ ಅವರ ಮಾಸ್ ಅಭಿನಯಕ್ಕೆ ಫಿದಾ ಆಗಿದ್ದಾರೆ. ಜೈಲರ್ ಸಿನಿಮಾದಲ್ಲಿನ ಇತರೆ ಅತಿಥಿ ಪಾತ್ರಗಳನ್ನು ಬಿಟ್ಟು ಶಿವಣ್ಣನ ಪಾತ್ರವನ್ನಷ್ಟೇ ಮೆಚ್ಚಿ ಕೊಂಡಾಡುತ್ತಿದ್ದಾರೆ.

ಈ ಹಿನ್ನೆಲೆಯಲ್ಲಿ ಜೈಲರ್ ಚಿತ್ರವನ್ನು ಕರ್ನಾಟಕದಲ್ಲಿ ವಿತರಣೆ ಮಾಡಿರುವ ಜಯಣ್ಣ ಹಾಗು ವೆಂಕಟೇಶ್ ಎಂಬ ವಿತರಕರು ನಾಗವಾರದಲ್ಲಿ ಶಿವರಾಜಕುಮಾರ್ ಅವರನ್ನು ಭೇಟಿ, ಶಿವಣ್ಣನಿಗೆ ಶಾಲು ಹೊದಿಸಿ ಸನ್ಮಾನ ಮಾಡಿದರು. ಜೊತೆಗೆ ವೆಂಕಟೇಶ್ವರ ಸ್ವಾಮಿಯ ಪುಟ್ಟ ವಿಗ್ರಹವೊಂದನ್ನು ಗೌರವಪೂರ್ವಕವಾಗಿ ನೀಡಿದರು. ಜೈಲರ್ ಸಿನಿಮಾ ಕರ್ನಾಟಕದಲ್ಲಿ ಉತ್ತಮ ಪ್ರದರ್ಶನ ಕಾಣುತ್ತಿರುವ ಬಗ್ಗೆ ಖುಷಿ ಹಂಚಿಕೊಂಡರು.

ಜೈಲರ್ ಚಿತ್ರದಲ್ಲಿ ಶಿವರಾಜಕುಮಾರ್ ಮಾತ್ರವೇ ಅಲ್ಲದೆ ಮಲಯಾಳಂನ ಸೂಪರ್ ಸ್ಟಾರ್ ಮೋಹನ್​ಲಾಲ್, ಬಾಲಿವುಡ್​ನ ಜಾಕಿ ಶ್ರಾಫ್, ತೆಲುಗಿನ ಹಾಸ್ಯನಟ ಸುನಿಲ್ ಕೂಡ ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಆದರೆ ಹೆಚ್ಚು ಗಮನ ಸೆಳೆದಿರುವುದು ಶಿವರಾಜ್ ಕುಮಾರ್ ಎಂಟ್ರಿ ಹಾಗು ಕ್ಲೈಮಾಕ್ಸ್ ಸನ್ನಿವೇಶ. ಅದರಲ್ಲಿ ಕ್ಲೈಮ್ಯಾಕ್ಸ್​ನಲ್ಲಿ ಶಿವಣ್ಣನ ಖದರ್​ಗೆ ತಮಿಳು ಪ್ರೇಕ್ಷಕರು ಫಿದಾ ಆಗಿದ್ದಾರೆ.

ಜೈಲರ್ ಸಿನಿಮಾ ಬಿಡುಗಡೆ ಆದ ಎರಡೇ ದಿನಕ್ಕೆ ನೂರು ಕೋಟಿ ಕಲೆಕ್ಷನ್ ದಾಟಿದೆ. ಚಿತ್ರತಂಡ ಈ ಖುಷಿಯನ್ನು ಆಚರಿಸುವ ಮುನ್ನವೇ ಕೆಲವು ವಿತರಕರು ಸಂಭ್ರಮಾಚರಣೆಗೆ ಮುಂದಾಗಿದ್ದಾರೆ. ಸಿನಿಮಾದಲ್ಲಿ ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡಿರುವ ಶಿವರಾಜ್ ಕುಮಾರ್ ಅವರನ್ನು ಭೇಟಿಯಾಗಿ ಸನ್ಮಾನ ಮಾಡಿ ಸಣ್ಣ ಉಡುಗೊರೆ ನೀಡಿ ಸಂತಸ ಹಂಚಿಕೊಂಡಿದ್ದಾರೆ.

ಇದನ್ನೂ ಓದಿ : 'ಭೋಲಾಶಂಕರ್​​' ಉತ್ತಮ ಪ್ರದರ್ಶನ: ಸೌತ್​ನಲ್ಲೀಗ 'ಜೈಲರ್​'ನದ್ದೇ ಹವಾ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.