ETV Bharat / entertainment

'ಗಣಪತ್'​ ಸಿನಿಮಾದ ಜೈ ಗಣೇಶ ಹಾಡು ಬಿಡುಗಡೆ: ಅಕ್ಟೋಬರ್‌ 20ಕ್ಕೆ ಸಿನಿಮಾ ತೆರೆಗೆ - Tiger Shroff

'ಗಣಪತ್'​ ಸಿನಿಮಾದ ಜೈ ಗಣೇಶ ಹಾಡು ರಿಲೀಸ್ ಆಗಿದ್ದು, ಯೂಟ್ಯೂಬ್‌ನಲ್ಲಿ ನೋಡಬಹುದು.

Jai Ganesha song from Ganpath
ಗಣಪತ್​ ಸಿನಿಮಾದ ಜೈ ಗಣೇಶ ಹಾಡು
author img

By ETV Bharat Karnataka Team

Published : Oct 12, 2023, 5:13 PM IST

ನಟ ಟೈಗರ್ ಶ್ರಾಫ್ ಹಾಗೂ ನಟಿ ಕೃತಿ ಸನೋನ್​​ ಅಭಿನಯದ ಮುಂದಿನ ಸೈನ್ಸ್ ಫಿಕ್ಷನ್​​ ಆ್ಯಕ್ಷನ್​ ಎಪಿಕ್​​ ಸಿನಿಮಾ 'ಗಣಪತ್'. ಇತ್ತೀಚೆಗಷ್ಟೇ ಟ್ರೇಲರ್​ ಬಿಡುಗಡೆಯಾಗಿದ್ದು, ಸಿನಿಪ್ರಿಯರ ಕುತೂಹಲ ಹೆಚ್ಚಿಸಿದೆ. ಸಿನಿಮಾ ವೀಕ್ಷಿಸಲು ಅಭಿಮಾನಿಗಳು ಕಾತರರಾಗಿದ್ದಾರೆ. ಇದೀಗ ಚಿತ್ರದ ಮತ್ತೊಂದು ಹಾಡು ರಿಲೀಸ್ ಆಗಿದೆ.

ಜೈ ಗಣೇಶ..: ಚಿತ್ರತಂಡ ಈಗಾಗಲೇ ಸಿನಿಮಾ ಕುರಿತು ಪ್ರಚಾರ ಪ್ರಾರಂಭಿಸಿದೆ. ಹೆಚ್ಚಿನ ಸಂಖ್ಯೆಯ ಪ್ರೇಕ್ಷಕರನ್ನು ಸೆಳೆಯುವ ಕೆಲಸದಲ್ಲಿ ಬ್ಯುಸಿಯಾಗಿದೆ. ಪ್ರಮುಖ ನಗರಗಳಲ್ಲಿ ನಟ, ನಟಿ ಸೇರಿದಂತೆ ಚಿತ್ರತಂಡ ಭರ್ಜರಿ ಪ್ರಮೋಶನ್​ ಕೈಗೊಳ್ಳುತ್ತಿದೆ. ಪ್ರಚಾರದ ಭಾಗವಾಗಿ, ಸಿನಿಮಾದ ಹೊಸ ಟ್ರ್ಯಾಕ್ 'ಜೈ ಗಣೇಶ' ವನ್ನು ಬಿಡುಗಡೆಗೊಳಿಸಿದೆ.

ನಟನ ಕಟ್ಟುಮಸ್ತು ಮೈಕಟ್ಟು: ಅಕ್ಷಯ್​ ತ್ರಿಪಾಠಿ ಸಾಹಿತ್ಯಕ್ಕೆ ವಿಶಾಲ್​ ಮಿಶ್ರಾ ದನಿ ನೀಡಿದ್ದಾರೆ. ಸಂಗೀತ ಸಂಯೋಜಿಸಿದ್ದು ಕೂಡ ಶಾಲ್​ ಮಿಶ್ರಾ ಅವರೇ. ಹೆಚ್ಚಿನ ಸಂಖ್ಯೆಯ ಸಹ ನೃತ್ಯಗಾರರ ನಡುವೆ ಟೈಗರ್​ ಶ್ರಾಫ್​ ಕುಣಿದು ಕುಪ್ಪಳಿಸಿದ್ದಾರೆ. ನಟನ ಸದೃಢ ಮೈಕಟ್ಟು ಅಭಿಮಾನಿಗಳನ್ನು ಆಕರ್ಷಿಸಿದೆ. ಹಾಡು ಭಕ್ತಿ, ಭವ್ಯತೆ ಮತ್ತು ಶಕ್ತಿಯಿಂದ ಕೂಡಿದೆ. ಸಿನಿಪ್ರಿಯರು ಮೆಚ್ಚುಗೆ ಸೂಚಿಸುತ್ತಿದ್ದಾರೆ.

2023ರಲ್ಲಿ ಹಲವು ಸಿನಿಮಾಗಳು ಬಿಡುಗಡೆಗೊಂಡಿವೆ. ಸಿನಿಪ್ರಿಯರಿಗೆ ಮನರಂಜನೆಯ ರಸದೌತಣ ಉಣಬಡಿಸಿದೆ. ಗಣಪತ್​ ಸೇರಿದಂತೆ ಇನ್ನೂ ಹಲವು ಚಿತ್ರಗಳು ಬಿಡುಗಡೆಗೆ ಸಜ್ಜಾಗಿವೆ. ಅಭಿಮಾನಿಗಳು ಬಹಳ ದಿನಗಳಿಂದ ಕುತೂಹಲದಿಂದ ಕಾಯುತ್ತಿರುವ ಪ್ಯಾನ್ ಇಂಡಿಯಾ ಚಿತ್ರ ಈ 'ಗಣಪತ್‍'. ಟೈಗರ್ ಶ್ರಾಫ್‍ - ಕೃತಿ ಸನೋನ್ ಅವರ ಸಾಹಸ ಸನ್ನಿವೇಶಗಳಿಂದ ಸಿನಿಮಾ ರೆಡಿ ಆಗಿದೆ. ಕೃತಿ ಸನೋನ್ ಕಂಪ್ಲೀಟ್​ ಆ್ಯಕ್ಷನ್​ ಲುಕ್​ನಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಯಂಗ್​​ ಸ್ಟಾರ್ಸ್ ಜೊತೆ ಅಮಿತಾಭ್ ಬಚ್ಚನ್‍ ಕೂಡ ನಟಿಸಿದ್ದಾರೆ.

ಇದನ್ನೂ ಓದಿ: ದೇಶದ ಮೊದಲ ಫೀಲ್ಡ್‌ ಮಾರ್ಷಲ್ ಸ್ಯಾಮ್​ ಮಾಣೆಕ್‌ ಶಾ ಜೀವನಾಧಾರಿತ 'ಸ್ಯಾಮ್​ ಬಹದ್ದೂರ್'​​ ಸಿನಿಮಾ ಪೋಸ್ಟರ್ ಬಿಡುಗಡೆ

ಇತ್ತೀಚೆಗೆ ಅನಾವರಣಗೊಂಡ ಟ್ರೇಲರ್​ನಲ್ಲಿ ಆ್ಯಕ್ಷನ್​ ಸನ್ನಿವೇಶಗಳು ತುಂಬಿದ್ದವು. ಪ್ರೇಕ್ಷಕರನ್ನು ನಮ್ಮ ಸಿನಿಮಾ ಆ್ಯಕ್ಷನ್​​ ಪ್ರಪಂಚಕ್ಕೆ ಕೊಂಡೊಯ್ಯಲಿದೆ ಎಂದು ಚಿತ್ರತಂಡ ವಿಶ್ವಾಸ ವ್ಯಕ್ತಪಡಿಸಿತ್ತು. ನುರಿತ ಗ್ರಾಫಿಕ್ಸ್ ತಜ್ಞರು ಈ ಚಿತ್ರದಲ್ಲಿ ಕೆಲಸ ಮಾಡಿದ್ದಾರೆ. ಬಾಲಿವುಡ್‍ನ ಖ್ಯಾತ ನಿರ್ಮಾಣ ಸಂಸ್ಥೆ ಪೂಜಾ ಎಂಟರ್​ಟೈನ್ಮೆಂಟ್ ಬ್ಯಾನರ್ ಅಡಿ ವಶು ಭಗ್ನಾನಿ, ಜಾಕಿ ಭಗ್ನಾನಿ, ದೀಪಶಿಖಾ ದೇಶ್ ಮುಖ್ ಮತ್ತು ವಿಕಾಸ್‍ ಬಹ್ಲ್ ಜಂಟಿಯಾಗಿ ನಿರ್ಮಾಣ ಮಾಡಿದ್ದಾರೆ. ವಿಕಾಸ್‍ ಬಹ್ಲ್ ಆ್ಯಕ್ಷನ್​ ಕಟ್​ ಹೇಳಿರುವ ಗಣಪತ್​ ಸಿನಿಮಾ ಅಕ್ಟೋಬರ್​ 20ಕ್ಕೆ ಹಿಂದಿ, ಕನ್ನಡ, ತಮಿಳು, ತೆಲುಗು, ಮಲಯಾಳಂನಲ್ಲಿ ಚಿತ್ರಮಂದಿರಗಳಲ್ಲಿ ಬಿಡುಗಡೆ ಆಗಲಿದೆ.

ಇದನ್ನೂ ಓದಿ: ಸೌಂದರ್ಯದ ಪ್ರತಿರೂಪ ನಟಿ ತಮನ್ನಾ : ಸ್ಟೈಲಿಶ್​​ ಸೀರೆಯುಟ್ಟ ಹಾಲ್ಗೆನ್ನೆ ಚೆಲುವೆಯ ಬೆಡಗು ಭಿನ್ನಾಣ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.