ETV Bharat / entertainment

ನಯನತಾರಾ ಜೊತೆ ಜಯಂ ರವಿ: 'ಇರೈವನ್​​' ಬಿಡುಗಡೆಗೆ ಮುಹೂರ್ತ ಫಿಕ್ಸ್​ - jayam ravi

ಜಯಂ ರವಿ ಅವರ ಮತ್ತೊಂದು ಪ್ಯಾನ್​ ಇಂಡಿಯಾ ಪ್ರೊಜೆಕ್ಟ್​ 'ಇರೈವನ್​​' ಬಿಡುಗಡೆಗೆ ದಿನ ನಿಗದಿ ಆಗಿದೆ.

Iraivan movie
ಇರೈವನ್ ಸಿನಿಮಾ
author img

By

Published : Jun 10, 2023, 1:33 PM IST

Updated : Jun 10, 2023, 1:48 PM IST

ಸಿನಿಮಾ ಎಂಬ ಬಣ್ಣದ ಲೋಕದಲ್ಲಿ ಹೆಚ್ಚೆಚ್ಚು ಉತ್ತಮ ಸಿನಿಮಾಗಳು ನಿರ್ಮಾಣ ಆಗುತ್ತಿವೆ. ಜನರ ಅಭಿರುಚಿಗೆ ತಕ್ಕಂತೆ ಚಿತ್ರಕಥೆಗಳು ಮೂಡಿ ಬರುತ್ತಿವೆ. ಇತ್ತೀಚಿನ ದಿನಗಳಲ್ಲಿ ಪ್ಯಾನ್​ ಇಂಡಿಯಾ ಕಾನ್ಸೆಪ್ಟ್​​ ಟ್ರೆಂಡ್​ ಆಗಿದೆ. ಬಹುತೇಕ ಸಿನಿಮಾಗಳು ಪ್ಯಾನ್​ ಇಂಡಿಯಾ ಮಟ್ಟದಲ್ಲೇ ಮೂಡಿ ಬರಲು ಪ್ರಯತ್ನಗಳು ಮಾಡುತ್ತವೆ. ಇನ್ನು ಪ್ಯಾನ್​ ಇಂಡಿಯಾ ಚಿತ್ರಗಳಲ್ಲಿ ನಟಿಸಿದವರ ಜನಪ್ರಿಯತೆ ಮತ್ತಷ್ಟು ಹೆಚ್ಚುತ್ತದೆ ಅನ್ನೋದ್ರಲ್ಲಿ ಯಾವುದೇ ಸಂಶಯ ಇಲ್ಲ.

ಹೀಗೆ ಬಹುಭಾಷೆಯಲ್ಲಿ ತೆರೆಕಂಡ ಚಿತ್ರದಲ್ಲಿ ನಟಿಸಿ ಯಶಸ್ಸು ಕಂಡವರ ಜವಾಬ್ದಾರಿ ಅವರ ಮುಂಬರುವ ಚಿತ್ರಗಳ ಮೇಲೆ ಹೆಚ್ಚಿರುತ್ತದೆ. ಈ ಹಿಂದಿನ ಚಿತ್ರಕ್ಕಿಂತಲೂ ಮತ್ತಷ್ಟು ಉತ್ತಮದನ್ನು ಕೊಡಲು ಯತ್ನಿಸುತ್ತಾರೆ. ಈ ಪ್ರಯತ್ನದಲ್ಲೀಗ ತಮಿಳು ನಟ ಜಯಂ ರವಿ ಇದ್ದಾರೆ. ಹೌದು, ಮತ್ತೊಂದು ಪ್ಯಾನ್​ ಇಂಡಿಯಾ ಪ್ರೊಜೆಕ್ಟ್​ಗೆ ಕೈ ಹಾಕಿದ್ದಾರೆ ತಮಿಳು ನಟ ಜಯಂ ರವಿ.

ಪೊನ್ನಿಯಿನ್ ಸೆಲ್ವನ್ ಸರಣಿ ಸಿನಿಮಾದ ಬಳಿಕ ಪ್ಯಾನ್ ಇಂಡಿಯಾ ಸ್ಟಾರ್ ಆಗಿ ಹೊರ ಹೊಮ್ಮಿರುವ ತಮಿಳು ನಟ ಜಯಂ ರವಿ ಅವರ ತಾರಾ ಮೌಲ್ಯದ ಜೊತೆಗೆ ಬೇಡಿಕೆಯೂ ಹೆಚ್ಚಾಗಿದೆ. ಪೊನ್ನಿಯಿನ್ ಸೆಲ್ವನ್ 1 & 2 ನಂತರ ಮತ್ತೊಂದು ಪ್ಯಾನ್ ಇಂಡಿಯಾ ಪ್ರಾಜೆಕ್ಟ್​ಗೆ ಗ್ರೀನ್ ಸಿಗ್ನಲ್ ಕೊಟ್ಟು ತಮ್ಮ ಪಾತ್ರದ ಚಿತ್ರೀಕರಣವನ್ನೂ ಮುಗಿಸಿದ್ದಾರೆ. ತಮಿಳು, ಹಿಂದಿ, ತೆಲುಗು ಹಾಗೂ ಮಲಯಾಳಂ ಭಾಷೆಯಲ್ಲಿ ಈ ಸಿನಿಮಾ ಮೂಡಿ ಬರಲಿದೆ. 'ಇರೈವನ್' ಜಯಂ ರವಿ ಅವರ ಮುಂದಿನ ಬಹುನಿರೀಕ್ಷಿತ ಚಿತ್ರದ ಶೀರ್ಷಿಕೆ. ಮತ್ತೊಂದು ಪ್ಯಾನ್​ ಇಂಡಿಯಾ ಸಿನಿಮಾದಲ್ಲಿ ಜಯಂ ರವಿ ನಾಯಕನಾಗಿ, ದಕ್ಷಿಣದ ಲೇಡಿ ಸೂಪರ್ ಸ್ಟಾರ್ ನಯನತಾರಾ ನಾಯಕಿಯಾಗಿ ನಟಿಸಿದ್ದಾರೆ. ಈ ಮೆಗಾ ಪ್ರಾಜೆಕ್ಟ್​​ಗೆ ಐ. ಅಹಮದ್ ಆ್ಯಕ್ಷನ್ ಕಟ್ ಹೇಳಿದ್ದಾರೆ.

'ಇರೈವನ್' ಸಿನಿಮಾ ಶೂಟಿಂಗ್​ ಕಂಪ್ಲೀಟ್​ ಆಗಿದೆ. ಚಿತ್ರೀಕರಣ ಮುಗಿಸಿ ಪೋಸ್ಟ್ ಪ್ರೊಡಕ್ಷನ್ ಕೊನೆ ಹಂತದಲ್ಲಿರುವ ಇರೈವನ್ ಸಿನಿಮಾದ ರಿಲೀಸ್ ಡೇಟ್ ಕೂಡ ಅನೌನ್ಸ್ ಆಗಿದೆ. ಆಗಸ್ಟ್ 25ಕ್ಕೆ ವಿಶ್ವಾದ್ಯಂತ ಈ ಚಿತ್ರ ತೆರೆಕಾಣಲಿದೆ. ಆ್ಯಕ್ಷನ್ ಥ್ರಿಲ್ಲರ್ ಇರೈವನ್ ನಲ್ಲಿ ರಾಹುಲ್ ಬೋಸೆ, ಅಶಿಶ್ ವಿದ್ಯಾರ್ಥಿ, ನರೇನ್, ವಿಜಯಲಕ್ಷ್ಮೀ, ಚಾರ್ಲಿ, ಬಗ್ಸ್ ಸೇರಿದಂತೆ ದೊಡ್ಡ ತಾರಾಬಳಗವಿದೆ.

ಇದನ್ನೂ ಓದಿ : 'The Trial' ಸೀರಿಸ್​ನಲ್ಲಿ ಕಾಜೋಲ್​: ಪ್ರಚಾರಕ್ಕಾಗಿ 'ಸೋಷಿಯಲ್​ ಮೀಡಿಯಾದಿಂದ ಬ್ರೇಕ್​' ಗಿಮಿಕ್​​

ಯುವನ್ ಶಂಕರ್ ಸಂಗೀತ, ಮಣಿಕಂದನ್ ಬಾಲಾಜಿ ಸಂಕಲನಿರುವ ಸಿನಿಮಾವನ್ನು ಸುಧನ್ ಸುಂದರಂ ಮತ್ತು ಜಯರಾಮ್. ಜಿ ನಿರ್ಮಾಣ ಮಾಡಿದ್ದಾರೆ. ಚೆನ್ನೈ ಹಾಗೂ ಪುದುಚರಿಯಲ್ಲಿ ಶೂಟಿಂಗ್ ನಡೆಸಲಾಗಿದೆ. ಇರೈವನ್ ಸಿನಿಮಾ ಮೂಲಕ ಸಿನಿ ಪ್ರೇಮಿಗಳಿಗೆ ಒಂದೊಳ್ಳೆ ಕಂಟೆಂಟ್ ಜೊತೆಗೆ ಎಂಟರ್​ಟೈನ್ಮೆಂಟ್ ನೀಡೋದಾಗಿ ಚಿತ್ರತಂಡ ತಿಳಿಸಿದೆ.

ಇದನ್ನೂ ಓದಿ : HBD Balakrishna: 'ಭಗವಂತ ಕೇಸರಿ' ಟೀಸರ್​ ರಿಲೀಸ್​, ಬಾಲಯ್ಯ ರಗಡ್​ ಲುಕ್​ಗೆ ಫ್ಯಾನ್ಸ್​ ಫಿದಾ

Last Updated : Jun 10, 2023, 1:48 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.