ETV Bharat / entertainment

ದಾಂಪತ್ಯ ಜೀವನಕ್ಕೆ ಕಾಲಿಟ್ಟ ಅಮೀರ್​ ಪುತ್ರಿ: ಇರಾ-ನೂಪುರ್ ಮದುವೆ ವಿಡಿಯೋ - Ira Khan wedding videos

ನೂಪುರ್ ಶಿಖರೆ ಮತ್ತು ಇರಾ ಖಾನ್ ಮದುವೆ ವಿಡಿಯೋಗಳು ಸೋಷಿಯಲ್​ ಮೀಡಿಯಾದಲ್ಲಿ ವೈರಲ್​ ಆಗಿವೆ.

Nupur Shikhare Ira Khan
ನೂಪುರ್ ಶಿಖರೆ ಇರಾ ಖಾನ್
author img

By ETV Bharat Karnataka Team

Published : Jan 4, 2024, 12:54 PM IST

Updated : Jan 4, 2024, 1:33 PM IST

ಇರಾ-ನೂಪುರ್ ಮದುವೆ ವಿಡಿಯೋ

ಬಾಲಿವುಡ್ ಸೂಪರ್‌ ಸ್ಟಾರ್ ಅಮೀರ್ ಖಾನ್ ಪುತ್ರಿ ಇರಾ ಖಾನ್ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಬುಧವಾರ ಮುಂಬೈನ ಬಾಂದ್ರಾದ ತಾಜ್ ಲ್ಯಾಂಡ್ಸ್ ಎಂಡ್‌ ಹೋಟೆಲ್​ನಲ್ಲಿ ಫಿಟ್ನೆಸ್​​ ತಜ್ಞ ನೂಪುರ್ ಶಿಖರೆ ಅವರೊಂದಿಗೆ ಇರಾ ವಿವಾಹವಾದರು. ಸಮಾರಂಭದಲ್ಲಿ ಕುಟುಂಬ ಸದಸ್ಯರು ಮತ್ತು ಆಪ್ತರು ಮಾತ್ರ ಪಾಲ್ಗೊಂಡಿದ್ದರು.

ಈವೆಂಟ್​ನ ಹಲವು ಫೋಟೋ, ವಿಡಿಯೋಗಳು ಹೊರಬಿದ್ದಿವೆ. ಇರಾ ಮತ್ತು ನೂಪುರ್ ಇಬ್ಬರೂ ಅಧಿಕೃತ ವೆಡ್ಡಿಂಗ್​​ ಪೇಪರ್ಸ್​ಗೆ ಸಹಿ ಹಾಕುತ್ತಿರುವುದು, ವಿವಾಹ ಪ್ರತಿಜ್ಞೆ ಮಾಡುತ್ತಿರುವುದನ್ನು ವೈಲರ್​ ವಿಡಿಯೋಗಳಲ್ಲಿ ಕಾಣಬಹುದು.

ಸ್ಪೈಸ್‌ ಸೋಷಿಯಲ್​ ಮಿಡಿಯಾ ಟೀಮ್​​ (ಅಮೀರ್‌ ಅವರ ಪಿಆರ್​ ತಂಡ) ಇರಾ ಮತ್ತು ನೂಪುರ್ ಅವರ ಮದುವೆ ವಿಡಿಯೋ ಶೇರ್ ಮಾಡಿದೆ. ಅದರಲ್ಲಿ ಮದುವೆ ದಾಖಲೆ ಪತ್ರಕ್ಕೆ ಇಬ್ಬರೂ ಸಹಿ ಮಾಡುತ್ತಿದ್ದಾರೆ. ನವದಂಪತಿಯ ಹಿಂದೆ ಅಮೀರ್ ಖಾನ್ ಮತ್ತು​ ಅವರ ಮಾಜಿ ಪತ್ನಿ ರೀನಾ ದತ್ತಾ ಸೇರಿದಂತೆ ಕುಟುಂಬ ಸದಸ್ಯರು ಇದ್ದಾರೆ.

ಮಾಜಿ ಪತ್ನಿ ಕಿರಣ್​ ರಾವ್​​ ಕೂಡ ವೇದಿಕೆಯಲ್ಲಿದ್ದರು. ಇರಾ ಖಾನ್​​ ತಮ್ಮ ವಿಶೇಷ ದಿನಕ್ಕಾಗಿ ಸರಳ ಸಾಂಪ್ರದಾಯಿಕ ಉಡುಗೆ ತೊಟ್ಟರೆ, ನೂಪುರ್ ಶಿಖರೆ ಬ್ಲ್ಯಾಕ್​ ವೆಸ್ಟ್, ವೈಟ್ ಶಾರ್ಟ್ಸ್ ನಲ್ಲಿ ಮಿಂಚಿದ್ದಾರೆ. ಅಮೀರ್ ಖಾನ್​​ ಕುರ್ತಾ, ಧೋತಿ ಹಾಗೂ ಗುಲಾಬಿ ಬಣ್ಣದ ಸಾಫಾ (ಪೇಟ) ಧರಿಸಿದ್ದರು.

ವಧು ಇರಾ ಖಾನ್ ಅವರು ಅಮೀರ್ ಖಾನ್ ಮತ್ತು ಮೊದಲ ಪತ್ನಿ ರೀನಾ ದತ್ತಾ ದಂಪತಿಯ ಪುತ್ರಿ. ವೈರಲ್ ವಿಡಿಯೋವೊಂದರಲ್ಲಿ, ಅಮೀರ್ ತಮ್ಮ ಮಾಜಿ ಪತ್ನಿ ಕಿರಣ್ ರಾವ್ ಮೇಲೆ ಪ್ರೀತಿಯ ಮಳೆಗರೆಯುತ್ತಿರುವುದನ್ನು ಕಾಣಬುಹುದು. ಇರಾ ನೂಪುರ್ ಖುಷಿಯ ಕ್ಷಣ ಅಮೀರ್ ಅವರು ಮಾಜಿ ಪತ್ನಿ ಕಿರಣ್ ಕೆನ್ನೆಗೆ ಮುತ್ತಿಕ್ಕಿದ್ದಾರೆ. ಪ್ರೀತಿಯ ಕ್ಷಣಗಳು ಕ್ಯಾಮರಾದಲ್ಲಿ ಸೆರೆಯಾಗಿದೆ.

ಇದನ್ನೂ ಓದಿ: ಕ್ಲೈಮ್ಯಾಕ್ಸ್ ತಲುಪಿದ 'ಮ್ಯಾಕ್ಸ್': ಫೋಟೋ ಹಂಚಿಕೊಂಡ ಕಿಚ್ಚ ಸುದೀಪ್​

ಸಮಾರಂಭದಲ್ಲಿ ರಿಲಯನ್ಸ್ ಇಂಡಸ್ಟ್ರೀಸ್ ಅಧ್ಯಕ್ಷ ಮುಖೇಶ್ ಅಂಬಾನಿ ಮತ್ತು ನೀತಾ ಅಂಬಾನಿ ಉಪಸ್ಥಿತರಿದ್ದರು. ಅಮೀರ್ ಮತ್ತು ಕಿರಣ್ ರಾವ್ ಅಂಬಾನಿ ದಂಪತಿಯನ್ನು ಬಹಳ ಆತ್ಮೀಯವಾಗಿ ಸ್ವಾಗತಿಸಿದ್ದಾರೆ. ಬಾರಾತ್‌ಗೆ ನೂಪುರ್ ಶಿಖರೆ ಅವರು ಕುದುರೆ, ಕಾರನ್ನು ಬಿಟ್ಟು ಜಾಗಿಂಗ್ ಶೈಲಿಯಲ್ಲಿ ಆಗಮಿಸಿದ್ದಾರೆ. ಮದುವೆ ವೇಳೆಯೂ ಕೂಡ ಇಬ್ಬರ ಉಡುಗೆ ವಿಭಿನ್ನವಾಗಿತ್ತು.

ಇದನ್ನೂ ಓದಿ: ಅಮೀರ್ ಖಾನ್ ಮಗಳ ಮದುವೆ: ಸಂಭ್ರಮದ ವಿಡಿಯೋಗಳು ವೈರಲ್

ನೂಪುರ್ ಮತ್ತು ಇರಾ ಕೋವಿಡ್​​ ಲಾಕ್‌ಡೌನ್ ಸಮಯದಲ್ಲಿ ಪರಿಚಿತರಾದವರು. ಫಿಟ್ನೆಸ್ ಟ್ರೇನರ್ ನೂಪುರ್ ಅಮೀರ್‌ ಅವರಿಗೆ ತರಬೇತಿ ನೀಡುತ್ತಿದ್ದರು. ಆಗ ಇರಾ ಅಮೀರ್​ ಜೊತೆ ವಾಸಿಸುತ್ತಿದ್ದರು. ಹೀಗೆ ಇಬ್ಬರ ನಡುವಿನ ಸ್ನೇಹವು ಪ್ರೀತಿಗೆ ತಿರುಗಿ, ಸದ್ಯ ಮದುವೆ ಮುದ್ರೆ ಬಿದ್ದಿದೆ. 2022ರ ಕೊನೆಯಲ್ಲಿ ಇಬ್ಬರೂ ನಿಶ್ಚಿತಾರ್ಥ ಮಾಡಿಕೊಂಡಿದ್ದರು.

Last Updated : Jan 4, 2024, 1:33 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.