ETV Bharat / entertainment

ಇಂದ್ರಜಿತ್ ಲಂಕೇಶ್ ಪುತ್ರನ ಚಿತ್ರಕ್ಕೆ ಅದ್ಧೂರಿ ಮುಹೂರ್ತ: ಸ್ಯಾಂಡಲ್‌ವುಡ್‌ಗೆ ಮತ್ತೋರ್ವ ಆರಡಿ ಹೀರೋ ಎಂಟ್ರಿ - Samarjit Lankesh gouri movie

ನಿರ್ದೇಶಕ ಇಂದ್ರಜಿತ್ ಲಂಕೇಶ್ ಪುತ್ರ ಸಮರ್ಜಿತ್ ಲಂಕೇಶ್ ಸಿನಿಮಾದ ಮುಹೂರ್ತ ಸಮಾರಂಭ ಇಂದು ನೆರವೇರಿದೆ.

Indrajit Lankesh son entry to kannada film industry
ಸಮರ್ಜಿತ್ ಲಂಕೇಶ್ ಸಿನಿಮಾದ ಮುಹೂರ್ತ ಸಮಾರಂಭ
author img

By ETV Bharat Karnataka Team

Published : Aug 31, 2023, 7:59 PM IST

ಕನ್ನಡ ಚಿತ್ರರಂಗಕ್ಕೆ ಆರಡಿ ಎತ್ತರದ ಹೊಸ ನಟನ ಪಾದಾರ್ಪಣೆ ಆಗಿದೆ. ಖ್ಯಾತ ಬರಹಗಾರ, ಪತ್ರಿಕೋದ್ಯಮಿ ದಿ. ಪಿ. ಲಂಕೇಶ್ ಕುಟುಂಬದ ಮೂರನೇ ಕುಡಿ, ನಿರ್ದೇಶಕ ಇಂದ್ರಜಿತ್ ಲಂಕೇಶ್ ಪುತ್ರ ಸಮರ್ಜಿತ್ ಲಂಕೇಶ್ ಸಿನಿಮಾರಂಗಕ್ಕೆ ಅದ್ಧೂರಿ ಎಂಟ್ರಿ ಕೊಟ್ಟಿದ್ದಾರೆ. ಸಮರ್ಜಿತ್ ಮೊದಲ ಸಿನಿಮಾಗೆ 'ಗೌರಿ' ಎಂಬ ಶೀರ್ಷಿಕೆ ಇಡಲಾಗಿದೆ.

ಗೌರಿ ಸಿನಿಮಾ ಮುಹೂರ್ತ ಸಮಾರಂಭ: ಬೆಂಗಳೂರಿನ ಬುಲ್ ಟೆಂಪಲ್ ರಸ್ತೆಯಲ್ಲಿರುವ ದೊಡ್ಡ ಗಣಪತಿ ದೇವಸ್ಥಾನದಲ್ಲಿ ಮುಹೂರ್ತ ಪೂಜೆ ಮೂಲಕ ಗೌರಿ ಸಿನಿಮಾಗೆ ಚಾಲನೆ ಸಿಕ್ಕಿದೆ. ಮುಹೂರ್ತ ಸಮಾರಂಭಕ್ಕೆ ಆದಿಚುಂಚನಗಿರಿ ಮಠದ ನಿರ್ಮಲಾನಂದ ಸ್ವಾಮೀಜಿ ಅವರು ಭೇಟಿ ಕೊಟ್ಟು ಉದಯೋನ್ಮುಖ ನಟ ಸಮರ್ಜಿತ್‌ ಅವರಿಗೆ ಆಶೀರ್ವದಿಸಿದರು.

ನಿರ್ಮಾಪಕಿ ನಟನಾಗಿ ತಾಯಿ ಮಗ: 'ಗೌರಿ' ಚಿತ್ರಕ್ಕೆ ಇಂದ್ರಜಿತ್ ಲಂಕೇಶ್ ಅವರೇ ಆ್ಯಕ್ಷನ್ ಕಟ್ ಹೇಳುತ್ತಿದ್ದಾರೆ. ಮಗನ ಚೊಚ್ಚಲ ಸಿನಿಮಾಗೆ ನಿರ್ದೇಶನ ಮಾಡುವ ಜೊತೆಗೆ ನಿರ್ಮಾಣದ ಜವಾಬ್ದಾರಿಯನ್ನೂ ವಹಿಸಿಕೊಂಡಿದ್ದಾರೆ. ಈ ಮೂಲಕ ಇಂದ್ರಜಿತ್ ಲಂಕೇಶ್ ಪತ್ನಿ ಅರ್ಪಿತಾ ಅವರು ನಿರ್ಮಾಪಕಿಯಾಗಿ ಮಗನ ಜೊತೆಗೆ ಸ್ಯಾಂಡಲ್​ವುಡ್‌ಗೆ ಎಂಟ್ರಿ ಕೊಡುತ್ತಿದ್ದಾರೆ. ಈ ಮೂಲಕ ತಮ್ಮ ಮಗನನ್ನು ತಾವೇ ಬಣ್ಣದ ಲೋಕಕ್ಕೆ ಪರಿಚಯಿಸುತ್ತಿದ್ದಾರೆ ಇಂದ್ರಜಿತ್ ದಂಪತಿ.

Indrajit Lankesh son entry to kannada film industry
ಇಂದ್ರಜಿತ್ ಲಂಕೇಶ್ ಪುತ್ರನ ಚಿತ್ರಕ್ಕೆ ಸಾನ್ಯಾ ಐಯ್ಯರ್ ಹೀರೋಯಿನ್​

ಸಮರ್ಜಿತ್​ಗೆ ಜೋಡಿಯಾದ ಸಾನ್ಯಾ ಐಯ್ಯರ್: ಗೌರಿ ಸಿನಿಮಾಗಾಗಿ ಸಮರ್ಜಿತ್ ಸಿಕ್ಕಾಪಟ್ಟೆ ತಯಾರಿ ಮಾಡಿಕೊಂಡಿದ್ದಾರೆ. ಆ್ಯಕ್ಟಿಂಗ್, ಸ್ಟಂಟ್ ಕಲಿತು ಎಲ್ಲಾ ರೀತಿಯ ತಯಾರಿ ಮಾಡಿಕೊಂಡೇ ಕ್ಯಾಮರಾ ಎದುರಿಸುತ್ತಿದ್ದಾರೆ. ಸಮರ್ಜಿತ್ ಮೊದಲ ಸಿನಿಮಾದಲ್ಲಿ ನಾಯಕಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ ಕಿರುತೆರೆ ಹಾಗೂ ಬಿಗ್ ಬಾಸ್ ಖ್ಯಾತಿಯ ಸಾನ್ಯಾ ಐಯ್ಯರ್. ಅಂದಹಾಗೆ ಸಾನ್ಯಾ‌ ಅವರಿಗೂ ಇದು ಮೊದಲ ಸಿನಿಮಾ. ಚೊಚ್ಚಲ ಸಿನಿಮಾ ಮೂಲಕ ಸಮರ್ಜಿತ್ ಮತ್ತು ಸಾನ್ಯಾ ಇಬ್ಬರೂ ದೊಡ್ಡ ಪರದೆ ಮೇಲೆ ಮಿಂಚಲು ಸಜ್ಜಾಗಿದ್ದಾರೆ.

ಇದನ್ನೂ ಓದಿ: ನಾನು ನಿಮ್ಮ ಪ್ರೀತಿಗೆ ವಿನಮ್ರನಾಗಿದ್ದೇನೆ.. ತಮಿಳುನಾಡಿನ ಆಹಾರ ಹೊಗಳಿದ ಶಾರುಖ್​ ಖಾನ್​.. ಕಿಂಗ್​ ಖಾನ್​​​ ಡ್ಯಾನ್ಸ್​ಗೆ ಫ್ಯಾನ್ಸ್​ ಫಿದಾ

ಅದ್ಧೂರಿ ಮೂಹೂರ್ತ ಕಾರ್ಯಕ್ರಮ ಮೂಲಕ ಸದ್ದು ಮಾಡಿರುವ ಗೌರಿ ಸಿನಿಮಾ ಸದ್ಯದಲ್ಲೇ ಶೂಟಿಂಗ್‌ ಆರಂಭಿಸಲಿದೆ. ಮೊದಲ ಹಂತದ ಚಿತ್ರೀಕರಣ ಚಿಕ್ಕಮಗಳೂರಿನಲ್ಲಿ ನಡೆಸಲು ತಂಡ ಪ್ಲ್ಯಾನ್ ಮಾಡಿದೆ. ಇನ್ನು ಸಿನಿಮಾದಲ್ಲಿ ಕಾಂತಾರ ಸಿನಿಮಾ ಖ್ಯಾತಿಯ ನಟಿ ಮಾನಸಿ ಸುಧೀರ್ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಜೆಸ್ಸಿ ಗಿಫ್ಟ್ ಸಂಗೀತ ಸಿನಿಮಾಗಿದೆ. ಈಗಾಗಲೇ ಫೋಟೋಶೂಟ್ ಹಾಗೂ ಲುಕ್ ಮೂಲಕ ಗಮನ ಸೆಳೆದಿರುವ ಸಮರ್ಜಿತ್ ಗೌರಿ ಸಿನಿಮಾ ಮೂಲಕ ಪ್ರೇಕ್ಷಕರ ಹೃದಯ ಗೆಲ್ಲಲು ಸಜ್ಜಾಗಿದ್ದಾರೆ.

ಇದನ್ನೂ ಓದಿ: Nayanthara: ಇನ್​ಸ್ಟಾಗ್ರಾಮ್​ಗೆ 'ಲೇಡಿ ಸೂಪರ್​ಸ್ಟಾರ್'​ ಎಂಟ್ರಿ; ಮುದ್ದಾದ ಅವಳಿ ಮಕ್ಕಳ ಮುಖ ರಿವೀಲ್​ ಮಾಡಿದ ನಯನತಾರಾ

ಸಮರ್ಜಿತ್ ಹಾಗೂ ಸಾನ್ಯಾ ಅವರ ಫೋಟೋಶೂಟ್​ ಗಮನ ಸೆಳೆದಿದೆ. ಕೆಜಿಎಫ್ ಖ್ಯಾತಿಯ ಭುವನ್ ಗೌಡ ಹಾಗೂ ಕಬ್ಜ ಖ್ಯಾತಿಯ ಎ.ಜೆ. ಶೆಟ್ಟಿ ಕ್ಯಾಮರಾಗಳಲ್ಲಿ ಈ ಜೋಡಿಯ ಅದ್ಭುತ ಫೋಟೋಗಳು ಸೆರೆಯಾಗಿವೆ. ಸಮರ್ಜಿತ್ ಲಂಕೇಶ್ ನಾನಾ ನೋಟದಲ್ಲಿ ಕಾಣಿಸಿಕೊಂಡಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.