ಇಂಟರ್ನ್ಯಾಷನಲ್ ಪಬ್ಲಿಕೇಶನ್ ''ವೆರೈಟಿ'' ಗುರುವಾರದಂದು ಸಿನಿಮಾ ಕ್ಷೇತ್ರದ 500 ಪ್ರಭಾವಿ ವ್ಯಕ್ತಿಗಳ (influential individuals) ಪಟ್ಟಿಯನ್ನು ಅನಾವರಣಗೊಳಿಸಿದೆ. ಈ ಪ್ರತಿಷ್ಟಿತ ಪಟ್ಟಿಯು ಭಾರತದ 10 ಖ್ಯಾತನಾಮರನ್ನು ಒಳಗೊಂಡಿದ. ಶಾರುಖ್ ಖಾನ್, ಜೂನಿಯರ್ ಎನ್‌ಟಿಆರ್, ಆದಿತ್ಯ ಚೋಪ್ರಾ, ಎಸ್‌ಎಸ್ ರಾಜಮೌಳಿ, ಏಕ್ತಾ ಕಪೂರ್, ಸಿದ್ಧಾರ್ಥ್ ರಾಯ್, ಭೂಷಣ್ ಕುಮಾರ್ ಈ ಲಿಸ್ಟ್ನಲ್ಲಿದ್ದಾರೆ.
ವೈಯಾಕಾಮ್ 18 ಹೊಂದಿರುವ ಶ್ರೀಮಂತ ಉದ್ಯಮಿ ಮುಖೇಶ್ ಅಂಬಾನಿ, ರೆಡ್ ಸೀ ಫಿಲ್ಮ್ ಫೆಸ್ಟಿವಲ್ ಸಂಸ್ಥಾಪಕರಾದ ಶಿವಾನಿ ಪಾಂಡ್ಯ ಮಲ್ಹೋತ್ರಾ ಮತ್ತು ಸೋನಿ ಪಿಕ್ಚರ್ಸ್ ಸಿಇಒ ಎನ್.ಪಿ ಸಿಂಗ್ ಕೂಡ ಈ ಪಟ್ಟಿಯಲ್ಲಿದ್ದಾರೆ. ಈ ಖ್ಯಾತನಾಮರನ್ನು ವೆರೈಟಿ ಸಂಪಾದಕೀಯ ಮಂಡಳಿ ಆಯ್ಕೆ ಮಾಡಿದೆ. ಈ ಲಿಸ್ಟ್ ಬಿಡುಗಡೆಗೊಳ್ಳುವ ಮುನ್ನ ಸಂಪೂರ್ಣ ಸಂಶೋಧನೆ ನಡೆಸಿದೆ.
ಪಠಾಣ್ ಮತ್ತು ಜವಾನ್ ಎಂಬೆರಡು ಬ್ಲಾಕ್ಬಸ್ಟರ್ ಸಿನಿಮಾಗಳನ್ನು ನೀಡಿರುವ ಬಾಲಿವುಡ್ ಕಿಂಗ್ ಶಾರುಖ್ ಖಾನ್ ಅವರನ್ನು ''ವೆರೈಟಿ''ಯು "ಆಧುನಿಕ ಯುಗದ ಗ್ರೇಟ್ ರೊಮ್ಯಾಂಟಿಕ್ ಸ್ಟಾರ್" ಎಂದು ವರ್ಣಿಸಿದೆ. ಅಲ್ಲದೇ, ಕ್ರಿಸ್ಮಸ್ ಸಂದರ್ಭ ಸದ್ದು ಮಾಡುತ್ತಿರುವ ಡಂಕಿ ಮತ್ತು ಮುಂದಿನ ವರ್ಷ ಪ್ರಾರಂಭವಾಗಲಿರುವ ಬಹುನಿರೀಕ್ಷಿತ ಬಾಲಿವುಡ್ ಸ್ಪೈ ಯೂನಿವರ್ಸ್ ಸಿನಿಮಾ ಟೈಗರ್ ವರ್ಸಸ್ ಪಠಾಣ್ ಸೇರಿದಂತೆ ಅವರ ಮುಂಬರುವ ಯೋಜನೆಗಳನ್ನು ವೆರೈಟಿ ಸಂಪಾದಕೀಯ ಮಂಡಳಿ ಪ್ರಸ್ತಾಪಿಸಿದೆ.
ಆರ್‌ಆರ್‌ಆರ್ ಖ್ಯಾತಿಯ ಜೂನಿಯರ್ ಎನ್‌ಟಿಆರ್ ಜಾಗತಿಕ ಪ್ರೇಕ್ಷಕರನ್ನು ಆಕರ್ಷಿಸುವ ತಮ್ಮ ಅಸಾಧಾರಣ ಸಾಮರ್ಥ್ಯದಿಂದಾಗಿ ಈ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ. ಆರ್‌ಆರ್‌ಆರ್, ಬಾಹುಬಲಿ ಖ್ಯಾತಿಯ ನಿರ್ದೇಶಕ ಎಸ್‌ಎಸ್ ರಾಜಮೌಳಿ ಭಾರತದ ಅತ್ಯಂತ ಯಶಸ್ವಿ ಚಲನಚಿತ್ರ ನಿರ್ದೇಶಕ (commercially successful filmmaker) ಎಂದು ಗುರುತಿಸಲ್ಪಟ್ಟಿದ್ದಾರೆ.
ಆದಿತ್ಯ ಚೋಪ್ರಾ ಅವರು ತಮ್ಮ ಚಲನಚಿತ್ರ ನಿರ್ಮಾಣ ಸಂಸ್ಥೆಯಾದ ಯಶ್ ರಾಜ್ ಫಿಲ್ಮ್ಸ್ ಮೂಲಕ ಭಾರಿ ಮನ್ನಣೆ ಪಡೆದಿದ್ದಾರೆ. ಪಠಾಣ್ನಂತಹ ಹಿಟ್ ಸಿನಿಮಾಗೆ ಈ ಸಂಸ್ಥೆ ಸಾಕ್ಷಿಯಾಯಿತು. ಹಿಂದಿ ಚಿತ್ರರಂಗದಲ್ಲಿ ಹೊಸ ಬಾಕ್ಸ್ ಆಫೀಸ್ ದಾಖಲೆ ಸೃಷ್ಟಿಸಿತು. ಈ ಸಿನಿಮಾ 500 ಕೋಟಿ ರೂ.ನ ಗಡಿ ದಾಟುವಲ್ಲಿ ಯಶಸ್ವಿಯಾಗಿದೆ. ಕೋವಿಡ್ ಸಮಯದಲ್ಲಿ ಮುಚ್ಚಲಾಗಿದ್ದ ಭಾರತದಾದ್ಯಂತದ ಸಿಂಗಲ್ ಸ್ಕ್ರೀನ್ ಥಿಯೇಟರ್‌ಗಳನ್ನು ಪುನಃ ತೆರೆಯುವ ಮೂಲಕ ಪಠಾಣ್ ಸದ್ದು ಮಾಡಿತ್ತು.
ಇದನ್ನೂ ಓದಿ: ಚಿತ್ರಮಂದಿರಗಳಲ್ಲಿ 'ಸಲಾರ್' ಅಬ್ಬರ: ಸಿನಿಪ್ರಿಯರಿಂದ ಭಾರಿ ಮೆಚ್ಚುಗೆ
ಸಿದ್ಧಾರ್ಥ್ ರಾಯ್ ಕಪೂರ್ ಅವರು ಪ್ರಿಯಾಂಕಾ ಚೋಪ್ರಾ ನಟನೆಯ 'ದಿ ಸ್ಕೈ ಈಸ್ ಪಿಂಕ್' ಸಿನಿಮಾ ಮೂಲಕ ನಿರ್ಮಾಣ ಪ್ರಯಾಣವನ್ನು ಪ್ರಾರಂಭಿಸಿದರು. ಅವರ ಇತ್ತೀಚಿನ ಪಿಪ್ಪಾ ಸಿನಿಮಾ ಕೂಡ ಗಮನ ಸೆಳೆದಿದೆ. ಇನ್ನೂ ನಿರ್ಮಾಪಕ , ಭೂಷಣ್ ಕುಮಾರ್ ಸಹ ಈ ಪಟ್ಟಿಯಲ್ಲಿದ್ದಾರೆ. ಇವರನ್ನು ಪಬ್ಲಿಕೇಶನ್ "ಯಂಗರ್ ಕುಮಾರ್" ಎಂದು ಬಣ್ಣಿಸಿದೆ. ತಂದೆ ಗುಲ್ಶನ್ ಕುಮಾರ್ ನಿಧನರಾದ ನಂತರ, ತಮ್ಮ 19ನೇ ವಯಸ್ಸಿನಲ್ಲಿ ವ್ಯವಹಾರವನ್ನು ಕೈಗೆತ್ತಿಕೊಂಡರು. ವ್ಯವಹಾರವನ್ನು ಉನ್ನತ ಮಟ್ಟಕ್ಕೆ ಕೊಂಡೊಯ್ದರು ಎಂಬುದನ್ನು ಪಬ್ಲಿಕೇಶನ್ ಗಮನಿಸಿದೆ. ಭೂಷಣ್ ಅವರು ಪ್ರಸ್ತುತ ತಮ್ಮ ಇತ್ತೀಚಿನ ಸಿನಿಮಾ ಅನಿಮಲ್ನ ಯಶಸ್ಸಿನಲೆಯಲ್ಲಿ ತೇಲುತ್ತಿದ್ದಾರೆ. ಇನ್ನೂ ನಿರ್ಮಾಪಕಿ ಏಕ್ತಾ ಕಪೂರ್ ಅವರು ಅಂತಾರಾಷ್ಟ್ರೀಯ ಪ್ರಶಸ್ತಿಗಳನ್ನು ಗೆದ್ದ ನಂತರ ಈ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ.
ಇದನ್ನೂ ಓದಿ: ಡಂಕಿ ಬಾಕ್ಸ್ ಆಫೀಸ್ ಕಲೆಕ್ಷನ್ : ಪಠಾಣ್, ಜವಾನ್ ಆರಂಭಿಕ ದಿನದ ದಾಖಲೆ ಮುರಿಯಲು ವಿಫಲ