ETV Bharat / entertainment

ಸಲೈನ್ ಡ್ರಿಪ್​ನೊಂದಿಗೆ ಫೋಟೋ ಶೇರ್ ಮಾಡಿಕೊಂಡ ನಟಿ ಇಲಿಯಾನಾ ಡಿಕ್ರೂಜ್ - ಈಟಿವಿ ಭಾರತ್ ಕನ್ನಡ ಸುದ್ದಿ

ಇಲಿಯಾನಾ ಡಿಕ್ರೂಜ್​ಗೆ ಅನಾರೋಗ್ಯ - ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್​ ಹಾಕಿದ ನಟಿ - ಅಭಿಮಾನಿಗಳಿಂದ ಆರೋಗ್ಯ ಚೇತರಿಕೆಗೆ ಹಾರೈಕೆ

ನಟಿ ಇಲಿಯಾನಾ ಡಿಕ್ರೂಜ್
ನಟಿ ಇಲಿಯಾನಾ ಡಿಕ್ರೂಜ್
author img

By

Published : Jan 30, 2023, 4:25 PM IST

ಹೈದರಾಬಾದ್: ನಟಿ ಇಲಿಯಾನಾ ಡಿಕ್ರೂಜ್ ಅವರು ಅನಾರೋಗ್ಯದಿಂದ ಬಳಲುತ್ತಿದ್ದಾರೆ ಎಂದು ಸಾಮಾಜಿಕ ಮಾಧ್ಯಮದಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಸಲೈನ್ ಡ್ರಿಪ್​ ಫೋಟೋವನ್ನು ಪೋಸ್ಟ್ ಮಾಡಿರುವ ನಟಿ, ಯಾವ ಕಾಯಿಲೆಯಿಂದ ಬಳಲುತ್ತಿದ್ದಾರೆ ಎಂಬುದನ್ನು ಮಾತ್ರ ಬಹಿರಂಗಪಡಿಸಿಲ್ಲ. ಇದು ಅವರ ಅಭಿಮಾನಿಗಳಿಗೆ ಕಳವಳವನ್ನುಂಟು ಮಾಡಿದೆ. ತಾವು ಬೇಗನೆ ಚೇತರಿಸಿಕೊಳ್ಳಿ ಎಂದು ಹಾರೈಸಿದ ಎಲ್ಲಾ ಹಿತೈಷಿಗಳಿಗೂ ಧನ್ಯವಾದವನ್ನು ಅರ್ಪಿಸುವ ಮತ್ತೊಂದು ಪೋಸ್ಟ್​ ಅನ್ನು ಹಂಚಿಕೊಂಡಿದ್ದಾರೆ. ಅಲ್ಲದೇ, ಸೂಕ್ತ ಸಮಯದಲ್ಲಿ ವೈದ್ಯಕೀಯ ಚಿಕಿತ್ಸೆ ಪಡೆದಿದ್ದರಿಂದ ತಾನು ಉತ್ತಮವಾಗಿದ್ದೇನೆ ಎಂದು ಹೇಳಿಕೊಂಡಿದ್ದಾರೆ.

ಎರಡು ಕೊಲಾಜ್ ಚಿತ್ರಗಳನ್ನು ಹಂಚಿಕೊಂಡ ನಟಿ : ಭಾನುವಾರ ಪೋಕಿರಿ ತಾರೆ ತಮ್ಮ ಇನ್ಸ್ಟಾಗ್ರಾಮ್​ನಲ್ಲಿ ಎರಡು ಚಿತ್ರಗಳ ಕೊಲಾಜ್ ಅನ್ನು ಹಂಚಿಕೊಳ್ಳಲು ಸ್ಟೋರೀಸ್‌ಗೆ ಕರೆದೊಯ್ದರು. ಅದರಲ್ಲಿ ಸಲೈನ್ ಡ್ರಿಪ್​ ಹಾಕಿರುವ ಫೋಟೋದೊಂದಿಗೆ 'ಒಂದು ದಿನದಲ್ಲಿ ಏನೆಲ್ಲಾ ಬದಲಾವಣೆಯಾಗುತ್ತದೆ' ಎಂದು ಬರೆದುಕೊಂಡಿದ್ದಾರೆ. ಅಲ್ಲದೇ ಇನ್ನೊಂದು ಫೋಟೋದಲ್ಲಿ 'ಆಲ್ಸೋ ಸಮ್​ ಲವ್ಲಿ ಡಾಕ್ಟರ್ಸ್​ ಅಂಡ್​ ತ್ರಿ ಬ್ಯಾಗ್ಸ್​ ಆಫ್​ ಐವಿ ಪ್ಲೂಡ್ಸ್​' ಎಂದು ಬರೆದುಕೊಂಡಿದ್ದಾರೆ.

ಸಲೈನ್ ಡ್ರಿಪ್​​ನೊಂದಿಗೆ ಫೋಟೋ ಶೇರ್ ಮಾಡಿಕೊಂಡ ನಟಿ ಇಲಿಯಾನಾ ಡಿಕ್ರೂಜ್

ಇಲಿಯಾನಾ ಅವರ ಇನ್‌ಸ್ಟಾಗ್ರಾಮ್​​ನಲ್ಲಿನ ಇನ್​ಬಾಕ್ಸ್​ ಸಂದೇಶವು ಅವರ ಅಭಿಮಾನಿಗಳು ಯೋಗಕ್ಷೇಮದ ಬಗ್ಗೆ ಚಿಂತಿತರಾಗಿದ್ದಾರೆ ಎಂಬುದರ ಕುರಿತು ಮಾಹಿತಿ ನೀಡಿದೆ. ಈ ಕುರಿತು ತನ್ನ ಅಭಿಮಾನಿಗಳಿಗೆ ಮಾಹಿತಿಯನ್ನು ನೀಡಿರುವ ನಟಿ, ನಾನು ಆರೋಗ್ಯವಾಗಿದ್ದೇನೆ ಎಂದು ಅಭಿಮಾನಿಗಳಿಗೆ ತಿಳಿಸಿದ್ದಾರೆ.

ನಾನು ಈಗ ಸಂಪೂರ್ಣವಾಗಿ ಚೆನ್ನಾಗಿದ್ದೇನೆ : ಮಂದಹಾಸದ ಸೆಲ್ಫಿ ಹಂಚಿಕೊಂಡಿರುವ ಡಿಕ್ರೂಜ್, 'ನನ್ನ ಆರೋಗ್ಯ ವಿಚಾರಿಸಿ ನನಗೆ ಸಂದೇಶ ಕಳುಹಿಸಿರುವ ಎಲ್ಲರಿಗೂ ನನ್ನ ಕಡೆಯಿಂದ ತುಂಬಾ ಧನ್ಯವಾದಗಳು. ನಾನು ಪ್ರೀತಿಯನ್ನು ನಿಜವಾಗಿಯೂ ಪ್ರಶಂಸಿಸುತ್ತೇನೆ ಮತ್ತು ನಾನು ಈಗ ಸಂಪೂರ್ಣವಾಗಿ ಚೆನ್ನಾಗಿದ್ದೇನೆ ಎಂದು ನಿಮಗೆ ಸ್ಪಷ್ಟನೆ ನೀಡುತ್ತೇನೆ. ಸರಿಯಾದ ಸಮಯಕ್ಕೆ ಸ್ವಲ್ಪ ಉತ್ತಮ ವೈದ್ಯಕೀಯ ಆರೈಕೆ ಸಿಕ್ಕಿತು' ಎಂದು ಬರೆದುಕೊಂಡಿದ್ದಾರೆ.

ಇದನ್ನೂ ಓದಿ: 'ದಸರಾ‌' ಟೀಸರ್ ಬಿಡುಗಡೆಗೊಳಿಸಲಿದ್ದಾರೆ ನಟ ರಕ್ಷಿತ್‌ ಶೆಟ್ಟಿ

ರಣದೀಪ್ ಹೂಡಾ ಅವರೊಂದಿಗೆ ಕಾಣಿಸಿಕೊಳ್ಳಲಿರುವ ನಟಿ : ಇಲಿಯಾನಾ ಮುಂದೆ ತೇರಾ ಕ್ಯಾ ಹೋಗಾ ಲವ್ಲಿ ಸಿನಿಮಾದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಬಲ್ವಿಂದರ್ ಸಿಂಗ್ ಜಂಜುವಾ ಅವರು ನಿರ್ದೇಶಿಸಿದ ಈ ಚಿತ್ರವು ಭಾರತದ ಫೇರ್ ಸ್ಕಿನ್‌ನ ಗೀಳಿನ ಮೇಲೆ ಕಾಮಿಕ್ ಟೇಕ್ ಆಗಿದೆ. ಈ ಚಿತ್ರವು ಹರಿಯಾಣದ ಹಿನ್ನೆಲೆಯಲ್ಲಿದೆ ಮತ್ತು ರಣದೀಪ್ ಹೂಡಾ ಅವರೊಂದಿಗೆ ನಟಿ ಇಲಿಯಾನಾ ಕಾಣಿಸಿಕೊಂಡಿದ್ದಾರೆ. ನವೆಂಬರ್ 25, 2022 ರಂದು ಗೋವಾದಲ್ಲಿ ನಡೆದ ಇಂಟರ್​ನ್ಯಾಷನಲ್​ ಫಿಲ್ಮ್ ಫೆಸ್ಟಿವಲ್ ಆಫ್ ಇಂಡಿಯಾ (IFFI) ಯ 53ನೇ ಆವೃತ್ತಿಯಲ್ಲಿ ತೇರಾ ಕ್ಯಾ ಹೋಗಾ ಲವ್ಲಿಯನ್ನು ಪ್ರದರ್ಶಿಸಲಾಯಿತು. ಚಿತ್ರವು ಇನ್ನೂ ಬಿಡುಗಡೆಯ ದಿನಾಂಕವನ್ನು ಪಡೆದಿಲ್ಲ.

ಅಮೆರಿಕನ್ ನಟ ಸೆಂಧಿಲ್ ರಾಮಮೂರ್ತಿ, ವಿದ್ಯಾ ಬಾಲನ್ ಮತ್ತು ಪ್ರತೀಕ್ ಗಾಂಧಿಯವರೊಂದಿಗೆ ಈ ಚಲನಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಇದೊಂದು ರೊಮ್ಯಾಂಟಿಕ್ ಕಾಮಿಡಿ-ಡ್ರಾಮಾ ಚಿತ್ರ. ಇನ್ನೂ ಹೆಸರಿಡದ ಚಿತ್ರಕ್ಕೆ ಅಂತಿಮವಾಗಿ 'ಡೇಟ್ ಚಲನಚಿತ್ರ' ಎಂದು ಹೇಳಲಾಗುತ್ತಿದೆ. ಇದು ವೇಗದ ಗತಿಯ ಜಗತ್ತಿನಲ್ಲಿ ಆಧುನಿಕ ಸಂಬಂಧಗಳ ಮೇಲೆ ಪ್ರಗತಿಶೀಲ, ತಡೆಯಿಲ್ಲದ ಟೇಕ್ ಅನ್ನು ಪ್ರಸ್ತುತಪಡಿಸುತ್ತದೆ.

ಓದಿ : ಪಠಾಣ್​ ಯಶಸ್ಸು: ಅಭಿಮಾನಿಗಳ ಪ್ರತಿಕ್ರಿಯೆ ನೋಡಲು ಥಿಯೇಟರ್​​ಗೆ ಬಂದ ದೀಪಿಕಾ ಪಡುಕೋಣೆ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.