ETV Bharat / entertainment

ರಾಜಮೌಳಿ - ಮಹೇಶ್​ ಬಾಬು ಕಾಂಬೋದ ಮುಂದಿನ ಸಿನಿಮಾದಲ್ಲಿ ಹಾಲಿವುಡ್​ ಸ್ಟಾರ್ಸ್! - Hollywood stars in Rajamouli movie

Rajamouli-Mahesh Babu movie: ಎಸ್​ಎಸ್​ ರಾಜಮೌಳಿ ಮತ್ತು ಮಹೇಶ್​ ಬಾಬು ಅವರ ಮುಂದಿನ ಸಿನಿಮಾದಲ್ಲಿ ಹಾಲಿವುಡ್​ ಸ್ಟಾರ್ಸ್ ನಟಿಸಲಿದ್ದಾರೆ.

Hollywood stars in Rajamouli-Mahesh Babu movie
ರಾಜಮೌಳಿ - ಮಹೇಶ್​ ಬಾಬು ಸಿನಿಮಾದಲ್ಲಿ ಹಾಲಿವುಡ್​ ಸ್ಟಾರ್ಸ್
author img

By ETV Bharat Karnataka Team

Published : Aug 24, 2023, 1:59 PM IST

ಆರ್​ಆರ್​ಆರ್ ಎಂಬ ಅದ್ಭುತ ಸಿನಿಮಾ ಇಡೀ ವಿಶ್ವದೆಲ್ಲೆಡೆ ಸದ್ದು ಮಾಡಿದೆ. ಈ ಚಿತ್ರದ ಬಳಿಕ ನಿರ್ದೇಶಕ ಎಸ್​ಎಸ್​ ರಾಜಮೌಳಿ ಅವರ ಖ್ಯಾತಿ ದುಪ್ಪಟ್ಟಾಗಿದೆ. ಸ್ಟಾರ್ ಡೈರೆಕ್ಷರ್​​ನ ಮುಂದಿನ ಸಿನಿಮಾಗಳ ಮೇಲೆ ಬೆಟ್ಟದಷ್ಟು ನಿರೀಕ್ಷೆಯಿದೆ. ಸೌತ್​ ಸ್ಟಾರ್ ಹೀರೋ ಮಹೇಶ್​ ಬಾಬು ಜೊತೆ ಕೈ ಜೋಡಿಸಿರೋದು ನಿಮಗೆಲ್ಲರಿಗೂ ತಿಳಿದಿರುವ ವಿಚಾರ. ​

SSMB29: ಎಸ್​ಎಸ್​ ರಾಜಮೌಳಿ ಮತ್ತು ಮಹೇಶ್​ ಬಾಬು ಕಾಂಬಿನೇಶನ್​ನಲ್ಲಿ ಅದ್ಧೂರಿ ಪ್ಯಾನ್​ ವರ್ಲ್ಡ್ ಸಿನಿಮಾ ನಿರ್ಮಾಣಗೊಳ್ಳಲಿದೆ. ಈ ಚಿತ್ರಕ್ಕೆ ಸಂಬಂಧಿಸಿದಂತೆ ಒಂದಿಷ್ಟು ಸುದ್ದಿಗಳು, ಅಂತೆ ಕಂತೆಗಳು ಸೋಷಿಯಲ್​ ಮೀಡಿಯಾದಲ್ಲಿ ಟ್ರೆಂಡ್​ ಆಗಿವೆ. ಅಲ್ಲದೇ ರಾಜಮೌಳಿ ಅವರ ತಂದೆ, ಖ್ಯಾತ ಬರಹಗಾರ ವಿಜಯೇಂದ್ರ ಪ್ರಸಾದ್​ ಅವರು ಈ ಸಿನಿಮಾಗೆ ಕಥೆ ಒದಗಿಸುತ್ತಿದ್ದಾರೆ. ವಿಜಯೇಂದ್ರ ಪ್ರಸಾದ್​ ಅವರು ತಮ್ಮ ಸಂದರ್ಶನಗಳಲ್ಲಿ ಒಂದಿಲ್ಲೊಂದು ಇಂಟ್ರೆಸ್ಟಿಂಗ್​​ ವಿಚಾರಗಳನ್ನು ಹೇಳುವ ಮೂಲಕ ಸಿನಿಮಾದ ಹೈಪ್​ ಹೆಚ್ಚಿಸುತ್ತಿದ್ದಾರೆ. ಇತ್ತೀಚೆಗಷ್ಟೇ ಚಿತ್ರದ ಕುರಿತು ಆಸಕ್ತಿದಾಯಕ ವಿಚಾರವೊಂದನ್ನು ಬಹಿರಂಗಪಡಿಸಿದ್ದು, ಸಿನಿಪ್ರಿಯರು ಮತ್ತು ಮಹೇಶ್​ ಬಾಬು ಅಭಿಮಾನಿಗಳಲ್ಲಿ ಕುತೂಹಲ ಮೂಡಿದೆ.

ಸೌತ್​ ಸಿನಿಮಾದಲ್ಲಿ ಹಾಲಿವುಡ್​ ಸ್ಟಾರ್ಸ್: ಬಹುಬೇಡಿಕೆ ನಟ ಮಹೇಶ್​ ಬಾಬು ಅವರ ಮುಂದಿನ ಬಹುನಿರೀಕ್ಷಿತ ಸಿನಿಮಾದಲ್ಲಿ ಹಾಲಿವುಡ್​ ಕಲಾವಿದರು ಸಹ ಇರಲಿದ್ದಾರೆ ಎಂದ ಮಾತುಗಳು ಕೇಳಿ ಬಂದಿದ್ದವು. ಸಂದರ್ಶನವೊಂದರಲ್ಲಿ ಈ ವಿಚಾರವಾಗಿ ಮಾತನಾಡಿದ ಬರಹಗಾರ ವಿಜಯೇಂದ್ರ ಪ್ರಸಾದ್​ ಅವರು, ''ಚಿತ್ರದಲ್ಲಿ ಹಾಲಿವುಡ್​ ಸ್ಟಾರ್ಸ್ ಬಣ್ಣ ಹಚ್ಚುವ ಅವಕಾಶವಿದೆ. ಆದರೆ, ನಾವು ಇನ್ನೂ ಅವರನ್ನು ಸಂಪರ್ಕಿಸಿಲ್ಲ. ಇದು ಆಫ್ರಿಕಾದಲ್ಲಿ ನಡೆಯುವ ಸಾಹಸಮಯ ಕಥೆ. ಇದಕ್ಕಿಂತ ನಾವು ಸದ್ಯ ಹೆಚ್ಚೇನು ಹೇಳಬಾರದು'' ಎಂದು ತಿಳಿಸಿದ್ದಾರೆ. ಅಭಿಮಾನಿಗಳಿಗೆ ಇಷ್ಟು ಸಾಕಲ್ಲವೇ?. ಸಿನಿಮಾ ಹೇಗೆ, ಯಾವ ಮಟ್ಟಿಗೆ ಮೂಡಿ ಬರಬಹುದೆಂಬ ಕುತೂಹಲ ಅಭಿಮಾನಿಗಳಲ್ಲಿ ಮೂಡಿದೆ. ಈ ವರ್ಷದ ಅಂತ್ಯಕ್ಕೆ ಸಿನಿಮಾ ಸೆಟ್ಟೇರುವ ಸಾಧ್ಯತೆ ಇದೆ. ಅದ್ಧೂರಿ ಬಜೆಟ್​ನಲ್ಲಿ ಸಿನಿಮಾ ನಿರ್ಮಾಣಗೊಳ್ಳಲಿದೆ.

ಇದನ್ನೂ ಓದಿ: ವೈವಾಹಿಕ ಜೀವನಕ್ಕೆ ಕಾಲಿಟ್ಟ ಹರ್ಷಿಕಾ - ಭುವನ್ : ಸಮಾರಂಭಕ್ಕೆ ಮಾಜಿ ಸಿಎಂ BSY ಸೇರಿ ಗಣ್ಯರು ಸಾಕ್ಷಿ

ಈ ಹಿಂದೆ ನಿರ್ದೇಶಕ ರಾಜಮೌಳಿ ಅವರು ಸಹ ಕೆಲ ಸಂದರ್ಶನಗಳಲ್ಲಿ ಸಿನಿಮಾದ ಸುಳಿವು ಬಿಟ್ಟುಕೊಟ್ಟಿದ್ದಾರೆ. ಕಳೆದ ಕೆಲ ಸಮಯದಿಂದ ಈ ಕಥೆಯನ್ನು ಮುಂದೂಡುತ್ತಾ ಬರಲಾಗುತ್ತಿದೆ. ಆದರೆ ಶೀಘ್ರದಲ್ಲೇ ಜಾಗತಿಕ ಸಾಹಸಮಯ ಸಿನಿಮಾ ನಿರ್ಮಾಣ ಆಗಲಿದೆ. ಸದ್ಯ ಸ್ಕ್ರಿಪ್ಟ್ ವರ್ಕ್ ನಡೆಯುತ್ತಿದೆ ಎಂದು ತಿಳಿಸಿದ್ದರು. ಇನ್ನು ಮಹೇಶ್​ ಬಾಬು ಬಹುನಿರೀಕ್ಷಿತ ಗುಂಟೂರು ಕಾರಂ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಚಿತ್ರತಂಡದಲ್ಲಿ ಹಲವು ಬದಲಾವಣೆಗಳಾದ ಹಿನ್ನೆಲೆ ಚಿತ್ರೀಕರಣ ಕೊಂಚ ವಿಳಂಬವಾಗಿದೆ. ಈ ಸಿನಿಮಾ ಮುಗಿದ ಬಳಿಕ ರಾಜಮೌಳಿ ನಿರ್ದೇಶನದ ಸಿನಿಮಾ ಕೆಲಸ ಪ್ರಾರಂಭವಾಗಲಿದೆ. ಬಾಹುಬಲಿ, ಆರ್​ಆರ್​ಆರ್​ ನಂತಹ ಅದ್ಭುತ ಸಿನಿಮಾಗಳನ್ನು ನೋಡಿರುವ ಸಿನಿಪ್ರಿಯರು ರಾಜಮೌಳಿ - ಮಹೇಶ್​ ಬಾಬು ಕಾಂಬೋದ ಮುಂದಿನ ಸಿನಿಮಾ ಕುರಿತು ಸಾಕಷ್ಟು ನಿರೀಕ್ಷೆಗಳನ್ನಿಟ್ಟುಕೊಂಡಿದ್ದಾರೆ.

ಇದನ್ನೂ ಓದಿ: 20 ವರ್ಷಗಳ ಬ್ರೇಕ್ ಬಳಿಕ ತೆರೆ ಹಂಚಿಕೊಳ್ಳಲಿದ್ದಾರೆ ಅಕ್ಷಯ್​ ಕುಮಾರ್​-ರವೀನಾ ಟಂಡನ್​

ETV Bharat Logo

Copyright © 2025 Ushodaya Enterprises Pvt. Ltd., All Rights Reserved.